ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Indi News: ಜು.13-14ರವರೆಗೆ ಶ್ರೀಮಾತಾ ದುರ್ಗಾದೇವಿಯ ಜಾತ್ರೆ ಅದ್ದೂರಿ ಆಚರಣೆ

ನವಮಿ ಮಂಗಲ ಕಾರ್ಯಾಲಯದ ಸಭಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಜು.13ರಂದು ರಾತ್ರಿ ಮರಾಠಿ ಕಲಾಪತ್ರ ಕೋಲ್ಹಾಪೂರ ಇವರಿಂದ ಮನಂರಜಾ ಕಾರ್ಯ ಕ್ರಮ ಮತ್ತು ಜು.14 ರಂದು ಬೆಳಿಗ್ಗೆ 5 ಗಂಟೆಗೆ ಶ್ರೀದುರ್ಗಾಮಾತೆಗೆ ಮಹಾ ಮಂಗಳಾರತಿ , ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಧ್ಯಪ್ರದೇಶ, ರಾಜಸ್ಥಾನ, ಅಂತರಾಷ್ಟ್ರೀಯ ಕಲಾವಿದ ರಿಂದ ಹಾಗೂ ಕರ್ನಾಟಕ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಗಳು ಜರುಗುವವು,

ದುರ್ಗಾದೇವಿ ಜಾತ್ರಾಮಹೋತ್ಸವದ ಪ್ರಯುಕ್ತ ಶ್ರೀ ಜಗನು ಮಹಾರಾಜ ಹಾಗೂ ಬಂಜಾರ ಸಮುದಾಯದ ಮುಖಂಡರು ಪತ್ರಿಕಾಗೋಷ್ಠಿ ಕರೆದಿರುವುದು.

ಇಂಡಿ: ಕರ್ನಾಟಕ ತಾಂಡಾ ಅಭಿವೃದ್ದಿ ಸಹಯೋಗದೊಂದಿಗೆ ಸೋಮದೇವರಹಟ್ಟಿ ತಾಂಡಾ ನಂ,1ರಲ್ಲಿ ಇದೆ, ಜು.13ರಿಂದ 14ರವರೆಗೆ ಶ್ರೀಮಾತಾ ದುರ್ಗಾದೇವಿಯ ಜಾತ್ರೆ ಪ್ರತಿವರ್ಷದಂತೆ ಈ ವರ್ಷವೂ ಅತೀ ಅದ್ದೂರಿಯಾಗಿ ಆಚರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಧರ್ಮದರ್ಶಿ ಜಗನು ಮಹಾರಾಜ ಹೇಳಿದರು.

ನವಮಿ ಮಂಗಲ ಕಾರ್ಯಾಲಯದ ಸಭಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಜು.13ರಂದು ರಾತ್ರಿ ಮರಾಠಿ ಕಲಾಪತ್ರ ಕೋಲ್ಹಾಪೂರ ಇವರಿಂದ ಮನಂರಜಾ ಕಾರ್ಯ ಕ್ರಮ ಮತ್ತು ಜು.14 ರಂದು ಬೆಳಿಗ್ಗೆ 5 ಗಂಟೆಗೆ ಶ್ರೀದುರ್ಗಾಮಾತೆಗೆ ಮಹಾ ಮಂಗಳಾರತಿ , ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಧ್ಯಪ್ರದೇಶ, ರಾಜಸ್ಥಾನ, ಅಂತರಾಷ್ಟ್ರೀಯ ಕಲಾವಿದ ರಿಂದ ಹಾಗೂ ಕರ್ನಾಟಕ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಗಳು ಜರುಗುವವು,

ಮಧ್ಯಾಹ್ನ 1 ಗಂಟೆಗೆ ಬೃಹತ್ ವೇದಿಕೆ ಕಾರ್ಯಕ್ರಮ ಧರ್ಮದರ್ಶಿಗಳಾದ ಶ್ರೀ ಜಗನು ಮಹಾರಾಜ ದಿವ್ಯಸಾನಿಧ್ಯ ಹಾಗೂ ಅಧ್ಯಕ್ಷತೆ ವಹಿಸಲ್ಲಿದ್ದಾರೆ.

