Car Accident: ವಿಜಯಪುರದಲ್ಲಿ ಭೀಕರ ಅಪಘಾತ; ಮರಕ್ಕೆ ಕಾರು ಡಿಕ್ಕಿಯಾಗಿ ಮೂವರ ದುರ್ಮರಣ
Car Accident: ವಿಜಯಪುರ ತಾಲೂಕಿನ ಹೆಗಡಿಹಾಳ ಕ್ರಾಸ್ ಬಳಿ ಘಟನೆ ನಡೆದಿದೆ. ಉಕ್ಕಲಿ ಗ್ರಾಮದಿಂದ ವಿಜಯಪುರಕ್ಕೆ ತೆರಳುತ್ತಿದ್ದಾಗ ಸ್ವಿಫ್ಟ್ ಡಿಸೈರ್ ಕಾರು ಅಪಘಾತಕ್ಕೀಡಾಗಿದೆ. ಕಾರು ಮರಕ್ಕೆ ಡಿಕ್ಕಿಯಾದ ಹಿನ್ನೆಲೆ ಗಂಭೀರವಾಗಿ ಗಾಯಗೊಂಡ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.


ವಿಜಯಪುರ: ವಿಜಯಪುರದಲ್ಲಿ ಭೀಕರ ಅಪಘಾತ (Car Accident) ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಯ ಮರಕ್ಕೆ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲೇ ಮೂವರು ದುರ್ಮರಣ ಹೊಂದಿರುವ ಘಟನೆ ತಾಲೂಕಿನ ಹೆಗಡಿಹಾಳ ಕ್ರಾಸ್ ಬಳಿ ಸಂಭವಿಸಿದೆ. ಸ್ವಿಫ್ಟ್ ಡಿಸೈರ್ ಕಾರು ಅಪಘಾತಕ್ಕೀಡಾಗಿದೆ. ಉಕ್ಕಲಿ ಗ್ರಾಮದಿಂದ ವಿಜಯಪುರಕ್ಕೆ ತೆರಳುತ್ತಿದ್ದಾಗ ಭೀಕರ ಅಪಘಾತ ಸಂಭವಿಸಿದ್ದು, ಮೃತರೆಲ್ಲರೂ ವಿಜಯಪುರ ತಾಲೂಕಿನ ಉತ್ಪಾಳ ಗ್ರಾಮದವರು ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಮತ್ತೊಬ್ಬನ ಸ್ಥಿತಿ ಗಂಭೀರವಾಗಿದ್ದು, ಆತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲೆಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ವಿಜಯಪುರ ಗ್ರಾಮಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ | Theft case: 40 ಸಾವಿರ ಮೌಲ್ಯದ ಧಾನ್ಯ ಕಳ್ಳತನ; ಐವರು ಆರೋಪಿಗಳು ಅರೆಸ್ಟ್
ಬೃಹತ್ ಖೋಟಾ ನೋಟು ಜಾಲ ಬಯಲು, ಕಾನ್‌ಸ್ಟೇಬಲ್ ಸೇರಿ ನಾಲ್ವರು ಆರೆಸ್ಟ್
