Vijayapura news: ಎಡದಂಡೆ ಕಾಲುವೆಯಲ್ಲಿ ಒಂದೇ ಕುಟುಂಬದ ಮೂವರು ನೀರುಪಾಲು
vijayapura news: ಸುಡುಗಾಡು ಸಿದ್ದ ಸಮುದಾಯಕ್ಕೆ ಸೇರಿದ ಬಸಮ್ಮ ಕೊಣ್ಣೂರು, ಸಂತೋಷ, ರವಿ ನಿನ್ನೆ (ನವೆಂಬರ್ 11) ಕೆಬಿಜೆಎನ್ಎಲ್ ಎಡ ದಂಡೆ ಕಾಲುವೆಗೆ ಹೋಗಿದ್ದ ವೇಳೆ ಕಾಲು ಜಾರಿ ಬಿದ್ದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿಗ ದೌಡಾಯಿಸಿ ನಾಪತ್ತೆಯಾದವರ ಪತ್ತೆಗೆ ಶೋಧ ನಡೆಸಿದ್ದಾರೆ. ನೀರುಪಾಲಾಗಿರುವ ಮೂವರು ಮೇಲೆ ಬಂದಿಲ್ಲ. ನಾಪತ್ತೆಯಾದ ಸ್ಥಳದಲ್ಲೂ ಕೆಳದಂಡೆಯ ಉದ್ದಕ್ಕೂ ಶೋಧ ನಡೆಸಲಾಗುತ್ತಿದೆ.
ಶಿರೋಳ ಬಳಿ ಕೆಬಿಜೆಎನ್ಎಲ್ ಎಡದಂಡೆ ಕಾಲುವೆಯಲ್ಲಿ ಮೂವರು ನಾಪತ್ತೆ -
ವಿಜಯಪುರ, ನ.11: ಕಾಲುವೆಯಲ್ಲಿ (Canal) ಕಾಲು ಜಾರಿ ಬಿದ್ದು ಒಂದೇ ಕುಟುಂಬದ ಮೂವರು ನೀರುಪಾಲಾಗಿರುವ (drowned) ಘಟನೆ ವಿಜಯಪುರ (Vijayapura news) ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಶಿರೋಳ ಗ್ರಾಮದಲ್ಲಿ ನಡೆದಿದೆ. ಮುದ್ದೇಬಿಹಾಳ ಪಟ್ಟಣದ ಆಶ್ರಯ ಕಾಲೋನಿಯ ಸುಡುಗಾಡು ಸಿದ್ದ ಸಮುದಾಯದ ಬಸಮ್ಮ ಕೊಣ್ಣೂರು (21), ಸಂತೋಷ (16), ರವಿ ಕೊಣ್ಣೂರು (15) ಎನ್ನುವವರು ಕಾಲು ಜಾರಿ ಶಿರೋಳ ಬಳಿ ಕೆಬಿಜೆಎನ್ಎಲ್ ಎಡದಂಡೆ ಕಾಲುವೆಗೆ ಬಿದ್ದಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಶೋಧ ಕಾರ್ಯ ನಡೆದಿದೆ.
ಸುಡುಗಾಡು ಸಿದ್ದ ಸಮುದಾಯಕ್ಕೆ ಸೇರಿದ ಬಸಮ್ಮ ಕೊಣ್ಣೂರು, ಸಂತೋಷ, ರವಿ ನಿನ್ನೆ (ನವೆಂಬರ್ 11) ಕೆಬಿಜೆಎನ್ಎಲ್ ಎಡ ದಂಡೆ ಕಾಲುವೆಗೆ ಹೋಗಿದ್ದ ವೇಳೆ ಕಾಲು ಜಾರಿ ಬಿದ್ದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿಗ ದೌಡಾಯಿಸಿ ನಾಪತ್ತೆಯಾದವರ ಪತ್ತೆಗೆ ಶೋಧ ನಡೆಸಿದ್ದಾರೆ. ನೀರುಪಾಲಾಗಿರುವ ಮೂವರು ಮೇಲೆ ಬಂದಿಲ್ಲ. ನಾಪತ್ತೆಯಾದ ಸ್ಥಳದಲ್ಲೂ ಕೆಳದಂಡೆಯ ಉದ್ದಕ್ಕೂ ಶೋಧ ನಡೆಸಲಾಗುತ್ತಿದೆ.
