ಶಾಶ್ವತ ನೀರಿಗಾಗಿ 2ನೇ ಸ್ವಾತಂತ್ರ್ಯ ಸಂಗ್ರಾಮ ನಡೆಯಬೇಕಿದೆ : ವಿಶ್ರಾಂತ ನ್ಯಾಯಮೂರ್ತಿ ಗೋಪಾಲಗೌಡ ಅಭಿಮತ
ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕಳೆದ ಮೂರು ದಶಕಗಳಿಂದಲೂ ನಡೆಸುತ್ತಿರುವ ಶಾಶ್ವತ ನೀರಾವರಿ ಹೋರಾಟವನ್ನು ಸ್ವಾತಿಕವಾಗಿ ಕಾಣಲಾಗುತ್ತಿದೆ. ಇನ್ನೆಷ್ಟು ವರ್ಷಗಳ ಕಾಲ ಹೀಗೆ ಸಾಗಲು ಸಾಧ್ಯ. ಸಹನೆಗೂ ಮಿತಿಯಿದೆ ಎಂಬುದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅರ್ಥ ಮಾಡಿಕೊಳ್ಳಬೇಕಾಗಿದೆ


ಚಿಕ್ಕಬಳ್ಳಾಪುರ: ಬರಪಿಡಿತ ಜಿಲ್ಲೆಯ ಶಾಶ್ವತ ನೀರಾವರಿ ಕೂಗಿಗೆ ಸರ್ಕಾರಗಳು ಕಿವುಡಾ ಗಿದ್ದು ನೀರಿಗಾಗಿ 2ನೇ ಸ್ವಾತಂತ್ರ್ಯ ಸಂಗ್ರಾಮ ನಡೆಯಬೇಕಿದೆ ಎಂದು ವಿಶ್ರಾಂತ ನ್ಯಾಯ ಮೂರ್ತಿ ಗೋಪಾಲಗೌಡ ತಿಳಿಸಿದರು. ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳ ವಾರ ಶಾಶ್ವತ ನೀರಾವರಿ ಹೋರಾಟ ಸಮಿತಿಯಿಂದ ಏರ್ಪಡಿಸಿದ್ದ ಚಿಂತನ ಮಂಥನ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿ ಮಾತನಾಡಿದರು. ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕಳೆದ ಮೂರು ದಶಕಗಳಿಂದಲೂ ನಡೆಸುತ್ತಿರುವ ಶಾಶ್ವತ ನೀರಾವರಿ ಹೋರಾಟವನ್ನು ಸ್ವಾತಿಕವಾಗಿ ಕಾಣಲಾಗುತ್ತಿದೆ. ಇನ್ನೆಷ್ಟು ವರ್ಷಗಳ ಕಾಲ ಹೀಗೆ ಸಾಗಲು ಸಾಧ್ಯ. ಸಹನೆಗೂ ಮಿತಿಯಿದೆ ಎಂಬುದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.
ಇದನ್ನೂ ಓದಿ: Chikkaballapur news: ಒಳಮೀಸಲು ಜಾರಿಗೆ ನಮ್ಮ ಸರಕಾರ ಬದ್ಧ; ಬಲಗೈ ಸಮುದಾಯದ ವಿರೋಧವಿಲ್ಲ : ಸಚಿವ ಕೆ.ಹೆಚ್.ಮುನಿಯಪ್ಪ
ಚುನಾವಣೆಯಲ್ಲಿ ಅತ್ಯಾಚಾರಿಗಳು, ಶ್ರೀಮಂತ ಕುಳಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು ಗೆದ್ದು ಬರುತ್ತಿದ್ದಾರೆ. ಜನರು ಹಣಕ್ಕೆ ಮೈ ಮರೆತು ಅನರ್ಹರನ್ನು ಗೆಲ್ಲಿಸುತ್ತಿದ್ದಾರೆ. ಇದ ರಿಂದ ಆಡಳಿತ ಯಂತ್ರಾಂಗ ಹದಗೆಡುತ್ತಿದೆ. ಕಚೇರಿಗಳಲ್ಲಿ ಕರ್ತವ್ಯ ನಿರ್ವಹಣೆಗೆ ಲಂಚ, ಅನುದಾನದ ದುರುಪಯೋಗ, ಮಾರಕ ನೀತಿಗಳ ಜಾರಿ, ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲಕರ ನಿಲುವು, ನ್ಯಾಯಾಲಯಗಳಲ್ಲಿ ಅತ್ಯಾಚಾರಿಗಳಿಗೆ ಬೇಗ ಜಾಮೀನು ಮಂಜೂರು ಸೇರಿದಂತೆ ಹಲವು ಬೆಳವಣಿಗೆಗಳಾಗುತ್ತಿವೆ ಎಂದು ವಿಷಾದಿಸಿದರು.
