Vastu Tips: ವಾಸ್ತು ಪ್ರಕಾರ ಮನೆಯ ಈ ದಿಕ್ಕಿನಲ್ಲಿ ಪೊರಕೆ ಇಟ್ಟರೆ ದಾರಿದ್ರ್ಯ ಬರುತ್ತದೆ
ವಾಸ್ತು ಶಾಸ್ತ್ರದಲ್ಲಿ ಮನೆಯನ್ನು ಸ್ವಚ್ಛಗೊಳಿಸುವ ಪೊರಕೆಗೆ ವಿಶೇಷ ಸ್ಥಾನವಿದ್ದು, ಇದನ್ನು ಅದೃಷ್ಟ ಹಾಗೂ ಲಕ್ಷ್ಮೀಯ ಸ್ವರೂಪ ಎನ್ನಲಾಗುತ್ತದೆ. ಹೀಗೆ ದೇವರು ನೆಲೆಸಿದ್ದಾರೆ ಎನ್ನಲಾಗುವ ಪೊರಕೆಯ ಬಳಕೆಗೂ ಕೆಲ ನಿಯಮಗಳಿದ್ದು, ಅದನ್ನು ಇಡುವ ಸ್ಥಳವೂ ಪ್ರಮುಖ ಪಾತ್ರವಹಿಸುತ್ತದೆ.

ಪೂರಕೆ

ಬೆಂಗಳೂರು: ವಾಸ್ತು ಶಾಸ್ತ್ರದಲ್ಲಿ ಮನೆಯನ್ನು ಸ್ವಚ್ಛಗೊಳಿಸುವ ಪೊರಕೆಗೆ ವಿಶೇಷ ಸ್ಥಾನಮಾನವಿದ್ದು, ಇದನ್ನು ಅದೃಷ್ಟ ಹಾಗೂ ಲಕ್ಷ್ಮೀಯ ಸ್ವರೂಪ ಎನ್ನಲಾಗುತ್ತದೆ. ಹೀಗೆ ದೇವರು ನೆಲೆಸಿದ್ದಾರೆ ಎನ್ನಲಾಗುವ ಪೊರಕೆಯ ಬಳಕೆಗೂ ಕೆಲ ನಿಯಮಗಳಿದ್ದು, ಅದನ್ನು ಇಡುವ ಸ್ಥಳವೂ ಪ್ರಮುಖ ಪಾತ್ರವಹಿಸುತ್ತದೆ (Vastu Tips). ಹೌದು ಸರಿಯಾದ ಸ್ಥಳದಲ್ಲಿ ಅಥವಾ ಸರಿಯಾದ ದಿಕ್ಕಿನಲ್ಲಿ ಪೊರಕೆ ಇಡದಿದ್ದರೆ ಅದು ವಾಸ್ತು ದೋಷಕ್ಕೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ. ನೀವು ಮನೆಯಲ್ಲಿ ಎಲ್ಲೆಂದರಲ್ಲಿ ಪೊರಕೆಯನ್ನು ಇಡುವುದರಿಂದ ವಾಸ್ತು ದೋಷ ಉಂಟಾಗಬಹುದು. ಅದು ನಿಮ್ಮ ಯಶಸ್ಸು, ಸಂಪತ್ತು, ಆರೋಗ್ಯ, ಮದುವೆ ಸಂಬಂಧಿತ ಸಮಸ್ಯೆಗೆ ಕಾರಣವಾಗಬಹುದು.
ಹಾಗಾಗಿ ಮನೆಯಲ್ಲಿ ಪೊರಕೆಯನ್ನು ಸರಿಯಾದ ಸ್ಥಳದಲ್ಲಿ ಇಡುವುದು ಮುಖ್ಯ. ನಿಮ್ಮ ಪೊರಕೆಯನ್ನು ಮನೆಯಲ್ಲಿ ಎಲ್ಲಿ ಇಡಬೇಕು ಮತ್ತು ಎಲ್ಲಿ ಇಡಬಾರದು ಎನ್ನುವುದು ತಿಳಿದುಕೊಳ್ಳಬೇಕು. ಆ ಕುರಿತಾದ ಮಾಹಿತಿ ಇಲ್ಲಿದೆ.
ಪೊರಕೆಗಳು ಬಹಳ ಮಂಗಳಕರವೆಂದು ಹೇಳಲಾಗುತ್ತದೆ. ಅದಕ್ಕಾಗಿಯೇ ವಾಸ್ತು ಶಾಸ್ತ್ರದಲ್ಲಿ ಪೊರಕೆ ಖರೀದಿಸಲು ಕೆಲವು ಒಳ್ಳೆಯ ದಿನಗಳು ಮತ್ತು ಖರೀದಿಸಬಾರದ ದಿನಗಳ ಬಗ್ಗೆ ವಿವರಿಸಲಾಗಿದೆ. ಪುರಾಣಗಳ ಪ್ರಕಾರ, ಲಕ್ಷ್ಮೀ ದೇವಿಯು ವೈಕುಂಠ ಅಥವಾ ವಿಷ್ಣುಲೋಕಕ್ಕೆ ಹೋದಾಗ ಆ ಸ್ಥಳವನ್ನು ಸ್ವಚ್ಛಗೊಳಿಸಲು ಪೊರಕೆಯನ್ನು ಬಳಸಿದಳು. ಆದ್ದರಿಂದ ಪೊರಕೆಯು ನಿಸ್ಸಂಶಯವಾಗಿ ದೇವಿಯ ಸಾಕಾರದಂತಿದೆ ಮತ್ತು ಅದನ್ನು ಗೌರವದಿಂದ ಸರಿಯಾದ ಸ್ಥಳದಲ್ಲಿ ಇಡುವುದರಿಂದ ನಿಮಗೆ ಅದೃಷ್ಟ, ಸಂಪತ್ತು ಮತ್ತು ಲಕ್ಷ್ಮೀ ದೇವಿಯ ಆಶೀರ್ವಾದವನ್ನು ಪಡೆಯಬಹುದು.