ರಾಯಚೂರು: ರಾಯಚೂರು (Raichuru news) ಜಿಲ್ಲೆಯಲ್ಲಿ ಬೃಹತ್ ಖೋಟಾನೋಟು ದಂಧೆಯನ್ನು (Fake Currency racket) ಪೊಲೀಸರು ಬಯಲಿಗೆಳೆದಿದ್ದಾರೆ. ಖೋಟಾನೋಟು ಉತ್ಪಾದನೆ ಅಡ್ಡೆಯ ಮೇಲೆ ಪೊಲೀಸರು ದಾಳಿ (police raid) ನಡೆಸಿದ್ದು, ಈ ದಾಳಿಯಲ್ಲಿ ಸಶಸ್ತ್ರ ಮೀಸಲು ಪಡೆಯ ಕಾನ್‌ಸ್ಟೇಬಲ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ರಾಯಚೂರು ಸಶಸ್ತ್ರ ಮೀಸಲು ಪಡೆಯ ಕಾನ್ಸ್ ಸ್ಟೇಬಲ್ ಮರಿಲಿಂಗ, ರಮೇಶ್ ಆದಿ, ಶಿವಲಿಂಗ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ರಾಯಚೂರಿನ ಗುಪ್ತ ಸ್ಥಳದಲ್ಲಿ ಖೋಟಾನೋಟು ತಯಾರಿ ನಡೆಸಲಾಗುತ್ತಿದ್ದು, ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ದಾಳಿಯ ವೇಳೆ ಖೋಟಾನೋಟು ತಯಾರಿಸಲು ಬಳಸಲಾಗುವ ಯಂತ್ರಗಳು, ಇಂಕ್, ಮುದ್ರಿಸಿದ ನೋಟುಗಳು ಇತ್ಯಾದಿಗಳನ್ನು ವಶಪಡಿಸಿಕೊಂಡಿದ್ದಾರೆ. 100, 200, 500 ಮುಖಬೆಲೆಯ ನೋಟುಗಳನ್ನು ಇಲ್ಲಿ ಮುದ್ರಿಸಲಾಗುತ್ತಿತ್ತು. ರಾಜ್ಯ ಹಾಗೂ ಹೊರರಜ್ಯಕ್ಕೂ ಈ ಖೋಟಾನೋಟುಗಳು ರವಾನೆಯಾಗುತ್ತಿದ್ದವು ಎಂದು ಗೊತ್ತಾಗಿದೆ. ಸಶಸ್ತ್ರ ಮೀಸಲು ಪಡೆಯ ಕಾನ್ಸ್ ಸ್ಟೇಬಲ್ ಈ ದಂಧೆಯಲ್ಲಿ ಭಾಗಿಯಾಗಿರು ಅಚ್ಚರಿ ವ್ಯಕ್ತವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಂಧಿತರ ಬಾಯಿ ಬಿಡಿಸಲು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ತಲೆ ಮೇಲೆ ಕಲ್ಲು ಎತ್ತಿ ಹಾಕಿ ಗೆಳೆಯನನ್ನೇ ಕೊಂದರು!
ಕಲಬುರಗಿ: ಜೊತೆಗಿದ್ದ ಸ್ನೇಹಿತರೇ ತಮ್ಮ ಗೆಳೆಯನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ (Murder Case) ಮಾಡಿದ ಘಟನೆ ಕಲಬುರಗಿ (kalaburagi news) ನಗರದಲ್ಲಿ ನಡೆದಿದೆ. ಒಂದಲ್ಲ, ಎರಡಲ್ಲ ಬರೋಬ್ಬರಿ 12 ಬಾರಿ ʼಗೆಳೆಯರುʼ ತಲೆ ಮೇಲೆ ಕಲ್ಲು (Stone) ಎತ್ತಿ ಹಾಕಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ನಗರದ ರಾಜಾಪುರ ಬಡಾವಣೆಯ ನಿವಾಸಿಯಾದ ರೇವಣಸಿದ್ದ ಎಂಬ ಯುವಕನೇ ಸ್ನೇಹಿತರಿಂದ ಹೀಗೆ ಕೊಲೆಯಾದ ಯುವಕ. ಸಿಸಿಟಿವಿ ಕ್ಯಾಮೆರದಲ್ಲಿ ಈ ಕೊಲೆ ದಾಖಲಾಗಿದ್ದು, ಕೊಲೆಯ ಬರ್ಬರತೆಗೆ ನಗರದ ಜನತೆ ಬೆಚ್ಚಿ ಬಿದ್ದಿದ್ದಾರೆ.
