ಬಪ್ಪುಂಡದಲ್ಲಿ ಕೊಳವೆ ಬಾವಿ ಕೊರೆಯುವಿಕೆಗೆ ವಿರೋಧ: ಸ್ಥಳೀಯರಿಂದ ಖಾಲಿ ಕೊಡಗಳ ಪ್ರದರ್ಶಿಸಿ ಪ್ರತಿಭಟನೆ
Bhatkal News: ಶಿರಾಲಿ ನೀರಕಂಠ ಬಪ್ಪುಂಡದಲ್ಲಿ ಖಾಸಗಿ ಜಾಗದಲ್ಲಿ ಕೊಳವೆ ಬಾವಿ ತೆರೆಯುತ್ತಿರುವುದನ್ನು ವಿರೋಧಿಸಿ, ಸ್ಥಳೀಯ ಮಹಿಳೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖಾಲಿ ಕೊಡಗಳನ್ನು ಪ್ರದರ್ಶಿಸಿ, ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.
ಶಿರಾಲಿಯ ಬಪ್ಪುಂಡದಲ್ಲಿ ಕೊಳವೆ ಬಾವಿ ವಿರೋಧಿಸಿ ಸ್ಥಳೀಯ ಮಹಿಳೆಯರ ಪ್ರತಿಭಟನೆ. -
ಭಟ್ಕಳ, ಏ.28: ಶಿರಾಲಿಯ ನೀರಕಂಠ ಬಪ್ಪುಂಡದಲ್ಲಿ ಖಾಸಗಿ ಜಾಗದಲ್ಲಿ ಕೊಳವೆ ಬಾವಿ ತೆರೆಯುತ್ತಿರುವುದನ್ನು ವಿರೋಧಿಸಿ ಸ್ಥಳೀಯ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ. ಖಾಲಿ ಕೊಡಗಳನ್ನು ಪ್ರದರ್ಶಿಸಿ ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಶಿರಾಲಿ ಪಂಚಾಯಿತಿಯ ಭಾಗದಲ್ಲಿ ಅಂತರ್ಜಲ ಕೊರತೆಯಾಗಬಹುದು ಎಂಬ ಕಾರಣಕ್ಕಾಗಿ ಕೊಳವೆ ಬಾವಿಗಳನ್ನು ಕೊರೆಯಲು ಅವಕಾಶ ನೀಡಬಾರದು ಎಂದು ಠರಾವು ಮಾಡಲಾಗಿತ್ತು. ಆದರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಚುನಾಯಿತ ಮಂಡಳಿಯ ಅಧಿಕಾರಾವಧಿ ಮುಗಿದ ನಂತರ ಆಮಿಷಕ್ಕೆ ಒಳಗಾಗಿ ನಿರಾಕ್ಷೇಪಣಾ ಪತ್ರ ಪತ್ರವನ್ನು ನೀಡಿದ್ದಾರೆ. ಆ ಮೂಲಕ ಜಾಗದ ಮಾಲಕ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪತ್ರವನ್ನು ಪಡೆದಿದ್ದಾರೆ. ಜಾಗದ ಮೂಲಕ ತಮ್ಮ ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಸ್ಥಳೀಯರ ಅಭಿಪ್ರಾಯಕ್ಕೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ ಎಂದು ಸ್ಥಳೀಯ ಮಹಿಳೆಯರು ಆರೋಪಿಸಿದರು.
ಸುತ್ತಮುತ್ತ ಕಡಿಮೆ ಆಳದ ಬಾವಿಗಳಿದ್ದು ಹಾಗೂ ಬೇಸಿಗೆಯಲ್ಲಿ ವೆಂಕಟಾಪುರ ಹೊಳೆಯ ಮೂಲಕ ಸಮುದ್ರದ ಉಪ್ಪುನೀರು ಅಂತರ್ಜಲದ ಜತೆ ಸೇರಿ ಬಾವಿ ನೀರು ಉಪ್ಪಾಗುತ್ತದೆ. ಈ ಸಂದರ್ಭದಲ್ಲಿ ಕೊಳವೆ ಬಾವಿಗೆ ಕೊರೆಯಲು ಅವಕಾಶ ನೀಡಿದರೆ ಅಂತರ್ಜಲ ಕೊರತೆ ಉಂಟಾಗುತ್ತದೆ ಎಂದು ತಿಳಿಸಿದರು.
ದೇಶಾದ್ಯಂತ ಬಿಸಿ ಗಾಳಿ ಎಚ್ಚರಿಕೆ; ಹಲವು ರಾಜ್ಯಗಳಿಗೆ ಸೂಚನೆ ನೀಡಿದ ಹವಾಮಾನ ಇಲಾಖೆ
ಘಟನಾ ಸ್ಥಳಕ್ಕೆ ಸಿ.ಪಿ.ಐ ವೆಂಕಟೇಶ ಮೂರ್ನಾಳ, ಪಿ.ಎಸ್.ಐ ಭರಮಪ್ಪ ಬೆಳಗಲಿ ಭೇಟಿ ನೀಡಿ ವಾತಾವರಣವನ್ನು ತಿಳಿಗೊಳಿಸುವ ಪ್ರಯತ್ನ ಮಾಡಿದರು. ಈ ವೇಳೆ ಒಂದು ಹಂತದಲ್ಲಿ ಪೊಲೀಸರಿಗೂ ಹಾಗೂ ಸ್ಥಳೀಯ ಮಹಿಳೆಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು ಎಂದು ತಿಳಿದುಬಂದಿದೆ.