Indi News: ವಿಮೆ ಪರಿಹಾರ ಜಮೆ ಮಾಡಿ: ಬಿಜೆಪಿ ಆಗ್ರಹ
ಬೆಳೆ ವಿಮೆ ತುಂಬಿದ ರೈತರಿಗೆ ಇದುವರೆಗೂ ಪರಿಹಾರ ಮೊತ್ತ ಜಮಾ ಆಗಿಲ್ಲ. ಅಕಾಲಿಕ ಮಳೆ ಯಿಂದಾಗಿ ಜಿಲ್ಲಾದ್ಯಂತ ರೈತರ ಎಲ್ಲ ಬೆಳೆಗಳು ಸಂಪರ‍್ಣ ಹಾಳಾಗಿ ಹೋಗಿದ್ದು, ಈ ಕೂಡಲೇ ವಿಮಾ ಮೊತ್ತ ಜಮಾ ಮಾಡಲು ಸರ್ಕಾರ ಮುಂದಾಗಬೇಕು. ಇಲ್ಲವಾದರೆ 15 ದಿನಗಳ ನಂತರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ
-
ಇಂಡಿ: ರಾಜ್ಯ ಕಾಂಗ್ರೆಸ್ ಸರ್ಕಾರ ನಿಷ್ಕ್ರಿಯವಾಗಿದ್ದು, ಬೆಳೆ ಹಾನಿಯಾದ ರೈತರಿಗೆ ವಿಮಾ ಪರಿಹಾರ ಜಮಾ ಮಾಡಿಲ್ಲ. ನರೇಗಾ ಯೋಜನೆಯ ಸದ್ಬಳಕೆ ತಿಳಿಯದೆ ಕಾಂಗ್ರೆಸ್ ಸರ್ಕಾರ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ಇಂಡಿ ಮಂಡಲ ಅಧ್ಯಕ್ಷ ಹಣಮಂತರಾಯಗೌಡ ಪಾಟೀಲ ಆರೋಪಿಸಿದರು.
ಅವರು ನಗರದ ಸಿಂದಗಿ ರಸ್ತೆಯಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಬೆಳೆ ವಿಮೆ ತುಂಬಿದ ರೈತರಿಗೆ ಇದುವರೆಗೂ ಪರಿಹಾರ ಮೊತ್ತ ಜಮಾ ಆಗಿಲ್ಲ. ಅಕಾಲಿಕ ಮಳೆ ಯಿಂದಾಗಿ ಜಿಲ್ಲಾದ್ಯಂತ ರೈತರ ಎಲ್ಲ ಬೆಳೆಗಳು ಸಂಪೂರ್ಣ ಹಾಳಾಗಿ ಹೋಗಿದ್ದು, ಈ ಕೂಡಲೇ ವಿಮಾ ಮೊತ್ತ ಜಮಾ ಮಾಡಲು ಸರ್ಕಾರ ಮುಂದಾಗಬೇಕು. ಇಲ್ಲವಾದರೆ, 15 ದಿನಗಳ ನಂತರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈಗಾಗಲೇ, ಕಲಬುರಗಿ, ಬೀದರ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ಬೆಳೆ ವಿಮಾ ಮೊತ್ತ ರೈತರ ಖಾತೆಗೆ ಜಮಾ ಮಾಡಲಾಗಿದೆ. ಆದರೆ ನಮ್ಮ ಜಿಲ್ಲೆಯಲ್ಲಿ ಇದುವರೆಗೂ ಒಬ್ಬ ರೈತರಿಗೂ ಪರಿಹಾರ ಮೊತ್ತ ಜಮಾ ಆಗಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: Indi News: ವಿದ್ಯಾರ್ಥಿ ಜೀವನದಲ್ಲಿ ವ್ಯಕ್ತಿತ್ವ ವಿಕಸನ ಹಾಗೂ ಸ್ವಚ್ಛತಾ ಶ್ರಮದಾನ ಮುಖ್ಯ: ಉಪನ್ಯಾಸಕಿ ಶಾಹಿನಾ ಪಾಟೀಲ ಅಭಿಮತ
ನರೇಗಾ ಹೆಸರು ಬದಲಾವಣೆ ಮಾಡಿದ್ದಕ್ಕೆ ಕಾಂಗ್ರೆಸ್ ಪಕ್ಷದವರು ಸಾಕಷ್ಟು ಹೋರಾಟ ನಡೆಸು ತ್ತಿದ್ದಾರೆ. ನರೇಗಾದಲ್ಲಿ ಏನೆಲ್ಲ ಬದಲಾವಣೆ ಆಗಿದೆ ಎಂಬುದರ ಕುರಿತು ಕೂಲಂಕುಶವಾಗಿ ವೀಕ್ಷಿಸಿ ಹೋರಾಟ ಮಾಡಿ, ಏಕೆಂದರೆ ಈ ಮೊದಲು 100 ದಿನ ಇದ್ದದ್ದನ್ನು 125 ದಿನಕ್ಕೆ ಏರಿಕೆ ಮಾಡಲಾ ಗಿದೆ. ಈ ಮೊದಲು ಪ್ರತಿಶತ 100ರಷ್ಟು ಅನುದಾನವನ್ನೂ ಕೇಂದ್ರ ಸರ್ಕಾರ ನೀಡುತ್ತಿದ್ದು, ಆ ಯೋಜನೆಯ ಬಗ್ಗೆ ಕಾಳಜಿ ವಹಿಸಲು ರಾಜ್ಯ ಸರ್ಕಾರಗಳು ನಿರಾಕರಿಸಿದ್ದವು. ಹೀಗಾಗಿ ರಾಜ್ಯದ 40 ಪ್ರತಿಶತ ಅನುದಾನ ನೀಡಿದರೆ ಅವರಿಗೂ ಆ ಯೋಜನೆಯ ಬಗ್ಗೆ ಕಳಕಳಿ ಇರುತ್ತದೆ ಎಂಬ ಆಶಯ ದೊಂದಿಗೆ ಯೋಜನೆಯನ್ನು ಜಾರಿ ಮಾಡಲಾಗಿದೆ ಎಂದರು.
ಬೆಂಗಳೂರು ಭಾಗದಲ್ಲಿ ತಾಲ್ಲೂಕಿಗೆ ಒಂದು ಹಾಪ್ಕಾಮ್ಸ್ ಮಳಿಗೆಯನ್ನು ಸರ್ಕಾರದಿಂದಲೇ ತೆರೆಯ ಲಾಗಿದೆ. ಇದರಿಂದ ರೈತರು ನೇರವಾಗಿ ಹಾಪ್ಕಾಮ್ಸ್ ಮೂಲಕ ತಮ್ಮ ತರಕಾರಿ ಬೆಳೆಗಳನ್ನು ಇತರೆಡೆ ಸಾಗಿಸಲು ಅನುಕೂಲವಾಗುತ್ತದೆ. ಆದ್ದರಿಂದ ನಮ್ಮ ಭಾಗದಲ್ಲಿಯೂ ಒಂದು ಹಾಪ್ಕಾಮ್ಸ್ ಮಳಿಗೆ ತೆರೆಯಬೇಕೆಂದು ಆಗ್ರಹಿಸಿದರು.
ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ ಮಾತನಾಡಿ, ತಾಲ್ಲೂಕಿನಾದ್ಯಂತ ಎಲ್ಲ ರಸ್ತೆಗಳು ಹದಗೆಟ್ಟಿವೆ. ರೈತರಿಗೆ ವಿಮಾ ಮೊತ್ತ ಜಮೆ ಆಗಿಲ್ಲ. ಹೋರಾಟ ಮಾಡಿದಾಗ ಕಬ್ಬಿಗೆ ದರ ನಿಗದಿ ಮಾಡಲಾಗಿದೆ. ನಿಂಬೆಗೂ ದರ ನಿಗದಿ ಮಾಡುವಂತೆ ಹೋರಾಟ ಮಾಡಲಾಗುತ್ತಿದೆ. ಶೀಘ್ರದಲ್ಲಿಯೇ ವಿವಿಧ ಸಮಸ್ಯೆಗಳ ಇತ್ರ‍್ಥಕ್ಕಾಗಿ ಹೋರಾಟ ನಡೆಸುತ್ತೇವೆ ಎಂದರು.
ಅನೀಲ ಜಮಾದಾರ, ಮಲ್ಲಿಕಾರ್ಜುನ ಕಿವುಡೆ, ದೇವೆಂದ್ರ ಕುಂಬಾರ, ಸಂತೋಶ ಪಾಟೀಲ ಸೇರಿದಂತೆ ಇನ್ನಿತರರು ಇದ್ದರು.