ಬಾಲಕಿ ಜತೆ ಅನುಚಿತ ವರ್ತನೆ; ಸ್ವಯಂ ಘೋಷಿತ ದೇವ ಮಾನವ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ದೂರು
Mallikarjun Mutya Case: ಅಪ್ರಾಪ್ತ ಬಾಲಕಿಯ ಜತೆಗೆ ಅನುಚಿತ ವರ್ತನೆ ನಡೆಸಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ಪ್ರಕರಣದ ತನಿಖೆ ನಡೆಸಿ, ಕೈಗೊಂಡ ಕ್ರಮದಬಗ್ಗೆ ಆಯೋಗಕ್ಕೆ ವರದಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.
ಮಲ್ಲಿಕಾರ್ಜುನ ಮುತ್ಯಾ. -
ಯಾದಗಿರಿ: ಬಾಲಕಿಯೊಡನೆ ಅನುಚಿತವಾಗಿ ವರ್ತಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಶಹಾಪುರ ತಾಲೂಕಿನ ಮಹಲ್ ರೋಜಾದ ಸ್ವಯಂ ಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾ (Mallikarjun Mutya Case) ವಿರುದ್ಧ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ.
ಅಪ್ರಾಪ್ತ ಬಾಲಕಿಯ ಜತೆಗೆ ಅನುಚಿತ ವರ್ತನೆ ನಡೆಸಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಹಿನ್ನೆಲೆಯಲ್ಲಿ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ವಿಡಿಯೊ ತುಣುಕುಗಳನ್ನು ಪರಿಶೀಲನೆ ನಡೆಸಿ, ಸೂಕ್ತ ಕ್ರಮದ ಬಗ್ಗೆ ಆಯೋಗಕ್ಕೆ ವರದಿಯನ್ನು ಸಲ್ಲಿಸುವಂತೆ ಯಾದಗಿರಿ ಜಿಲ್ಲಾ ಪೊಲೀಸ್ ಅಧೀಕ್ಷರಿಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸೂಚಿಸಿದೆ.
ಯಾರೀತ ಮಲ್ಲಿಕಾರ್ಜುನ ಮುತ್ಯಾ?
ಕಳೆದ ನಾಲ್ಕು ವರ್ಷಗಳಿಂದ ಸಾಮಾಜಿಕ ಜಾಲತಾಣಗಳ ಮುಖೇನ ಮುನ್ನೆಲೆಗೆ ಬಂದ 26 ರಿಂದ 27 ವರ್ಷದ ಯುವಕ ಮಲ್ಲಿಕಾರ್ಜುನ, ಸ್ವಯಂ ಘೋಷಿತ ದೇವಮಾನವನಾಗಿ ಸದ್ದು ಮಾಡಿದ್ದಾನೆ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮಹಲರೋಜಾ ಗ್ರಾಮದವನಾದ ಮಲ್ಲಿಕಾರ್ಜುನ ಮುತ್ಯಾ ಹೇಳಿದ್ದೇ ಇವರ ಭಕ್ತರಿಗೆ ವೇದವಾಕ್ಯ. ಭಕ್ತರ ಮನದಲ್ಲಿ ನೆನೆದ ಮಾತನ್ನು ತಕ್ಷಣ ಮುಖದ ಮೇಲೆ ಹೇಳುವ ವಾಕ್ ಚಾತುರ್ಯದಿಂದ ಈತ ಎಲ್ಲಿಲ್ಲದ ಜನಪ್ರಿಯ ಪಡೆದಿದ್ದಾನೆ. ಮಹಲರೋಜಾ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಈಗ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂ ದೂರು ದಾಖಲಿಸಿಕೊಂಡಿದೆ.
ಪುತ್ತೂರು ಬಿಜೆಪಿ ಮುಖಂಡನ ಪುತ್ರನ ಪ್ರೇಮ ವಂಚನೆ ಪ್ರಕರಣ: ಸಾಯಲು ಯತ್ನಿಸಿದ ಮಗುವಿನ ತಾಯಿ