Yamaha: ಬೆಂಗಳೂರು ಕಾಮಿಕ್ ಕಾನ್ 2025ರಲ್ಲಿ ಅತ್ಯಪೂರ್ವ ಅನುಭವ ಒದಗಿಸಿದ ಯಮಹಾ
ಕಾಮಿಕ್ ಕಾನ್ ಕಾರ್ಯಕ್ರಮದಲ್ಲಿ ಕಾಮಿಕ್ ಪುಸ್ತಕ ಅಭಿಮಾನಿಗಳು, ಅನಿಮೆ ಆಸಕ್ತರು, ಮೋಟಾರ್ ಸೈಕಲ್ ಪ್ರೇಮಿಗಳು ಮತ್ತು ಟೆಕ್ ಸ್ಯಾವಿ ವ್ಯಕ್ತಿಗಳು ಸೇರಿದಂತೆ ವಿವಿಧ ಮನೋ ಭಾವದ ಮಂದಿ ಒಟ್ಟುಗೂಡಿದ್ದರು. ಎಲ್ಲರೂ ಯಮಹಾದ ಅನುಭವ ಜಗತ್ತಿನಲ್ಲಿ ಕಳೆದು ಹೋಗಲು ಉತ್ಸುಕರಾಗಿದ್ದರು
ಬೆಂಗಳೂರು ಕಾಮಿಕ್ ಕಾನ್ 2025ರಲ್ಲಿ ಪಾಪ್ ಸಂಸ್ಕೃತಿ ಜೊತೆಗೆ ಸ್ಟೈಲ್, ಕಾರ್ಯಕ್ಷಮತೆ ಮತ್ತು ಹುಮ್ಮಸ್ಸನ್ನು ಸಂಯೋಜಿಸಿದ ಯಮಹಾ
ಬೆಂಗಳೂರು: ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಕೆಟಿಪಿಓದಲ್ಲಿ ಜನವರಿ 18, 19 ರಂದು ನಡೆದ ಭಾರತದ ಪ್ರಧಾನ ಪಾಪ್ ಸಂಸ್ಕೃತಿ ಉತ್ಸವವಾದ ಕಾಮಿಕ್ ಕಾನ್‌ನಲ್ಲಿ ಇಂಡಿಯಾ ಯಮಹಾ ಮೋಟಾರ್ ಪ್ರೈ ಲಿಮಿಟೆಡ್ ಅತ್ಯಪೂರ್ವ ಅನುಭವ ಒದಗಿಸಿದೆ. ಹೊಸತನ ಮತ್ತು ತಂತ್ರಜ್ಞಾನ ಕೇಂದ್ರವೆಂದು ಕರೆಯಲ್ಪಡುವ ಬೆಂಗಳೂರಿನಲ್ಲಿ ನಡೆದ ಈ ಅಪ್ರತಿಮ ಕಾರ್ಯಕ್ರಮದಲ್ಲಿ ಸೃಜನಶೀಲತೆ, ಜೀವನಶೈಲಿ ಮತ್ತು ಅತ್ಯಾಧುನಿಕ ತಂತ್ರ ಜ್ಞಾನ ಎಲ್ಲವೂ ಸಮ್ಮಿಳಿತಗೊಂಡಿತ್ತು.
ಕಾಮಿಕ್ ಕಾನ್ ಕಾರ್ಯಕ್ರಮದಲ್ಲಿ ಕಾಮಿಕ್ ಪುಸ್ತಕ ಅಭಿಮಾನಿಗಳು, ಅನಿಮೆ ಆಸಕ್ತರು, ಮೋಟಾರ್ ಸೈಕಲ್ ಪ್ರೇಮಿಗಳು ಮತ್ತು ಟೆಕ್ ಸ್ಯಾವಿ ವ್ಯಕ್ತಿಗಳು ಸೇರಿದಂತೆ ವಿವಿಧ ಮನೋಭಾವದ ಮಂದಿ ಒಟ್ಟುಗೂಡಿದ್ದರು. ಎಲ್ಲರೂ ಯಮಹಾದ ಅನುಭವ ಜಗತ್ತಿನಲ್ಲಿ ಕಳೆದುಹೋಗಲು ಉತ್ಸುಕರಾಗಿದ್ದರು. ಈ ಕಾರ್ಯಕ್ರಮದಲ್ಲಿ ಯಮಹಾ ಎಕ್ಸ್ ಪೀರಿಯನ್ಸ್ ಝೋನ್ ಎದ್ದು ಕಾಣುವಂತೆ ಮೂಡಿಬಂದಿದ್ದು, ಆಕರ್ಷಕ ಚಟು ವಟಿಕೆಗಳ ಮೂಲಕ ಆಸಕ್ತರನ್ನು ಆರ್ಷಿಸಿತು.
