ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರವಿ ಬೆಳೆಗೆರೆ ಪತ್ರಿಕೆ ಲೋಕದ ಪಾತಕಿ: ಪ್ರತಾಪ್ ಸಿಂಹ ಆಕ್ರೋಶ

Pratap Simha: ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದ 'ಸಾಧನಾ ಸೌರಭ' ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಮತ್ತು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರಿಗೆ ಪ್ರತಿಷ್ಠಿತ 'ರಾಷ್ಟ್ರೀಯ ಸೌರಭ ಸಮ್ಮಾನ್' ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ʼಹಾಯ್ ಬೆಂಗಳೂರುʼ ಪತ್ರಿಕೆಯಲ್ಲಿ ರವಿ ಬೆಳೆಗೆರೆ ವ್ಯಕ್ತಿತ್ವವನ್ನು ತೀವ್ರವಾಗಿ ಟೀಕಿಸುತ್ತಿದ್ದರು. ರವಿ ಬೆಳೆಗೆರೆ ಪತ್ರಿಕಾ ಲೋಕದ ಒಬ್ಬ ಪಾತಕಿʼʼ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರವಿ ಬೆಳೆಗೆರೆ ಹೀಯಾಳಿಸಿಯೇ ಬರೆಯುತ್ತಿದ್ದರು: ಪ್ರತಾಪ್ ಸಿಂಹ

ಪ್ರತಾಪ್ ಸಿಂಹ (ಸಂಗ್ರಹ ಚಿತ್ರ) -

Profile
Pushpa Kumari Apr 26, 2026 10:05 PM

ಕುಮಟಾ, ಏ‌. 26: ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಸಾಧನಾ ಸೌರಭ ಕಾರ್ಯಕ್ರಮ ಆಯೋಜಿಸಿ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ (Vishweshwar Bhat) ಅವರಿಗೆ ರಾಷ್ಟ್ರೀಯ ಸೌರಭ ಸಮ್ಮಾನ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಮಾತನಾಡಿ ಹಿರಿಯ ಪತ್ರಕರ್ತ, ದಿ. ರವಿಬೆಳಗೆರೆ ಬಗ್ಗೆ ಆಕ್ರೋಶ ಹೊರ ಹಾಕಿದರು. ''ರವಿ ಬೆಳಗೆರೆ (Ravi Belegere) ಯಾವತ್ತು ಎಲ್ಲರನ್ನು ಹೀಯಾಳಿಸಿ ಪತ್ರಿಕೆಯಲ್ಲಿ ಬರೆಯುತ್ತಿದ್ದರು. ಅದರಲ್ಲೂ ಮಹಿಳೆಯರನ್ನು ಲೇಖನಗಳಲ್ಲಿ ಕೀಳಾಗಿ ಉಲ್ಲೇಖಿಸುತ್ತಿದ್ದರುʼʼ ಎಂದು ಹೇಳಿದರು.

ʼʼಹಾಯ್ ಬೆಂಗಳೂರುʼ ಪತ್ರಿಕೆಯಲ್ಲಿ ರವಿ ಬೆಳೆಗೆರೆ ವ್ಯಕ್ತಿತ್ವವನ್ನು ತೀವ್ರವಾಗಿ ಟೀಕಿಸುತ್ತಿದ್ದರು. ರವಿ ಬೆಳೆಗೆರೆ ಪತ್ರಿಕಾ ಲೋಕದ ಒಬ್ಬ ಪಾತಕಿʼʼ ಎಂದು ತೀವ್ರವಾಗಿ ಕಿಡಿಕಾರಿದರು.

