Haliyal News: ಆರ್ ಸಿಟಿ ಸಾಧನೆ ಅನಾವರಣ
ಸುಸ್ಥಿರ ಅಭಿವೃದ್ಧಿ ಕಾರ್ಯಕರ್ತ ಡಾ.ಪ್ರಕಾಶ ಭಟ್ ಮಾತನಾಡಿ, ಹಳ್ಳಿಗಳು ಅಭಿವೃದ್ಧಿಯಾಗ ಬೇಕಾದರೆ ಅಲ್ಲಿಯ ಜನರ ಸಹಭಾಗಿತ್ವ, ಸಂಘಟನೆಗಳು ಮುಖ್ಯ. ಸಂಘಟನೆಗಳ ಉಪಸ್ಥಿತಿಯಿದ್ದಾಗ ಮಾತ್ರ ಸಾಮಾಜಿಕ ಅಭಿವೃದ್ಧಿ ಸಾಧ್ಯ. ಧಾರವಾಡ ಜಿಲ್ಲೆಯಲ್ಲಿ ಸರ್ವೋದಯ ಮಹಾ ಸಂಘದಿಂದ ಇತಿಹಾಸ ಸೃಷ್ಟಿಯಾಗಿದೆ. ಎಲ್ಲರ ಯಶೋಗಾಥೆಗಳು ಇನ್ನೊಬ್ಬರಿಗೆ ಪ್ರೇರಣೆಯಾಗ ಬೇಕಿದೆ ಎಂದರು.
-
ಹಳಿಯಾಳ: ಕೆನರಾ ಬ್ಯಾಂಕ್ ಆರ್ ಸಿಟಿ ಯ ಪ್ರಸಕ್ತ ಸಾಲಿನ ವರದಿ ಬಿಡುಗಡೆ ಕಾರ್ಯಕ್ರಮ ಭಾನುವಾರ ನಗರದ ಆರ್ ಸಿಟಿ ಆವರಣದಲ್ಲಿ ನಡೆಯಿತು.
ಸುಸ್ಥಿರ ಅಭಿವೃದ್ಧಿ ಕಾರ್ಯಕರ್ತ ಡಾ.ಪ್ರಕಾಶ ಭಟ್ ಮಾತನಾಡಿ, ಹಳ್ಳಿಗಳು ಅಭಿವೃದ್ಧಿಯಾಗ ಬೇಕಾದರೆ ಅಲ್ಲಿಯ ಜನರ ಸಹಭಾಗಿತ್ವ, ಸಂಘಟನೆಗಳು ಮುಖ್ಯ. ಸಂಘಟನೆಗಳ ಉಪಸ್ಥಿತಿಯಿದ್ದಾಗ ಮಾತ್ರ ಸಾಮಾಜಿಕ ಅಭಿವೃದ್ಧಿ ಸಾಧ್ಯ. ಧಾರವಾಡ ಜಿಲ್ಲೆಯಲ್ಲಿ ಸರ್ವೋದಯ ಮಹಾ ಸಂಘದಿಂದ ಇತಿಹಾಸ ಸೃಷ್ಟಿಯಾಗಿದೆ. ಎಲ್ಲರ ಯಶೋಗಾಥೆಗಳು ಇನ್ನೊಬ್ಬರಿಗೆ ಪ್ರೇರಣೆಯಾಗ ಬೇಕಿದೆ ಎಂದರು.
