Union Budget 2025: ಕರ್ನಾಟಕದ ರೈಲ್ವೆ ಯೋಜನೆಗಳಿಗೆ 7,564 ಕೋಟಿ ರೂ. ಮೀಸಲು
Union Budget 2025: ಕಳೆದ ಬಾರಿ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕ್ಕೆ ಬಜೆಟ್‌ಲ್ಲಿ 7559 ಕೋಟಿ ರೂಪಾಯಿ ಘೋಷಿಸಿದ್ದರು. ಈ ಬಾರಿ ಐದು ಕೋಟಿ ಅನುದಾನ ಏರಿಕೆಯಾಗಿದೆ. ಒಟ್ಟಾರೆಯಾಗಿ ಈ ಬಾರಿಯೂ ರೈಲ್ವೆ ಇಲಾಖೆಗೆ 2.51 ಲಕ್ಷ ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ.
ಬೆಂಗಳೂರು: ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಕೇಂದ್ರ ಬಜೆಟ್‌ನಲ್ಲಿ ಕಳೆದ ವರ್ಷದ ಬಜೆಟ್‌ಗಿಂತ 5 ಕೋಟಿ ಹೆಚ್ಚು ಹಣವನ್ನು ಮೀಸಲಿಡಲಾಗಿದೆ. ಕಳೆದ ಬಾರಿ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕ್ಕೆ ಬಜೆಟ್‌ಲ್ಲಿ 7559 ಕೋಟಿ ರೂಪಾಯಿ ಘೋಷಿಸಿದ್ದರು. ಈ ಬಾರಿ ಐದು ಕೋಟಿ ಏರಿಕೆಯಯಾಗಿದ್ದು, 7,564 ಕೋಟಿ ರೂಪಾಯಿಯನ್ನು ಮೀಸಲಿಡಲಾಗಿದೆ.
ಈ ಬಗ್ಗೆ ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಮಾಹಿತಿ ನೀಡಿದ್ದು, ರಾಜ್ಯದ ಮಹತ್ವದ ರೈಲ್ವೆ ಯೋಜನೆಗಳಲ್ಲಿ ಒಂದಾದ ಬೆಂಗಳೂರಿನ ಸಬರ್ಬನ್ ರೈಲ್ವೆಗೆ ಕಳೆದ ಬಾರಿ 350 ಕೋಟಿ ರೂಪಾಯಿ ಮೀಸಲಿಡಲಾಗಿತ್ತು. ಈ ಬಾರಿಯ ಬಜೆಟ್‌ನಲ್ಲಿಯೂ ಅಷ್ಟೇ ಪ್ರಮಾಣದ ಹಣವನ್ನು ಮೀಸಲಿಡಲಾಗಿದೆ ಎಂದು ತಿಳಿಸಿದ್ದಾರೆ.
ರೈಲ್ವೆ ಸುರಕ್ಷತೆಗೆ ಕವಚ್ 4.0 ಯೋಜನೆ ಜಾರಿಗೊಳಿಸಲಾಗಿದೆ. ಈ ಬಗ್ಗೆ ಪ್ರಯೋಗವನ್ನು ಈಗಾಗಲೇ ನಡೆಸಲಾಗಿದೆ. ಕವಚ್ ದೇಶಿಯ ತಂತ್ರಜ್ಷಾನ ಆಧಾರಿತವಾಗಿದೆ ಮತ್ತು ಪರೀಕ್ಷೆ ಯಶಸ್ವಿಯಾಗಿದೆ. ಸುಮಾರು 10,000 ರೈಲ್ವೆ ಇಂಜಿನಗಳಿಗೆ ಕವಚ್ ಅಳವಡಿಸಲಾಗುವುದು. ಈ ಕಾರ್ಯ ಪ್ರಗತಿಯಲ್ಲಿದೆ. ನವದೆಹಲಿ - ಮುಂಬೈ ಮತ್ತು ನವದೆಹಲಿ-ಕೋಲ್ಕತ್ತಾ ಮಾರ್ಗದಲ್ಲಿ ಡಿಸೆಂಬರ್ 2025ರಲ್ಲಿ ಕವಚ್ ಅಳವಡಿಕೆ ಮುಗಿಯಲಿದೆ ಎಂದು ಹೇಳಿದ್ದಾರೆ.
