ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ದೇವಾನು ದೇವತೆಗಳಿಗೆ ಕ್ಷೀರಾಭಿಷೇಕ, ನೀರಾಭಿಶೇಕ, ಹಣ್ಣುಗಳ ಅಭಿಷೇಕ ಮಾಡುವುದನ್ನು ನೋಡಿದ್ದೇವೆ..!

ಇಂಡಿ ನಗರದಿಂದ ಸುಮಾರು 6 ಕಿ.ಮೀ ದೂರದಲ್ಲಿರುವ ಈ ಗ್ರಾಮ ದಲ್ಲಿ ಮರುಳಸಿಧ್ಧೇಶ್ವರ ಹಾಗೂ ನಿಜಲಿಂಗ ತಾಯಿ ಎಂಬ ದೇವತೆಗಳಿವೆ. ಈ ದೇವತೆಗಳ ಜಾತ್ರೆ ಪ್ರತಿ ವರ್ಷ ಶಿವರಾತ್ರಿ ಅಮವಾಸ್ಯೆಯಾದ ಮೊದಲ ಸೋಮವಾರ ಧರ್ಮರ ದೇವರ ಜಾತ್ರೆ, ಅಮವಾಸ್ಯೆಯಾದ ಮೊದಲ ಗುರುವಾರರಂದು ನಿಜಲಿಂಗತಾಯಿ (ಸೀತಮ್ಮ) ದೇವರ ಜಾತ್ರೆ ನಡೆಯುತ್ತದೆ

ಇಲ್ಲೊಂದು ದೇವರಿಗೆ ಮದ್ಯವನ್ನೇ (ಸಾರಾಯಿ) ಅಭಿಷೇಕ ಮಾಡಲಾಗುತ್ತದೆ

ಇಂಡಿ: ತಾಲೂಕಿನ ಇಂಗಳಗಿ ಗ್ರಾಮದ ಶ್ರೀ ಮರುಳಸಿದ್ದೇಶ್ವರ (ಧರ್ಮರ ದೇವರ) ದೇವಾಲಯದ ಹೊರನೋಟ.

Profile Ashok Nayak Mar 2, 2025 1:42 PM

ಶರಣಬಸಪ್ಪಾ ಎನ್.ಕಾಂಬಳೆ

ಇಂಡಿ: ದೇವಾನು ದೇವತೆಗಳಿಗೆ ಕ್ಷೀರಾಭಿಷೇಕ, ನೀರಾಭಿಶೇಕ, ಹಣ್ಣುಗಳ ಅಭಿಶೇಕ ಮಾಡು ವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ದೇವರಿಗೆ ಮದ್ಯವನ್ನೇ (ಸಾರಾಯಿ) ಅಭಿಷೇಕ ಮಾಡಲಾಗುತ್ತದೆ. ಇದು ವಿಚಿತ್ರ ಎನಿಸಿದರೂ ಕಟು ಸತ್ಯ. ಹೀಗೆ ಸಾರಾಯಿಯಿಂದ ನೈವೆದ್ಯ ಮಾಡಿಸಿಕೊಳ್ಳುವ ದೇವರು ಇಂಡಿ ತಾಲೂಕಿನ ಇಂಗಳಗಿ ಗ್ರಾಮದ ಧರ್ಮರ ದೇವರು (ಮರುಳಸಿದ್ದೇಶ್ವರ). ಇಂಡಿ ನಗರದಿಂದ ಸುಮಾರು 6 ಕಿ.ಮೀ ದೂರದಲ್ಲಿರುವ ಈ ಗ್ರಾಮ ದಲ್ಲಿ ಮರುಳಸಿದ್ದೇಶ್ವರ ಹಾಗೂ ನಿಜಲಿಂಗ ತಾಯಿ ಎಂಬ ದೇವತೆಗಳಿವೆ. ಈ ದೇವತೆಗಳ ಜಾತ್ರೆ ಪ್ರತಿ ವರ್ಷ ಶಿವರಾತ್ರಿ ಅಮವಾಸ್ಯೆಯಾದ ಮೊದಲ ಸೋಮವಾರ ಧರ್ಮರ ದೇವರ ಜಾತ್ರೆ, ಅಮವಾಸ್ಯೆಯಾದ ಮೊದಲ ಗುರುವಾರರಂದು ನಿಜಲಿಂಗತಾಯಿ (ಸೀತಮ್ಮ) ದೇವರ ಜಾತ್ರೆ ನಡೆಯುತ್ತದೆ.

