Vaastu Tips: ಮನೆಯ ಈ ದಿಕ್ಕಿಗೆ ಬಾಳೆ ಗಿಡ ನೆಡಿ... ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ತುಂಬಿ ತುಳುಕುತ್ತದೆ..!
ಪ್ರತಿ ಮನೆಯಲ್ಲೂ ಬಾಳೆ ಗಿಡವನ್ನು ನೆಡುವುದು ತುಂಬಾ ಶುಭ. ಬಾಳೆ ಗಿಡವನ್ನು ಮನೆಯಲ್ಲಿ ನೆಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಆದರೆ ಅದೇ ರೀತಿ ಅದನ್ನು ತಪ್ಪು ದಿಕ್ಕಿನಲ್ಲಿ ನೆಡುವುದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ಬಾಳೆ ಗಿಡವನ್ನು ತಪ್ಪು ದಿಕ್ಕಿನಲ್ಲಿ ನೆಟ್ಟರೆ ಅದು ಬೇಗನೆ ಒಣಗುತ್ತದೆ ಮತ್ತು ಒಣಗಿದ ಬಾಳೆ ಗಿಡವು ಮನೆಯಲ್ಲಿ ಬಡತನವನ್ನು ಹೆಚ್ಚಿಸುವ ಸಂಕೇತ. ಹಾಗಾಗಿ ಮನೆಯ ಯಾವ ದಿಕ್ಕಿನಲ್ಲಿ ಬಾಳೆ ನೆಟ್ಟರೆ ಒಳಿತು ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಬಾಳೆ ಮರ

ಹಿಂದೂ ಧರ್ಮದಲ್ಲಿ ಬಾಳೆ ಮರಕ್ಕೆ ಪೂಜ್ಯ ಸ್ಥಾನವಿದೆ. ಬಾಳೆ ಮರದಲ್ಲಿ ((Banana Plant) ) ಭಗವಂತ ಗುರು ಮತ್ತು ವಿಷ್ಣು (Vishnu) ನೆಲೆಸಿದ್ದಾರೆ ಎಂದು ನಂಬಲಾಗಿದೆ. ಪ್ರತಿ ಮನೆಯಲ್ಲೂ ಬಾಳೆ ಗಿಡವನ್ನು ನೆಡುವುದು ತುಂಬಾ ಶುಭ. ಬಾಳೆ ಗಿಡವನ್ನು ಮನೆಯಲ್ಲಿ ನೆಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ ಎಂಬುದು ನಮ್ಮ ಪೂರ್ವಜರ ನಂಬಿಕೆ. ಆದರೆ ಅದೇ ರೀತಿ ಅದನ್ನು ತಪ್ಪು ದಿಕ್ಕಿನಲ್ಲಿ ನೆಡುವುದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ಬಾಳೆ ಗಿಡವನ್ನು ತಪ್ಪು ದಿಕ್ಕಿನಲ್ಲಿ ನೆಟ್ಟರೆ ಅದು ಬೇಗನೆ ಒಣಗುತ್ತದೆ ಮತ್ತು ಒಣಗಿದ ಬಾಳೆ ಗಿಡವು ಮನೆಯಲ್ಲಿ ಬಡತನವನ್ನು ಹೆಚ್ಚಿಸುವ ಸಂಕೇತ. ಹಾಗಾಗಿ ಮನೆಯ ಯಾವ ದಿಕ್ಕಿನಲ್ಲಿ ಬಾಳೆ ನೆಟ್ಟರೆ ಒಳಿತು ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಹೌದು ವಾಸ್ತು ಪ್ರಕಾರ, ಬಾಳೆ ಮರವು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸಲಿದ್ದು, ಬಾಳೆ ಮರವನ್ನು ಸರಿಯಾದ ದಿಕ್ಕಿ ನೆಡದಿದ್ದರೆ, ಅದು ಅಶುಭವನ್ನು ಉಂಟು ಮಾಡುತ್ತದೆ. ಆದ್ದರಿಂದ, ಮನೆಯ ಮುಂದೆ ಬಾಳೆ ಮರವನ್ನು ನೆಡುವ ಮೊದಲು, ಅದರ ನಿಯಮಗಳನ್ನು ಚೆನ್ನಾಗಿ ತಿಳಿದುಕೊಳ್ಳುವುದು ಅವಶ್ಯಕ. ಹಾಗಾದ್ರೆ ಯಾವ ದಿಕ್ಕಿನಲ್ಲಿ ಬಾಳೆ ಗಿಡ ಇರಬಾರದು, ಯಾವ ದಿಕ್ಕಿನಲ್ಲಿ ನೆಡಬೇಕು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
ಈ ದಿಕ್ಕಿನಲ್ಲಿ ನೆಡಿ
ಬಾಳೆಮರವನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ನೆಡಬೇಕು ಎನ್ನುತ್ತಾರೆ ವಾಸ್ತುತಜ್ಞರು. ಇದನ್ನು ಹೊರತು ಪಡಿಸಿ ಪೂರ್ವ ದಿಕ್ಕಿನಲ್ಲಿ ಕೂಡಾ ನೆಡಬಹುದು.