2025 ಭಾರತೀಯ ರೇಲ್ವೆಯ ವಿದ್ಯುದ್ದೀಕರಣ ಶತಮಾನೋತ್ಸವ ವರ್ಷವೆಂದು ಬಣ್ಣಿಸಿ, 100% ವಿದ್ಯುದೀಕರಣ ಮುಗಿಸಲಾಗುವುದು. 2025-26ರಲ್ಲಿ ನಾನ್ ಎಸಿ ಅಮೃತ್ ಭಾರತ್ ರೈಲು ಪ್ರಾರಂಭಿಸಲಾಗುವುದು, ಪ್ರಾರಂಭದಲ್ಲಿ 100 ಅಮೃತ್ ಭಾರತ್ ರೈಲ್ವೆ ತಯಾರಿಸಲಾಗುತ್ತಿದೆ. ಅಹ್ಲಾದಕರ ಪ್ರಯಾಣ ವ್ಯವಸ್ಥೆ ಅಮೃತ್ ಭಾರತ್ ರೈಲ್ವೆಯಲ್ಲಿ ದೊರಕಲಿದೆ. ಮುಂದಿನ 4 ವರ್ಷಗಳಲ್ಲಿ 1300ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳನ್ನು ಅಭವೃದ್ದಿ ಪಡಿಸಲಾಗುವುದು. ವಂದೇ ಸ್ಲೀಪರ್ ಕೋಚ್ ಪರೀಕಾರ್ಥವಾಗಿ ಚಲನೆಯಲ್ಲಿದೆ. 50 ವಂದೇ ಭಾರತ್ ಸ್ಲೀಪರ್ ಟ್ರೇನ್2025-26ಮತ್ತು 2026-27ರಲ್ಲಿ ಸಿದ್ಧಪಡಿಸಿ ಲೋಕಾರ್ಪಣೆಗೊಳಿಸಲಾಗುವುದು. ಇವು ದೂರದ ಪ್ರಯಾಣಕ್ಕೆ ಅನುಕೂಲವಾಗಲಿದೆಯೆಂದು ಕೇಂದ್ರ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ಜನಪ್ರಿಯ ಬಜೆಟ್ ನೀಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಧನ್ಯವಾದಗಳನ್ನು ಕೇಂದ್ರ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. ರೈಲ್ವೆ ಹಾಗೂ ಜಲ ಜೀವನ್ ಮಿಶನ್‌ಗೆ ಆದ್ಯತೆ ನೀಡಿ, ದೇಶದ ಸರ್ವಾಂಗಿಣ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ನಾನು ಅತ್ಯಂತ ತುಂಬು ಹೃದಯದಿಂದ ಸ್ವಾಗತಿಸುತ್ತೇನೆ. ಇದಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ರಾಜ್ಯದ ಜನತೆಯ ಪರವಾಗಿ ಧನ್ಯವಾದಗಳನ್ನು ಕೇಂದ್ರ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Union Budget: ಬಜೆಟ್‌ನಲ್ಲಿ ರೈಲ್ವೆ ಇಲಾಖೆಗೆ ಸಿಕ್ಕಿದ್ದೇನು? ಇಲ್ಲಿದೆ ಡಿಟೇಲ್ಸ್
ಯಾವೆಲ್ಲಾ ರೈಲ್ವೆ ಯೋಜನೆಗಳಿಗೆ ಎಷ್ಟು ಅನುದಾನ?
- ಗದಗ-ವಾಡಿ ಮಾರ್ಗದ ಯೋಜನೆಗೆ 549.45 ಕೋಟಿ ರೂ.
- ತುಮಕೂರು-ಚಿತ್ರದುರ್ಗ-ದಾವಣಗೆರೆ ರೈಲ್ವೆಗೆ 549.45 ಕೋಟಿ ರೂ.
- ಬಾಗಲಕೋಟ-ಕುಡಚಿ ಮಾರ್ಗದ ಯೋಜನೆಗೆ 428.1 ಕೋಟಿ ರೂ.
- ಹೊಸಪೇಟೆ-ಹುಬ್ಬಳ್ಳಿ-ಲೋಂಡಾ-ತಿನೈಘಾಟ್-ವಾಸ್ಕೋ ಡಿ ಗಾಮಾ (352.28 ಕಿ.ಮೀ) ರೈಲ್ವೆ ಮಾರ್ಗದ ಯೋಜನೆಗೆ 413.73 ಕೋಟಿ ರೂ.
