AI lab: ಅತ್ಯಾಧುನಿಕ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಲ್ಯಾಬ್ ಸ್ಥಾಪನೆ, ನ.13 ರಂದು ಅಧಿಕೃತವಾಗಿ ಉದ್ಘಾಟನೆ
ಸರ್ಕಾರಿ ಎಂ.ಹೆಚ್.ಎಂ. ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ, ಸ್ಕೂಡ್‌ವೆಸ್ ಸಂಸ್ಥೆ ಶಿರಸಿ ಹಾಗೂ ಬೆಂಗಳೂರಿನ ಮೈಕ್ರೋಸಾಫ್ಟ್ ಎ.ಐ.ಎಲ್.ವಿ.ಆರ್ ಸಹಯೋಗದೊಂದಿಗೆ ಈ ಯೋಜನೆ ಯನ್ನು ರೂಪಿಸಲಾಗಿದೆ. ಈ ಲ್ಯಾಬ್ ಮುಖಾಂತರ ಎಂ.ಹೆಚ್.ಎಂ. ಕಾಲೇಜಿನ ವಿದ್ಯಾರ್ಥಿಗಳು ಮಾತ್ರವಲ್ಲದೆ ಸುತ್ತಮುತ್ತಲಿನ ಫೀಡಿಂಗ್ ಶಾಲೆಗಳ ವಿದ್ಯಾರ್ಥಿಗಳಿಗೂ ಎ.ಐ. ತಂತ್ರಜ್ಞಾನದ ಮೂಲಭೂತ ಪರಿಕಲ್ಪನೆಗಳು, ಪ್ರಾಯೋಗಿಕ ಜ್ಞಾನ ಮತ್ತು ಹೊಸ ತಾಂತ್ರಿಕ ಕೌಶಲ್ಯಗಳ ಪರಿಚಯ ಸಿಗಲಿದೆ.
-
ಶಿರಸಿ: ಹಳ್ಳಿ ಹಳ್ಳಿಯಾಗಿಯೇ ಇದ್ದು, ವಿದ್ಯಾರ್ಥಿಗಳಿಗೆ ಉತ್ತಮ ತಂತ್ರಜ್ಞಾನದ ಮಾಹಿತಿ, ಕಲಿಕೆ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಶಿರಸಿ ತಾಲೂಕಿನ ಕೋಳಗಿಬೀಸ್ ಸರ್ಕಾರಿ ಎಂ.ಹೆಚ್.ಎಂ. ಪದವಿಪೂರ್ವ ಕಾಲೇಜಿನಲ್ಲಿ ಅತ್ಯಾಧುನಿಕ ಆರ್ಟಿಫಿಶಿ ಯಲ್ ಇಂಟೆಲಿಜೆನ್ಸ್ (ಎ.ಐ.) ಲ್ಯಾಬ್ ಸ್ಥಾಪಿಸಲಾಗಿದ್ದು, ನ.13 ರಂದು ಅಧಿಕೃತವಾಗಿ ಉದ್ಘಾಟನೆ ಗೊಳ್ಳಲಿದೆ ಎಂದು ಶಾಲಾ ಅಭಿವೃದ್ಧಿ ಸಮಿತಿಯ ವೆಂಕಟೇಶ್ ಹೆಗಡೆ ಹೊಸಬಾಳೆ ಹೇಳಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಕೃತಕ ಬುದ್ಧಿಮತ್ತೆ(Artificial Intelligence) ಹಾಗೂ ಕಂಪ್ಯೂಟರ್ ಕೌಶಲ್ಯ(Computer Skill)ಗಳನ್ನು ಬೆಳೆಸುವ ಉದ್ದೇಶದಿಂದ ಈ ಹೊಸ ಹೆಜ್ಜೆಯನ್ನು ಇಡಲಾಗಿದೆ.