ಕಾಲುವೆಗೆ ಕಾರು ಉರುಳಿ ಇಬ್ಬರು ಸಾವು
ದಾವಣಗೆರೆ : ರಾಜ್ಯದಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ಭದ್ರಾ ಕಾಲುವೆಗೆ ಕಾರು ಬಿದ್ದು (Road Accident) ಇಬ್ಬರು ಸಾವಿಗೆಈಡಾಗಿದ್ದಾರೆ. ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ದುರ್ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ. ಹೊಸೂರು ಬಳಿಯ ಭದ್ರಾ ಮುಖ್ಯ ಕಾಲುವೆಯಲ್ಲಿ ಕಾರು ನಾಲೆಗೆ ಬಿದ್ದ ಪರಿಣಾಮ ಕಾರಿನಲ್ಲಿದ್ದ ಮಲ್ಲಿಕಾರ್ಜುನ (29) ಹಾಗೂ ಸಿದ್ದೇಶ್ (38) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: Uttara Kannada News: ಕಟ್ಟಡ ಕಾಮಗಾರಿ ವೇಳೆ ಲಿಫ್ಟ್ ಕುಸಿದು ಇಬ್ಬರು ಕಾರ್ಮಿಕರ ಸಾವು
ದಾವಣಗೆರೆ ಮೂಲದ 6 ಜನ ಮಂಗಳೂರು ಕಡೆ ಪ್ರವಾಸಕ್ಕೆ ಹೋಗಿದ್ದರು. ಪ್ರವಾಸ ಮುಗಿಸಿ ವಾಪಸ್ ಬರುವಾಗ ಚಾಲಕ ನಿದ್ರೆ ಮಂಪರಿನಲ್ಲಿದ್ದ ಪರಿಣಾಮ ನಿಯಂತ್ರಣ ತಪ್ಪಿ ಕಾರು ಭದ್ರಾ ಕಾಲುವೆಗೆ ಬಿದ್ದಿದೆ. ಈ ವೇಳೆ ಕಾರಿನಲ್ಲಿದ್ದ ಇಬ್ಬರು ಸಾವಿಗೀಡಾಗಿದ್ದು, ನಾಲ್ಕು ಮಂದಿ ಈಜಿ ದಡ ಸೇರಿದ್ದಾರೆ. ಸ್ಥಳಕ್ಕೆ ಸಂತೆಬೆನ್ನೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತೆಪ್ಪ ಮುಳುಗಿ ಮೀನುಗಾರ ಸಾವು
ಚಾಮರಾಜನಗರ: ತೆಪ್ಪ ಮುಳುಗಿ ಮೀನುಗಾರರೊಬ್ಬರು ಸಾವನ್ನಪ್ಪಿದ್ದು, ಮತ್ತೋರ್ವ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಸುವರ್ಣಾವತಿ ಜಲಾಶಯದಲ್ಲಿ ನಡೆದಿದೆ. ಅಟ್ಟಗುಳಿಪುರ ಗ್ರಾಮದ ನಿವಾಸಿ ಶಿವಸ್ವಾಮಿ (32) ಮೃತ ದುರ್ದೈವಿ. ಸ್ನೇಹಿತ ದಿಲೀಪ್, ತೆಪ್ಪ ಮುಳುಗಿದ ನಂತರ ಈಜಿ ದಡ ಸೇರಿದ್ದಾರೆ. ಸುವರ್ಣಾವತಿ ಜಲಾಶಯದಲ್ಲಿ ಮೀನು ಹಿಡಿಯಲು ಹೋಗಿದ್ದ ವೇಳೆ ತೆಪ್ಪ ಮುಳುಗಿದೆ. ಸ್ಥಳಕ್ಕೆ ಚಾಮರಾಜನಗರ ಪೂರ್ವ ಠಾಣೆ ಪೊಲೀಸರ ಭೇಟಿ ನೀಡಿದ್ದು, ಶಿವಸ್ವಾಮಿ ಮೃತದೇಹಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದಾರೆ.
ಇದನ್ನೂ ಓದಿ: Road Accident: ಬೀದರ್‌ನಲ್ಲಿ ಕಾರಿಗೆ ಗೂಡ್ಸ್ ವಾಹನ ಡಿಕ್ಕಿ, ತೆಲಂಗಾಣದ ನಾಲ್ವರು ಸಾವು