ಸಮುದಾಯ ಸೇವೆ ಮತ್ತು ಶೈಕ್ಷಣಿಕ ಶ್ರೇಷ್ಠತೆಯೊಂದಿಗೆ ಮಾಹೆ ಕುಲಾಧಿಪತಿ ಡಾ.ರಾಮದಾಸ್ ಎಂ. ಪೈ ಅವರ 90ನೇ ಹುಟ್ಟುಹಬ್ಬ ಆಚರಣೆ
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE), ವಿಶ್ವವಿದ್ಯಾಲಯ ಎಂದು ಪರಿಗಣಿತ ವಾದ ಉತ್ಕೃಷ್ಟ ಸಂಸ್ಥೆಯು, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು ಮತ್ತು ಮಾಹೆ ಕುಲಾಧಿಪತಿ ಡಾ. ರಾಮದಾಸ್ ಎಂ. ಪೈ ಅವರ 90ನೇ ಹುಟ್ಟುಹಬ್ಬವನ್ನು ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಯಶಸ್ವಿಯಾಗಿ ಆಚರಿಸಿದೆ.

-

ಮಣಿಪಾಲ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE), ವಿಶ್ವವಿದ್ಯಾಲಯ ಎಂದು ಪರಿಗಣಿತವಾದ ಉತ್ಕೃಷ್ಟ ಸಂಸ್ಥೆಯು, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು ಮತ್ತು ಮಾಹೆ ಕುಲಾಧಿಪತಿ ಡಾ. ರಾಮದಾಸ್ ಎಂ. ಪೈ ಅವರ 90ನೇ ಹುಟ್ಟುಹಬ್ಬವನ್ನು ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಯಶಸ್ವಿಯಾಗಿ ಆಚರಿಸಿದೆ. ಸೆಪ್ಟೆಂಬರ್ 16 ರಿಂದ 18 ರವರೆಗೆ ನಡೆದ ಅದ್ಧೂರಿ ಆಚರಣೆಯು ಶೈಕ್ಷಣಿಕ ಸಮುದಾಯ, ಆರೋಗ್ಯ ವೃತ್ತಿಪರರು ಮತ್ತು ಸಾರ್ವಜನಿಕರ ಅಭೂತಪೂರ್ವ ಭಾಗವಹಿಸುವಿಕೆಗೆ ಸಾಕ್ಷಿಯಾಗಿದ್ದು, ಇದು ಡಾ. ಪೈ ಅವರ ದೂರದೃಷ್ಟಿ ನಾಯಕತ್ವದ ಪ್ರಭಾವವನ್ನು ಪ್ರತಿಬಿಂಬಿಸಿತು.
‘ಸುಸ್ಥಿರ ಭವಿಷ್ಯಕ್ಕಾಗಿ ಹಸಿರು ಪರಿವರ್ತನೆಯ ಮುಂದಾಳತ್ವ’ ಎಂಬ ವಿಷಯದ ಕುರಿತು ಸ್ವಯಂಸೇವಕ ಸೇವಾ ಸಂಸ್ಥೆಯ (ವಿಎಸ್‌ಒ) ಆಯೋಜಿಸಿದ್ದ 6ನೇ ರಾಷ್ಟ್ರೀಯ ಸಮ್ಮೇಳನವು ಯಶಸ್ವಿಯಾಗಿ ನಡೆಸಿತು. ಈ ಸಮ್ಮೇಳನದಲ್ಲಿ ಸುಮಾರು 700 ಜನ ಪ್ರತಿನಿಧಿಗಳು ಪಾಲ್ಗೊಂಡಿ ದ್ದರು. ಲಿಯೋಬೆನ್ ವಿಶ್ವವಿದ್ಯಾಲಯದ (ಆಸ್ಟ್ರಿಯಾ) ಪ್ರೊ. ಪೀಟರ್ ಮೋಸರ್ ಮತ್ತು ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದ (ಕೆನಡಾ) ಪ್ರೊ. ಜಾನ್ ಗಿಲ್ಬರ್ಟ್ ಸೇರಿದಂತೆ ವಿವಿಧ ಗಣ್ಯರು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: Udupi Sri Mandarthi Vaibhava: ಉಡುಪಿ ಶ್ರೀ ಮಂದಾರ್ತಿ ವೈಭವ ಹೋಟೆಲ್‌ನ 'ನಳಭೀಮ ಪಾಕಂ' ಸಿಹಿ ತಿಂಡಿ ಮಳಿಗೆಗೆ ಚಾಲನೆ