ಈ ಬಾರಿ ಮಾ. 3 ರಂದು ಸೋಮವಾರ ಧರ್ಮರ ದೇವರ (ಮರುಳಸಿದ್ದೇಶ್ವರ) ಜಾತ್ರಾ ಮಹೋತ್ಸವವಿದೆ. ಮಾ.6 ರಂದು ಗುರುವಾರ ನಿಜಲಿಂಗತಾಯಿ ದೇವತೆಯ ಜಾತ್ರಾ ಮಹೋತ್ಸವವಿದೆ.

ಇದನ್ನೂ ಓದಿ: Vijayapura shootout case: ವಿಜಯಪುರದಲ್ಲಿ ಹಾಡಹಗಲೇ ಗುಂಡಿನ ದಾಳಿ ನಡೆಸಿ ವ್ಯಕ್ತಿಯ ಬರ್ಬರ ಹತ್ಯೆ

ಧರ್ಮರ ದೇವರ (ಶ್ರೀ ಮರುಳಸಿದ್ದೇಶ್ವರ) ಜಾತ್ರಾ ಮಹೋತ್ಸವ ಮಾ.3 ಸೋಮವಾರ ರಂದು ನಡೆಯಲಿದ್ದು, ಅಂದು ಬೆಳಿಗ್ಗೆ ಶ್ರೀ ಮರುಳಸಿದ್ದೇಶ್ವರ ಕರ್ತೃ ಗದ್ದುಗೆಗೆ ಅಭಿಷೇಕ, ಸಾಯಂಕಾಲ ೬ ಘಂಟೆಗೆ ಗಂಗೆ ಸೀತಾಳ, ರಾತ್ರಿ ೮ ಘಂಟೆಗೆ ದೇವರಿಗೆ ವಿಶೇಷ ಅಭಿಷೇಕ ನಡೆಯಲಿದೆ. ತದನಂತರ ನುಡಿಮುತ್ತು (ದೇವರ ಹೇಳಿಕೆ) ಕಾರ್ಯಕ್ರಮವಿದ್ದು ರಾತ್ರಿ ೯ ಘಂಟೆಗೆ ಅನ್ನಪ್ರಸಾದ ವ್ಯವಸ್ಥೆ ಇರುತ್ತದೆ.

ಅಂದು ರಾತ್ರಿ ೭ ಯಿಂದ ೯ ವರೆಗೆ ಹಂತಿ ಪದ ಗಳು ಜರುಗಲಿದ್ದು, ರಾತ್ರಿ ೯ ನಂತರ ಅಥಣಿ ತಾಲೂಕಿನ ಬಳ್ಳಿಗೇರಿಯ ಬಸವೇಶ್ವರ ಹರದೇಶಿ ಗೀಗಿ ಮೇಳದ ಗಾಯಕ ರಾದ ಚಂದ್ರ ಕಾಂತ ಗುರಪ್ಪ ನಾಟಿಕಾರ ಸಂಗಡಿಗರಿಂದ ಹರದೇಶಿ ಗೀಗಿ ಪದಗಳು, ದೇವರ ಗೆಣ್ಣೂರ ಮಹಾಲಕ್ಷ್ಮಿ ನಾಗೇಶಿ ಮೇಳದ ಗಾಯಕರಾದ ಸುಜಾತ ಹಂಗರಗಿ ಹಾಗೂ ಸಂಗಡಿಗರಿಂದ ನಾಗೇಶಿ ಗೀಗೀ ಪದಗಳು ಜರುಗಲಿವೆ.

ವಿಶೇಷ ಮದ್ಯಾಭಿಷೇಕ: ಈ ದೇವತೆಗಳ ವಿಶೇಷತೆಯೆಂದರೆ ಜಾತ್ರಾ ಮಹೋತ್ಸವದ ದಿನ ರಾತ್ರಿ ೦೮ ಘಂಟೆಗೆ ಈ ದೇವತೆಗಳಿಗೆ ಭಕ್ತರು ನೈವೇದ್ಯ ರೂಪದಲ್ಲಿ ಸಾರಾಯಿಯನ್ನು ನೀಡುತ್ತಾರೆ. ಈ ರೀತಿ ಮಾಡುವುದರಿಂದ ನಮ್ಮ ಎಲ್ಲ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ಸರಾಗವಾಗಿ ಆಗುತ್ತವೆ ಎನ್ನುವ ನಂಬಿಕೆ ಭಕ್ತರಲ್ಲಿ ಇದೆ. ಇನ್ನೊಂದು ವಿಶೇಷ ಅಂದರೆ ಈ ನೈವೇದ್ಯ ಆದ ಮೇಲೆ ಸಾರಾಯಿಯನ್ನು ಎಲ್ಲ ಭಕ್ತಾದಿಗಳು (ಗಂಡಸರು ಮಾತ್ರ) ತೀರ್ಥ ಎಂದು ಸ್ವೀಕರಿಸುತ್ತಾರೆ.

