Indi News: ಹಿಂದುತ್ವ ವಿರೋಧಿ ಕಾಂಗ್ರೆಸ್ ಸಹಜ ಗುಣ: ಹಣಮಂತರಾಯಗೌಡ ಪಾಟೀಲ
ಬಯೋ ಮ್ಯಾಟ್ರಿಕ್ ಹೆಸರು ಬಂದು ಅವರಿಗೆ 370 ರೂ. ಕೂಲಿಯನ್ನು ನೇರವಾಗಿ ಖಾತೆಗೆ ನೀಡುವ ಯೋಜನೆ. ಹಿಂದೆ ಕಾಂಗ್ರೆಸ್ ಸುಖಾ ಸುಮ್ಮನೆ ಯಂತ್ರಗಳಿಂದ ಕೆಲಸ ಮಾಡಿಸಿ ಎಲ್ಲೂ ಒಂದು ಕಡೆ ಕುಳಿತು ಹಣಪಡೆಯುತ್ತಿತ್ತದ್ದರು. ಆದರೆ, ದುಡಿಯುವ ಕೈಗಳಿಗೆ ಕೆಲಸ ಸಿಗಲಿ ಜೆ.ಸಿ.ಬಿ ಹಿಟ್ಯಾಚ್ ಯಂತ್ರ ಗಳನ್ನು ಹಚ್ಚಿ ಹಣ ಲಪಾಟಾಯಿಸುತ್ತಿದ್ದಾರೆ ಎಂಬ ಕೇಂದ್ರಕ್ಕೆ ದೂರು ಬಂದ ಹಿನ್ನಲೆಯಲ್ಲಿ ಕೇಂದ್ರ ಸರಕಾರ ಇದನ್ನು ತಪ್ಪಿಸಿದೆ.
ಮಂಡಲ ಅಧ್ಯಕ್ಷ ಹಣಮಂತರಾಯಗೌಡ ಪಾಟೀಲ ಮಾತನಾಡುತ್ತಿರುವುದು. -
ಹಿಟ್ಯಾಚ್, ಜೆಸಿಬಿ ಯಂತ್ರಗಳನ್ನು ತಪ್ಪಿಸಿ ದುಡಿಯುವ ಕೈಗಳಿಗೆ ಉದ್ಯೋಗ ರಾಮಜೀ ಯೋಜನೆ.
ಇಂಡಿ: ಎಬಿಜಿ ರಾಮ್‌ಜೀ ಯೋಜನೆ ರಾಮನ ಉದ್ಭವವನ್ನು ಕಾಂಗ್ರೆಸಿಗರಿಗೆ ಸಹಿಸಲಾಗುತ್ತಿಲ್ಲ. ಹಿಂದುತ್ವ, ರಾಮನ ವಿರೋಧ ಕಾಂಗ್ರೆಸಿಗರಿಗೆ ಸಹಜವಾಗಿದೆ. ಗುಲಾಬಿ, ರಾಮ, ಹಿಂದುತ್ವ ಹೆಸರು ಬಂದರೆ ಸಾಕು ಬೇಕಾಬಿಟ್ಟಿ ವರ್ತಿಸುತ್ತಾರೆ. ಈ ಅಧಿವೇಶನ ಕರೆದಿರುವುದು ರಾಮನಿಗಾಗಿ ಹೊರತು ಜನರ ,ರಾಜ್ಯದ ಹಿತಚಿಂತನೆಗಾಗಿ ಅಲ್ಲ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಹಣಮಂತರಾಯಗೌಡ ಪಾಟೀಲ ಕಾಂಗ್ರೆಸ್ ವಿರುಧ್ಧ ಕಿಡಿಕಾರಿದರು.
