ಇಂಡಿ: ಬುದ್ದ, ಬಸವ, ಅಂಬೇಡ್ಕರವರ ತತ್ವದಡಿ ನಡೆಯುವ ನಮ್ಮ ಸಮಾಜ ಇನ್ನೊಬ್ಬರಿಗೆ ನೋವಾಗದಂತೆ ಶಾಂತಿ. ಪ್ರೀತಿ, ವಿಶ್ವಾಸದಿಂದ ಸಮಾಜದಲ್ಲಿ ಬದುಕಿ ಬಾಳಿ ಸಮಾಜಕ್ಕೆ ಹೆಸರು ತರಬೇಕು ಎಂದು ದಲಿತ ಸಮಾಜದ ಹಿರಿಯ ಮುಖಂಡ ಮುತ್ತಪ್ಪ ಪೋತೆ ಕಿವಿ ಮಾತು ಹೇಳಿದರು.
ವಿಜಯಪುರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಡಾ.ಬಿ.ಆರ್ ಅಂಬೇಡ್ಕರವರು ನಡೆದಾಡಿದ ಈ ಪುಣ್ಯಭೂಮಿ ಯಲ್ಲಿ ಒಳ್ಳೆತನದಿಂದ ಇರಬೇಕು. ಇಂಡಿ ಗಡಿ ಭಾಗದಲ್ಲಿ ಶರಣರು, ಸಂತ- ಮಹಾಂತರು, ಸಾಹಿತಿ ಗಳು ಬುದ್ದೀಜೀವಿಗಳು ಈ ಭಾಗದ ಜನರಿಗೆ ಸಂಸ್ಕಾರ ನೀಡಿದ್ದಾರೆ. ನಾನು ಯಾವುದೇ ವ್ಯಕ್ತಿ, ರಾಜ ಕಾರಣಕ್ಕೆ ಸೀಮಿತನಾಗಿ ಮಾತನಾಡುತ್ತಿಲ್ಲ, ಒಬ್ಬ ಸಮಾಜದ ಹಿರಿಯ ವ್ಯಕ್ತಿಯಾಗಿ ಮಾತ ನಾಡುತ್ತಿರುವೆ, ವಾಕ್ ಸ್ವಾತಂತ್ರ್ಯ ಇದೆ ಎಂದು ಯಾರಿಗೂ ಬೇಕಾದ ವರಿಗೆ ನೋವಾಗುವಂತೆ ಮಾತನಾಡಿದರೆ ಇಡೀ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತದೆ.
ಇದನ್ನೂ ಓದಿ: Vishweshwar Bhat Column: ನೊಬೆಲ್ ಸಾಹಿತಿ-ವಿಮರ್ಶಕ ನೆಲಕ್ಕುರುಳಿ ಹೊಡೆದಾಡಿಕೊಂಡರು !
ಒಬ್ಬ ಯಾವುದೇ ಜನಪ್ರತಿನಿಧಿಗಳಿಗೆ ಮಾತನಾಡಬೇಕಾದರೆ ನಾಲಿಗೆ ಮೇಲೆ ಹಿಡಿತವಿರಬೇಕು. ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಎಂಬ ಗಾದೆಯಂತೆ ಮಾತು ಬೆಳ್ಳಿ ಮೌನ ಬಂಗಾರವಿರಲಿ, ರಾಜಕೀಯವಾಗಿ, ಶೈಕ್ಷಣಿಕ, ಆರ್ಥಿಕ ಅಪಾದನೆಗಳಿದ್ದರೂ ಕೂಡಾ ಮನಸ್ಸಿಗೆ ನೋವಾಗದಂತೆ ಮಾತನಾಡಬೇಕು ಎಕವಚನ ಪದಪ್ರಯೋಗದಿಂದ ನಮ್ಮ ನಾಲಿಗೆ ಹೊಲಸು ಮಾಡಿಕೊಳ್ಳಬಾರದು.
ಬಸವಣ್ಣನವರು ಹೇಳಿದಂತೆ ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ ಎಂದು ಶರಣರೆ ನುಡಿದಿರುವಾಗ ನಾವು ಎಲ್ಲಿ ಅವರೆಲ್ಲಿ. ಪ್ರತಿಯೊಂದು ಹಂತದಲ್ಲಿ ನಮ್ಮ ಸಮಾಜ ಎಡುವುತ್ತಿದೆ ಜಾಗೃತರಾಗಬೇಕು. ಇನ್ನೊಂದು ಸಮಾಜ, ಇನ್ನೊಬ್ಬ ವ್ಯಕ್ತಿಯ ಗೌರವಕ್ಕೆ ಚ್ಯುತಿ ಬರುವಂತೆ ಯಾರೂ ನಡೆದುಕೊಳ್ಳಬಾರದು.
ಒಬ್ಬ ವ್ಯಕ್ತಿಯ ಬೆಳವಣಿಗೆ ಹಿಂದೆ ಇಡೀ ಸಮಾಜ ಇದ್ದಾಗ ಮಾತ್ರ ನಾವು ಬೆಳವಣಿಗೆ ಹೊಂದಲು ಸಾಧ್ಯೆ. ಮನುಷ್ಯ ಸಮಾಜ ಜೀವಿ ಸಮಾಜ ಬಿಟ್ಟು ಬದುಕಲಾರ ಆದ್ದರಿಂದ ಸಮಾಜದ ಮುಂದೆ ಎಲ್ಲರೂ ಸಣ್ಣವರು ಒಬ್ಬ ವ್ಯಕ್ತಿ ತಪ್ಪು ಮಾಡಿದರೆ ಸಮಾಜಕ್ಕೆ ಕೆಟ್ಟ ಹೆಸರು ಬರುತ್ತದೆ. ನಾನು ಹೇಳುವ ಮಾತುಗಳು ಅಪಾರ್ಥ ಎಂದು ಭಾವಿಸಿದರೆ ಸಮಾಜದ ಕುಲಬಾಂಧವರಲ್ಲಿ ವಿಷಾದ ವ್ಯಕ್ತಪಡಿಸುವುದಾಗಿ ತಿಳಿಸಿದರು.