ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಶ್ರೀ ಗುರು ಶಂಕರಲಿಂಗೇಶ್ವರ ಮಹಾ ರಥೋತ್ಸವ: ರೈಲುಗಳ ತಾತ್ಕಾಲಿಕ ನಿಲುಗಡೆಗೆ ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ ಸೂಚನೆ

ತಾಲೂಕಿನ ಲಚ್ಯಾಣದಲ್ಲಿ ಜರುಗಲಿರುವ ಶ್ರೀ ಗುರು ಶಂಕರಲಿಂಗೇಶ್ವರ ಮಹಾ ರಥೋತ್ಸವ ನಿಮಿತ್ಯ ಇಲ್ಲಿನ ರೈಲು ನಿಲ್ದಾಣದ ಮೂಲಕ ನಿತ್ಯ ಸಂಚರಿಸುವ ಗೋಲಗುಂಬಜ್ ಮತ್ತು ಬಸವ ಎಕ್ಸ್‌ʼಪ್ರೆಸ್ ರೈಲುಗಳು ಏ.6 ರಿಂದ 12ರ ವರೆಗೆ ತಾತ್ಕಾಲಿಕವಾಗಿ ನಿಲುಗಡೆಗೆ ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ(V.Somanna) ಸಂಬಂಧಿಸಿದ ರೈಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇಂಡಿ: ತಾಲೂಕಿನ ಲಚ್ಯಾಣದಲ್ಲಿ ಜರುಗಲಿರುವ ಶ್ರೀ ಗುರು ಶಂಕರಲಿಂಗೇಶ್ವರ ಮಹಾ ರಥೋತ್ಸವ ನಿಮಿತ್ಯ ಇಲ್ಲಿನ ರೈಲು ನಿಲ್ದಾಣದ ಮೂಲಕ ನಿತ್ಯ ಸಂಚರಿಸುವ ಗೋಲ ಗುಂಬಜ್ ಮತ್ತು ಬಸವ ಎಕ್ಸ್‌ʼಪ್ರೆಸ್ ರೈಲುಗಳು ಏ.6 ರಿಂದ 12ರ ವರೆಗೆ ತಾತ್ಕಾಲಿಕವಾಗಿ ನಿಲುಗಡೆಗೆ ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ(V.Somanna) ಸಂಬಂಧಿಸಿದ ರೈಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: V Somanna: ಕರ್ನಾಟಕಕ್ಕೆ ಹೊಸ ರೈಲು ಘೋಷಿಸಿದ ಸಚಿವ ಸೋಮಣ್ಣ, 4 ಜಿಲ್ಲೆಗಳ ನಡುವೆ ಸಂಚಾರ

ನಿತ್ಯ ಮೈಸೂರಿನಿಂದ ಆಂಧ್ರಪ್ರದೇಶ, ಕಲಬುರಗಿ, ಸೋಲಾಪುರ, ಲಚ್ಯಾಣ, ವಿಜಯಪುರ ಮಾರ್ಗದ ಮೂಲಕ ಬಾಗಲಕೋಟ ನಿಲ್ದಾಣ ತಲುಪುವ ಬಸವ ಎಕ್ಸಪ್ರೆಸ್ ರೈಲು ಬೆಳಿಗ್ಗೆ 7.23ಕ್ಕೆ ಲಚ್ಯಾಣದಲ್ಲಿ ನಿಲುಗಡೆಯಾಗಿ 7.24ಕ್ಕೆ ಸಂಚರಿಸಲಿದೆ. ಇದೇ ರೈಲು ಮರಳಿ ಇದೇ ಮಾರ್ಗದ ಮೂಲಕ ಸಂಚಾರಿಸಿ ಲಚ್ಯಾಣದಲ್ಲಿ ಸಂಜೆ 5.29ಕ್ಕೆ ನಿಲುಗಡೆಯಾಗಿ 5.30ಕ್ಕೆ ಸಂಚರಿಸಲಿದೆ.

ಇದಲ್ಲದೆ ನಿತ್ಯ ಮೈಸೂರಿನಿಂದ ತುಮಕೂರು, ಹುಬ್ಬಳ್ಳಿ, ಬಾಗಲಕೋಟೆ, ವಿಜಯಪುರ, ಲಚ್ಯಾಣ, ಸೋಲಾಪುರ ಮಾರ್ಗದ ಮೂಲಕ ಪಂಡರಾಪುರ ತಲುಪುವ ಗೋಲಗುಂಜ್ ಎಕ್ಸಪ್ರೆಸ್ ರೈಲು ಬೆಳಿಗ್ಗೆ 8.29ಕ್ಕೆ ನಿಲುಗಡೆಯಾಗಿ 8.30ಕ್ಕೆ ಹೊರಡಲಿದೆ. ಸಂಜೆ 4.19ಕ್ಕೆ ನಿಲುಗಡೆಯಾಗಿ 4.20ಕ್ಕೆ ಹೊರಡಲಿದೆ.