Vastu Tips: ಮನೆಯ ಈ ದಿಕ್ಕಿನಲ್ಲಿ ನವಿಲುಗರಿ ಇಟ್ಟರೆ ಒಲಿಯುತ್ತದೆ ಅದೃಷ್ಟ; ಆದ್ರೆ ವಾಸ್ತು ನಿಯಮ ತಪ್ಪದೇ ಪಾಲಿಸಿ
ಹಿಂದೂ ಧರ್ಮದಲ್ಲಿ ನವಿಲುಗರಿಗೆ ಬಹಳ ಪ್ರಾಮುಖ್ಯತೆ ನೀಡಲಾಗಿದೆ. ಭಗವಾನ್ ಶ್ರೀಕೃಷ್ಣನು ಇದನ್ನು ತನ್ನ ಕಿರೀಟದಲ್ಲಿ ಧರಿಸಿರುತ್ತಾನೆ. ಆದ್ದರಿಂದ ನವಿಲುಗರಿಗೆ ದೇವರಷ್ಟೇ ಪೂಜ್ಯನೀಯ ಭಾವದಲ್ಲಿ ನೋಡಲಾಗುತ್ತದೆ. ಮನೆಯಲ್ಲಿ ನವಿಲು ಗರಿಗಳನ್ನು ಇಟ್ಟುಕೊಳ್ಳಬಹುದಾ...?; ಇಡುವುದಾದ್ದರೆ ವಾಸ್ತು ಪ್ರಕಾರ ಮನೆಯ ಯಾವ ಭಾಗದಲ್ಲಿ ನವಿಲುಗರಿಯನ್ನು ಇಡಬಹುದು..? ಯಾವ ದಿಕ್ಕಿನಲ್ಲಿಡಬಹುದು..? ಇಲ್ಲಿದೆ ಮಾಹಿತಿ.

ಮನೆಯಲ್ಲಿ ನವಿಲುಗರಿ ಎಲ್ಲಿಟ್ಟರೆ ಶುಭ

ಹಿಂದೂ ಧರ್ಮದಲ್ಲಿ ನವಿಲುಗರಿಗೆ ಬಹಳ ಪ್ರಾಮುಖ್ಯತೆ ನೀಡಲಾಗಿದೆ. ಭಗವಾನ್ ಶ್ರೀಕೃಷ್ಣನು ಇದನ್ನು ತನ್ನ ಕಿರೀಟದಲ್ಲಿ ಧರಿಸಿರುತ್ತಾನೆ. ಆದ್ದರಿಂದ ನವಿಲುಗರಿಗೆ ದೇವರಷ್ಟೇ ಪೂಜ್ಯನೀಯ ಭಾವದಲ್ಲಿ ನೋಡಲಾಗುತ್ತದೆ. ಪುರಾಣದಲ್ಲಿ ನವಿಲು ಗರಿಗೆ ವಿಶೇಷ ಹಾಗೂ ಶ್ರೇಷ್ಠ ಸ್ಥಾನವನ್ನು ನೀಡಲಾಗಿದ್ದು, ಒಂದೊಂದು ದೇವರಲ್ಲಿ ನಾವು ನವಿಲು ಗರಿಯನ್ನು ವಿಭಿನ್ನ ರೂಪದಲ್ಲಿ ಕಾಣಬಹುದಾಗಿದೆ. ಭಗವಾನ್ ಶ್ರೀಕೃಷ್ಣ ಪರಮಾತ್ಮ, ವಿಘ್ನ ನಿವಾರಕ ಗಣೇಶ, ಮಾತೇ ಸರಸ್ವತಿ, ಲಕ್ಷ್ಮೀ, ಕಾರ್ತಿಕೇಯ, ಇಂದ್ರ ಎಲ್ಲರೂ ನವಿಲು ಗರಿಗಳನ್ನು ಹೊಂದಿದ್ದಾರೆ. ನವಿಲು ಗರಿ ಸುಖ- ಸಮೃದ್ಧಿಯ ಪ್ರತೀಕವಾಗಿದ್ದು, ಇದನ್ನು ಮನೆಗೆ ಅಶುಭ ಸಂಗತಿಗಳು ತಪ್ಪಲಿದೆ. ಹಾಗಾದ್ರೆ ಮನೆಯಲ್ಲಿ ನವಿಲು ಗರಿಗಳನ್ನು ಇಟ್ಟುಕೊಳ್ಳಬಹುದಾ...?; ಇಡುವುದಾದ್ದರೆ ವಾಸ್ತು ಪ್ರಕಾರ ಮನೆಯ ಯಾವ ಭಾಗದಲ್ಲಿ ನವಿಲುಗರಿಯನ್ನು ಇಡಬಹುದು..? ಯಾವ ದಿಕ್ಕಿನಲ್ಲಿಡಬಹುದು..? ಇಲ್ಲಿದೆ ಮಾಹಿತಿ.
