ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hospet News: 40ನೇ ಶ್ರೀ ಶಿವಚಿದಂಬರ ಗುರುಗಳ ಜಯಂತ್ಯೋತ್ಸವ ಸಂಪನ್ನ

ನಗರದ ಅಮರಾವತಿಯ ಶ್ರೀ ಯಾಜ್ಞವಲ್ಕ ಸೇವಾ ಟ್ರಸ್ಟ್ ವತಿಯಿಂದ ಶ್ರೀವಡಕರಾಯ ಸ್ವಾಮಿ ದೇಗುಲದಲ್ಲಿ 40ನೇ ಶ್ರೀ ಶಿವಚಿದಂಬರ ಗುರುಗಳ ಜಯಂತ್ಯೋ ತ್ಸವ ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ ಶ್ರೀ ಗುರುಗಳ ಭಾವಚಿತ್ರವನ್ನು ದೇವಸ್ಥಾನದಲ್ಲಿ ಸ್ಥಾಪಿಸಲಾಯಿತು. ನಂತರ ಕಾಕಡಾರತಿ, ರುದ್ರಾಭೀಷೇಕ, ಶ್ರೀ ಗುರುಗಳ ಜನೋತ್ಸವ ತೊಟ್ಟಿಲು ಸೇವೆ ಜರುಗಿತು.

40ನೇ ಶ್ರೀ ಶಿವಚಿದಂಬರ ಗುರುಗಳ ಜಯಂತ್ಯೋತ್ಸವ ಸಂಪನ್ನ

-

Ashok Nayak
Ashok Nayak Nov 10, 2025 7:59 PM

ಹೊಸಪೇಟೆ: ನಗರದ ಅಮರಾವತಿಯ ಶ್ರೀ ಯಾಜ್ಞವಲ್ಕ ಸೇವಾ ಟ್ರಸ್ಟ್ ವತಿಯಿಂದ ಶ್ರೀವಡಕರಾಯ ಸ್ವಾಮಿ ದೇಗುಲದಲ್ಲಿ 40ನೇ ಶ್ರೀ ಶಿವಚಿದಂಬರ ಗುರುಗಳ ಜಯಂತ್ಯೋ ತ್ಸವ ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ ಶ್ರೀ ಗುರುಗಳ ಭಾವಚಿತ್ರವನ್ನು ದೇವಸ್ಥಾನದಲ್ಲಿ ಸ್ಥಾಪಿಸಲಾಯಿತು. ನಂತರ ಕಾಕಡಾರತಿ, ರುದ್ರಾಭೀಷೇಕ, ಶ್ರೀ ಗುರುಗಳ ಜನೋತ್ಸವ ತೊಟ್ಟಿಲು ಸೇವೆ ಜರುಗಿತು.

ಇದನ್ನೂ ಓದಿ: Hospet News: ಹೊಚ್ಚ ಹೊಸ ವಿನ್ಯಾಸಗಳೊಂದಿಗೆ ಹೊಸಪೇಟೆಗೆ ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್‌ನ ಆಭರಣ ಪ್ರದರ್ಶನ!

ಶ್ರೀ ಚಿದಂಬರ ವ್ರತ ಹಾಗೂ ಕಥಾ ಶ್ರವಣದೊಂದಿಗೆ ಭಾಗವಹಿಸಿದ ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗವಾಯಿತು. ಟ್ರಸ್ಟ್ ಪ್ರಮುಖರಾದ ರಾಮರಾವ್, ವಾಸುದೇವ ಆಚಾರ್ಯ, ರಾಘವೇಂದ್ರ ರಾವ್, ಮಾಲುತೇಶ್ ರಾವ್, ಎಚ್. ಗುರುರಾಜ್ ಕುಲಕರ್ಣಿ, ಸಂಪದ ಗುರುರಾಜ್, ಗಿರೀಶ್ ದೀಕ್ಷಿತ್, ಪಾಂಡುರಂಗ ರಾವ್ ಇತರರಿದ್ದರು.

ಮಂತ್ರಾಲಯ ದಾಸ ಸಾಹಿತ್ಯ ಪ್ರಾಜೆಕ್ಟ್ ಜಿಲ್ಲಾ ಕೋ-ಆರ್ಡಿನೇಟರ್ ಅನಂತ ಪದ್ಮನಾಭ ಟ್ರಸ್ಟ್ ಪ್ರಮುಖರಿಗೆ ದಾಸರಾಯರ ಶೇಷವಸ್ತ್ರ ನೀಡಿ ಗೌರವಿಸಿದರು. ಮಹಿಳೆಯರಿಂದ ಭಜನೆ, ಸಾಮೂಹಿಕ ಕೀರ್ತನೆ ನಡೆಯಿತು.