Kolhar News: ಅಲೆಮಾರಿ ಸಮುದಾಯದ ಜನರು ಈ ಯೋಜನೆಗಳ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು
ಅಲೆಮಾರಿ ಸಮುದಾಯ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಅತ್ಯಂತ ಹಿಂದುಳಿ ದಿದ್ದು ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಸಮುದಾಯಕ್ಕೆ ತಲುಪುತ್ತಿಲ್ಲ ಹಾಗಾಗಿ ಈ ಬಗ್ಗೆ ಜಾಗೃತಿ ಮೂಡಿಸಲು ಮನವಿ ಮಾಡಿಕೊಂಡರು. ಅಲ್ಲದೆ ಪಟ್ಟಣದ ಭಾಗಶ: ಅಲೆಮಾರಿ ಸಮುದಾಯದವರಿಗೆ ಸ್ವಂತ ನಿವೇಶನಗಳು ಇಲ್ಲದೆ ಸ್ವಂತ ಸೂರು ಗಗನ ಕುಸುಮವಾಗಿದೆ ಹಾಗಾಗಿ ನಿವೇಶನಗಳನ್ನು ಮಂಜೂರು ಮಾಡಿಸುವುದ ಸಹಿತ ವಿವಿಧ ಸಮಸ್ಯೆ ಗಳನ್ನು ಅಧಿಕಾರಿಗಳನ್ನು ಪರಿಹರಿಸಲು ಮನವಿ ಮಾಡಿಕೊಂಡರು


ಕೊಲ್ಹಾರ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಲೆಮಾರಿ, ಅರೆ, ಅಲೆಮಾರಿ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ರವಿವಾರ ಕೊಲ್ಹಾರ ಪಟ್ಟಣಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಅಲೆಮಾರಿ ಜನಾಂಗದವರೊಂದಿಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಸರ್ವ ತೋಮುಖ ಅಭಿವೃದ್ಧಿಗೆ ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ನಿಗಮದಿಂದ ವಿವಿಧ ಯೋಜನೆಗಳನ್ನು ಜಾರಿಗೆ ತರಲಾಗಿದೆ ಸರ್ವ ಅಲೆಮಾರಿ ಸಮುದಾಯದ ಜನರು ಈ ಯೋಜನೆಗಳ ಸೌಲಭ್ಯಗಳನ್ನು ಪಡೆದುಕೊಳ್ಳ ಬೇಕು ಎಂದರು.
ಸ್ಥಳದಲ್ಲಿದ್ದ ತಹಶೀಲ್ದಾರ ಎಸ್.ಎಸ್ ನಾಯಕಲಮಠ ಹಾಗೂ ಪ.ಪಂ ಮುಖ್ಯಾಧಿಕಾರಿ ಉಮೇಶ ಚಲವಾದಿ ಅವರೊಂದಿಗೆ ಅಲೆಮಾರಿ ಸಮುದಾಯಕ್ಕೆ ಸಿಗುವ ಸೌಲಭ್ಯಗಳ ಜಾಗೃತಿ ಮೂಡಿಸುವ ಕುರಿತು ಚರ್ಚಿಸಿದರು.
ಇದನ್ನೂ ಓದಿ: Chikkaballapur News: ವಿದ್ಯಾರ್ಥಿ ದಿಸೆಯಿಂದಲೇ ಉತ್ತಮ ಭವಿಷ್ಯದ ಕಡೆ ಗಮನ ಹರಿಸಿ: ಮಾರ್ಕೆಟ್ ಮೋಹನ್
ಈ ಸಂದರ್ಭದಲ್ಲಿ ಅಲೆಮಾರಿ ಸಮುದಾಯದ ಮುಖಂಡ, ಪ.ಪಂ ಸದಸ್ಯ ಬಾಬು ಬಜಂತ್ರಿ ಮಾತನಾಡಿ ಪಟ್ಟಣದ ಅಲೆಮಾರಿ ಸಮುದಾಯ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾ ಜಿಕವಾಗಿ ಅತ್ಯಂತ ಹಿಂದುಳಿದಿದ್ದು ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಸಮು ದಾಯಕ್ಕೆ ತಲುಪು ತ್ತಿಲ್ಲ ಹಾಗಾಗಿ ಈ ಬಗ್ಗೆ ಜಾಗೃತಿ ಮೂಡಿಸಲು ಮನವಿ ಮಾಡಿ ಕೊಂಡರು. ಅಲ್ಲದೆ ಪಟ್ಟಣದ ಭಾಗಶ: ಅಲೆಮಾರಿ ಸಮುದಾಯದವರಿಗೆ ಸ್ವಂತ ನಿವೇಶನಗಳು ಇಲ್ಲದೆ ಸ್ವಂತ ಸೂರು ಗಗನ ಕುಸುಮವಾಗಿದೆ ಹಾಗಾಗಿ ನಿವೇಶನಗಳನ್ನು ಮಂಜೂರು ಮಾಡಿಸುವುದ ಸಹಿತ ವಿವಿಧ ಸಮಸ್ಯೆ ಗಳನ್ನು ಅಧಿಕಾರಿಗಳನ್ನು ಪರಿಹರಿ ಸಲು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ತಹಸೀಶಿಲ್ದಾರ ಎಸ್.ಎಸ್ ನಾಯಕಲಮಠ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪುಂಡಲಿಕ ಮಾನ್ನವರ, ಪಿಎಸ್ಐ ಎಂ.ಬಿ ಬಿರಾದಾರ, ಪ.ಪಂ ಮುಖ್ಯಾಧಿಕಾರಿ ಉಮೇಶ ಚಲವಾದಿ ಸಹಿತ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.