ಯಮಹಾ ಸಂಸ್ಥೆಯು ಮೋಟೋ ಜಿಪಿ ಗೇಮಿಂಗ್ ಸೆಟಪ್ ಅನ್ನು ಸಿದ್ಧಗೊಳಿಸಿದ್ದು, ಆ ಮೂಲಕ ವರ್ಚುವಲ್ ರೇಸಿಂಗ್ ಅನುಭವ ಒದಗಿಸಲಾಯಿತು. ಸಮುರಾಯ್ ಥೀಮ್ ನ ಎಂಟಿ- 03 ಮತ್ತು ವೈಝಡ್‌ಎಫ್- ಆರ್15 ಮೋಟಾರ್ ಸೈಕಲ್ ಗಳನ್ನು ಪ್ರದರ್ಶನಕ್ಕೆ ಇಡಲಾಗಿದ್ದು, ಭಾಗವಹಿಸಿದವರು ಖುಷಿ ಯಿಂದ ಫೋಟೋ ತೆಗೆಸಿಕೊಂಡರು. ರೇ ಝಡ್ ಆರ್ ಸ್ಟ್ರೀಟ್ ರಾಲಿ ಸ್ಕೂಟರ್ ತನ್ನ ಅಭಿಮಾನಿಗಳಿಗೆ ಸ್ಮರಣೀಯ ಕ್ಷಣಗಳನ್ನು ರೂಪಿಸಿ ಕೊಳ್ಳಲು ಅನುವು ಮಾಡಿಕೊಟ್ಟಿತು.
ಭಾಗವಹಿಸಿದವರು ಮೋಟಾರ್ ಸೈಕ್ಲಿಂಗ್ ಮತ್ತು ಯಮಹಾದ ಹೊಸತನದೆಡೆಗೆ ತಾವು ಹೊಂದಿರುವ ಪ್ರೀತಿಯನ್ನು ವ್ಯಕ್ತ ಪಡಿಸಿದರು. ಸಂಭ್ರಮಾಚರಣೆ ಮಾಡಿದರು. ಯಮಹಾ ಸಂಸ್ಥೆಯು ಕಾಸ್ ಪ್ಲೇಯರ್ ಗಳು ಮತ್ತು ಅಭಿಮಾನಿಗಳಿಗೆ ವಿಶೇಷವಾದ ಕಾಮಿಕ್ ಕಾನ್ ಮತ್ತು ಯಮಹಾ ಬ್ರಾಂಡ್ ನ ದಿರಿಸುಗಳು ಮತ್ತು ಸ್ಮರಣಿಕೆಗಳನ್ನು ನೀಡಿ ಸಂಭ್ರಮವನ್ನು ಹೆಚ್ಚಿಸಿತು.
ಬೆಂಗಳೂರು ಕಾಮಿಕ್ ಕಾನ್ 2025 ರಲ್ಲಿ ಯಮಹಾ ಸಂಸ್ಥೆಯು ಭಾರತದ ಯುವಜನರು ಸಂಭ್ರಮಿಸುವ ನವೀನ ಅನುಭವಗಳನ್ನು ಒದಗಿಸುವ ಕುರಿತ ತನ್ನ ಬದ್ಧತೆಯನ್ನು ಸಾರಿತು. ಕಾಮಿಕ್ ಕಾನ್ ನಂತಹ ಕಾರ್ಯಕ್ರಮಗಳು ಯಮಹಾದ ಪ್ರೀಮಿಯಂ ಮತ್ತು ಸ್ಪೋರ್ಟಿ ಮೋಟಾರ್ ಸೈಕಲ್ ಬ್ರ್ಯಾಂಡ್ ಎಂಬ ಸ್ಥಾನವನ್ನು ಗಟ್ಟಿಗೊಳಿಸಿದ್ದು ಮಾತ್ರ ವಲ್ಲದೆ ಪಾಪ್ ಸಂಸ್ಕೃತಿ ಜೊತೆಗೆ ಮೋಟಾರ್ ಸೈಕ್ಲಿಂಗ್ ನ ಥ್ರಿಲ್ ಅನ್ನು ಮಿಳಿತ ಗೊಳಿಸು ತ್ತದೆ. ಯಮಹಾ ಯುವಜನರಿಗೆ ಸ್ಫೂರ್ತಿ ಒದಗಿಸುವುದನ್ನು ಮತ್ತು ಯುವಜನ ರೊಂದಿಗೆ ಬೆರೆಯುವುದನ್ನು ಮುಂದುವರೆಸಲಿದ್ದು, ಅಭಿಮಾನಿಗಳಲ್ಲಿ ಹುಮ್ಮಸ್ಸು ತುಂಬಿಸಲಿದೆ.