ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಆರ್‌ಎಸ್‌ಎಸ್‌ ಹೊಗಳಿದ ಕಾಂಗ್ರೆಸ್‌ ಹಿರಿಯ ನಾಯಕ; ಅಷ್ಟಕ್ಕೂ ಹೇಳಿದ್ದೇನು?

Digvijaya Singh: ಒಂದು ವಾರದ ಹಿಂದೆ, ದಿಗ್ವಿಜಯ್ ಸಿಂಗ್ ಅವರು ಕಾಂಗ್ರೆಸ್‌ನೊಳಗೆ ಸುಧಾರಣೆಗಳಿಗೆ ಕರೆ ನೀಡಿದ್ದರು ಮತ್ತು ರಾಹುಲ್ ಗಾಂಧಿಯವರನ್ನು ಅದರ ಬಗ್ಗೆ ಪರಿಶೀಲಿಸುವಂತೆ ಒತ್ತಾಯಿಸಿದ್ದರು. ಪಕ್ಷಕ್ಕೆ ಹೆಚ್ಚು "ಪ್ರಾಯೋಗಿಕ ವಿಕೇಂದ್ರೀಕೃತ ಕಾರ್ಯನಿರ್ವಹಣೆ" ಅಗತ್ಯವಿದೆ ಎಂದು ಅವರು ಹೇಳಿದ್ದರು. ಆದರೆ ಗಾಂಧಿಯವರನ್ನು "ಮನವೊಲಿಸುವುದು ಸುಲಭವಲ್ಲ" ಎಂದು ವಿಷಾದಿಸಿದ್ದರು.

ರಾಹುಲ್ ಗಾಂಧಿ ಧೈರ್ಯ ತೋರಿಸುತ್ತಾರಾ?; ದಿಗ್ವಿಜಯ ಸಿಂಗ್ ಪ್ರಶ್ನೆ

Digvijaya Singh -

Abhilash BC
Abhilash BC Dec 27, 2025 3:57 PM

ನವದೆಹಲಿ, ಡಿ.27: ಪಕ್ಷದೊಳಗೆ ಸುಧಾರಣೆಗಳ ಅಗತ್ಯತೆಯ ಬಗ್ಗೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಪತ್ರ ಬರೆದ ಒಂದು ವಾರದ ನಂತರ ಹಿರಿಯ ಕಾಂಗ್ರೆಸ್ ನಾಯಕ ಮತ್ತು ರಾಜ್ಯಸಭಾ ಸಂಸದ ದಿಗ್ವಿಜಯ್ ಸಿಂಗ್(Digvijaya Singh) ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ. ಶನಿವಾರ ಬೆಳಗ್ಗೆ 1990 ರ ದಶಕದ ಪ್ರಧಾನಿ ನರೇಂದ್ರ ಮೋದಿಯವರ ಫೋಟೋವನ್ನು ಹಂಚಿಕೊಂಡ ಅವರು, ವಿವಿಧ ವಿಷಯಗಳಲ್ಲಿ ಕಾಂಗ್ರೆಸ್ ಗುರಿಯಾಗಿಸಿಕೊಂಡಿದ್ದ ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಪೋಷಕ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ವನ್ನು ಹೊಗಳಿದರು.

1990ರಲ್ಲಿ ಗುಜರಾತ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಜತೆ ಮೋದಿ ಕೂಡ ಭಾಗಿಯಾಗಿದ್ದರು. ಈ ಫೋಟೊದ ಸ್ಕ್ರೀನ್‌ಶಾಟ್ ಅನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿರುವ ದಿಗ್ವಿಜಯ್ ಸಿಂಗ್, ಈ ಫೋಟೋ ಕುರಿತು ಸೂಕ್ಷವಾಗಿ ಗಮನಿಸಿ, ನೆಲದ ಮೇಲೆ ಕುಳಿತಿದ್ದ ತಳಮಟ್ಟದ ಕಾರ್ಯಕರ್ತರು ಸಂಘ-ಬಿಜೆಪಿ ಪರಿಸರ ವ್ಯವಸ್ಥೆಯೊಳಗೆ ಹೇಗೆ ಬೆಳೆದು ಮುಖ್ಯಮಂತ್ರಿ ಮತ್ತು ಪ್ರಧಾನಿಯಾಗಬಹುದು ಎಂಬುದನ್ನು ಸೂಚಿಸುತ್ತದೆ ಎಂದು ಅವರು ಆರ್‌ಎಸ್‌ಎಸ್ ಅನ್ನು ಶ್ಲಾಘಿಸಿದರು.

"ನಾನು ಈ ಚಿತ್ರವನ್ನು Quora ಸೈಟ್‌ನಲ್ಲಿ ಕಂಡುಕೊಂಡೆ. ಇದು ತುಂಬಾ ಪ್ರಭಾವಶಾಲಿಯಾಗಿದೆ. RSS ನ ತಳಮಟ್ಟದ ಸ್ವಯಂಸೇವಕರು (ಕಾರ್ಯಕರ್ತರು) ಮತ್ತು ಜನಸಂಘ ಕಾರ್ಯಕರ್ತರು ನಾಯಕರ ಪಾದಗಳ ಮೇಲೆ ನೆಲದ ಮೇಲೆ ಕುಳಿತು ರಾಜ್ಯದ ಮುಖ್ಯಮಂತ್ರಿ ಮತ್ತು ದೇಶದ ಪ್ರಧಾನ ಮಂತ್ರಿಯಾಗುವ ಮಟ್ಟಕ್ಕೆ ಬೆಳೆಯುತ್ತಾರೆ ಎಂದರೆ ಹೆಮ್ಮೆಯ ಸಂಗತಿ" ಎಂದು ಪೋಸ್ಟ್‌ ಮಾಡಿದ್ದಾರೆ.

