ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಒಳಹರಿವು ಹೆಚ್ಚಳ ಹಿನ್ನೆಲೆ: ಕೃಷ್ಣಾ ನದಿ ಪಾತ್ರಕ್ಕೆ ನೀರು ಹರಿವು

ಒಳಹರಿವು ಹೆಚ್ಚಳ ಹಿನ್ನಲೆಯಲ್ಲಿ ಈ ವರ್ಷದಲ್ಲಿ‌ ಮೊದಲ ಬಾರಿ ಆಲಮಟ್ಟಿ ಜಲಾಶಯದ 14 ಗೇಟ್‌ಗಳನ್ನು ನೀರನ್ನು ಕೃಷ್ಣಾ ನದಿ ಪಾತ್ರಕ್ಕೆ ಶುಕ್ರವಾರದಿಂದ ಬಿಡಲಾಗುತ್ತಿದೆ. ಜಲಾಶಯದ ಬಲಭಾಗದ ಆಲಮಟ್ಟಿ ವಿದ್ಯುತ್ ಉತ್ಪಾದನಾ ಘಟಕದ ಮೂಲಕ 42,500 ಹಾಗೂ ಗೇಟ್ ಗಳ ಮೂಲಕ 25000 ಕ್ಯೂಸೆಕ್ ಸೇರಿ ಒಟ್ಟಾರೆ 67,500 ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ.

ಆಲಮಟ್ಟಿ: ಒಳಹರಿವು ಹೆಚ್ಚಳ ಹಿನ್ನಲೆಯಲ್ಲಿ ಈ ವರ್ಷದಲ್ಲಿ‌ ಮೊದಲ ಬಾರಿ ಆಲಮಟ್ಟಿ ಜಲಾಶಯದ 14 ಗೇಟ್‌ಗಳನ್ನು ನೀರನ್ನು ಕೃಷ್ಣಾ ನದಿ ಪಾತ್ರಕ್ಕೆ ಶುಕ್ರವಾರದಿಂದ ಬಿಡಲಾಗುತ್ತಿದೆ.

ಜಲಾಶಯದ ಬಲಭಾಗದ ಆಲಮಟ್ಟಿ ವಿದ್ಯುತ್ ಉತ್ಪಾದನಾ ಘಟಕದ ಮೂಲಕ 42,500 ಹಾಗೂ ಗೇಟ್ ಗಳ ಮೂಲಕ 25000 ಕ್ಯೂಸೆಕ್ ಸೇರಿ ಒಟ್ಟಾರೆ 67,500 ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ.

ಗುರುವಾರ 42,500 ಕ್ಯೂಸೆಕ್ ಇದ್ದ ಹೊರಹರಿವನ್ನು ಶುಕ್ರವಾರ ಬೆಳಿಗ್ಗೆ 8ಕ್ಕೆ ಹೆಚ್ಚಿಸಲಾಯಿತು.

ಗರಿಷ್ಠ 519.60 ಮೀಟರ್‌ ಎತ್ತರದಲ್ಲಿ123.081 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯದ ಜಲಾಶಯದಲ್ಲಿ ಶುಕ್ರವಾರ 518.6 ಮೀಟರ್‌ ಎತ್ತರದಲ್ಲಿಒಟ್ಟು 106.32 ಟಿಎಂಸಿ ನೀರು ಸಂಗ್ರಹವಾಗಿತ್ತು. ಒಳಹರಿವು 73,162 ಕ್ಯುಸೆಕ್‌ ಇತ್ತು.

ಇದನ್ನೂ ಓದಿ: Alamatti News: ಕೆ.ಪಿ.ಮೋಹನ ರಾಜ ಅವರಿಗೆ ಪುನರ್ವಸತಿ ಇಲಾಖೆಯ ಆಯುಕ್ತರ ಹೆಚ್ಚುವರಿ ಅಧಿಕಾರ

ಮಹಾರಾಷ್ಟ್ರದ ಪಶ್ಚಿಮಘಟ್ಟಗಳಲ್ಲಿ ವರುಣನ ಅರ್ಭಟ ಮುಂದುವರೆದಿದ್ದು, ಕೊಯ್ನಾ 77 ಮಿ.ಮೀ, ನವಜಾ 66, ಮಹಾಬಳೇಶ್ವರ 78, ರಾಧಾನಗರಿ 24, ಧೂದಗಂಗಾ 48 ಮಿ.ಮೀ ಮಳೆ ಯಾಗಿದೆ. ಗುರುವಾರಕ್ಕಿಂತ ಶುಕ್ರವಾರ ಮಳೆಯ ಅಬ್ಬರ ಕಡಿಮೆಯಾಗಿದೆ.

ಕೃಷ್ಣಾ ನದಿಗೆ ಅಪಾರ ನೀರು ಹರಿದು ಬರುತ್ತಿದೆ. ಕಲ್ಲೋಳ ಬ್ಯಾರೇಜ್‌ನಿಂದ ಅಪಾರ ನೀರನ್ನು ಕೃಷ್ಣಾ ನದಿಗೆ ಹರಿಸುತ್ತಿರುವುದರಿಂದ ಆಲಮಟ್ಟಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಅಧಿಕವಾಗಿದೆ.

270 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ: ಜಲಾಶಯದ ‌ಬಲಭಾಗದ ಆಲಮಟ್ಟಿ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಎಲ್ಲಾ ಆರು ಘಟಕಗಳ ಮೂಲಕ 270 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ ಎಂದು ಕೆಪಿಸಿಎಲ್ ಮೂಲಗಳು ತಿಳಿಸಿವೆ.

Alamatti

ಹವಾಮಾನ ಇಲಾಖೆಯ ಮುನ್ಸೂಚನೆ ಹಾಗೂ ಮೇಲ್ಬಾಗದ ಜಲಾನಯನ ಪ್ರದೇಶದಲ್ಲಿ ಸುರಿಯು ತ್ತಿರುವ ಮಳೆಯನ್ನು ಪರಿಗಣಿಸಿದರೆ, ಮುಂದಿನ ದಿನಗಳಲ್ಲಿ ಜಲಾಶಯಕ್ಕೆ ಒಳಹರಿವು ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ನೀರಿನ ಹೊರಹರಿವಿನ ಪ್ರಮಾಣವನ್ನು ಅಗತ್ಯವಿದ್ದರೆ ಮತ್ತಷ್ಟು ಪರಿಷ್ಕರಿಸುವ ಸಾಧ್ಯತೆಯೂ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡುತ್ತಿರುವುದರಿಂದ ಆಲಮಟ್ಟಿ ಯಿಂದ ಕೆಳಭಾಗದ ಕೃಷ್ಣಾ ನದಿಪಾತ್ರದಲ್ಲಿರುವ ಗ್ರಾಮಗಳ ನಿವಾಸಿಗಳು, ರೈತರು, ಮೀನುಗಾರರು ಹಾಗೂ ಸಾರ್ವಜನಿಕರು ನದಿಯ ದಡಕ್ಕೆ ಅನಗತ್ಯವಾಗಿ ತೆರಳದಂತೆ, ಜಾನುವಾರುಗಳನ್ನು ನದಿಗೆ ಇಳಿಸದಂತೆ ಹಾಗೂ ಮಕ್ಕಳನ್ನು ನದಿಯ ಸಮೀಪ ಬಿಡದಂತೆ ಜಲಾಶಯ ಆಡಳಿತ ಮನವಿ ಮಾಡಿದೆ.

ಸಂಬಂಧಿಸಿದ ತಾಲೂಕು ಹಾಗೂ ಗ್ರಾಮ ಮಟ್ಟದ ಅಧಿಕಾರಿಗಳು ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡುವಂತೆ ಸೂಚಿಸಲಾಗಿದೆ.

ನದಿ ತೀರಕ್ಕೆ ಜನ ಜಾನುವಾರು ಸುಳಿಯದಂತೆ ಜನರಲ್ಲಿಜಾಗೃತಿ ಮೂಡಿಸಲಾಗುತ್ತಿದೆ. ಡಂಗೂರ ಸಾರುವುದು ಹಾಗೂ ಧ್ವನಿವರ್ಧಕ ಮೂಲಕ ಜನರನ್ನು ಎಚ್ಚರಿಸಲಾಗುತ್ತಿದೆ.

''ಜಲಾಶಯದಿಂದ 4 ಲಕ್ಷ ಕ್ಯುಸೆಕ್‌ಗಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಬಿಟ್ಟಾಗ ಮಾತ್ರ ತಾಲೂಕಿನ ಮಸೂತಿ ಗ್ರಾಮದ ಜನವಸತಿ ಪ್ರದೇಶಕ್ಕೆ ಸ್ವಲ್ಪ ನೀರು ಬರುತ್ತದೆ ಉಳಿದಂತೆ ತಾಲೂಕಿನ ಯಾವುದೇ ಜನವಸತಿ ಪ್ರದೇಶಗಳಿಗೆ ನೀರು ನುಗ್ಗುವುದಿಲ್ಲ. ಮುಂಜಾಗ್ರತೆ ಕ್ರಮವಾಗಿ ಈಜುಗಾರರು, ಉರಗ ತಜ್ಞರು, ಸುಸಜ್ಜಿತ ಬೋಟ್‌ಗಳನ್ನು ಗುರ್ತು ಮಾಡಿಟ್ಟುಕೊಳ್ಳಲಾಗಿದೆ,'' ಎಂದು ತಹಶೀಲ್ದಾರ್ ಎ.ಡಿ. ಅಮರವಾದಗಿ ತಿಳಿಸಿದರು.

ಆಲಮಟ್ಟಿ ಜಲಾಶಯದ ನೀರಿನ ಮಾಹಿತಿ;

ಅಣೆಕಟ್ಟು ಗರಿಷ್ಠ ಸಾಮರ್ಥ್ಯ : 123.081 ಟಿಎಂಸಿ

ಇಂದಿನ ನೀರಿನ ಸಂಗ್ರಹ: 106.323 ಟಿಎಂಸಿ

ಗರಿಷ್ಠ ಎತ್ತರ; 519.60 ಮೀ.

ಇಂದಿನ ಮಟ್ಟ; 518.60 ಮೀ.

ಒಳ ಹರಿವು: 73162 ಕ್ಯೂಸೆಕ್.

ಹೊರಹರಿವು: 67,500 ಕ್ಯೂಸೆಕ್.