ಇದನ್ನೂ ಓದಿ: Indi News: ದೇಶ ಸೇವೆ ಮಾಡುವುದು ಪವಿತ್ರವಾದ ಕಾರ್ಯ

ಪ್ರಕಾಶ ಮಹಾರಾಜ ಹಾಗೂ ಇನ್ನುಳಿದ ಬಂಜಾರ ಸಮುದಾಯದ ಅನೇಕ ಪೂಜ್ಯರು ಪಾವನ ಸಾನಿಧ್ಯ ವಹಿಸಲಿದ್ದು, ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಮೂಲಭೂತ ಸೌಕರ್ಯ ಸಚಿವರಾದ ಡಾ.ಎಂ.ಬಿ ಪಾಟೀಲ, ಮಹಾರಾಷ್ಟ್ರ ಉಪಮುಖ್ಯಮಂತ್ರಿಯಾದ ಏಕನಾಥ ಸಿಂಧೆ, ಕೇಂದ್ರ ಇಂಧನ ಸಚಿವರಾದ ಶ್ರೀಪಾದ ನಾಯಿಕ, ನಂತರ ಬಾಲಿವುಡ್ ನಟ ಗೋವಿಂದ, ಮಹಾರಾಷ್ಟ್ರಸರಕಾರದ ಬೃಹತ್ ಕೈಗಾರಿಕಾ ಸಚಿವ ಉದಯ ಸಾವಂತ್, ಭಾರತ ಸರ್ಕಾರ ರೈಲ್ವೇ ಸಚಿವ ವಿ.ಸೋಮಣ್ಣ, ತೆಲಂಗಾಣ ಉಪಸಭಾಪತಿ ಜಾಟೋಟ ರಾಮಚಂದ್ರ ನಾಯಿಕ, ಗೋವಾ ರಾಜ್ಯದ ಶಾಸಕ ಮೈಕಲ್ ಲೋಬೋ, ಕರ್ನಾಟಕ ರಾಜ್ಯ ವಿಧಾನ ಸಭಾ ಸಭಾಪತಿ ರುದ್ರಪ್ಪ ಲಮಾಣಿ, ವಿಧಾನ ಪರಿಷತ್ ಸದಸ್ಯ ಸುನೀಲ ಗೌಡ ಪಾಟೀಲ, ಜಯದೇವ ನಾಯಿಕ ತಾಂಡಾ ಅಭಿವೃದ್ದಿ ನಿಗಮ ಬೆಂಗಳೂರು, ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಮುಂಬೈ ಹಾಗೂ ಯಾತ್ರಾ ಕಮೀಟಿ ಚೇರಮನ್ ಶಂಕರ ಪವಾರ ಉಪಾಧ್ಯಕ್ಷ ಕೆ.ಎಲ್ ನಾಯಿಕ ಸೇರಿದಂತೆ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಇತರೆ ರಾಜ್ಯಗಳ ಬಂಜಾರ ಸಮುದಾಯದ ಹಾಗೂ ಇತರೆ ಸಮುದಾಯದ ಗಣ್ಯರು, ರಾಜಕೀಯ ಧುರೀಣರು, ಉದ್ದಿಮೆ ದಾರರು, ಗುತ್ತಿಗೆದಾರ ಸಮ್ಮುಖದಲ್ಲಿ ಪ್ರಮುಖ ವೇದಿಕೆಯಲ್ಲಿ ಬೃಹತ್ ಕಾರ್ಯಕ್ರಮ ಜರುಗಲಿದೆ.