ಹುಟ್ಟುಹಬ್ಬದ ಅಂಗವಾಗಿ ನಡೆಸಿದ ಮಾಹೆ ರಾಷ್ಟ್ರೀಯ ಛಾಯಾಗ್ರಹಣ ಸ್ಪರ್ಧೆ-2025ಕ್ಕೆ ಭಾರತದಾದ್ಯಂತ ಉತ್ತಮ ಪ್ರತಿಕ್ರಿಯೆ ದೊರಕಿದ್ದು ಸುಮಾರು 2000 ಜನರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸೃಜನಶೀಲತೆ ಮತ್ತು ದೃಶ್ಯ ಅಭಿವ್ಯಕ್ತಿಯನ್ನು ಆಚರಿಸುವ ಸಲುವಾಗಿ ‘ಮೇಘಮಲ್ಹಾರ್: ಮಳೆ ಮತ್ತು ಲಯಕ್ಕೆ ದೃಶ್ಯ ಗೌರವ’ ಹಾಗು ʼನನ್ನ ಮಾಹೆ, ನನ್ನ ಕ್ಯಾಂಪಸ್’ ಎರಡು ವಿಭಿನ್ನ ವಿಭಾಗಗಳಲ್ಲಿ ಈ ಸ್ಪರ್ಧೆ ನಡೆಯಿತು. ಇದರಲ್ಲಿ ವಿಜೇತರಾದ ಮತ್ತು ಅಂತಿಮ ಸುತ್ತಿಗೆ ಆಯ್ಕೆಯಾದ ಛಾಯಚಿತ್ರಗಳ ಪ್ರದರ್ಶನದ ಉದ್ಘಾಟನೆಯು ಡಾ. ಟಿಎಂಎ ಪೈ ಸಭಾಂಗಣ ದಲ್ಲಿ ಜರುಗಿದ್ದು, ಸೆಪ್ಟೆಂಬರ್ 17-19 ರವರೆಗೆ ನಡೆಯುವ ಪ್ರದರ್ಶನವು ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಾರ್ವಜನಿಕರ ಗಮನ ಸೆಳೆಯಲಿದೆ.
ಈ ಆಚರಣೆಯ ಪ್ರಮುಖ ಕೇಂದ್ರಬಿಂದುವಾದ ರಕ್ತದಾನ ಮತ್ತು ಅಂಗಾಂಗ ದಾನ ಪ್ರತಿಜ್ಞೆಯ ಮೂರು ದಿನಗಳ ಅಭಿಯಾನವು ಈಗಾಗಲೇ ಅನೇಕರನ್ನು ತಲುಪಿದೆ. ಇಲ್ಲಿಯವರೆಗೆ ಸುಮಾರು 200 ಮಂದಿ ರಕ್ತದಾನ ಮಾಡಿದ್ದು, ಇದು ಸೆಪ್ಟೆಂಬರ್ 18ರವರೆಗೆ ಮುಂದುವರಿಯಲಿದೆ.

ಸ್ಪೂರ್ತಿದಾಯಕವಾದ ಮತ್ತು ಅಷ್ಟೇ ಅನೇಕ ಧೀರರು ತಮ್ಮ ಅಂಗಗಳನ್ನು ದಾನ ಮಾಡಿದ್ದಾರೆ ಮತ್ತು ಈ ಧ್ಯೇಯವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ಸ್ವಯಂ ಪ್ರೇರಿತರಾಗಿ ಅಂಗಾಂಗಗಳನ್ನು ದಾನ ಮಾಡಿದವರ ನೋಂದಣಿಯನ್ನು ಅಭಿವೃದ್ಧಿಗೊಳಿಸಲಾಗಿದೆ. ಮಣಿಪಾಲ ದಾದ್ಯಂತ ವಿದ್ಯಾರ್ಥಿಗಳು, ಅಧ್ಯಾಪಕರು, ಸಿಬ್ಬಂದಿ ಮತ್ತು ಇತರೆ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಬದ್ಧತೆ ತೋರುವುದಷ್ಟ ಅಲ್ಲದೆ ಭರವಸೆ, ಸ್ಪಂದನೆ ಮತ್ತು ನಿಸ್ವಾರ್ಥ ಸೇವಾ ಮನೋಭಾವವನ್ನು ಪ್ರದರ್ಶಿಸಿದರು.