ಶಾಸಕ ಆರ್ ವಿ ದೇಶಪಾಂಡೆ(MLA R V Deshpande) ಮಾತನಾಡಿ, ಎಲ್ಲರ ಸಹಕಾರದಿಂದ ನಮ್ಮ ಸಂಸ್ಥೆ ನಡೆಯುತ್ತಿದೆ. ಬಡವರ ಬಗ್ಗೆ ಮಾತನಾಡದೆ ಅವರ ಅಬಿವೃದ್ಧಿಗೆ ನಿಲ್ಲಬೇಕೆಂದು ಉಚಿತ ಶಿಕ್ಷಣ, ವಸತಿ, ಊಟ ಕಲ್ಪಿಸಲಾಗಿದೆ. ಸಿ ಎಸ್ ಆರ್ ಫಂಡ್ ಸಹಕಾರ ನೀಡಿದೆ. ಇಂದಿನ ಯಾಂತ್ರಿಕ, ತಾಂತ್ರಿಕ ಯುಗದಲ್ಲಿ ವೃತ್ತಿಪರ ಶಿಕ್ಷಣ ಅಗತ್ಯ ತಂದೆ ಹೆಸರಲ್ಲಿ ಟ್ರಸ್ಟ್ ತಾಯಿ ಹೆಸರಲ್ಲಿ ಶಾಲೆ ಆರಂಭವಾಯಿತು ಎಂದ ಅವರು ರಾಮಕೃಷ್ಣ ಹೆಗಡೆಯವರು ಶಿಕ್ಷಣ ಮಂತ್ರಿ ಇದ್ದಾಗ ಅವರ ಜತೆಗೆ ಹೋದೆ 83 ರಲ್ಲಿ ಶಾಸಕರಾಗುವ ಅವಕಾಶ ಸಿಕ್ಕಿತು. ನಿಷ್ಠೆ ಪ್ರಾಮಾಣಿಕತೆ ಸಹಾಯ ಮಾಡುವ ಮನಸ್ಸಿದ್ದರೆ ಎಲ್ಲರ ಸಹಕಾರದಿಂದ ಗೆಲುವು ಕಷ್ಟವಲ್ಲ ಎಂದರು.
ಸಿಬಿಎಸ್ಇ ಶಾಲೆ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪ್ರಸ್ತಾವಿಕವಾಗಿ ಸಿಬಿಡಿ ಆರ್ಎಸ್ಇಟಿ ಆಡಳಿತ ಮಂಡಳಿ ಅಧ್ಯಕ್ಷ ಪ್ರಸಾದ್ ಆರ್. ದೇಶಪಾಂಡೆ ಮಾತನಾಡಿದರು.
ಡೈರೆಕ್ಟರ್ ಕಿರಣ ಕುಮಾರ ಬಾಗಡೆ ವಾರ್ಷಕ ವರದಿ ಓದಿ, ಕೆನರಾ ಬ್ಯಾಂಕ್ ದೇಶಪಾಂಡೆ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ಹಳಿಯಾಳದ 2025-26ನೇ ಸಾಲಿನ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಲಾಯಿರು.
ಕೆನರಾ ಬ್ಯಾಂಕ್ ಮತ್ತು ಶ್ರೀ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ನಿಂದ 2004ರಲ್ಲಿ ಜಂಟಿಯಾಗಿ ಪ್ರಾಯೋಜಿಸಲ್ಪಟ್ಟ ಈ ಸಂಸ್ಥೆಯು ಉದ್ಯಮಶೀಲತೆ, ಕೌಶಲ್ಯ ಮತ್ತು ಗ್ರಾಮೀಣ ಅಭಿವೃದ್ಧಿಯಲ್ಲಿ 22 ಯಶಸ್ವಿ ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದೆ. ಈ ಸಂಸ್ಥೆಯು ಕೌಶಲ್ಯ ಆಧಾರಿತ ತರಬೇತಿಗಳ ಮೂಲಕ ಒಟ್ಟು 28000ಕ್ಕೂ ಹೆಚ್ಚು ಗ್ರಾಮೀಣ ಯುವಕರಿಗೆ ತರಬೇತಿ ನೀಡಿದ್ದು, 77% ನೆಲೆಗೊಳ್ಳುವಿಕೆ ದರ ಮತ್ತು 57% ಸಾಲ ಸಂಪರ್ಕ ಅನುಪಾತವನ್ನು ಹೊಂದಿದೆ.
