Indi News: ದೇಶ ಸೇವೆ ಮಾಡುವುದು ಪವಿತ್ರವಾದ ಕಾರ್ಯ
ದೇಶ ಸೇವೆಗೆ ಗಂಡು ಹೆಣ್ಣು ಬೇಧವಿಲ್ಲ ವಿದ್ಯಾರ್ಥಿ ದೆಸೆಯಿಂದಲೇ ದೇಶ ಸೇವೆ ಮಾಡುವ ಗುರಿ ಇಟ್ಟುಕೊಂಡು ಪ್ರಯತ್ನಿಸ ಬೇಕು. ಒಬ್ಬ ರೈತ ಹಾಗೂ ಒಬ್ಬ ಸೈನಿಕ ಈ ದೇಶಕ್ಕೆ ದೊಡ್ಡ ಶಕ್ತಿ ಇವರಿಬ್ಬರ ನಿಸ್ವಾರ್ಥ ಸೇವೆ ಯಿಂದ ನಾವೆಲ್ಲ ಸಮೃದ್ಧಿ ಜೀವನ ನಡೆಸಲು ಸಾಧ್ಯವಾಗಿದೆ ತಾವುಗಳು ನಿಷ್ಠೆಯಿಂದ ದೇಶಕ್ಕಾಗಿ ದುಡಿಯಬೇಕು ಎಂದು ಯೋಧರಿಗೆ ಕರೆ ನೀಡಿದರು
ಇಂಡಿ ತಾಲೂಕಿನ ಹಾಲುಮತ ಸಮಾಜದ ಅಧ್ಯಕ್ಷ ಜಟ್ಟೆಪ್ಪ ರವಳಿ ಅವರು ಗಡಿ ಕಾಯುವ ಅಗ್ನಿವೀರ ಹುದ್ದೆಗೆ ಆಯ್ಕೆಯಾದ ಯುವಕರಿಗೆ ನಿಂಗರಾಯ ದೇವಸ್ಥಾನದ ಆವರಣದಲ್ಲಿ ಸನ್ಮಾನಿಸಿ ಗೌರವಿಸಿದರು. -
ಇಂಡಿ: ಗಡಿಯಲ್ಲಿ ನಮ್ಮ ಯೋಧರು ಹಗಲು-ರಾತ್ರಿಯನ್ನದೇ ರಕ್ಷಣೆ ಮಾಡುತ್ತಿರುವುದರಿಂದ ನಾವೆಲ್ಲ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದೇವೆ. ದೇಶ ಸೇವೆ ಮಾಡೋದು ಪವಿತ್ರವಾದ ಕಾರ್ಯ ಎಂದು ತಾಲೂಕಾ ಹಾಲುಮತ ಸಮಾಜದ ಅಧ್ಯಕ್ಷರಾದ ಜಟ್ಟೆಪ್ಪ ರವಳಿ ಹೇಳಿದರು.
ಪಟ್ಟಣದ ನಿಂಗರಾಯ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡ ಗಡಿ ಕಾಯುವ ಅಗ್ನಿವೀರ ಹುದ್ದೆಗೆ ಆಯ್ಕೆಯಾದ ಯುವಕರಿಗೆ ಸನ್ಮಾನಿಸಿ ಮಾತನಾಡಿದ ಅವರು ದೇಶ ಸೇವೆಗೆ ಗಂಡು ಹೆಣ್ಣು ಬೇಧವಿಲ್ಲ ವಿದ್ಯಾರ್ಥಿ ದೆಸೆಯಿಂದಲೇ ದೇಶ ಸೇವೆ ಮಾಡುವ ಗುರಿ ಇಟ್ಟುಕೊಂಡು ಪ್ರಯತ್ನಿಸ ಬೇಕು. ಒಬ್ಬ ರೈತ ಹಾಗೂ ಒಬ್ಬ ಸೈನಿಕ ಈ ದೇಶಕ್ಕೆ ದೊಡ್ಡ ಶಕ್ತಿ ಇವರಿಬ್ಬರ ನಿಸ್ವಾರ್ಥ ಸೇವೆ ಯಿಂದ ನಾವೆಲ್ಲ ಸಮೃದ್ಧಿ ಜೀವನ ನಡೆಸಲು ಸಾಧ್ಯವಾಗಿದೆ ತಾವುಗಳು ನಿಷ್ಠೆಯಿಂದ ದೇಶಕ್ಕಾಗಿ ದುಡಿಯಬೇಕು ಎಂದು ಯೋಧರಿಗೆ ಕರೆ ನೀಡಿದರು.
ಇದನ್ನೂ ಓದಿ: Indi News: ಮಾನವ ಕುಲದ ಅಮೂಲ್ಯ ಸಂಪತ್ತು ಯೋಗ
ಪತ್ರಕರ್ತ ಲಕ್ಷ್ಮಣ ಹಿರೇಕುರಬರ ಮಾತನಾಡಿ 40 ವರ್ಷದಿಂದ ಸಮಾಜ ಸೇವೆ ಮಾಡುತ್ತಾ ಬಂದಿರುವ ಜಟ್ಟೆಪ್ಪ ರವಳಿಯವರು ಇಂದು ನಿಂಬೆನಾಡಿನ ವೀರಯೋಧರಿಗೆ ಜಾತಿ-ಮತ ಬೇದವಿಲ್ಲದೆ ಎಲ್ಲ ಯುವಕರಿಗೆ ಸನ್ಮಾನಿಸುತ್ತಿರುವದು ಶ್ಲಾಘನಿಯ ಎಂದರು.
ಲಕ್ಕು ಯಳಮೇಲಿ, ರೀಯಾಜ ಭಾಗವಾನ, ಬೀಮು ಪೂಜಾರಿ, ಹಣಮಂತ ಗುಡ್ಲ, ಪರಸುರಾಮ ಪೂಜಾರಿ, ಕೆಂಚಪ್ಪ ಬಂಗಾರಿ, ಸಿದ್ದಪ್ಪ ಬಂಗಾರಿ ಸೇರಿದಂತೆ ಮತ್ತಿತರರು ಇದ್ದರು.