ಇದರ ಜೊತೆ ಜೊತೆಗೆ ಮಣಿಪಾಲದ ಕಸ್ತೂರಬಾ ಆಸ್ಪತ್ರೆ, ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆ, ಕಾರ್ಕಳದ ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆ, ಉಡುಪಿ ಮತ್ತು ಮಂಗಳೂರು ಜಿಲ್ಲೆಯಲ್ಲಿನ ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಮಂಗಳೂರಿನ ಕಸ್ತೂರಬಾ ಆಸ್ಪತ್ರೆ, ಕೆಎಂಸಿ ಅತ್ತಾವರ ಮತ್ತು ದುರ್ಗಾ ಸಂಜೀವಿನಿ ಮಣಿಪಾಲ ಆಸ್ಪತ್ರೆ ಕಟೀಲು, ವೆನ್ಲಾಕ್ ಜಿಲ್ಲಾ ಆಸ್ಪತ್ರೆ, ಮಂಗಳೂರಿನ ಲೇಡಿ ಗೋಷೆನ್ ಆಸ್ಪತ್ರೆ ಸೇರಿದಂತೆ ಕಸ್ತೂರಬಾ ವೈದ್ಯ ಕೀಯ ಕಾಲೇಜು ಆಡಳಿತದ ಸರ್ಕಾರಿ ಆಸ್ಪತ್ರೆಗಳಲ್ಲಿ ಸುಮಾರು 20,000 ರೋಗಿಗಳಿಗೆ ಹಣ್ಣು ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ, ಈ ಭಾಗದ ಸುಮಾರು 1000 ಯಕ್ಷಗಾನ ಕಲಾವಿದರು ಮತ್ತು ಕುಟುಂಬ ದವರನ್ನು ಸೇರಿದಂತೆ ಮಣಿಪಾಲ ಆರೋಗ್ಯ ಕಾರ್ಡ್ ಅನ್ನು ನೀಡಲಾಯಿತು. ಮಾಹೆ ಆಸ್ಪತ್ರೆ ಗಳಲ್ಲಿ ಆರೋಗ್ಯ ಸೇವೆಗಳ ಮೇಲೆ ವಿಶೇಷ ರಿಯಾಯಿತಿಗಳನ್ನು ಪಡೆಯಬಹುದಾಗಿದೆ.
ಈ ಕಾರ್ಯಕ್ರಮದ ಯಶಸ್ಸಿನ ಕುರಿತು ಪ್ರತಿಕ್ರಿಯಿಸಿದ ಮಾಹೆ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ. ಡಿ. ವೆಂಕಟೇಶ್ ವಿಎಸ್‌ಎಂ (ನಿವೃತ್ತ), ʼಡಾ. ರಾಮದಾಸ್ ಪೈ ಅವರ 90 ವರ್ಷಾ ಚರಣೆಯು ಭಾರತೀಯ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿನ ಒಂಬತ್ತು ದಶಕಗಳ ಪರಿವರ್ತನಾ ನಾಯಕತ್ವವನ್ನು ಸಂಭ್ರಮಿಸುವುದಾಗಿದೆ. ಅವರ ದೂರದೃಷ್ಟಿಯುಳ್ಳ ನಾಯಕತ್ವವು ಉನ್ನತ ಶಿಕ್ಷಣದ ಚಿತ್ರಣವನ್ನು ಮೂಲಭೂತವಾಗಿ ರೂಪಿಸಿದ್ದು, ಸಾಂಸ್ಥಿಕ ಉತ್ಕೃಷ್ಟತೆ ಮತ್ತು ಸಾಮಾಜಿಕ ಜವಾಬ್ದಾರಿ ಮಾನದಂಡಗಳನ್ನು ಸ್ಥಾಪಿಸಿದೆ. ಶಿಕ್ಷಣವು ಸಮಾಜವನ್ನು ಮುನ್ನಡೆಸಬೇಕು ಎನ್ನುವ ಅವರ ಆಶಯವು ನಮ್ಮ ಧ್ಯೇಯ ಮತ್ತು ತತ್ವಗಳಿಗೆ ಮಾರ್ಗದರ್ಶನ ನೀಡುತ್ತಲೇ ಇದೆ" ಎಂದರು.
