Chikkaballapur news: ಒಳಮೀಸಲು ಜಾರಿಗೆ ನಮ್ಮ ಸರಕಾರ ಬದ್ಧ; ಬಲಗೈ ಸಮುದಾಯದ ವಿರೋಧವಿಲ್ಲ : ಸಚಿವ ಕೆ.ಹೆಚ್.ಮುನಿಯಪ್ಪ
ಒಳಮೀಸಲಾತಿ ಜಾರಿ ಸಂಬಂಧ ಮುಖ್ಯಮಂತ್ರಿಗಳು, ಹೆಚ್.ಸಿ.ಮಹದೇವಪ್ಪ, ಗೃಹಸಚಿವ ಡಾ.ಜಿ. ಪರಮೇಶ್ವರ್ ಅವರೊಂದಿಗೆ ಮಾತನಾಡಿದ್ದೇನೆ. ದತ್ತಾಂಶದ ಬಗ್ಗೆ ಶೀಘ್ರ ವರದಿ ನೀಡುವಂತೆ ಜಸ್ಟೀಸ್ ನಾಗಮೋಹನ್‌ದಾಸ್ ಅವರಲ್ಲಿ ಮನವಿ ಮಾಡಿದ್ದೇವೆ. ಅವರು ಹಲವಾರು ಸಮಿತಿಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು ಅವರ ಸಮಿತಿ ವರದಿ ನೀಡಲು ಶ್ರಮಿಸುತ್ತಿದೆ

ತಾಲೂಕಿನ ರಂಗಸ್ಥಳದಲ್ಲಿ ನಡೆದ ೧೦೮ ಸರಳ ಸಾಮೂಹಿಕ ವಿವಾಹದಲ್ಲಿ ಭಾಗವಹಿಸಿದ್ದ ಸಚಿವ ಕೆ.ಹೆಚ್.ಮುನಿಯಪ್ಪ ನವವಧುವರರಿಗೆ ಶುಭ ಹಾರೈಸಿದರು. ಕಾರ್ಯಕ್ರಮಕ್ಕೂ ಮುನ್ನ ಶ್ರೀರಂಗನಾಥಸ್ವಾಮಿಯ ದರ್ಶನ ಪಡೆದರು.

ಚಿಕ್ಕಬಳ್ಳಾಪುರ : ಒಳಮೀಸಲು ಜಾರಿಯ ವಿಚಾರದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಸ್ಪಷ್ಟವಾಗಿದೆ. ಜಾರಿಗೆ ದತ್ತಾಂಶ ಬೇಕಿದ್ದು ಈ ವಿಚಾರದಲ್ಲಿ ಜಸ್ಟೀಸ್ ನಾಗಮೋಹನ್ ದಾಸ್ ಅವರ ಸಮಿತಿ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಮಿಷನ್ ವರದಿ ಬಂದ ಕೂಡಲೇ ಜಾರಿ ಮಾಡಿಯೇ ತೀರುತ್ತೇವೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದರು.
ತಾಲೂಕಿನ ರಂಗಸ್ಥಳದಲ್ಲಿ ಅಂಬೇಡ್ಕರ್ ಸೇನೆ ನೇತೃತ್ವದಲ್ಲಿ ನಡೆದ ೧೦೮ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿ ವಧೂವರರನ್ನು ಆಶೀರ್ವದಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿದರು.
ಒಳಮೀಸಲಾತಿ ಜಾರಿ ಸಂಬಂಧ ಮುಖ್ಯಮಂತ್ರಿಗಳು, ಹೆಚ್.ಸಿ.ಮಹದೇವಪ್ಪ, ಗೃಹಸಚಿವ ಡಾ.ಜಿ. ಪರಮೇಶ್ವರ್ ಅವರೊಂದಿಗೆ ಮಾತನಾಡಿದ್ದೇನೆ. ದತ್ತಾಂಶದ ಬಗ್ಗೆ ಶೀಘ್ರ ವರದಿ ನೀಡುವಂತೆ ಜಸ್ಟೀಸ್ ನಾಗಮೋಹನ್‌ದಾಸ್ ಅವರಲ್ಲಿ ಮನವಿ ಮಾಡಿದ್ದೇವೆ. ಅವರು ಹಲವಾರು ಸಮಿತಿಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು ಅವರ ಸಮಿತಿ ವರದಿ ನೀಡಲು ಶ್ರಮಿಸುತ್ತಿದೆ. ಅವರಿಗೆ ಈ ಬಗ್ಗೆ ಕಳಕಳಿಯಿದೆ, ಅನುಭವ ಇದೆ. ಸರಕಾರ ಸಂಪೂರ್ಣವಾಗಿ ಒಳಮೀಸಲು ಪರವಾಗಿದೆ.
ಇದನ್ನೂ ಓದಿ: Chikkaballapur (Chinthamani) News: ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ
ಕಳೆದ 30 ವರ್ಷಗಳಿಂದ ಇದಕ್ಕಾಗಿ ಶ್ರಮಿಸಿ ಹೋರಾಟ ಮಾಡುತ್ತಾ ಬಂದಿರುವ ಎಲ್ಲಾ ಸಂಘ ಸಂಸ್ಥೆಗಳ ಮುಖಂಡರಿಗೆ, ಹೋರಾಟಗಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರೆಲ್ಲರ ತ್ಯಾಗ ಬಲಿದಾನ ಫಲವಾಗಿ ಒಳಮೀಸಲು ಜಾರಿಯಾಗುವ ಹಂತ ತಪುಪಿದೆ ಎಂದರು.