ಈ ಯೋಜನೆ ಜೋಡಿಸಿದ್ದಲ್ಲ ಇದು ವಿಕಸಿತ ಭಾರತ ಗ್ಯಾರಂಟಿ ರೋಜಗಾರ್ ಅಜೀಕಾಮಿಷನ್ ಎಂಬುದು ರಾಮ ಎಂದು ಬಂದಿದೆ. ಇ ಯೋಜನೆಯಲ್ಲಿ ಇದೊಂದು ರೀತಿಯ ರಾಮೋಧ್ಬವ ಆಗಿದೆ. ನರೆಗಾ ಯೋಜನೆಯನ್ನು ಇನ್ನಷ್ಟು ಗಟ್ಟಿಗೊಳಿಸಿದ ಕಾಯ್ದೆ ಇದಾಗಿದೆ. ಕೇಂದ್ರ ಸರಕಾರ ಜಾರಿ ಮಾಡಿದ ಎಬಿಜಿ ರಾಮಜೀ 100 ದಿನಗಳ ಬದಲು 125 ದಿನ ಕೆಲಸ ಮಾಡಲಾಗಿದೆ.
ಬಯೋ ಮ್ಯಾಟ್ರಿಕ್ ಹೆಸರು ಬಂದು ಅವರಿಗೆ 370 ರೂ. ಕೂಲಿಯನ್ನು ನೇರವಾಗಿ ಖಾತೆಗೆ ನೀಡುವ ಯೋಜನೆ. ಹಿಂದೆ ಕಾಂಗ್ರೆಸ್ ಸುಖಾ ಸುಮ್ಮನೆ ಯಂತ್ರಗಳಿಂದ ಕೆಲಸ ಮಾಡಿಸಿ ಎಲ್ಲೂ ಒಂದು ಕಡೆ ಕುಳಿತು ಹಣಪಡೆಯುತ್ತಿತ್ತದ್ದರು ಆದರೆ ದುಡಿಯುವ ಕೈಗಳಿಗೆ ಕೆಲಸ ಸಿಗಲಿ ಜೆ.ಸಿ.ಬಿ ಹಿಟ್ಯಾಚ್ ಯಂತ್ರಗಳನ್ನು ಹಚ್ಚಿ ಹಣ ಲಪಾಟಾಯಿಸುತ್ತಿದ್ದಾರೆ ಎಂಬ ಕೇಂದ್ರಕ್ಕೆ ದೂರು ಬಂದ ಹಿನ್ನಲೆ ಯಲ್ಲಿ ಕೇಂದ್ರ ಸರಕಾರ ಇದನ್ನು ತಪ್ಪಿಸಿದೆ. ಇದು ನೇರ ದುಡಿಯುವ ವರ್ಗದವರಿಗೆ ಸಹಾಯ ವಾಗುತ್ತದೆ ಕೊಳ್ಳೆ ಹೊಡೆಯುವರಿಗೆ ಕಡಿವಾಣ ಹಾಕಿರುವ ರಾಮಜೀ ಯೋಜನೆ ಎಂದು ಕಾಂಗ್ರೆಸ್ ನಡೆ ಖಂಡಿಸಿದರು.
ಇದನ್ನೂ ಓದಿ: Indi News: ವಿಮೆ ಪರಿಹಾರ ಜಮೆ ಮಾಡಿ: ಬಿಜೆಪಿ ಆಗ್ರಹ
ಕೆಂಪು, ರಾಮ, ಕೇಸರಿ ಕೆಲ ಭಾರತದ ಸನಾತನ ಸಂಸ್ಕೃತಿಗಳು ಕಂಡರೆ ಸಾಕು ಕಾಂಗ್ರೆಸಿಗರು ಪುಟಿ ದೇಳುವ ಸ್ವಭಾವ, ಕಾಂಗ್ರೆಸ್ 70 ವರ್ಷ ದೇಶ ಒಡೇದಾಳುವ ನೀತಿಯಲ್ಲಿಯೇ ಅಧಿಕಾರ ಹಿಡಿದಿದೆ ವಿನಹ ಪಾರದರ್ಶಕ ನಡೆಶೂನ್ಯ. ರಾಜ್ಯದ ಜನತೆ ಕಾಂಗ್ರೆಸ್ ಆಡಳಿತದಿಂದ ಬೇಸರವಾಗಿದೆ ಮುಂಬ ರುವ ದಿನಗಳಲ್ಲಿ ಧೂಳೀಪಟವಾಗುತ್ತದೆ. ಗ್ಯಾರಂಟಿ ಯೋಜನೆಯಲ್ಲಿ ಇಡೀ ರಸ್ತೆಗಳು ಹಾಳಾಗಿವೆ. ಸಾರಿಗೆ ವಾಹನಗಳು ಸರಿಯಾಗಿ ಒಂದು ಊರಿಗೆ ಹೋಗದೆ ದಾರಿಯಲ್ಲಿ ಕೆಟ್ಟು ನಿಲ್ಲುತ್ತಿವೆ. ಸ್ಟೇರಿಂಗ್ , ಗೇರ್‌ಗಳಿಗೆ ಸೀರೆ ಹರಿದ ಬಟ್ಟೆ ಕಟ್ಟಿ ಸಾರಿಗೆ ಚಾಲಕರು ವಾಹನ ಚಲಾಯಿಸುತ್ತಿದ್ದಾರೆ. ರಾಜ್ಯ ವಾಳುವರಿಗೆ ನಾಚೀಕೆಯಾಗಬೇಕು. ನಿಮ್ಮ ಗ್ಯಾರಂಟಿ ಯೋಜನೆ ಯಿಂದ ರಾಜ್ಯ ಹಳ್ಳ ಹಿಡಿದಿದೆ ನಿಮ್ಮ ಗ್ಯಾರಂಟಿ ಮುಗಿಯಿತು ಎಂದು ಖಾರವಾಗಿ ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ ಆರೋಪಿಸಿದರು.
ಶೀಲವಂತ ಉಮರಾಣಿ ಮಾತನಾಡಿ, ಮನರೇಗಾ ಪರ ಕಾಂಗ್ರೆಸ್ ಜನರಿಗೆ ತಪ್ಪು ಹೇಳಿಕೆ ನೀಡಿ ಜನರಿಗೆ ದಾರಿ ತಪ್ಪಿಸುತ್ತಿದ್ದಾರೆ. ಎಬಿ ರಾಮಜೀ ಇದು ಸತ್ಯದ ಪರ ಇದ್ದ ಯೋಜನೆ , ದುಡಿಯುವ ಕೈಗಳಿಗೆ ನೇರ ಉದ್ಯೋಗ ಸಿಗಲಿ ರಾಜ್ಯದ ಬಡವರ ತುತ್ತಿನ ಚೀಲ ತುಂಬಿಸಿಕೊಳ್ಳಲು ವಲಸೆ ಹೋಗ ಬಾರದು. 100 ದಿನದ ಬದಲಿ 125 ದಿನ ಕೆಲಸ ಮಾಡಲಿ ಎಂದು ರಾಮಜೀ ಉದ್ದೇಶ, ಈ ಹಿಂದೆ ದುಡಿಯವರಿಗೆ ಕೆಲಸ ಹಚ್ಚದೆ ಜೆಸಿಬಿ ,ಹಿಟ್ಯಾಚ್ ಬಳಸಿ ಬಡವರ ಬ್ಯಾಂಕ ಖಾತೆಗೆ ಹಣ ಜಮಾ ಮಾಡಿ ಅವರಿಂದ ಮರಳಿ ಪಡೆಯುತ್ತಿದ್ದರು ಇದನ್ನು ನಮ್ಮ ಕೇಂದ್ರ ಸರಕಾರ ತಪ್ಪಿಸಿದೆ. ಸತ್ಯ ಯಾವತ್ತೂ ಕಾಂಗ್ರೆಸ್ ಜನರಿಗೆ ಹೇಳೋದಿಲ್ಲ ಎಂದರು. ಬಿಜೆಪಿ ಜಿಲ್ಲಾ ಮುಖಂಡ ಅನಿಲ ಜಮಾದಾರ ಮಾತನಾಡಿದರು.
ಪ್ರೊ.ಸಿದ್ದಲಿಂಗ ಹಂಜಗಿ, ಮಲ್ಲಿಕಾರ್ಜುನ ಕೀವುಡೆ, ದೇವೇಂದ್ರ ಕುಂಬಾರ, ರಮೇಶ ಧರೇನವರ್, ಮಳುಗೌಡ ಪಾಟೀಲ, ಸತೀಶಗೌಡ ಪಾಟೀಲ,ಮಹಾದೇವ ರಜಪೂತ ಸೇರಿದಂತೆ ಅನೇಕ ಮುಖಂಡರು ಇದ್ದರು.