ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Indi News: ಶ್ರೀಸಂಗನಸವ ಶ್ರೀಗಳು ಶಿಕ್ಷಣ ದಾಸೋಹಿ: ಶಾಸಕ ಯಶವಂತರಾಯಗೌಡ ಪಾಟೀಲ

ಮಠದ ಸದ್ಭಕ್ತರು ೧ ರೂ ದೇಣಿಗೆ ನೀಡಿದವರು ೧ ಕೋಟಿಗೂ ಸಮಾನ ದೇವರು ಅವರಿಗೆ ಒಳ್ಳೆಯದನ್ನು ಕರುಣಿಸಲಿ. ಭಗವಂತನೆ ಕೊಟ್ಟಿರುವಾಗ ದೇವರಿಗಾಗಿಯೇ ಮೀಸಲು. ಶ್ರೀ ವೃಷಭಲಿಂಗ ಮಹಾಸ್ವಾಮಿ ಗಳ ಸದಾಶಯದಂತೆ ೨೦೨೭ರಲ್ಲಿ ನಾಡಿನ ಸಂತ ಮಹಾಂತರ, ಗುರು ಹಿರಿಯ ಚರಣರ ಸಮ್ಮುಖದಲ್ಲಿ ಶತಮಾನೋತ್ಸವ ಆಚರಣೆ ಮಾಡುವ ಮೂಲಕ ಸುವರ್ಣಾಕ್ಷರ ಗಳಿಂದ ಬರೆದಿಡುವಂತೆ ಮಾಡೋಣ.

ಶ್ರೀಸಂಗನಸವ ಶ್ರೀಗಳು ಶಿಕ್ಷಣ ದಾಸೋಹಿ

ಶ್ರೀಸಿದ್ದಲಿಂಗ ಮಠದಲ್ಲಿ ಶ್ರೀಸಂಗನಬಸವ ಪುರಾಣ ಮಂಗಲೋತ್ಸವದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿದರು. -

Ashok Nayak Ashok Nayak Sep 15, 2025 10:45 AM

ಇಂಡಿ: ಶ್ರೀಭಂಥನಾಳದ ಸಂಗನ ಬಸವಶ್ರೀಗಳು ಶೈಕ್ಷಣಿಕ ದಾಸೋಹದ ಕ್ರಾಂತಿ ಮಾಡಿದರೆ ನಡೆದಾಡುವ ದೇವರಾದ ಶ್ರೀಸಿದ್ದೇಶ್ವರ ಮಹಾಸ್ವಾಮಿಗಳು ಜ್ಞಾನದಾಸೋಹ ನೀಡಿ ಈ ಭಾಗದ ಜನರಿಗೆ ಸಂಸ್ಕಾರ ಹಾಗೂ ಹೃದಯಶ್ರೀಮಂತರಾಗಿಸಿದ್ದಾರೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ (MLA Yashavant Rayagoud Patil) ಹೇಳಿದರು.

ಸುಕ್ಷೇತ್ರ ಲಚ್ಯಾಣದ ಶ್ರೀ ಸಿದ್ದಲಿಂಗ ಮಹಾರಾಜರ ಕಮರಿಮಠದದಲ್ಲಿ ಶ್ರೀಸಂಗನಬಸವಶ್ರೀಗಳ ಪುರಾಣ ಮಂಗಲೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶ್ರೀಸಿದ್ದಲಿಂಗ ಮಹಾರಾಜ ರನ್ನು ಪ್ರಾಂಜ್ವಲ ಮನಸ್ಸಿನಿಂದ ದರ್ಶನ ಮಾಡಿದರೆ ಬೇಡಿದ ಭಕ್ತರ ಇಷ್ಟಾರ್ಥಿ ಈಡೇರಿಸುವ ಭಗವಂತ ನಾನು ಈ ಸಭೆಗೆ ರಾಜಕಾರಣಿಯಾಗಿ ಬಂದಿಲ್ಲ ಸಿದ್ದಲಿಂಗನ ಸಾಮಾನ್ಯ ಭಕ್ತನಾಗಿ ಬಂದಿರುವೆ. ಈ ಹಿಂದೆ ಶ್ರೀಮಠಕ್ಕೆ ೧ ಕೋಟಿ ದೇಣಿಗೆ ನೀಡಿರುವೆ ಇವತ್ತು ಕೂಡಾ ೧ ಕೋಟಿ ಕೊಡುತ್ತೇನೆ, ಮಠ ಮುಗಿಯುವರೆಗೂ ನನ್ನ ದೇಣಿಗೆ ಇರುತ್ತದೆ.