ವಿಡಿಯೊ ನೋಡಿ:



ʼʼರವಿ ಬೆಳಗೆರೆ ʼಹಾಯ್ ಬೆಂಗಳೂರುʼ ಪತ್ರಿಕೆಯಲ್ಲಿವೈಯಕ್ತಿಕವಾಗಿ ಮಾನ ಹಾನಿ ಮಾಡಿ ಲೇಖನ ಬರೆಯುತ್ತಿದ್ದರು. ಅದರಲ್ಲೂ ಯಾವುದಾದರೂ ಒಬ್ಬ ಹೆಣ್ಣು ಮಗಳ ಬಗ್ಗೆ ಕೀಳಾಗಿ ಬೈದು ಪತ್ರಿಕೆ ಮಾರಾಟ ಮಾಡುತ್ತಿದ್ದರು‌. ಅವರ ಪತ್ರಿಕೆಯಲ್ಲಿ ಒಳ್ಳೆಯ ವಿಚಾರಗಳು ಇರಲೇ ಇಲ್ಲʼʼ ಎಂದು ವಿಷಾದ ವ್ಯಕ್ತಪಡಿಸಿದರು. ʼʼಮತಾಂತರದ ಕುರಿತು ನಡೆದ ಚರ್ಚೆಯ ವೇಳೆ, ಹಿರಿಯ ಸಾಹಿತಿ ಎಸ್. ಎಲ್. ಭೈರಪ್ಪ ಅವರ ಬಗ್ಗೆಯೂ ಅತೀ ಕೆಟ್ಟ ಶಬ್ದಗಳನ್ನು ಬಳಸಿ ಬರೆದಿದ್ದರು. ಎಡಪಂಥೀಯ ಅವರಿಗಿಂತಲೂ ಕೆಟ್ಟದಾಗಿ ಭೈರಪ್ಪ ಅವರನ್ನು ನಿಂದಿಸಿದ್ದು ಎಲ್ಲರಿಗೂ ಅಸಮಾಧಾನ ಉಂಟು ಮಾಡಿತ್ತುʼʼ ಎಂದರು.

ನಾನು ಚಾಮರಾಜ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ: ಪ್ರತಾಪ್ ಸಿಂಹ ಪ್ರಕಟ

ಅದೇ ರೀತಿ ಕಳೆದ ಚುನಾವಣೆಯಲ್ಲಿ ತಮಗೆ ಟಿಕೆಟ್ ತಪ್ಪಿದ ಬಗ್ಗೆಯೂ ಅವರು ಮಾತನಾಡಿದರು. ʼʼಬಿಜೆಪಿಯಿಂದ ಟಿಕೆಟ್ ಸಿಗದೇ ಇದ್ದಾಗ ಡಿ.ಕೆ. ಶಿವಕುಮಾರ್ ಕರೆ ಮಾಡಿ ಕಾಂಗ್ರೆಸ್‌ಗೆ ಸೇರುವಂತೆ ಕೇಳಿಕೊಂಡಿದ್ದರು. ಇದಕ್ಕೆ ಒಪ್ಪದೇ ತಿರಸ್ಕರಿಸಿದ್ದೇನೆ. 2028ರ ವಿಧಾನಸಭಾ ಚುನಾವಣೆಯಲ್ಲಿ ಎಲ್ಲರ ವಿಶ್ವಾಸದಂತೆ ವಿಧಾನಸೌಧ ಪ್ರವೇಶ ಮಾಡುತ್ತೇನೆʼʼ ಭರವಸೆ ನೀಡಿದರು. ತಾನು ಬಡತನದಿಂದ ಮೇಲೆ ಬಂದವನು. ಹೋಟೆಲ್‌ಗೆ ಹಾಲು ಹಾಕುತ್ತಿದ್ದ ಬಾಲಕನಾಗಿದ್ದ ತಾನು ಇಂದು ಬರಹಗಾರನಾಗಿ ಗುರುತಿಸಲು ವಿಶ್ವೇಶ್ವರ ಭಟ್ ಅವರ ಮಾರ್ಗದರ್ಶನವೇ ಕಾರಣ ಎಂದು ಕೃತಜ್ಞತೆ ಸಲ್ಲಿಸಿದರು.