ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Hospet News: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಟ್ರಸ್ಟ್ ವತಿಯಿಂದ 2070ನೇ ಮದ್ಯವರ್ಜನ 8 ದಿನಗಳ ಶಿಬಿರಕ್ಕೆ ಚಾಲನೆ

ಶಿಬಿರದಲ್ಲಿ ನಿತ್ಯ ಬೆಳಿಗ್ಗೆಯಿಂದ ರಾತ್ರಿವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ಪ್ರಮುಖ ವಾಗಿ ಯೋಗ, ವ್ಯಾಯಾಮ,ಸ್ವಚ್ಛತೆ, ಶ್ರಮದಾನ, ಆಪ್ತ ಸಲಹೆ, ಪ್ರಮುಖರಿಂದ ಮಾರ್ಗದರ್ಶನ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮ, ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ಶಿಬಿರದಲ್ಲಿ ಭಾಗವಹಿಸಿದವ ರಿಗೆ ಮಾಹಿತಿ ನೀಡಲಾಯಿತು.

2070ನೇ ಮದ್ಯವರ್ಜನ 8 ದಿನಗಳ ಶಿಬಿರಕ್ಕೆ ಚಾಲನೆ

-

Profile
Ashok Nayak Jun 20, 2026 12:27 PM

ಹೊಸಪೇಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಹೊಸಪೇಟೆ ಹಾಗೂ ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಸೇರಿದಂತೆ ವಿವಿಧ ಸಹಯೋಗದಲ್ಲಿ ನಗರದ ಶ್ರೀ ಗೌಳಿಗರ ಕಲ್ಯಾಣ ಮಂಟಪದಲ್ಲಿ 2070 ನೇ ಮದ್ಯವರ್ಜನ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಹರಪನಹಳ್ಳಿ ನಿಚ್ಚವ್ವನಹಳ್ಳಿ ಬ್ರಹ್ಮನ್ಮಠ ಶ್ರೀಶಿವಯೋಗಿ ಹಾಲ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕುರಿ ಶಿವಮೂರ್ತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಮದ್ಯವರ್ಜನ ಶಿಬಿರ ಉತ್ತಮ ಕಾರ್ಯವಾಗಿದೆ. ಇದರಲ್ಲಿ ಭಾಗವಹಿಸುವ ಪ್ರತಿಯೊಬ್ಬರು ಇಲ್ಲಿ ತಿಳಿಸಿಕೊಡುವ ಮಾಹಿತಿಗಳು, ಸಲಹೆ ಸೂಚನೆಗಳನ್ನು ತಪ್ಪದೇ ಪಾಲಿಸಿ ಸುಂದರ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

ಇದನ್ನೂ ಓದಿ: Hospet News: 40ನೇ ಶ್ರೀ ಶಿವಚಿದಂಬರ ಗುರುಗಳ ಜಯಂತ್ಯೋತ್ಸವ ಸಂಪನ್ನ

ಟ್ರಸ್ಟ್ ತಾಲೂಕು ಯೋಜನಾಧಿಕಾರಿಗಳಾದ ಮಂಜುನಾಥ್ ನಾಯ್ಕ್, ರಾಘವೇಂದ್ರ ಎಸ್., ಸಮಿತಿ ಅಧ್ಯಕ್ಷ ಕಾಸಟ್ಟಿ ಉಮಾಪತಿ, ಟ್ರಸ್ಟ್ ನಿದೇರ್ಶಕ ಸತೀಶ್ ಶೆಟ್ಟಿ, ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯ ಹಿರಿಯಣ್ಣ, ಗೌಳಿಗರ ಸಮಾಜ ಅಧ್ಯಕ್ಷ ಗೌಳಿ ಯಲ್ಲಪ್ಪ, ಸಮಿತಿ ಪದಾಧಿಕಾರಿಗಳಾದ ಪ್ರಶಾಂತ್, ಜ್ಞಾನೇಶ್, ಪಂಪಾಪತಿ, ಗೌಳಿ ಸಣ್ಣೆಕಪ್ಪ, ಗೌಳಿ ರುದ್ರಪ್ಪ, ಗಾಂಜಿ ಹನುಮಂತಪ್ಪ, ಕುರಿ ಹನುಮಂತ ಪ್ಪ, ರಾಮಾಲೆಪ್ಪ, ಕಾಶಿ ಗವಿವೀರಭದ್ರಪ್ಪ, ಈರಣ್ಣ, ಕಾವಲಿ ಶಿವಪ್ಪ ನಾಯಕ್ ಇತರರಿದ್ದರು.

ಶಿಬಿರದಲ್ಲಿ ನಿತ್ಯ ಬೆಳಿಗ್ಗೆಯಿಂದ ರಾತ್ರಿವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ಪ್ರಮುಖ ವಾಗಿ ಯೋಗ, ವ್ಯಾಯಾಮ,ಸ್ವಚ್ಛತೆ, ಶ್ರಮದಾನ, ಆಪ್ತ ಸಲಹೆ, ಪ್ರಮುಖರಿಂದ ಮಾರ್ಗದರ್ಶನ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮ, ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ಶಿಬಿರದಲ್ಲಿ ಭಾಗವಹಿಸಿದವರಿಗೆ ಮಾಹಿತಿ ನೀಡಲಾಯಿತು.

ಶಿಬಿರದ ಸಮಾರೋಪ ಸಮಾರಂಭ ಜೂ.27ರಂದು ಜರುಗಲಿದೆ.

ಶಾಸಕ ಗವಿಯಪ್ಪ(MLA Gaviyappa), ಶ್ರೀಮುಪ್ಪಿನ ಬಸವಲಿಂಗ ಸ್ವಾಮೀಜಿ, ಶ್ರೀಪೂರ್ಣಾನಂದ ಭಾರತಿ ಮಾತಂಗಿ ಸ್ವಾಮೀಜಿ, ಸಮಾಜ ಸೇವಕರಾದ ರಾಣಿ ಸಂಯುಕ್ತ, ಸಿದ್ಧಾರ್ಥ ಸಿಂಗ್, ನಟರಾಜ ಬಾದಾಮಿ ಇತರರು ಭಾಗವಹಿಸಲಿದ್ದಾರೆ.