ಮುಂಡಗೋಡು, ಜೋಯಿಡಾ, ದಾಂಡೇಲಿ ಮತ್ತು ಹಳಿಯಾಳದ ಉಪ ಕೇಂದ್ರಗಳ ಮೂಲಕ ಕಾರ್ಯಾಚರಣೆ ನಡೆಸುವ ಈ ಸಂಸ್ಥೆಗೆ 2017-18ರಲ್ಲಿ ಭಾರತ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಸಚಿವಾಲಯದಿಂದ ದೇಶದಲ್ಲೇ ಎರಡನೇ ಅತ್ಯುತ್ತಮ ಆರ್ಸೆಟಿ ಪ್ರಶಸ್ತಿ ಲಭಿಸಿದೆ. ಅಲ್ಲದೆ, ನಾಲ್ಕು ತಾಲೂಕುಗಳಲ್ಲಿ 19367 ಸದಸ್ಯರನ್ನೊಳಗೊಂಡ 1665ಸ್ವಸಹಾಯ ಸಂಘಗಳನ್ನು ಪ್ರೋತ್ಸಾ ಹಿಸಿದ್ದು, ಒಟ್ಟು ರೂ. 26.96 ಕೋಟಿ ಉಳಿತಾಯ ಹಾಗೂ ರೂ. 99.08 ಕೋಟಿ ಸಾಲ ಒದಗಿಸ ಲಾಗಿದೆ.
2025-26ನೇ ಸಾಲಿನಲ್ಲಿ ಸಂಸ್ಥೆಯು 56 ವಿವಿಧ ತರಬೇತಿ ಕಾರ್ಯಕ್ರಮಗಳ ಮೂಲಕ ದಾಖಲೆಯ 1602 ಗ್ರಾಮೀಣ ಯುವಕರಿಗೆ ತರಬೇತಿ ನೀಡಿದ್ದು, ತರಬೇತಿ ಪಡೆದವರಲ್ಲಿ 84% ನೆಲೆಗೊಳ್ಳುವಿಕೆ ದರ ದಾಖಲಾಗಿದೆ. ಇವರಲ್ಲಿ 72% ರಷ್ಟು ಮಂದಿ ಬ್ಯಾಂಕ್ಗಳಿಂದ ಸಾಲ ಪಡೆದು ಜೀವಾನೋ ಪಾಯ ಚಟುವಟಿಕೆಗಳನ್ನು ಆರಂಭಿಸಿದ್ದಾರೆ.
ಈ ಅವಧಿಯಲ್ಲಿ 1305 ಮಹಿಳೆಯರನ್ನು ಒಳಗೊಂಡ 104 ಹೊಸ ಸ್ವಸಹಾಯ ಸಂಘಗಳನ್ನು ರಚಿಸಲಾಗಿದೆ. ಜೊತೆಗೆ 77 ಜೀವಾನೋಪಾಯ ಕಾರ್ಯಕ್ರಮಗಳು, 45 ಕೃಷಿ ಕಾರ್ಯಕ್ರಮಗಳು, 28 ತೋಟಗಾರಿಕೆ ಕಾರ್ಯಕ್ರಮಗಳು, 93 ಗ್ರಾಮೀಣ ಅಭಿವೃದ್ಧಿ ಚಟುವಟಿಕೆಗಳು, 41 ಉಚಿತ ಆರೋಗ್ಯ ತಪಾಸಣೆ ಶಿಬಿರಗಳು (5511 ಫಲಾನುಭವಿಗಳು), 32 ಆರ್ಸೆಟಿ ಬಜಾರ್ಗಳು ಹಾಗೂ ಜೆಎಸ್ಡಬ್ಲ್ಯೂ ಫೌಂಡೇಶನ್ ಮತ್ತು ಟಾಟಾ ಹಿಟಾಚಿ ಸಹಯೋಗದೊಂದಿಗೆ 40 ಕೃಷಿ ಹೊಂಡಗಳನ್ನು ನಿರ್ಮಿಸ ಲಾಗಿದೆ ಎಂದರು.
