Sirsi News: ಉತ್ತರ ಕನ್ನಡ ಜಿಲ್ಲೆಯ ಪತ್ರಕರ್ತರು ಉತ್ತಮವಾಗಿ ನಿಷ್ಢೆಯಿಂದ ಕಾರ್ಯ ಮಾಡುವಂಥವರು
ಸಮಾಜದ ಸುಧಾರಕ ರಾಗಿ ಪತ್ರಕರ್ತರು ಕಾರ್ಯ ನಿರ್ವಹಿಸಬೇಕು. ಮಾಧ್ಯಮದ ಮೂಲಕ ಸಂದೇಶ ಜನರಿಗೆ ತಲುಪಿಸುವ ಕಾರ್ಯ ಮಾಡಿದೆ. ಅಂದಿನಿಂದ ಇಂದಿನವರೆಗೂ ಉತ್ತಮ ಕಾರ್ಯ ಮಾಡಿ ದವರಿಗೆ ಗೌರವ ಎಂದಿಗೂ ಇದೆ. ಉತ್ತರ ಕನ್ನಡ ಜಿಲ್ಲೆಯ ಪತ್ರಕರ್ತರು ಉತ್ತಮವಾಗಿ ನಿಷ್ಢೆಯಿಂದ ಕಾರ್ಯ ಮಾಡುವಂಥವರು. ಅವರ ಮೂಲಕ ಇನ್ನೂ ಹೆಚ್ಚಿನ ಉತ್ತಮ ಕಾರ್ಯವಾಗಲಿ ಎಂದರು


ಶಿರಸಿ: ಉತ್ತರ ಕನ್ನಡ ಜಿಲ್ಲಾಪತ್ರಕರ್ತರ ಸಂಘದ ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭ ಕಾರ್ಯಕ್ರಮವು ಹೊನ್ನಾವರದ ಮಹಾಗಣಪತಿ ಸಭಾಭವನದ ವೆಂಕಟರಮಣ ಶಾಸ್ತ್ರಿ ಸೂರಿ ಸಭಾಭವನದಲ್ಲಿ ಶನಿವಾರ ನಡೆಯಿತು.
ವಿಪ ಸದಸ್ಯ ಬಸವರಾಜ ಹೊರಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದ ಸುಧಾರಕ ರಾಗಿ ಪತ್ರಕರ್ತರು ಕಾರ್ಯ ನಿರ್ವಹಿಸಬೇಕು. ಮಾಧ್ಯಮದ ಮೂಲಕ ಸಂದೇಶವನ್ನು ಜನರಿಗೆ ತಲುಪಿಸುವ ಕಾರ್ಯ ಮಾಡಿದೆ. ಅಂದಿನಿಂದ ಇಂದಿನವರೆಗೂ ಉತ್ತಮ ಕಾರ್ಯ ಮಾಡಿದವರಿಗೆ ಗೌರವ ಎಂದಿಗೂ ಇದೆ. ಉತ್ತರ ಕನ್ನಡ ಜಿಲ್ಲೆಯ ಪತ್ರಕರ್ತರು ಉತ್ತಮವಾಗಿ ನಿಷ್ಢೆಯಿಂದ ಕಾರ್ಯ ಮಾಡುವಂಥವರು. ಅವರ ಮೂಲಕ ಇನ್ನೂ ಹೆಚ್ಚಿನ ಉತ್ತಮ ಕಾರ್ಯವಾಗಲಿ ಎಂದರು.
ಇದನ್ನೂ ಓದಿ: Sirsi Breaking: ಕಾಂಗ್ರೆಸ್ ಕಾನೂನು ಕೈಗೆತ್ತಿಕೊಂಡಿದೆ
ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ, ಪತ್ರಕರ್ತರು ನಾವು ಹೇಳುವುದಕ್ಕಿಂತ ಮುಂಚೆ ಹೇಳಿರುತ್ತೀರಿ. ಅಷ್ಟು ಮುಂದುವರಿದಿದ್ದೀರಿ. ನಮ್ಮ ಜಿಲ್ಲೆಯ ಪತ್ರಕರ್ತ ರು ಸ್ವಾರ್ಥ ಇಲ್ಲದೇ ಕಾರ್ಯ ನಿರ್ವಹಿಸುತ್ತಿದ್ದಾರೆ. ನೀವು ನಮ್ಮ ಕಾರ್ಯದಲ್ಲಿ ವ್ಯತ್ಯಾಸ ಆದರೂ ಬರೆಯುತ್ತೀರಿ ವ್ಯತ್ಯಾಸ ಆಗದಿದ್ದರೆ ಬೈಯುತ್ತೀರಿ, ಬರೆಯುತ್ತೀರಿ. ಅದು ನಮ್ಮ ಅರಿವಿಗೆ ಬರುವಂತೆ ಆದಾಗ ಒಳ್ಳೆಯದು. ನಾವು ತಿದ್ದಿಕೊಳ್ಳುವುದಕ್ಕೆ ಸಾಧ್ಯವಾಗಲಿದೆ. ನಿಮ್ಮ ಮಾರ್ಗದರ್ಶನದಲ್ಲೇ ನಡೆಯುತ್ತೇನೆ ಎಂದರು.
ಹಿರಿಯ ಪತ್ರಕರ್ತ ಟಿ.ಎಂ ಸುಬ್ಬರಾವ್ ಮಾತನಾಡಿ, ವಸ್ತುನಿಷ್ಠ ವರದಿ ಶಾಶ್ವತವಾಗಿದ್ದು ಅದನ್ನು ಪತ್ರಕರ್ತನಾದವನು ತಿಳಿದು ಕೆಲಸ ನಿರ್ವಹಿಸಬೇಕು. ಇಂದು ಎಲ್ಲ ಪತ್ರಿಕೆಗಳ ವಿಸ್ತಾರ ಹೆಚ್ಚಾಗಿದೆ ಆದರೆ ಆಳ ಎಲ್ಲೂ ಕಾಣಿಸುತ್ತಿಲ್ಲ ಎಂದು ವಿಷಾದಿಸಿದ ಅವರು, ಮಂದಗಾಮಿ ಇರುವ ಪತ್ರಿಕೋ ದ್ಯಮ ಈಗ ಶೀಘ್ರಗಾಮಿಗಳಾಗಿದ್ದೇವೆ. ವಿಸ್ತಾರವಾದರೆ ಸಾಕಾಗದು ಅದರಂತೆ ಆಳವೂ ಆಗಬೇಕಿದೆ ಎಂದರು.
ವೇದಿಕೆಯ ಮೇಲೆ ಶಾಸಕ ದಿನಕರ ಶೆಟ್ಟಿ, ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗ ಡೂರು, ಸಂಯುಕ್ತ ಕರ್ನಾಟಕ ಸಿಇಓ ಮೋಹನ ಹೆಗಡೆ, ಪ್ರಜಾವಾಣಿ ಸಂಪಾದಕ ರವೀಂದ್ರ ಭಟ್, ಸುಬ್ರಾಯ ಭಟ್ ಭಕ್ಕಳ ಮುಂತಾದವರಿದ್ದರು.
ಈ ಸಂದರ್ಭದಲ್ಲಿ ಕೆ ಶ್ಯಾಮರಾವ್ ಪ್ರಶಸ್ತಿ ಮೋಹನ ಹೆಗಡೆಗೆ ಹಾಗೂ ಅಜ್ಜಿಬಳ ದತ್ತಿನಿಧಿ ಪ್ರಶಸ್ತಿ ಸತೀಶ್ ತಾಂಡೇಲ ಅವರಿಗೆ ನೀಡಲಾಯಿತು.