ಮಾತ್ರವಲ್ಲದೆ ದಿಗ್ವಿಜಯ್ ಸಿಂಗ್ ಅವರ ಪೋಸ್ಟ್‌ನಲ್ಲಿ ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ಖಾತೆಗಳಾದ ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಟ್ಯಾಗ್ ಮಾಡಲಾಗಿದೆ. ಇದು ಹೈಕಮಾಂಡ್‌ಗೆ ಅವರ ಸಂದೇಶ ಎಂದು ಪರಿಗಣಿಸಲಾಗಿದೆ.

ಒಂದು ವಾರದ ಹಿಂದೆ, ದಿಗ್ವಿಜಯ್ ಸಿಂಗ್ ಅವರು ಕಾಂಗ್ರೆಸ್‌ನೊಳಗೆ ಸುಧಾರಣೆಗಳಿಗೆ ಕರೆ ನೀಡಿದ್ದರು ಮತ್ತು ರಾಹುಲ್ ಗಾಂಧಿಯವರನ್ನು ಅದರ ಬಗ್ಗೆ ಪರಿಶೀಲಿಸುವಂತೆ ಒತ್ತಾಯಿಸಿದ್ದರು. ಪಕ್ಷಕ್ಕೆ ಹೆಚ್ಚು "ಪ್ರಾಯೋಗಿಕ ವಿಕೇಂದ್ರೀಕೃತ ಕಾರ್ಯನಿರ್ವಹಣೆ" ಅಗತ್ಯವಿದೆ ಎಂದು ಅವರು ಹೇಳಿದ್ದರು. ಆದರೆ ಗಾಂಧಿಯವರನ್ನು "ಮನವೊಲಿಸುವುದು ಸುಲಭವಲ್ಲ" ಎಂದು ವಿಷಾದಿಸಿದ್ದರು.

ಇದನ್ನೂ ಓದಿ ಮೋದಿ-ಲಕ್ಸನ್ ಮಹತ್ವದ ಚರ್ಚೆ; ಭಾರತ- ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ

ಸಿಂಗ್ ಹಂಚಿಕೊಂಡಿರುವ ಈ ಫೋಟೋ 1990 ರ ದಶಕದ ಗುಜರಾತ್ ರಾಜಕೀಯದಲ್ಲಿ ಪ್ರಧಾನಿ ಮೋದಿಯವರ ನಾಯಕತ್ವದ ಮೊದಲ ಹೆಜ್ಜೆಯಾಗಿತ್ತು. 1996 ರಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ಶಂಕರ್‌ಸಿನ್ಹ್ ವಘೇಲಾ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಆ ಕಾಲದ ಬಿಜೆಪಿಯ ಉನ್ನತ ನಾಯಕರು ಭಾಗವಹಿಸಿದ್ದ ಸಂದರ್ಭದಲ್ಲಿ ಇದನ್ನು ಕ್ಲಿಕ್ ಮಾಡಲಾಗಿದೆ ಎಂದು ವರದಿಯಾಗಿದೆ.

ಸಿಂಗ್ ಅವರ ಟ್ವೀಟ್ ಬಗ್ಗೆ ಬಿಜೆಪಿ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್‌ ಅನ್ನು ಟೀಕಿಸಿದೆ. "ನಿರಂಕುಶಾಧಿಕಾರಿ ಮತ್ತು ಪ್ರಜಾಪ್ರಭುತ್ವ ವಿರೋಧಿ" ಕಾಂಗ್ರೆಸ್ ನಾಯಕತ್ವವನ್ನು ಹಿರಿಯರು ಬಹಿರಂಗ ಪಡಿಸಿದ್ದಾರೆ ಎಂದು ಹೇಳಿದೆ. ಕಾಂಗ್ರೆಸ್‌ನ ಮೊದಲ ಕುಟುಂಬವು ಪಕ್ಷವನ್ನು ಹೇಗೆ ನಿರ್ದಯವಾಗಿ ಸರ್ವಾಧಿಕಾರಿ ರೀತಿಯಲ್ಲಿ ನಡೆಸುತ್ತಿದೆ ಮತ್ತು ಈ ಕಾಂಗ್ರೆಸ್ ನಾಯಕತ್ವವು ಎಷ್ಟು ನಿರಂಕುಶಾಧಿಕಾರಿ ಮತ್ತು ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂಬುದನ್ನು ಸಂಪೂರ್ಣವಾಗಿ ಬಹಿರಂಗಪಡಿಸಿದಕ್ಕೆ ನಿಮಗೆ ಧನ್ಯವಾದಗಳು ಎಂದಿದೆ.