ಈ ದಿಕ್ಕು ಸೂಕ್ತವಲ್ಲ
ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಬಾಳೆಗಿಡ ನೆಡಬಾರದು. ಮನೆಯ ಹಿಂಭಾಗ ಅಕ್ಕ ಪಕ್ಕ ಗಿಡ ನೆಡಬೇಕು. ಮುಂಭಾಗದಲ್ಲಿ ನೆಡುವುದು ಒಳ್ಳೆಯದಲ್ಲ. ಹಾಗೆ ಬಾಳೆ ಗಿಡಕ್ಕೆ ಕೊಳಕು ನೀರು ಹಾಕದೆ, ಶುದ್ಧವಾದ ನೀರನ್ನು ಹಾಕಿ ಬೆಳೆಸಿದರೆ ಮನೆಯಲ್ಲಿ ಸಮೃದ್ಧಿ ಉಂಟಾಗುತ್ತದೆ. ಹಾಗೇ ವಾಸ್ತು ಶಾಸ್ತ್ರದ ಪ್ರಕಾರ ಬಾಳೆ ಗಿಡವನ್ನು ಆಗ್ನೇಯ ದಿಕ್ಕಿನಲ್ಲಿ ನೆಡಬಾರದು. ಅಗ್ನಿ ಮೂಲೆಯಲ್ಲಿ ಬಾಳೆ ಮರವನ್ನು ನೆಡುವುದು ಅಶುಭ.
ಈ ಸುದ್ದಿಯನ್ನು ಓದಿ: Vastu Tips: ಮನೆಯ ಯಾವ ದಿಕ್ಕಿನಲ್ಲಿ ಅಕ್ವೇರಿಯಂ ಇಡುವುದು ಶುಭ?
ಹೀಗೆ ಮಾಡಬೇಡಿ
ಕೆಲವೊಮ್ಮೆ ಬಾಳೆ ಗಿಡವನ್ನು ಪ್ರಾಣಿಗಳು ತಿನ್ನಬಾರದು ಎಂಬ ಕಾರಣಕ್ಕೆ ಕೆಲವರು ಬಾಳೆ ಮರದ ಸುತ್ತ ಮುಳ್ಳಿನ ಬೇಲಿ ಹಾಕುತ್ತಾರೆ. ಆದರೆ ಹೀಗೆ ಮಾಡುವುದು ತಪ್ಪು, ಸಾಕ್ಷಾತ್ ವಿಷ್ಣುವನ್ನು ಮುಳ್ಳಿನಿಂದ ಚುಚ್ಚಿದಂತೆ ಆಗುತ್ತದೆ. ವಾಸ್ತು ಪ್ರಕಾರ ಹೀಗೆ ಮಾಡುವುದರಿಂದ ಮನೆಯಲ್ಲಿ ಜಗಳ ಉಂಟಾಗಿ ಸಂಬಂಧ ಕೆಡುತ್ತದೆ. ಬಾಳೆಮರದ ಬಳಿ, ಕಳ್ಳಿ ಅಥವಾ ಇತರ ಗಿಡಗಳನ್ನು ನೆಡುವುದು ಒಳ್ಳೆಯದಲ್ಲ.
ಮುಖ್ಯದ್ವಾರದ ಬಳಿ ನೆಡುವುದು ಕೂಡ ಅ ಮಂಗಳ
ಮನೆಯ ಮುಖ್ಯದ್ವಾರದ ಮುಂದೆ ಬಾಳೆಗಿಡವನ್ನು ನೆಡುವುದು ಸೂಕ್ತವಲ್ಲ. ಮುಖ್ಯ ದ್ವಾರಕ್ಕೆ ಎಲೆಗಳು ಬಾಗುವಂತೆ ಬಾಳೆಗಿಡವನ್ನು ನೆಡುವುದು ಅಶುಭ. ಮುಖ್ಯದ್ವಾರದಲ್ಲಿ ನೆಟ್ಟ ಬಾಳೆ ಮರವು ಸಮೃದ್ಧಿಗೆ ಅಡ್ಡಿಯಾಗುತ್ತದೆ.