ಪ್ರಸಾದ ವ್ಯವಸ್ಥೆ: ಜಾತ್ರಾದಿನ ಪೂಜಾ ನಂತರ ಅನ್ನಪ್ರಸಾದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಅದರಲ್ಲಿ ವಿಶೇಷವಾಗಿ ಕಿಚಡಿ ಹಾಗೂ ಅಂಬಲಿ, ಅಮ್ಮ ಹಾಗೂ ಸಾಂಬರ್ ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ. ಹೀಗಾಗಿ ಈ ಜಾತ್ರೆಯನ್ನು ಅಂಬಲಿ ಜಾತ್ರೆ ಎಂದೂ ಕರೆಯು ತ್ತಾರೆ.

ಭಕ್ತರ ದಂಡು: ಈ ದೇವತೆಗಳ ದರ್ಶನಕ್ಕೆ ತಾಲೂಕು ಅಲ್ಲದೆ ಗಡಿ ಭಾಗದ ಮಹಾರಾಷ್ಟ್ರ ದಿಂದಲೂ ಆಗಮಿಸುತ್ತಾರೆ ಈ ದೇವತೆಗಳ ದರ್ಶನ ಪಡೆದು ಮಧ್ಯದ ತೀರ್ಥ ಸ್ವೀಕರಿಸಿ ನುಡಿಮುತ್ತು (ಹೇಳಿಕೆ) ಕೇಳಿಕೊಂಡು ಹೋಗುವುದು ವಾಡಿಕೆಯಾಗಿದೆ.

ಏನೀ ಹೇಳಿಕೆ ಅಂದ್ರೆ? ದೇವತೆಗಳ ಪೂಜಾ ಕಾರ್ಯಕ್ರಮ ಮುಗಿದ ಮೇಲೆ ತೆಂಗಿನ ಕಾಯಿ ಗಳ ಮುಖಾಂತರ ಹೇಳಿಕೆಗಳು ನಡೆಯುತ್ತವೆ. ತೆಂಗಿನಕಾಯಿ ಒಡೆದಾಗ ಅದರ ಮುಂಭಾ ಗದ ಹೊಳಿಕೆ ಆಕಾಶದ ಕಡೆ ಮುಖ ಮಾಡಿ ಬಿದ್ರೆ ಆತನಿಗೆ ವಿಘ್ನವಿಲ್ಲ ವರ್ಷವಿಡೀ ಉತ್ತಮ ವಾದ ಜೀವನ ಸಾಗಿಸುತ್ತಾನೆ ಎಂದರ್ಥ. ಅದು ಆಕಸ್ಮಾತ್ ಭೂಮಿ ಕಡೆ ಮುಖ ಮಾಡಿ ಬಿದ್ರೆ ಆತನಿಗೆ ತೊಂದರೆಯಂತೆ ವರ್ಷವಿಡೀ ವಿಘ್ನಗಳು ಬರುತ್ತವೆ ಎಂಬುದು ಭಕ್ತರ ನಂಬಿಕೆ.

ಆ ದೇವತೆಗಳನ್ನು ನಂಬಿದ ಭಕ್ತ ವರ್ಗ ಅವರು ಬೇಡಿಕೊಂಡ ಹರಕೆಗಳು ಕೈಗೊಂಡಾಗ ಪ್ರತಿ ವರ್ಷ ಜಾತ್ರಾ ಮಹೋತ್ಸವದಂದು ಸಾಯಂಕಾಲ ದೀರ್ಘದಂಡ ನಮಸ್ಕಾರ ಹಾಕು ವ ಪದ್ದತಿ ಇದೆ. ವಿಶೇಷವೆಂದರೆ ಈ ದೇವತೆಗಳಿಗೆ ಹಿಂದೂ-ಮುಸ್ಲಿಂ ಎರಡು ಜನಾಂಗದ ವರು ಸಾಮರಸ್ಯದಿಂದ ಜಾತ್ರೆಯಲ್ಲಿ ಪಾಲ್ಗೊಂಡು ಭಾವೈಕ್ಯತೆ ಮೆರೆಯುತ್ತ ಅದ್ದೂರಿ ಯಾಗಿ ಜಾತ್ರೆ ಮಾಡುವ ಸಂಪ್ರದಾಯವಿದೆ.