ಯುವ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, "ಈ ಪ್ರಮುಖ ಮೈಲಿಗಲ್ಲನ್ನು ಸ್ಮರಿಸು ತ್ತಿರುವ ಈ ಸಂದರ್ಭದಲ್ಲಿ, ಡಾ. ರಾಮದಾಸ್ ಎಂ. ಪೈ ಅವರ ಆಶಯವಾದ ಶೈಕ್ಷಣಿಕ ಶ್ರೇಷ್ಠತೆ, ಸಹಾನುಭೂತಿ ಮತ್ತು ನಾವೀನ್ಯತೆ ಕುರಿತ ಬದ್ಧತೆಯನ್ನು ಮಾಹೆ ಪುನರುಚ್ಚರಿಸುತ್ತದೆ" ಎಂದು ಹೇಳಿದರು.
ಮಾಹೆಯ ಸಹ ಕುಲಪತಿ ಡಾ. ಎಚ್.ಎಸ್. ಬಲ್ಲಾಳ್‌ಅವರು ಮಾತನಾಡಿ, "ಡಾ. ರಾಮದಾಸ್ ಪೈ ಅವರ 90 ನೇ ಹುಟ್ಟುಹಬ್ಬದ ಆಚರಣೆಗಳು ನಮ್ಮ ಸಂಸ್ಥೆಯಲ್ಲಿ ಅವರು ಬೆಳೆಸಿದ ಮಾನವೀಯತೆ ಯ ಸೇವೆ, ಶೈಕ್ಷಣಿಕ ಶ್ರೇಷ್ಠತೆ ಮತ್ತು ಸಮುದಾಯದ ತೊಡಗಿಸಿಕೊಳ್ಳುವಿಕೆಯ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ. ನಮ್ಮ ರಕ್ತದಾನ ಅಭಿಯಾನಕ್ಕೆ ಮತ್ತು ನಮ್ಮ ಛಾಯಚಿತ್ರ ಸ್ಪರ್ಧೆಗೆ ಸಿಕ್ಕ ಅಗಾಧ ಪ್ರತಿಕ್ರಿಯೆಯು ಅವರ ದೃಷ್ಟಿಕೋನವು ಸಾವಿರಾರು ಜನರಿಗೆ ಹೇಗೆ ಸ್ಫೂರ್ತಿ ನೀಡಿದೆ ಎನ್ನುವುದನ್ನು ತೋರಿಸಿದೆ. ಈ ಆಚರಣೆಗಳು ಅವರ ಹಿಂದಿನ ಸಾಧನೆಗಳಿಗೆ ಗೌರವ ಮಾತ್ರವಲ್ಲ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಅವರ ನಾಯಕತ್ವ ಮತ್ತು ನಾವೀನ್ಯತೆಯ ಪರಂಪರೆಯನ್ನು ಮುಂದುವರಿಸುವ ಬದ್ಧತೆಯಾಗಿದೆ" ಎಂದು ಹೇಳಿದರು.
ಮಣಿಪಾಲದ ಆಧುನಿಕ ಶಿಲ್ಪಿ ಎಂದು ಕರೆಯುವ ಡಾ. ಪೈ, ತಮ್ಮ ತಂದೆ ಡಾ. ಟಿ.ಎಂ.ಎ. ಪೈ ಅವರ ದೂರದೃಷ್ಟಿಯ ಪರಂಪರೆಯನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ವಿಶಿಷ್ಟ ನಾಯಕತ್ವದಲ್ಲಿ, ಮಣಿಪಾಲವು ಒಂದೇ ಸಂಸ್ಥೆಯಿಂದ ಭಾರತ ಮತ್ತು ವಿದೇಶಗಳಲ್ಲಿ ವ್ಯಾಪಿಸಿರುವ ವಿಶ್ವವಿದ್ಯಾಲಯಗಳ ಜಾಲವಾಗಿ ವಿಕಸನಗೊಂಡಿದೆ, ಅದೇ ಸಮಯದಲ್ಲಿ ಮಣಿಪಾಲ್ ಆಸ್ಪತ್ರೆಯು ದೇಶದಲ್ಲಿರುವ ಅತ್ಯಂತ ವಿಶ್ವಾಸಾರ್ಹ ಆರೋಗ್ಯ ಸೇವಾ ಸಂಸ್ಥೆಗಳಲ್ಲಿ ಒಂದಾಗಿದೆ.