ಒಳ್ಳೆಯ ಆಡಳಿತ ಯಂತ್ರಾಂಗ ವ್ಯವಸ್ಥೆ, ಒಗ್ಗಟ್ಟಿನಲ್ಲಿ ಜನರ ಕಾನೂನಾತ್ಮಕ ಹೋರಾಟಕ್ಕೆ ಸ್ಪಂದನೆ ಸಿಗುತ್ತದೆ. ಈ ನಿಟ್ಟಿನಲ್ಲಿ ಜನಪರ ನಿಲುವು ಅಗತ್ಯ ಎಂದರು. ಮಂಗಳವಾರ ನಡೆದ ಶಾಶ್ವತ ನೀರಾವರಿ ಯೋಜನೆ ಪಡೆಯಬೇಕಾದರೆ ಸವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಗೋಪಾಲಗೌಡ ನೇತೃತ್ವದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ ಮಾದರಿ ಯಲ್ಲಿ ಬೀದಿಗಿಳಿದು ಹೋರಾಡಲು ನಿರ್ಧರಿಸಲಾಯಿತು.
ಇಲ್ಲಿನ ಪತ್ರಕರ್ತರ ಭವನದಲ್ಲಿ ನಡೆದ ಚಿಂತನ ಮಂಥನ ಸಭೆಯಲ್ಲಿ ಕೋಲಾರ, ಚಿಕ್ಕ ಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಮುಖರನ್ನೊಳಗೊಂಡಂತೆ ಮಂಗಳ ವಾರ ಸಭೆಯಲ್ಲಿ ಯುವ ಜನರು, ವಿವಿಧ ಕ್ಷೇತ್ರಗಳ ಪ್ರಭಾವಿಗಳು, ತಜ್ಞರು, ಹಿರಿಯ ಅನುಭ ವಿಗಳು, ನಿವೃತ್ತ ಅಧಿಕಾರಿಗಳನ್ನೊಳಗೊಂಡ ತಂಡದಲ್ಲಿ ಹೋರಾಟವನ್ನು ಮುನ್ನಡೆಸಿ ಕೊಂಡು ಹೋಗುವುದರ ಬಗ್ಗೆ ಅಭಿಪ್ರಾಯ ವ್ಯಕ್ತವಾಯಿತು.
ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ಮಾತನಾಡಿ ಬಯಲು ಸೀಮೆಯ ಭಾಗದಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿಯುತ್ತಿದೆ. ಲಭ್ಯ ನೀರಿನಲ್ಲೂ ಮಾರಕ ಲವಣಾಂಶಗಳಿವೆ. ಇದಕ್ಕೆ ಶಾಶ್ವತ ನೀರಾವರಿ ಸೌಲಭ್ಯವನ್ನು ಒದಗಿಸಲು ಆಗ್ರಹಿಸಿ, ಕಳೆದ 3 ದಶಕಗಳಿಂದ ಹೋರಾಡಲಾಗುತ್ತಿದೆ. ಧರಣಿ, ಮನವಿ ಪತ್ರ ಸಲ್ಲಿಕೆ, ರ್ಯಾಲಿ, ಉಪವಾಸ ಸತ್ಯಾಗ್ರಹ, ಮುತ್ತಿಗೆ, ಬಂದ್ ವಿಧಾನ ಸೌಧ ಚಲೋ ಸೇರಿದಂತೆ ಎಲ್ಲ ರೀತಿಯಲ್ಲೂ ಗಮನ ಸೆಳೆಯಲಾಗಿದೆ. ಇದೆಲ್ಲವನ್ನೂ ಸ್ವಾತಿಕ ಸ್ವರೂಪವನ್ನಾಗಿ ಸರ್ಕಾರವು ಪರಿಗಣಿಸಿದೆ. ತಜ್ಞರು ಹೇಳಿದ್ದನ್ನು ಪರಿಗಣಿಸದೇ ಅವೈಜ್ಞಾನಿಕ ಯೋಜನೆಗಳನ್ನು ಜಾರಿಗೊಳಿಸ ಲಾಗುತ್ತಿದೆ. ಇನ್ನಾದರೂ ಜನರ ಕಣ್ಣಿಗೆ ಮಣ್ಣೆರಚುವ ಎತ್ತಿನ ಹೊಳೆ ನಾಟಕ ನಿಲ್ಲಿಸಬೇಕು ಎಂದು ಆಗ್ರಹಿಸಿದರು..ಇದು ಜನರ ತೆರಿಗೆಯ ದುರ್ವಿನಿಯೋಗ ಎಂದು ಬೇಸರಿಸಿದರು.
ಎತ್ತಿನಹೊಳೆ ಯೋಜನೆಯ ವೆಚ್ಚಯವನ್ನು ಮೊದಲು 14 ಸಾವಿರ ಕೋಟಿ, ಬಳಿಕ 24 ಸಾವಿರ ಕೋಟಿ ರೂಗಳಿಗೆ ಪರಿಷ್ಕರಿಸಲಾಗಿತ್ತು. ಮತ್ತೊಂದೆಡೆ ಪ್ರಾರಂಭದಲ್ಲಿ 23 ಟಿಎಂಸಿ ನೀರು, ಬಳಿಕ 18 ಟಿಎಂಸಿ ನೀರು ಎನ್ನುತ್ತಲೇ ಇದೀಗ 8 ಟಿಎಂಸಿ ನೀರು ಮಾತ್ರ ಲಭ್ಯ ವಾಗುತ್ತದೆ ಎನ್ನುವ ಹಂತಕ್ಕೆ ಬರಲಾಗಿದೆ ಎಂದು ಕಿಡಿಕಾರಿದರು.
ಸಭೆಯಲ್ಲಿ ರೈತ, ಮಹಿಳಾ, ಕನ್ನಡಪರ, ವಕೀಲ ಸೇರಿದಂತೆ ವಿವಿಧ ಸಂಟನೆಗಳ ಪರ ಮುಖಂಡರು ಭಾಗವಹಿಸಿದ್ದರು.
*
ಮತದಾರರ ಮೇಲೆ ಬಂಡವಾಳ ಹೂಡಿಕೆ ಮಾಡಿ ಚುನಾವಣೆ ಗೆಲ್ಲುವ ವರನ್ನು ಜನರು ಗೆಲ್ಲಿಸುತ್ತಿದ್ದಾರೆ. ಇದು ಬದಲಾಗಬೇಕು.ಹೀಗೆ ಆಯ್ಕೆಯಾದ ಜನಪ್ರತಿನಿಧಿಗಳು ಬಂಡವಾಳ ಹೂಡಿಕೆಯ ಪರ ನೀತಿಗಳನ್ನು ರೂಪಿಸುತ್ತಾರೆ. ಬಡವರ ಪರವಾಗಿ ಎಲ್ಲಿ ಮಾಡುತ್ತಾರೆ? ಎಂದು ವಿಶ್ರಾಂತ ನ್ಯಾಯಮೂರ್ತಿ ಗೋಪಾಲಗೌಡ ಪ್ರಶ್ನಿಸಿದರು.