- ಹೊಟಗಿ-ಕುಡಗಿ-ಗದಗ ಮಾರ್ಗದ ಯೋಜನೆಗೆ 401.15 ಕೋಟಿ ರೂ.
- ಬೆಂಗಳೂರು-ವೈಟ್‌ಫೀಲ್ಡ್-ಕೃಷ್ಣರಾಜಪುರಂ ಚತುಷ್ಪಥ ಪುಣೆ, ಮೀರಜ್-ಲೋಂಡಾ ಮಾರ್ಗದ ರೈಲ್ವೆ ಯೋಜನೆಗೆ 357.6 ಕೋಟಿ ರೂ.
- ಬೈಯಪ್ಪನಹಳ್ಳಿಯಿಂದ ಹೊಸೂರು ಮಾರ್ಗಕ್ಕೆ 223.5 ಕೋಟಿ ರೂ.
- ಮುನಿರಾಬಾದ್-ಮಹಬೂಬ್ನರ ಮಾರ್ಗದ ಯೋಜನೆಗೆ 214.05 ಕೋಟಿ ರೂ.
- ಯಶವಂತಪುರದಿಂದ ಚನ್ನಸಂದ್ರ ಮಾರ್ಗ ಯೋಜನೆಗೆ 178.8 ಕೋಟಿ ರೂ.
- ತೋರಣಗಲ್ಲು-ರಂಜಿತ್‌ಪುರ ಮಾರ್ಗದ ಯೋಜನೆಗೆ 104.47 ಕೋಟಿ ರೂ.
- ದೌಂಡ್-ಕಲಬುರಗಿ ಡಬ್ಲಿಂಗ್ ಮತ್ತು ಪುಣೆ-ಗುಂತಕಲ್ ವಿದ್ಯುತೀಕರಣಕ್ಕೆ ಒಟ್ಟು 641.37 ಕಿ.ಮೀ. ಮಾರ್ಗದ ಯೋಜನೆಗೆ 84.39 ಕೋಟಿ ರೂ.
- ಕಡೂರು-ಚಿಕ್ಕಮಗಳೂರು-ಸಕಲೇಶಪುರ ಮಾರ್ಗಕ್ಕೆ 78.4 ಕೋಟಿ ರೂ.
- ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಮಾರ್ಗಕ್ಕೆ 64.05 ಕೋಟಿ ರೂ.
- ಕಲಬುರಗಿ-ಬೀದರ್ ಮಾರ್ಗದ ಯೋಜನೆಗೆ 38.43 ಕೋಟಿ ರೂ.
- ಹುಬ್ಬಳ್ಳಿ-ಚಿಕ್ಕಜಾಜೂರು 27.714 ಕೋಟಿ ರೂ.
- ಮಾರಿಕುಪ್ಪಂ-ಕುಪ್ಪಂ 25.62 ಕೋಟಿ ರೂ.
- ಹಾಸನ-ಬೆಂಗಳೂರು ರೈಲ್ವೆ ಮಾರ್ಗದ ಯೋಜನೆಗೆ 15.54 ಕೋಟಿ ರೂ.
- ರೇಣಿಗುಂಟಾ, ಗೂಟಿ, ವಾಡಿಯಲ್ಲಿ ಬೈಪಾಸ್- 15.198 ಕೋಟಿ ರೂ.
- ಅರಸೀಕೆರೆ-ತುಮಕೂರು ರೈಲ್ವೆ ಮಾರ್ಗದ ಯೋಜನೆಗೆ 13.41 ಕೋಟಿ ರೂ.
- ಕೆಂಗೇರಿ-ರಾಮನಗರ-ಮೈಸೂರು ಮಾರ್ಗದ ಯೋಜನೆಗೆ 10.728 ಕೋಟಿ ರೂ.
- ಕಂಕನಾಡಿ-ಪಣಂಬೂರು ರೈಲ್ವೆ ಮಾರ್ಗದ ಯೋಜನೆಗೆ 8.94 ಕೋಟಿ ರೂ.
- ಧಾರವಾಡ-ಬೆಳಗಾವಿ ರೈಲ್ವೆ ಮಾರ್ಗದ ಯೋಜನೆಗೆ 8.54 ಕೋಟಿ ರೂ.
- ಯಲಹಂಕ-ಪೆನುಕೊಂಡ ರೈಲ್ವೆ ಮಾರ್ಗದ ಯೋಜನೆಗೆ 4.47 ಕೋಟಿ ರೂ.