ಕೊಲೆಯಾದ ರೇವಣಸಿದ್ದ ಫೈನಾನ್ಸ್ ನಡೆಸುತ್ತಿದ್ದ. ಸಂಜೆ ಆರು ಗಂಟೆ ಸುಮಾರಿಗೆ ಎಂದಿನಂತೆ ಮನೆಯಿಂದ ಆಚೆ ಹೋಗಿದ್ದಾನೆ. ಪ್ರತಿನಿತ್ಯ ಹತ್ತು, ಹನ್ನೊಂದು ಗಂಟೆ ಸುಮಾರಿಗೆ ಮನೆಗೆ ವಾಪಸ್ ಬರ್ತಿದ್ದ. ಆದರೆ ನಿನ್ನೆ ರಾತ್ರಿ ಹನ್ನೆರೆಡು ಗಂಟೆ ಕಳೆದರೂ ಕೂಡ ವಾಪಸ್ ಬಂದಿರಲಿಲ್ಲ. ಹಾಗಾಗಿ ರಾತ್ರಿ ರೇವಣಸಿದ್ದ ತಂದೆ ರಾಮಪ್ಪ ಮಗನಿಗೆ ಕರೆ ಮಾಡಿ ಎಲ್ಲಿದ್ದಿಯಾ, ಯಾವಾಗ ಬರ್ತಿಯಾ ಎಂದು ವಿಚಾರಿಸಿದ್ದಾರೆ. ಬರ್ತೇನೆ, ಇಲ್ಲೇ ಸ್ನೇಹಿತರ ಜೊತೆಗಿದ್ದೇನೆ ಎಂದು ರೇವಣಸಿದ್ಧ ಹೇಳಿದ್ದಾನೆ.
ಆದರೆ ತಡರಾತ್ರಿಯಾದರೂ ಮಗ ಮನೆಗೆ ವಾಪಸ್ ಬಂದಿರಲಿಲ್ಲ. ದಾರಿ ಕಾಯುತ್ತಿದ್ದ ಹೆತ್ತವರು ಬಳಿಕ ನಿದ್ದೆಗೆ ಜಾರಿದ್ದಾರೆ. ಬೆಳಗಾಗುವಷ್ಟರಲ್ಲಿ ಮನೆಯಿಂದ ಐವತ್ತು ಅಡಿ ದೂರದಲ್ಲೆ ಮಗನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಸುದ್ದಿ ಗೊತ್ತಾಗಿದೆ. ಆತನ ಬೈಕ್ ಅನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಯ ಬಳಿ ಬಿಟ್ಟಿದ್ದಾನೆ. ಉಳಿದ ಸ್ನೇಹಿತರು ಬೈಕ್ ಮೇಲೆ ಕರೆದುಕೊಂಡು ಬಂದಿದ್ದು, ಮನೆ ಹತ್ತಿರ ಕೊಲೆ ಮಾಡಿದ್ದಾರೆ. ಬೆಳಗ್ಗೆ ವಾಕಿಂಗ್ ಬಂದವರು ಕೊಲೆಯಾದ ದೃಶ್ಯವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ರೇವಣಸಿದ್ದ ಕುಟುಂಬಸ್ಥರಿಗೆ ಕೊಲೆಯಾದ ವಿಚಾರ ಮುಟ್ಟಿಸಿದ್ದಾರೆ.
ಇದನ್ನೂ ಓದಿ: Punjab Shootout : ಪಂಜಾಬ್ ಶಿವಸೇನಾ ನಾಯಕನ ಹತ್ಯೆ ಪ್ರಕರಣ; ಕೊಲೆಗೂ ಮೊದಲಿನ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೊಲೆಯ ಹಿಂದಿನ ಅಸಲಿ ಕಾರಣ ಹೊರಬರಬೇಕಾಗಿದೆ. ಬರ್ಬರ ಹತ್ಯೆಯ ವಿಡಿಯೋ ವೈರಲ್ ಆಗಿದೆ.