ಕಾರ್ಯಾಗಾರವನ್ನುದ್ದೇಶಿಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ಅತ್ಯಾಚಾರಿಗಳು, ಶ್ರೀಮಂತ ಕುಳಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು ಗೆದ್ದು ಬರುತ್ತಿದ್ದಾರೆ. ಜನರು ಹಣಕ್ಕೆ ಮೈ ಮರೆತು ಅನರ್ಹರನ್ನು ಗೆಲ್ಲಿಸುತ್ತಿದ್ದಾರೆ. ಇದರಿಂದ ಆಡಳಿತ ಯಂತ್ರಾಂಗ ಹದಗೆಡುತ್ತಿದೆ. ಕಚೇರಿಗಳಲ್ಲಿ ಕರ್ತವ್ಯ ನಿರ್ವಹಣೆಗೆ ಲಂಚ, ಅನುದಾನದ ದುರುಪಯೋಗ, ಮಾರಕ ನೀತಿಗಳ ಜಾರಿ, ಕಾಪೋರ್ರೇಟ್ ಕಂಪನಿಗಳಿಗೆ ಅನುಕೂಲಕರ ನಿಲುವು, ನ್ಯಾಯಾಲಯಗಳಲ್ಲಿ ಅತ್ಯಾಚಾರಿಗಳಿಗೆ ಬೇಗ ಜಾಮೀನು ಮಂಜೂರು ಸೇರಿದಂತೆ ಹಲವು ಬೆಳವಣಿಗೆಗಳಾಗುತ್ತಿವೆ ಎಂದು ವಿಷಾದಿಸಿದರು.
ಒಳ್ಳೆಯ ಆಡಳಿತ ಯಂತ್ರಾಂಗ ವ್ಯವಸ್ಥೆ, ಒಗ್ಗಟ್ಟಿನಲ್ಲಿ ಜನರ ಕಾನೂನಾತ್ಮಕ ಹೋರಾಟಕ್ಕೆ ಸ್ಪಂದನೆ ಸಿಗುತ್ತದೆ. ಈ ನಿಟ್ಟಿನಲ್ಲಿ ಜನಪರ ನಿಲುವು ಅಗತ್ಯ ಎಂದರು.
ಸಭೆಯಲ್ಲಿ ಸುಷ್ಮಾ ಶ್ರೀನಿವಾಸ್, ಮಂಚೇನಹಳ್ಳಿ ಲಕ್ಷ್ಮೀ ನಾರಾಯಣ ರೆಡ್ಡಿ,ಮಳ್ಳೂರು ಹರೀಶ್, ಬಿಎಸ್ ನರಸಿಂಹಪ್ಪ, ಹಿತ್ತಲಳ್ಳಿ ಗೋಪಾಲ್ ಗೌಡ, ಹಿತ್ತಲಹಳ್ಳಿ ಸುರೇಶ್, ಆನೂರು ದೇವರಾಜ್, ಜೀವಿಕಾ ರತ್ನಮ್ಮ, ಭಕ್ತರಹಳ್ಳಿ ಪ್ರತೀಶ್, ಉಷಾ ಆಂಜನೇಯ ರೆಡ್ಡಿ, ಲಕ್ಷ್ಮೀ ನಾರಾಯಣ ರೆಡ್ಡಿ,ಜಿ.ಜಿ.ಹಳ್ಳಿ ನಾರಾಯಣ ಸ್ವಾಮಿ,ಲಾಯರ್ ನಾರಾಯಣ ಸ್ವಾಮಿ ಸೇರಿದಂತೆ 200 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.