ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2027: ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಇಯಾನ್‌ ಮಾರ್ಗನ್‌ ಮುಂದಿನ ಹೆಡ್‌ ಕೋಚ್‌? ಆರ್‌ ಅಶ್ವಿನ್‌ ಭವಿಷ್ಯ!

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಮುಂದಿನ ಹೆಡ್‌ ಕೋಚ್‌ ಆಗಿ ಇಂಗ್ಲೆಂಡ್‌ ಮಾಜಿ ನಾಯಕ ಇಯಾನ್‌ ಮಾರ್ಗನ್‌ ನೇಮಕವಾಗುವ ಸಾಧ್ಯತೆ ಇದೆ ಎಂದು ಸ್ಪಿನ್‌ ದಿಗ್ಗಜ ರವಿಚಂದ್ರನ್‌ ಅಶ್ವಿನ್‌ ಭವಿಷ್ಯ ನುಡಿದಿದ್ದಾರೆ. 2026ರ ಐಪಿಎಲ್‌ ಟೂರ್ನಿ ಮುಗಿದ ಬಳಿಕ ಸ್ಟೀಫನ್‌ ಫ್ಲೆಮಿಂಗ್‌ ಸಿಎಸ್‌ಕೆ ತಂಡದ ಕೋಚ್‌ ಹುದ್ದೆಯನ್ನು ತೊರೆದಿದ್ದರು.

ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಇಯಾನ್‌ ಮಾರ್ಗನ್‌ ಮುಂದಿನ ಹೆಡ್‌ ಕೋಚ್‌?

ಸಿಎಸ್‌ಕೆಗೆ ಇಯಾನ್‌ ಮಾರ್ಗನ್‌ ಹೆಡ್‌ ಕೋಚ್‌ ಆಗಬೇಕೆಂದ ಅಶ್ವಿನ್‌. -

Profile
Ramesh Kote Aug 12, 2026 11:05 PM

ನವದೆಹಲಿ: ಸ್ಟೀಫನ್‌ ಫ್ಲೆಮಿಂಗ್‌ ಅವರು ಹೆಡ್‌ ಕೋಚ್‌ ಹುದ್ದೆಯನ್ನು ತೊರೆದ ಬಳಿಕ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ತಂಡಕ್ಕೆ ಮುಂದಿನ ಮುಖ್ಯ ತರಬೇತುದಾರ ಯಾರಾಗುತ್ತಾರೆಂಬುದು ಎಲ್ಲರಿಗೂ ತೀವ್ರ ಕುತೂಹಲವನ್ನು ಮೂಡಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಪಿನ್‌ ದಿಗ್ಗಜ ರವಿಚಂದ್ರನ್‌ ಅಶ್ವಿನ್‌ (R Ashwin) ಅವರು, ಇಂಗ್ಲೆಂಡ್‌ ಮಾಜಿ ನಾಯಕ ಇಯಾನ್‌ ಮಾರ್ಗನ್‌ಗೆ (Eoin Morgan) ಸಿಎಸ್‌ಕೆ ತಂಡದಲ್ಲಿ ಪ್ರಮುಖ ಹುದ್ದೆಯನ್ನು ನೀಡಬಹುದು ಎಂದು ಭವಿಷ್ಯ ನುಡಿದಿದ್ದಾರೆ.

ತಮ್ಮ ಯಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿರುವ ವಿಡಿಯೊದಲ್ಲಿ ಮಾತನಾಡಿದ ಆರ್‌ ಅಶ್ವಿನ್‌, "ನನಗೆ ಬಲವಾದ ಊಹೆ ಇದೆ. ಮೂಲಗಳ ಪ್ರಕಾರ ಚೆನೈ ಸೂಪರ್‌ ಕಿಂಗ್ಸ್‌ ತಂಡದ ಹೆಡ್‌ ಕೋಚ್‌ ಹುದ್ದೆಗೆ ಇಯಾನ್‌ ಮಾರ್ಗನ್‌ ಅವರ ಹೆಸರು ಬಲವಾಗಿ ಕೇಳಿಬರುತ್ತಿದೆ. ಮುಂದಿನ ವಾರ ಈ ನಿರ್ಧಾರ ಹೊರಬೀಳಬಹುದು," ಎಂದು ಭವಿಷ್ಯ ನುಡಿದಿದ್ದಾರೆ.

ಸ್ಟೀಫನ್‌ ಫ್ಲೆಮಿಂಗ್‌ ಅವರು 19 ವರ್ಷಗಳ ಕಾಲ ಸಿಎಸ್‌ಕೆ ತಂಡದಲ್ಲಿ ಹೆಡ್‌ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಸಿಎಸ್‌ಕೆ ಐದು ಬಾರಿ ಚಾಂಪಿಯನ್‌ ಆಗಿದೆ. ಐಪಿಎಲ್‌ ಇತಿಹಾಸದಲ್ಲಿಯೇ ಅತ್ಯಂತ ಯಶಸ್ವಿ ತಂಡವಾಗಿ ಚೆನ್ನೈ ಇತಿಹಾಸವನ್ನು ಬರೆದಿದೆ. ಇಂಥಾ ತಂಡ ಮುಂದಿನ ಹೆಡ್‌ ಕೋಚ್‌ ಆಗಿ ಯಾರನ್ನು ನೇಮಿಸ ಬಹುದೆಂದು ಅಭಿಮಾನಿಗಳಿಗೆ ತೀವ್ರ ಕುತೂಹಲವನ್ನು ಮೂಡಿಸಿದೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತ ತಂಡದ ಇತ್ತೀಚಿನ ವೈಫಲ್ಯಕ್ಕೆ ಕಾರಣ ತಿಳಿಸಿದ ಕಪಿಲ್‌ ದೇವ್‌!