ಈ ಸಂದರ್ಭದಲ್ಲಿ ಯಶಸ್ವಿ ಸಾಧಕರನ್ನು ಗಣ್ಯರು ಸನ್ಮಾನಿಸಿದರು. ಸಿ ಎಸ್ ಆರ್ ಸಂಸ್ಥೆಗೆ ಸಹಕರಿಸಿದ ಸಂಸ್ಥೆಯ ಪ್ರತಿನಿಧಿಗಳನ್ನು, ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸ ಲಾಯಿತು.
ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ವೃತ್ತ ಕಚೇರಿಯ ಮಹಾಪ್ರಬಂಧಕ ಎಚ್. ಕೆ. ಗಂಗಾಧರ್, ವೆಸ್ಟ್ ಕೋಸ್ಟ್ ಮಿಲ್ ನ ರಾಜೇಂದ್ರ , ಶಿರಸಿ ಕೆನರಾ ಬ್ಯಾಂಕಿನ ಆರ್ ಲೋಕೇಶ, ಇನ್ವೆಂಡಿಸ್ ಟೆಕ್ನಾಲಜೀಸ್ ಸಿಇಒ ಸತೀಶ್ ಕುಲಕರ್ಣಿ ಮತ್ತು ಪ್ರಾದೇಶಿಕ ಕಚೇರಿಯ ಎಜಿಎಂ ಆರ್. ಲೋಕೇಶ್ ಉಪಸ್ಥಿತರಿದ್ದರು.
![]()
ವಿದ್ಯಾಭ್ಯಾಸ ಎಷ್ಟೇ ಮಾಡಿದರೂ ಜೀವನ ಕೌಶಲ್ಯ ಇಲ್ಲ ದಿದ್ದರೆ ಏನೂ ಪ್ರಯೋಜನವಿಲ್ಲ. ಕೇವಲ ಸರಕಾರಿ ಉದ್ಯೋಗದತ್ತ ಮಾತ್ರ ಸಾಗದೆ ಸ್ವ ಉದ್ಯೋಗದತ್ತ ಸಾಗಿ ಸಾಧಿಸಬೇಕು. ಯುವ ಕರ್ನಾಟಕ ನವ ಭಾರತವಾಗಬೇಕು. ಸರಕಾರೇತರ ಸಂಸ್ಥೆಗಳು ಇಂದಿನ ಯುವ ಪೀಳಿಗೆಗೆ ಸಾಕಷ್ಟು ಸಹಕಾರ ನೀಟುತ್ತಿದೆ. ಅದರ ಪ್ರಯೋಜನ ಪಡೆಯಬೇಕು.
-ಎಚ್ ಕೆ ಗಂಗಾಧರ, ಕೆನರಾ ಬ್ಯಾಂಕ್ ಜಿ.ಎಂ ಮಣಿಪಾಲ.
![]()
ಈ ಸಂಸ್ಥೆಯಲ್ಲಿ ಕಲಿತು ಈಗ ಸ್ವ ಉದ್ಯೋಗದಿಂದ ಜೀವನ ಸಾಗಿಸುತ್ತಿದ್ದು, ಟೂರ್& ಟ್ರಾವೆಲ್ಸ್ ನಲ್ಲಿ ಇದೀಗ ಉತ್ತಮ ಆದಾಯ ಗಳಿಸುತ್ತಿದ್ದು, ಈ ಸಂಸ್ಥೆಗೆ ನಾನು ಋಣಿಯಾಗಿದ್ದೇನೆ. ಇಲ್ಲಿ ಕಲಿತ ಕಲಿಕೆಯೇ ನನ್ನ ಜೀವನವನ್ನು ಉತ್ತಮವಾಗಿ ರೂಪಿಸಿದ್ದು, ಗೌರವ ಡಾಕ್ಟರೇಟ್ ಕೂಡಾ ಲಭ್ಯ ವಾಗಿದೆ.
--ಚನ್ನ ಬಸಪ್ಪ ಕೊಟಗಿ, ಗಂಗಾವತಿ ಸನ್ಮಾನಿತರು