ಯಾದಗಿರಿ: ಆರ್ ಎಸ್ ಎಸ್ ಶತಾಬ್ದಿ ವರ್ಷದ ಪಥ ಸಂಚಲನ ಹಿನ್ನೆಲೆ ರಾಜ್ಯದಲ್ಲಿ ಆರ್ ಎಸ್ ಎಸ್ ಪಥ ಸಂಚಲನದ ಪೈಟ್ ಜೋರಾಗಿದ್ದು, ಚಿತ್ತಾಪುರದ ಬಳಿಕ ಗುರಮಠಕಲ್ ನಲ್ಲೂ ಆರ್ ಎಸ್ ಎಸ್ ಪಥ ಸಂಚಲನಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ.
ಜಿಲ್ಲೆಯ ಗುರಮಠಕಲ್ ಪಟ್ಟಣದಲ್ಲಿ ಇಂದು ನಡೆಯಬೇಕಿದ್ದ ಪಥ ಸಂಚಲನಕ್ಕೆ ಅನುಮತಿ ನಿರಾಕರಿಸಲಾಗಿದೆ. ಆರ್ ಎಸ್ ಎಸ್ ಪಥ ಸಂಚಲನ ಕಾರ್ಯಕ್ರಮಕ್ಕೆ ಅನುಮತಿಯನ್ನು ಯಾದಗಿರಿ ಜಿಲ್ಲಾಧಿಕಾರಿ ಹರ್ಷಲ್ ಬೋಯರ್ ತಿರಸ್ಕರಿಸಿದ್ದಾರೆ. *ಪಥ ಸಂಚಲನ ಕಾರ್ಯಕ್ರಮಕ್ಕೆ 3 ದಿನ ಮೊದಲು ಅರ್ಜಿ ಸಲ್ಲಿಸಬೇಕೆಂದ ಡಿಸಿ ಹರ್ಷಲ್ ವಿವರಣೆ ನೀಡಿ ಅನುಮತಿಯನ್ನು ಕೊಡಲಾಗುವುದಿಲ್ಲ ಎಂದು ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: RSS procession: ಪ್ರಿಯಾಂಕ್ ಖರ್ಗೆ ಕ್ಷೇತ್ರದಲ್ಲಿ RSS ಪಥ ಸಂಚಲನಕ್ಕೆ ಬ್ರೇಕ್; ಮಹತ್ವದ ಆದೇಶ
ಸರಕಾರದ ನಡಾವಳಿ ಪ್ರಕಾರ ಅರ್ಜಿದಾರರು ಉದ್ದೇಶಿತ ಕಾರ್ಯಕ್ರಮದ ಮೂರು ದಿನ ಮೊದಲೇ ಅರ್ಜಿ ಸಲ್ಲಿಸಬೇಕು. ಸರಕಾರಿ ಪ್ರಾಧಿಕಾರ, ಆಸ್ತಿಗಳು ಮತ್ತು ಆವರಣಗಳನ್ನು ಬಳಸಲು ಅನುಮತಿ ಕೋರಿ ಸಕ್ಷಮ ಪ್ರಾಧಿಕಾರಕ್ಕೆ ಲಿಖಿತವಾಗಿ ಅರ್ಜಿ ಸಲ್ಲಿಸಬೇಕು.ಆದರೆ ಜಿಲ್ಲಾಡಳಿತ ಕಾರ್ಯಾ ಲಯಕ್ಕೆ ಪಥ ಸಂಚಲನದ ಮೂರು ದಿನ ಮೊದಲು ಅರ್ಜಿ ಸಲ್ಲಿಸಿಲ್ಲಹಾಗಾಗಿ ಇಂದು ನಡೆಯುವ ಪಥ ಸಂಚಲನ ಕಾರ್ಯಕ್ರಮಕ್ಕೆ ಅನುಮತಿ ತಿರಸ್ಕರಿಸಲಾಗಿದೆ ಎಂದ ಡಿಸಿ ಹರ್ಷಲ್ ಸ್ಪಷ್ಟಪಡಿಸಿದ್ದಾರೆ.
ಈಗಾಗಲೇ ಯಾದಗಿರಿ ಜಿಲ್ಲೆಯ ಸುರಪುರ, ಶಹಾಪುರ, ಹುಣಸಗಿ, ವಡಗೇರಾ ಹಾಗೂ ಯಾದಗಿರಿ ನಗರದಲ್ಲಿ ಪಥ ಸಂಚಲನ ಶಾಂತಿಯುತವಾಗಿ ನಡೆದಿದೆ. ಆದರೀಗ ಗುರಮಠಕಲ್ ಪಟ್ಟಣದಲ್ಲಿ ಅನುಮತಿ ನಿರಾಕರಣೆಗೆ ಹಲವು ಅನುಮಾನ ಮೂಡಿವೆ