ಮಂಗಳೂರು, ಬೆಂಗಳೂರು, ಜೆಮ್‌ಶೆಡ್‌ಪುರ ಮತ್ತು ದುಬೈ ಹೀಗೆ ಮಣಿಪಾಲ್ ಗ್ರೂಪ್‌ನ ಎಲ್ಲಾ ಕ್ಯಾಂಪಸ್‌ಗಳಲ್ಲಿ ಅದ್ಧೂರಿಯಾಗಿ ಹುಟ್ಟುಹಬ್ಬದ ಆಚರಣೆಗಳು ನಡೆದವು. ಇದು ಡಾ. ಪೈ ಅವರ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಿಗೆ ವ್ಯಾಪಕ ಗೌರವ ಮತ್ತು ಮೆಚ್ಚುಗೆ ಪ್ರದರ್ಶಿಸಿತು. ಡಾ. ಪೈ ಅವರ 90 ನೇ ಹುಟ್ಟುಹಬ್ಬದ ಆಚರಣೆಯ ಸಂದರ್ಭದಲ್ಲಿ ಕೈಗೊಂಡ ಈ ಉಪಕ್ರಮಗಳು ಸೆಪ್ಟೆಂಬರ್ 20, 2025 ರಂದು ಮೂಡುಬಿದಿರೆಯ ಶ್ರೀ ಮಹಾವೀರ ಕಾಲೇಜಿನಲ್ಲಿ ನಡೆಯಲಿರುವ ಅಕಾಡೆಮಿ ಆಫ್ ಜನರಲ್ ಎಜುಕೇಶನ್ (ಎಜಿಇ) ಕಾಲೇಜು ಶಿಕ್ಷಕರ 4ನೇ ಸಮಾ ವೇಶದವರೆಗೂ ಮುಂದುವರಿಯಲಿದೆ.
*
ರಾಷ್ಟ್ರೀಯ ಛಾಯಚಿತ್ರ ಸ್ಪರ್ಧೆಯಲ್ಲಿ ಭಾರತದಾದ್ಯಂತ ಸುಮಾರು 2,000 ಜನರು ಭಾಗವಹಿಸಿದ್ದರು.
- ವಿಎಸ್‌ಒ ಹಮ್ಮಿಕೊಂಡಿದ್ದ ಸುಸ್ಥಿರತೆ ಕುರಿತು ರಾಷ್ಟ್ರೀಯ ಸಮ್ಮೇಳನದಲ್ಲಿ ಸುಮಾರು 700 ಜನರು ಪಾಲ್ಗೊಂಡಿದ್ದರು. 15 ರಾಷ್ಟ್ರೀಕೃತ ಎನ್‌ಜಿಒ ಪ್ರದರ್ಶನ, ವಿಶ್ವಸಂಸ್ಥೆಯ ವಿವಿಧ ಎಸ್‌ಜಿಡಿಗಳ ಕುರಿತು 110 ಪೋಸ್ಟರ್‌ಗಳನ್ನು ಪ್ರದರ್ಶಿಸಲಾಯಿತು.
- ಆಚರಣೆಯ ಭಾಗವಾಗಿ ನಡೆದ ರಕ್ತದಾನ ಶಿಬಿರದಲ್ಲಿ ಇದುವರೆಗೆ ಸುಮಾರು 200 ರಕ್ತದಾನಿಗಳು ಭಾಗವಹಿಸಿದ್ದರು.
- ಜೀವ ಸಾರ್ಥಕತೆಯ ಸೂಚಕವಾಗಿರುವ ಅಂಗಾಂಗ ದಾನದ ಪ್ರತಿಜ್ಞೆಯನ್ನು ಜನರು ಕೈಗೊಂಡರು.
- ವಿವಿಧೆಡೆಗಳಲ್ಲಿ ರೋಗಿಗಳಿಗೆ ಹಣ್ಣುಗಳನ್ನು ವಿತರಿಸಲಾಯಿತು.
- ಈ ಭಾಗದ ಸುಮಾರು 1000 ಯಕ್ಷಗಾನ ಕಲಾವಿದರಿಗೆ ಮಣಿಪಾಲ್ ಆರೋಗ್ಯ ಕಾರ್ಡ್ ಅನ್ನು ನೀಡಲಾಯಿತು.