ಪೊರಕೆ ಯಾವ ದಿಕ್ಕು ಸೂಕ್ತ?
ನೀವು ಪೊರಕೆ ಮತ್ತು ಒರೆಸುವ ಸಾಧನವನ್ನು ನಿಮ್ಮ ಮನೆಯ ವಾಯುವ್ಯ ಅಥವಾ ಪಶ್ಚಿಮ ಮೂಲೆಯಲ್ಲಿ ಇಡಬೇಕು. ಈ ಕಾರಣದಿಂದಾಗಿ ಮನೆಯಲ್ಲಿ ಸಂತೋಷ ಮತ್ತು ಶಾಂತಿಯೊಂದಿಗೆ ನೆಲೆಸುವ ಜತೆಗೆ ಲಕ್ಷ್ಮೀಯ ಆಶೀರ್ವಾದವೂ ಉಳಿಯುತ್ತದೆ.
ಈ ಸುದ್ದಿಯನ್ನು ಓದಿ: Vastu Tips: ಮನೆಯ ಈ ದಿಕ್ಕಿನಲ್ಲಿ ನವಿಲುಗರಿ ಇಟ್ಟರೆ ಒಲಿಯುತ್ತದೆ ಅದೃಷ್ಟ; ಆದ್ರೆ ವಾಸ್ತು ನಿಯಮ ತಪ್ಪದೇ ಪಾಲಿಸಿ
ಈ ದಿಕ್ಕಿನಲ್ಲಿಟ್ಟರೆ ಧನ ಹಾನಿ
ಈಶಾನ್ಯ ಅಥವಾ ಆಗ್ನೇಯ ದಿಕ್ಕಿನಲ್ಲಿ ಅಥವಾ ಪೂಜಾ ಕೋಣೆಯಲ್ಲಿ ಇಡಬಾರದು. ಇದು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜತೆಗೆ ಧನ ಹಾನಿಯೂ ಉಂಟಾಗಲಿದೆ.
ಮನೆಯ ಈ ಜಾಗಗಳಲ್ಲಿ ಪೊರಕೆ ಇಡುವುದು ನಿಷಿದ್ಧ
ಅಲ್ಲದೇ ರಾತ್ರಿ ಪೊರಕೆಯನ್ನು ಮನೆಯ ತಾರಸಿ ಮೇಲೆ ಅಥವಾ ಅಂಗಳದಲ್ಲಿ ಬಿಡಬಾರದು. ಹೀಗೆ ಮಾಡುವುದರಿಂದ ಮನೆಯಲ್ಲಿ ಹಣದ ನಷ್ಟವಾಗುತ್ತದೆ. ಹಾಗೆಯೇ ಮಲಗುವ ಕೋಣೆ, ಡ್ರಾಯಿಂಗ್ ರೂಮ್ ಮತ್ತು ಪೂಜಾ ಮನೆಯಲ್ಲಿ ಪೊರಕೆ ಇಡುವುದನ್ನು ನಿಷಿದ್ಧ.
ಇನ್ನು ಪೊರಕೆಯನ್ನು ಇತರರಿಗೆ ಕಾಣದಂತೆ ಮರೆಯಲ್ಲಿಡಬೇಕು. ಹಾಗೇ ಅದನ್ನು ತಲೆಕೆಳಗಾಗಿ ಅಥವಾ ನೇರವಾಗಿ ಇಡಬಾರದು. ಯಾವಾಗಲೂ ಪೊರಕೆಯನ್ನು ವಿಶ್ರಾಂತಿ ಸ್ಥಾನದಲ್ಲಿ ಇರಿಸುವುದರಿಂದ ಮನೆಯಲ್ಲಿ ಸಂಪತ್ತು ಹಾಗೂ ಧನಲಾಭ ಉಂಟಾಗುತ್ತದೆ. ಇದರ ಹೊರತಾಗಿ ಯಾರಾದರೂ ಮನೆಯಿಂದ ಹೊರಗೆ ಹೋದ ತಕ್ಷಣ ಪೊರಕೆಯಿಂದ ಗುಡಿಸಬೇಡಿ. ಹೀಗೆ ಮಾಡುವುದರಿಂದ ಅಪಘಾತಗಳ ಸಾಧ್ಯತೆ ಹೆಚ್ಚುತ್ತದೆ. ನೀವು ಹೊಸ ಸ್ಥಳಕ್ಕೆ ಸ್ಥಳಾಂತರಗೊಂಡಾಗ, ಸ್ಥಳವನ್ನು ಸ್ವಚ್ಛಗೊಳಿಸಲು ಹೊಸ ಪೊರಕೆಯನ್ನು ಬಳಸಿ. ಇದು ಉತ್ತಮ ವಾಸ್ತುವಿನ ಮೊದಲ ಹೆಜ್ಜೆಯಾಗುತ್ತದೆ.