ಸ್ಟೀಫನ್ ಫ್ಲೆಮಿಂಗ್ ಅವರ ಸ್ಥಾನವನ್ನು ತುಂಬುವುದು ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ ಸುಲಭದ ಕೆಲಸವಾಗುವುದಿಲ್ಲ. ಆದರೆ ಇಂಗ್ಲೆಂಡ್ ಮಾಜಿ ನಾಯಕ ಇಯಾನ್ ಮಾರ್ಗನ್ ಈ ಹುದ್ದೆಗೆ ಆಸಕ್ತಿದಾಯಕ ಆಯ್ಕೆಯಾಗಬಹುದು. ಮಾರ್ಗನ್ ಇದುವರೆಗೂ ಅಂತಾರಾಷ್ಟ್ರೀಯ ಮಟ್ಟದಲ್ಲಾಗಲಿ ಅಥವಾ ಫ್ರಾಂಚೈಸಿ ಕ್ರಿಕೆಟ್‌ನಲ್ಲಾಗಲಿ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿಲ್ಲ. 2023ರಲ್ಲಿ ವೃತ್ತಿಪರ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಅವರು ಮುಖ್ಯವಾಗಿ ಕಾಮೆಂಟರಿ ಮತ್ತು ಕ್ರಿಕೆಟ್ ವಿಶ್ಲೇಷಕರಾಗಿ ತೊಡಗಿಸಿಕೊಂಡಿದ್ದಾರೆ.

ಆದರೆ ಯಶಸ್ವಿ ವೈಟ್-ಬಾಲ್ ತಂಡವನ್ನು ಹೇಗೆ ಕಟ್ಟಬೇಕು ಎಂಬುದರ ಬಗ್ಗೆ ಮಾರ್ಗನ್‌ಗೆ ಉತ್ತಮ ಅನುಭವವಿದೆ. ಇಂಗ್ಲೆಂಡ್ ತಂಡದ ನಾಯಕನಾಗಿದ್ದಾಗ ಅವರು ತಂಡದ ಆಟದ ವಿಧಾನದಲ್ಲಿ ಮಹತ್ವದ ಬದಲಾವಣೆ ತಂದಿದ್ದರು. ಅವರ ನಾಯಕತ್ವದಲ್ಲೇ ಇಂಗ್ಲೆಂಡ್ 2019ರಲ್ಲಿ ತನ್ನ ಮೊದಲ ಏಕದಿನ ವಿಶ್ವಕಪ್ ಪ್ರಶಸ್ತಿ ಗೆದ್ದುಕೊಂಡಿತ್ತು. ಮಾರ್ಗನ್ ನಾಯಕತ್ವದಲ್ಲಿ ಇಂಗ್ಲೆಂಡ್ ಆಕ್ರಮಣಕಾರಿ ಶೈಲಿಯ ಕ್ರಿಕೆಟ್ ಆಡುತ್ತಿತ್ತು. ತಮ್ಮ ಆಟಗಾರರ ಸಾಮರ್ಥ್ಯದ ಮೇಲೆ ಅಪಾರ ವಿಶ್ವಾಸವಿಟ್ಟಿದ್ದ ಮಾರ್ಗನ್, ಅವರಿಗೆ ಸ್ವಾತಂತ್ರ್ಯ ನೀಡಿ ತಂಡವನ್ನು ಮುನ್ನಡೆಸಿದ್ದರು.

ICC Test Rankings: ಎರಡು ವರ್ಷಗಳ ಬಳಿಕ ಟಾಪ್‌ 10ರ ಒಳಗೆ ಪ್ರವೇಶಿಸಿದ ಬಾಬರ್‌ ಆಝಮ್‌!

ಎಂಎಸ್‌ ಧೋನಿಯೇ ಸೂಕ್ತ ಆಯ್ಕೆ ಎಂದ ಅಶ್ವಿನ್

ಸ್ಟೀಫನ್ ಫ್ಲೆಮಿಂಗ್ ಅವರ ಸ್ಥಾನವನ್ನು ತುಂಬುವ ಜವಾಬ್ದಾರಿ ಅಂತಿಮವಾಗಿ ಎಂಎಸ್ ಧೋನಿ ಅವರ ಕೈಗೆ ಹೋಗಬಹುದು ಎಂದು ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ. “ವೈಯಕ್ತಿಕವಾಗಿ ನೋಡಿದರೆ, ಈ ಜವಾಬ್ದಾರಿ ಎಂಎಸ್ ಧೋನಿ ಅವರಿಗೆ ಹೋಗುತ್ತದೆ ಮತ್ತು ಇತರರು ಅವರೊಂದಿಗೆ ಸೇರಿ ತಂಡವನ್ನು ನಡೆಸುತ್ತಾರೆ ಎಂದು ನಾನು ಭಾವಿಸುತ್ತೇನೆ. ನನ್ನ ಅನಿಸಿಕೆಯಲ್ಲಿ ಅದೇ ಸರಿಯಾದ ನಿರ್ಧಾರವಾಗುತ್ತದೆ. ಏಕೆಂದರೆ, ಮೆಗಾ ಹರಾಜು ಇನ್ನೂ ಕೇವಲ ಒಂದು ವರ್ಷ ದೂರದಲ್ಲಿರುವ ಸಂದರ್ಭದಲ್ಲಿ ಫ್ಲೆಮಿಂಗ್‌ಗೆ ಬದಲಿ ಆಯ್ಕೆ ಮಾಡುವುದಕ್ಕೆ ಇದು ಸ್ವಲ್ಪ ತಡವಾಗಿದೆ," ಎಂದರು.