ಈ ದಿಕ್ಕಿನಲ್ಲಿಡಿ
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ನವಿಲು ಗರಿಗಳನ್ನು ಇಡಲು ನೈಋತ್ಯ ಮತ್ತು ಪೂರ್ವ ದಿಕ್ಕು ಉತ್ತಮವಾಗಿದ್ದು, ಪತಿ ಮತ್ತು ಹೆಂಡತಿಯ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ. ಜೊತೆಗೆ ಕುಟುಂಬ ಸದಸ್ಯರ ನಡುವೆಯೂ ಒಳೆಯ ಸಂಬಂಧ ಬೆಳೆಯಲಿದ್ದು, ಮನೆಯಲ್ಲಿ ಸಂತೋಷ-ಖುಷಿ ನೆಲಸಲಿದೆ
ಸಂಪತ್ತನ್ನ ಪಡೆಯಲು: ಪ್ರತಿಯೊಬ್ಬರಿಗೂ ಸಂಪತ್ತು ಪಡೆಯಬೇಕು ಎನ್ನುವ ಆಸೆ ಇರುತ್ತದೆ. ಹಾಗಾಗಿ ಅನೇಕ ಪ್ರಯತ್ನಗಳನ್ನ ಮಾಡುತ್ತಾರೆ. ಕೆಲವರು ಅದೆಷ್ಟೇ ಹಣವನ್ನ ಗಳಿಸಿದರೂ ಸಹ ಅದನ್ನ ಉಳಿಸಲು ಸಾಧ್ಯವಾಗುವುದಿಲ್ಲ. ಆದರೆ ಅದಕ್ಕೆ ಈ ನವಿಲು ಗರಿ ಸಹಾಯ ಮಾಡಲಿದ್ದು, ವಾಸ್ತು ಶಾಸ್ತ್ರದ ಪ್ರಕಾರ ಸೂರ್ಯ ದೇವ ಮತ್ತು ಇಂದ್ರ ದೇವ ಪೂರ್ವ ದಿಕ್ಕಿನ ಅಧಿಪತಿಗಳು. ಹಾಗಾಗಿ ಮನೆಯ ಪೂರ್ವ ದಿಕ್ಕಿನಲ್ಲಿ ನವಿಲು ಗರಿಯನ್ನು ಇಡುವುದು ವಿಶೇಷವಾಗಿ ಅದೃಷ್ಟವನ್ನ ನೀಡಲಿದ್ದು, ನೀವು ಅದನ್ನು ವಾಯುವ್ಯಕ್ಕೆ ಮುಖ ಮಾಡಿ ಸಹ ಇಡಬಹುದು. ನವಿಲಿನ ಗರಿಗಳನ್ನು ಈ ದಿಕ್ಕಿನಲ್ಲಿ ಇಡುವುದರಿಂದ ನೀವು ಹೆಚ್ಚಿನ ಸಂಪತ್ತನ್ನು ಪಡೆಯಬಹುದು.
ಮನೆಯಲ್ಲಿರುವ ಜನರು ಹೆಚ್ಚಾಗಿ ಅಲಂಕಾರಕ್ಕಾಗಿ ನವಿಲು ಗರಿಗಳನ್ನು ಬಳಸುತ್ತಾರೆ. ಈ ನವಿಲು ಗರಿಗಳು ಮನೆಯಲ್ಲಿ ಕೆಟ್ಟ ಶಕುನಗಳನ್ನು ದೂರವಿಡುತ್ತವೆ. ಅಲ್ಲದೆ ಮನೆಯಲ್ಲಿ ಒತ್ತಡವನ್ನು ನಿವಾರಿಸುತ್ತದೆ. ಬದಲಾವಣೆಯನ್ನು ವೀಕ್ಷಿಸಲು ನಿಮ್ಮ ಮಲಗುವ ಕೋಣೆಯ ಪೂರ್ವ ಗೋಡೆಯ ಮೇಲೆ ನವಿಲು ಗರಿಯನ್ನು ನೇತುಹಾಕಿ. ಇದರಿಂದ ಮನೆಯ ಸಮಸ್ಯೆಗಳು ದೂರವಾಗುತ್ತವೆ.
ಈ ಸುದ್ದಿಯನ್ನೂ ಓದಿ: Vastu tips: ವಾಸ್ತು ಪ್ರಕಾರ ಲಾಫಿಂಗ್ ಬುದ್ಧನ ಪ್ರತಿಮೆ ಮನೆಯ ಈ ಭಾಗದಲ್ಲಿಟ್ಟರೆ ಸುಖ ಸಂತೋಷ ನೆಲೆಸುತ್ತೆ
ಅಲ್ಲದೇ ಮನೆಯ ಪ್ರವೇಶದ್ವಾರದಲ್ಲಿ ನವಿಲುಗರಿಯನ್ನು ಬೀಸಣಿಕೆಯಂತೆ ಮಾಡಿ ಕಟ್ಟುವುದರಿಂದ ಮನೆಯೊಳಗೆ ನಕಾರಾತ್ಮಕ ಶಕ್ತಿ ಪ್ರವೇಶವಾಗದಂತೆ ತಡೆಯಬಹುದು. ಅಷ್ಟೇ ಅಲ್ಲ ನವಿಲುಗರಿಯನ್ನು ಆಭರಣದ ಪೆಟ್ಟಿಗೆಯಲ್ಲಿ ಅಥವಾ ತಿಜೋರಿಯಲ್ಲಿ ಇಡುವುದರಿಂದ ಮನೆಗೆ ಶ್ರೇಯಸ್ಸು ಉಂಟಾಗುತ್ತದೆ. ಕುಬೇರನ ದೃಷ್ಟಿ ಬೀಳುವಂತಾಗುತ್ತದೆ.
ಇನ್ನು ನವಿಲು ಗರಿಗಳನ್ನು ಪಾದಗಳ ಬಳಿ ಇಟ್ಟುಕೊಂಡು ಮಲಗಬಾರದು. ಹೀಗೆ ಮಾಡುವುದರಿಂದ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೇ, ನಿಮ್ಮ ಮನೆಯಲ್ಲಿ ಆಂತರಿಕ ಕಲಹವೂ ಉಂಟಾಗಬಹುದು. ಹಾಗಾಗಿ, ಹಾಸಿಗೆಯ ಕೆಳಗೆ ನವಿಲು ಗರಿಗಳನ್ನು ಇಡಬೇಡಿ.