ಇದನ್ನೂ ಓದಿ: Basangouda Patil Yatnal: ಮದ್ದೂರಿನಲ್ಲಿ ಹಿಂದೂ ಫೈರ್‌ ಬ್ರ್ಯಾಂಡ್‌ ಯತ್ನಾಳ್‌ ಗರ್ಜನೆ; ಹೊಸ ಪಕ್ಷ ಘೋಷಣೆ

ಮಠದ ಸದ್ಭಕ್ತರು ೧ ರೂ ದೇಣಿಗೆ ನೀಡಿದವರು ೧ ಕೋಟಿಗೂ ಸಮಾನ ದೇವರು ಅವರಿಗೆ ಒಳ್ಳೆಯದನ್ನು ಕರುಣಿಸಲಿ. ಭಗವಂತನೆ ಕೊಟ್ಟಿರುವಾಗ ದೇವರಿಗಾಗಿಯೇ ಮೀಸಲು. ಶ್ರೀ ವೃಷಭಲಿಂಗ ಮಹಾಸ್ವಾಮಿಗಳ ಸದಾಶಯದಂತೆ ೨೦೨೭ರಲ್ಲಿ ನಾಡಿನ ಸಂತ ಮಹಾಂತರ, ಗುರು ಹಿರಿಯ ಚರಣರ ಸಮ್ಮುಖದಲ್ಲಿ ಶತಮಾನೋತ್ಸವ ಆಚರಣೆ ಮಾಡುವ ಮೂಲಕ ಸುವರ್ಣಾಕ್ಷರ ಗಳಿಂದ ಬರೆದಿಡುವಂತೆ ಮಾಡೋಣ. ಸಂಪೂರ್ಣ ಸಹಕಾರ ನನ್ನದಿದೆ. ಯರನಾಳ ಸಂಗನಬಸವ ಶ್ರೀಗಳು ಲಚ್ಯಾಣದಲ್ಲಿ ಡಿ.ಎಡ್ ಕಾಲೇಜು ಇದೆ ಸದ್ಯ ಬಿ.ಈ.ಡಿ ಕಾಲೇಜ ಮಂಜೂರಾತಿ ತರಬೇಕು ಎಂಬ ಆದೇಶ ಮಾಡಿರುವ ಪ್ರಯುಕ್ತ ಅವರ ಮಾತು ಪಾಲಿಸುತ್ತೇನೆ ಎಂದರು.

*

ವಿದ್ಯಾರ್ಥಿಗಳೆ ದೇವರು ಶಾಲೆಯ ದೇವರ ಗುಡಿ ಎಂದು ಇಡೀ ನಾಡಿನಾದ್ಯೆಂತ ಸಂಚರಿಸಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದ ಮಹಾಶರಣ . ನಾಡು.ನುಡಿಗಾಗಿ ಹಗಲೀರಳು ಶ್ರಮಿಸಿದ್ದಾರೆ. ಲಚ್ಯಾಣದ ಶ್ರೀಸಿದ್ದಲಿಂಗ ಮಹಾರಾಜರು ಕೂಡಾ ದೊಡ್ಡ ಮಹಾ ತಪಸ್ವೀಭಕ್ತಿಯಿಂದ ನಮಸಿದರೆ ಕಾಮಧೇನು ಕಲ್ಪವೃಕ್ಷವಿದ್ದಂತೆ ಇದಕ್ಕೆ ಶಾಸಕ ಯಶವಂತರಾಯಗೌಡ ಪಾಟೀಲ, ದಿವ್ಯಸಾನಿಧ್ಯ ವೃಷಭಲಿಂಗ ಮಹಾಸ್ವಾಮಿಗಳು ವಹಿಸಿದರು.

ಯರನಾಳ ಶ್ರೀಸಂಗನವಸವ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಇಳಕಲ್ ಮಹಾಂತಪ್ಪ ಸ್ವಾಮಿಗಳು, ನಿಜಗುಣ ದೇವರು, ಅಭಿನವ ಪ್ರಭುಲಿಂಗ ದೇವರು, ಶರಣಬಸು ದೇವರು, ಆತ್ಮಾನಂದ ದೇವರು, ಶಂಕರಾನಂದ ಸ್ವಾಮಿಗಳು, ಬಸಯ್ಯಾ ಸ್ವಾಮಿಗಳು, ಅನುಸುಯ್ಯಾ ತಾಯಿ, ಅಕ್ಕಮಹಾದೇವಿ ಅಮ್ಮ, ಸಿದ್ದಲಿಂಗ ದೇವರು ವೇದಿಕೆಯಲ್ಲಿದ್ದರು.