ಇದನ್ನೂ ಓದಿ: ಭಾರತೀಯ ಕಾಲೇಜುಗಳಲ್ಲಿ ಉಚಿತ AI ಪ್ರಮಾಣೀಕರಣಗಳನ್ನು ನೀಡಲು AI CERTs® ‘ಮಿಷನ್ AI-ಸಕ್ಷಮ್’ ಎಂಬ ಉಪಕ್ರಮ ಪ್ರಾರಂಭ
ಸರ್ಕಾರಿ ಎಂ.ಹೆಚ್.ಎಂ. ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ, ಸ್ಕೂಡ್‌ವೆಸ್ ಸಂಸ್ಥೆ ಶಿರಸಿ ಹಾಗೂ ಬೆಂಗಳೂರಿನ ಮೈಕ್ರೋಸಾಫ್ಟ್ ಎ.ಐ.ಎಲ್.ವಿ.ಆರ್ ಸಹಯೋಗದೊಂದಿಗೆ ಈ ಯೋಜನೆ ಯನ್ನು ರೂಪಿಸಲಾಗಿದೆ. ಈ ಲ್ಯಾಬ್ ಮುಖಾಂತರ ಎಂ.ಹೆಚ್.ಎಂ. ಕಾಲೇಜಿನ ವಿದ್ಯಾರ್ಥಿಗಳು ಮಾತ್ರವಲ್ಲದೆ ಸುತ್ತಮುತ್ತಲಿನ ಫೀಡಿಂಗ್ ಶಾಲೆಗಳ ವಿದ್ಯಾರ್ಥಿಗಳಿಗೂ ಎ.ಐ. ತಂತ್ರಜ್ಞಾನದ ಮೂಲಭೂತ ಪರಿಕಲ್ಪನೆಗಳು, ಪ್ರಾಯೋಗಿಕ ಜ್ಞಾನ ಮತ್ತು ಹೊಸ ತಾಂತ್ರಿಕ ಕೌಶಲ್ಯಗಳ ಪರಿಚಯ ಸಿಗಲಿದೆ.
ಇಂದಿನ ತಂತ್ರಜ್ಞಾನ ಯುಗದಲ್ಲಿ ಎ.ಐ. ಪ್ರಮುಖ ಪಾತ್ರ ವಹಿಸುತ್ತಿದ್ದು, ಈ ಉದ್ಯಮ ಆಧಾರಿತ ಕಲಿಕೆಯು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ತಾಂತ್ರಿಕ ಜ್ಞಾನ ಹಾಗೂ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಗ್ರಾಮೀಣ ಭಾಗದಲ್ಲಿ ಡಿಜಿಟಲ್ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಗೆ ಅವಕಾಶ ಕಲ್ಪಿಸುತ್ತಿರುವ ಈ ಪ್ರಯತ್ನವು ಅತ್ಯಂತ ಮಹತ್ವದ ಮೈಲು ಗಲ್ಲಾಗಿದೆ ಎಂದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ತಂತ್ರಜ್ಞಾನದ ಕೊರತೆ ಇದ್ದು ಅದನ್ನು ನೀಡುವ ಉದ್ದೇಶದಿಂದ ನಾವು ಸಹ ಕೈ ಜೋಡಿಸಿದ್ದೇವೆ 25 ಲಕ್ಷಕ್ಕು ಹೆಚ್ಚು ವೆಚ್ಚ ಇದಕ್ಕೆ ತಗುಲಲಿದ್ದು ಮೈಕ್ರೊಸೋಪ್ಟ್ ಮೂಲಕವೇ ಕಲಿಕೆ ಆಗಲಿದೆ ಎಂದು ಸ್ಕೊಡ ವೆಸ್ ಸಂಸ್ಥೆಯ ಡಾ. ವೆಂಕಟೇಶ ನಾಯ್ಕ ಹೇಳಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ನಾಗಪತಿ ಹೆಗಡೆ, ನರಸಿಂಹ ಹೆಗಡೆ ಹೆಬ್ಬಲಸು, ವಿನಯ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.