ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Earthquake : ಮಯನ್ಮಾರ್‌ನಲ್ಲಿ 7.2 ತೀವ್ರತೆಯ ಭೂಕಂಪ: ದೆಹಲಿ,ಬ್ಯಾಂಕಾಕ್‌ ಸೇರಿದಂತೆ ಹಲವು ಕಡೆ ಕಂಪನದ ಅನುಭವ

ಶುಕ್ರವಾರ ಬೆಳಿಗ್ಗೆ ಮಧ್ಯ ಮಯನ್ಮಾರ್ ನಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ತಿಳಿದು ಬಂದಿದೆ. ಮಧ್ಯಾಹ್ನ 12:30 ರ ಸುಮಾರಿಗೆ ಭೂಕಂಪ ಸಂಭವಿಸುತ್ತಿದ್ದಂತೆ ಕಟ್ಟಡಗಳಲ್ಲಿ ಎಚ್ಚರಿಕೆಯ ಶಬ್ದಗಳು ಮೊಳಗಿದವು. ಜನರಿಗೆ ಭೂ ಕಂಪನದ ಅನುಭವವಾಗುತ್ತಿದ್ದಂತೆ ಕಟ್ಟಡಗಳನ್ನು ಬಿಟ್ಟು ಹೊರಗೆ ಓಡಿ ಹೋಗಿದ್ದಾರೆ.

ಮಯನ್ಮಾರ್‌ನಲ್ಲಿ 7.2 ತೀವ್ರತೆಯ ಭೂಕಂಪ

Profile Vishakha Bhat Mar 28, 2025 1:03 PM

ನಾಯ್`ಪಿಯದಾವ್: ಶುಕ್ರವಾರ ಬೆಳಿಗ್ಗೆ ಮಧ್ಯ ಮಯನ್ಮಾರ್ ನಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ತಿಳಿದು ಬಂದಿದೆ. ಮಧ್ಯಾಹ್ನ 12:30 ರ ಸುಮಾರಿಗೆ ಭೂಕಂಪ ಸಂಭವಿಸುತ್ತಿದ್ದಂತೆ ಕಟ್ಟಡಗಳಲ್ಲಿ ಎಚ್ಚರಿಕೆಯ ಶಬ್ದಗಳು ಮೊಳಗಿದವು. ಜನರಿಗೆ ಭೂ ಕಂಪನದ ಅನುಭವವಾಗುತ್ತಿದ್ದಂತೆ ಕಟ್ಟಡಗಳನ್ನು ಬಿಟ್ಟು ಹೊರಗೆ ಓಡಿ ಹೋಗಿದ್ದಾರೆ. ಸದ್ಯ ಜನರು ಭಯಭೀತರಾಗಿ ಓಡಿ ಬಂದಿರುವ ದೃಶ್ಯ ಸಿಸಿಟವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಹಾನಿ ಅಥವಾ ಸಾವುನೋವುಗಳ ಬಗ್ಗೆ ಯಾವುದೇ ವರದಿಯಾಗಿಲ್ಲ. ಮಯನ್ಮಾರ್ ಗಡಿ ದೇಶವಾಗಿರುವ ಭಾರತದ ನವದೆಹಲಿಯಲ್ಲೂ ಭೂಮಿ ಕಂಪಿಸಿದ ಅನುಭವ ಆಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಬೆಳಿಗ್ಗೆ 11.50 ರ ಸುಮಾರಿಗೆ ಭೂಮಿಯ 10 ಕಿ.ಮೀ ಆಳದಲ್ಲಿ ಈ ಭೂಕಂಪ ಸಂಭವಿಸಿದೆ.



ಈ ಸುದ್ದಿಯನ್ನೂ ಓದಿ: Earthquake: ಮಣಿಪುರದಲ್ಲಿ ಮತ್ತೆ ಕಂಪಿಸಿದ ಭೂಮಿ; ಗಂಟೆಯ ಅಂತರದಲ್ಲಿ 2 ಭೂಕಂಪ

ಒಂದು ಭಯಾನಕ ವೀಡಿಯೊದಲ್ಲಿ ಗಗನಚುಂಬಿ ಕಟ್ಟಡವೊಂದು ಅಲುಗಾಡುತ್ತಿರುವುದು ಹಾಗೂ ಕಟ್ಟಡಗಳ ಮೇಲಿನ ಕೊಳದ ನೀರು ಅಂಚಿನಿಂದ ಬೀಳುತ್ತಿರುವುದು ಕಂಡು ಬಂದಿದೆ. ಸದ್ಯದ ಮಾಹಿತಿ ಪ್ರಕಾರ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ವರದಿಯಾಗಿದೆ. ಭೂಕಂಪ ಅನುಭವದ ಬಗ್ಗೆ ಮಾತನಾಡಿದ ವ್ಯಕ್ತಿಯೊಬ್ಬರು ಮನೆಯಲ್ಲಿ ಮಲಗಿದ್ದಾಗ ನನಗೆ ಆ ಶಬ್ದ ಕೇಳಿತು ನನಗೆ ಭಯಭೀತರಾಗಿ ಹೊರಗೆ ಓಡಿ ಬಂದೆವು ಎಂದು ಹೇಳಿದ್ದಾರೆ. ಚೀನಾ ಮತ್ತು ಥೈಲ್ಯಾಂಡ್‌ನಲ್ಲಿ ಕಂಪನದ ಅನುಭವವಾಗಿದೆ ಎಂದು ತಿಳಿದು ಬಂದಿದೆ. ಉತ್ತರ ಥೈಲ್ಯಾಂಡ್ ಮತ್ತು ರಾಜಧಾನಿ ಬ್ಯಾಂಕಾಕ್‌ನಾದ್ಯಂತ ಕಂಪನದ ಅನುಭವವಾಗಿದೆ.



ಭೂಕಂಪದ ತೀವೃತೆ ಎಷ್ಟಿತ್ತೆಂದರೆ, ಬ್ಯಾಂಕಾಕ್‌ನಲ್ಲಿ ಬಹುಮಡಿ ಕಟ್ಟವೊಂದು ಧರೆಗುರುಳಿದೆ, ನೋಡ ನೋಡುತ್ತಿದ್ದಂತೆ ಕಟ್ಟಡ ಕುಸಿದು ಬಿದ್ದಿದೆ. ಕಟ್ಟದಲ್ಲಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಈ ವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.