ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಾಮಚಂದ್ರಾಪುರ ಮಠದ ವತಿಯಿಂದ ಜುಲೈ 29ರಿಂದ 'ಅನ್ನಬ್ರಹ್ಮ ಚಾತುರ್ಮಾಸ್ಯ' ; ಆಹಾರ ಜಾಗೃತಿಯೇ ಈ ಬಾರಿಯ ವ್ರತದ ಧ್ಯೇಯ

ಶುದ್ಧ ಹಾಗೂ ವೈಜ್ಞಾನಿಕ ಆಹಾರ ಕ್ರಮದ ಜಾಗೃತಿ ಮೂಡಿಸಲು ಶ್ರೀ ರಾಮಚಂದ್ರಾಪುರ ಮಠವು ಈ ಬಾರಿ ವಿಶಿಷ್ಟವಾದ 'ಅನ್ನಬ್ರಹ್ಮ ಚಾತುರ್ಮಾಸ್ಯ' ವ್ರತವನ್ನು ಹಮ್ಮಿಕೊಂಡಿದೆ. ಶ್ರೀಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ 33ನೇ ಚಾತುರ್ಮಾಸ್ಯ ವ್ರತವು ಉತ್ತರ ಕನ್ನಡದ ಗೋಕರ್ಣದ ಅಶೋಕೆಯ ಮೂಲ ಮಠದದಲ್ಲಿ ಜರುಗಲಿದೆ.

ರಾಮಚಂದ್ರಾಪುರ ಮಠದ ವತಿಯಿಂದ ಜುಲೈ 29ರಿಂದ ಅನ್ನಬ್ರಹ್ಮ ಚಾತುರ್ಮಾಸ್ಯ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Jul 18, 2026 3:09 PM

ಗೋಕರ್ಣ: ಶುದ್ಧ ಹಾಗೂ ವೈಜ್ಞಾನಿಕ ಆಹಾರ ಕ್ರಮದ ಜಾಗೃತಿ ಮೂಡಿಸಲು ಶ್ರೀ ರಾಮಚಂದ್ರಾಪುರ ಮಠವು ಈ ಬಾರಿ ವಿಶಿಷ್ಟವಾದ 'ಅನ್ನಬ್ರಹ್ಮ ಚಾತುರ್ಮಾಸ್ಯ' (Annabrahma Chaturmasya) ವ್ರತವನ್ನು ಹಮ್ಮಿಕೊಂಡಿದೆ. ಶ್ರೀಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ 33ನೇ ಚಾತುರ್ಮಾಸ್ಯ ವ್ರತವು ಉತ್ತರ ಕನ್ನಡದ ಗೋಕರ್ಣದ ಅಶೋಕೆಯ ಮೂಲ ಮಠದದಲ್ಲಿ ಜರುಗಲಿದೆ. ಜುಲೈ 29 ರಿಂದ ಸೆಪ್ಟೆಂಬರ್ 26ರ ವರೆಗೆ (ಆಷಾಢ ಶುಕ್ಲ ಪೂರ್ಣಿಮೆಯಿಂದ ಭಾದ್ರಪದ ಶುಕ್ಲ ಪೂರ್ಣಿಮೆಯವರೆಗೆ) ಎರಡು ತಿಂಗಳುಗಳ ಕಾಲ ವ್ರತ ಇರಲಿದೆ.

ಏನಿದು ಅನ್ನಬ್ರಹ್ಮ ಪರಿಕಲ್ಪನೆ?

ಸನಾತನ ಭಾರತೀಯ ಸಂಸ್ಕೃತಿಯಲ್ಲಿ 'ಅನ್ನಂ ಬ್ರಹ್ಮೇತಿ ವ್ಯಜಾನಾತ್' ಎನ್ನಲಾಗಿದೆ. ಅಂದರೆ ಅನ್ನವೇ ದೈವಸ್ವರೂಪ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಅನ್ನದ ಅಪವ್ಯಯವನ್ನು ತಡೆಯುವುದು ಮತ್ತು ಋಷಿ ಪ್ರೋಕ್ತ ಆಹಾರ ಶೈಲಿಯನ್ನು ಜನಸಾಮಾನ್ಯರಿಗೆ ಪರಿಚಯಿಸುವುದು ಈ ವ್ರತದ ಮೂಲ ಉದ್ದೇಶವಾಗಿದೆ. ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರ ಕುರಿತತಾದ ಜ್ಞಾನೋದ್ದೀಪನಕ್ಕೆ ಈ ಚಾತುರ್ಮಾಸ್ಯ ಸಮರ್ಪಿತವಾಗಿದೆ ಎಂದು ಮಠ ತಿಳಿಸಿದೆ.

ಆಹಾರದ ಕುರಿತಾದ ಖಷಿದರ್ಶನವನ್ನು ಪ್ರಸ್ತುತ ಪಡಿಸುವ ಕಾರ್ಯ ಈ ಚಾತುರ್ಮಾಸ್ಯದಲ್ಲಿ ನಡೆಯುತ್ತದೆ. ಆ ಕುರಿತಾದ ಸರಣಿ ಪ್ರವಚನವನ್ನು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ನೀಡಲಿದ್ದಾರೆ.

ಈ ಎರಡು ತಿಂಗಳ ಅವಧಿಯಲ್ಲಿ ಪ್ರತಿದಿನವೂ ವೇದಪಾರಾಯಣ, ಸಂಸ್ಕೃತ ಚಿಂತನೆ, ಆಯುರ್ವೇದ ಆಹಾರ ಪದ್ಧತಿಯ ಮಾಹಿತಿ ಶಿಬಿರಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ಜರುಗಲಿವೆ.

ಪ್ರವಚನದ ವಿಷಯಗಳೇನು?

ಭೋಜನವೆಂಬ ತಪ್ಪಸ್ಸು; ಊಟ ಮಾಡುವುದೂ ತಪಸ್ಸಾಗಬಹುದೇ? ಅದು ಹೇಗೆ? ಊಟದ ತಪಸ್ಸಿಗೆ ಸಿಗುವ ವರ ಯಾವುದು?

ಆಹಾರ- ಯಾವಾಗ ಸ್ವೀಕರಿಸಿದರೆ ಹಿತ?

ಪಾಚಕ/ ಪರಿವೇಷಕರು ಹೇಗಿರಬೇಕು?

ಜಲಪಾನದ ನಿಮಗಳೇನು?

ಆಹಾರದ ಉದ್ದೇಶ

ಭಗವದರ್ಪಣ

ಅಗ್ನಿ, ಸಾತ್ವಿಕ ಆಹಾರ

ಭೋಜನದ ಬಳಿಕ ಪಾಲಿಸಬೇಕಾದ ನಿಯಮಗಳೇನು?

ಆಹಾರ ಎಷ್ಟು ಸ್ವೀಕರಿಸಿದರೆ ಹಿತ?

ವಿರುದ್ಧಾಹಾರ

ಪರಾನ್ನ ಮುಂತಾದವುಗಳ ಕುರಿತು ಸ್ವಾಮಿಗಳು ಪ್ರವಚನ ನೀಡಲಿದ್ದಾರೆ.