ಬಾಲಿವುಡ್ ನಟ ಗೋವಿಂದ ಇವರಿಂದ ಸಾಂಸ್ಕೃತಿಕ ಮನರಂಜನೆ, ರಾತ್ರಿ 10 ಗಂಟೆಗೆ ಆಯುಧ್ಧ ಪೂಜೆ ಮತ್ತು ರಾತ್ರಿ 11 ಗಂಟೆಗೆ ಬಂಜಾರ ಸಮುದಾಯದ ಕುಲಬಾಂಧವರಿಂದ ಬಂಜಾರ ಭಜನೆ ಗಳು ನಡೆಯಲ್ಲಿದ್ದು ಎಲ್ಲ ಬಂಜಾರ ಸಮುದಾಯದ ಬಂಧುಗಳು ಹಾಗೂ ದುರ್ಗಾದೇವಿಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಜಗನು ಮಹಾರಾಜರು ಮನವಿ ಮಾಡಿದ್ದಾರೆ.

ಮಾಜಿ ತಾಲೂಕಾ ಪಂಚಾಯತ ಅಧ್ಯಕ್ಷ ಶೇಖರ ನಾಯಕ, ಉದ್ದಿಮೆದಾರ ಹಾಗೂ ಪ್ರಥಮ ದರ್ಜೆಯ ಗುತ್ತಿಗೆದಾರರಾದ ಭೀಮು ರಾಠೋಡ (ಸೇಟ್), ಪ್ರಕಾಶ ಮಹಾರಾಜರು, ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ತಾಲೂಕಾ ಅಧ್ಯಕ್ಷ ಸಂಜು ಚವ್ಹಾಣ, ಮಾಜಿ ಪುರಸಭೆ ಅಧ್ಯಕ್ಷ ಲಿಂಬಾಜೀ ರಾಠೋಡ, ಡಾ. ರಮೇಶ ರಾಠೋಡ, ಉಪನ್ಯಾಸಕ ವಿಜಯಕುಮಾರ ರಾಠೋಡ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ದತೆ ಹಾಗೂ ಇಡೀ ತಂಡಾ ಸಮುದಾಯದ ಜನರನ್ನು ಕರೆ ತರುವುದ ರೊಂದಿಗೆ ಹಾಗೂ ಇತರೆ ಸಮುದಾಯದ ಜನರನ್ನು ಸುಮಾರು 1 ಲಕ್ಷಕ್ಕಿಂತ ಅಧಿಕ ಭಕ್ತರನ್ನು ಸೇರಿಸುವ ವಿಶ್ವಾಸ ವ್ಯಕ್ತಪಡಿಸಿದ ಅವರು ಬಂಜಾರ ಸಮುದಾಯದಲ್ಲಿ ಉಳ್ಳವರು ಇಲ್ಲದ ಜನರಿಗೆ ಸಹಾಯ ಹಸ್ತ ನೀಡಿ . ಬೇರೆ ಸಮುದಾಯದ ಜನರೊಂದಿಗೆ ಪ್ರೀತಿ, ವಿಶ್ವಾಸದ ಬದುಕು ಸಾಗಿಸೋಣ ಎಂದು ಕರೆ ನೀಡಿದರು.

ಹರೀಶ್ಚಂದ್ರ ಪವಾರ, ರಂಗನಾಥ ಚವ್ಹಾಣ, ಸಂಜು ಜಾಧವ, ಧರ್ಮು ರಾಠೋಡ, ಗಣೇಶ ರಾಠೋಡ, ರಾಜೇಶ ಪವಾರ, ಸುರೇಶ ರಾಠೋಡ, ಅಶೋಕ ಜಾಧವ,ಪಾಪು ಪವಾರ, ಗುಂಡು ಚವ್ಹಾಣ,ಜಯರಾಮ ರಾಠೋಡ ಸೇರಿದಂತೆ ಅನೇಕ ಬಂಜಾರ ಸಮುದಾಯದ ಮುಖಂಡರು ರಾಜಕೀಯ ಧುರೀಣರು ಗಣ್ಯರು ಯುವನಾಯಕರು ಇದ್ದರು.