ಒಳಮೀಸಲು ಜಾರಿಯಲ್ಲಿ ಸರಕಾರ ಕ್ರಮಬದ್ಧವಾಗಿ ಶಿಸ್ತುಬದ್ಧವಾಗಿ ನಡೆದುಕೊಳ್ಳುತ್ತಿದೆ. ನಮ್ಮ ಸರಕಾರ ತೀರ್ಮಾನ ತೆಗೆದುಕೊಂಡಿದೆ.ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ನಾವೆಲ್ಲಾ ಕಾತರರಾಗಿದ್ದೇವೆ.ಕಮಿಷನ್ ವರದಿ ಬಂದ ಕೂಡಲೇ ನೂರಕ್ಕೆ ನೂರರಷ್ಟು ಜಾರಿ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಎಸ್‌ಸಿ.ಎಸ್‌ಪಿ, ಟಿಎಸ್‌ಪಿ ಅನುದಾನದ ದುರ್ಭಳಕೆಯ ಮಾತೇಯಿಲ್ಲ. ನಮ್ಮ ಸರಕಾರ ಬಹಳ ಜವಾವ್ದಾರಿಯಿಂದ ದಲಿತರ ಹಿತಕ್ಕಾಗಿ ಮಾತ್ರವೇ ಇದನ್ನು ಬಳಸುತ್ತಿದೆ.ಇದನ್ನು ಯಾವ ಕಾರಣ ಕ್ಕೂ ಅನ್ಯರಿಗೆ, ಅನ್ಯಕಾರ್ಯಕ್ಕೆ ಬಳಸಿಲ್ಲ ಎನ್ನುವ ಮೂಲಕ ದುರ್ಭಳಕೆಯ ಆರೋಪವನ್ನು ತಳ್ಳಿ ಹಾಕಿದರು.
*
ಸಮಾಜದಲ್ಲಿ ಸರಳವಿವಾಹಗಳನ್ನು ಹೆಚ್ಚೆಚ್ಚು ಮಾಡುವ ಮೂಲಕ ಬಡವರ ದೀನದಲಿತರ ಬಾಳಿಗೆ ಬೆಳಕಾಗುವ ಕೆಲಸವನ್ನು ಸಂಘಸಂಸ್ಥೆಗಳು, ಉಳ್ಳವರು ಮಾಡಲು ಮುಂದಾಗಬೇಕು. ರಂಗನಾಥ ಸ್ವಾಮಿ ಸನ್ನಿಧಿಯಲ್ಲಿ ಸರಳ ವಿವಾಹ ನಡೆಸುವ ಮೂಲಕ ನವವಧುವರರಿಗೆ ದೇವರ ಆಶೀರ್ವಾದ ವನ್ನು ಕಲ್ಪಿಸಿದ್ದಾರೆ. ಇಲ್ಲಿ ಬಂದು ಸತಿಪತಿಗಳಾಗುತ್ತಿರುವ ನಿಮ್ಮ ಭವಿಷ್ಯ ಉಜ್ವಲವಾಗಲಿ. ಪಾಲನಹಳ್ಳಿ ಮಠದ ಸಿದ್ಧರಾಜಸ್ವಾಮೀಜಿ ಬಂದು ಆಶೀರ್ವಾದ ಮಾಡಿರುವುದು ಕೂಡ ದೈವಬಲ ಹೆಚ್ಚುವಂತೆ ಮಾಡಿದೆ. ಅಂಬೇಡ್ಕರ್ ಸೇನೆಯ ಜಿಲ್ಲಾಧ್ಯಕ್ಷ ಪಿಳ್ಳಾಂಜಿನಪ್ಪ, ರಾಮಣ್ಣ, ಕೃಷ್ಣಪ್ಪ, ಚಲಪತಿ, ಮಂಜುನಾಥ್, ಮುನಿನಾರಾಯಣಪ್ಪ ಮತ್ತು ಅವರ ಗೆಳೆಯರು ಸೇರಿ ೮ ವರ್ಷಗಳಿಂದ ೧೦೮ ಜೋಡಿಗಳ ಸಾಮೂಹಿಕ ವಿವಾಹ ಮಾಡಿಕೊಂಡು ಬರುವ ಮೂಲಕ ಇತರೆ ಸಮಾಜಗಳಿಗೆ ಮಾದರಿಯಾಗಿದ್ದಾರೆ.ಈತಂಡ ಸಮಾಜಕ್ಕೆ ಒಳಿತಾಗುವ ಸಾರ್ಥಕವಾದ ಕೆಲಸಗಳನ್ನು ಮಾಡಿ ಕೊಂಡು ಹೋಗಲಿ ಎಂದು ಶುಭ ಹಾರೈಸಿದರು.
ಈ ವೇಳೆ ಕಾರ್ಯಕ್ರಮದ ಆಯೋಜಕ ಪಿಳ್ಳಾಂಜಿನಪ್ಪ, ಕಾಂಗ್ರೆಸ್ ಮುಖಂಡ ರಾಜೀವ್‌ಗೌಡ, ಪಟ್ರೇನಹಳ್ಳಿ ಕೃಷ್ಣ,ಯುವ ಮುಖಂಡ ನವೀನ್‌ರೆಡ್ಡಿ, ತಿರುಮಳಪ್ಪ ಮತ್ತಿತರರು ಇದ್ದರು.