Chikkaballapur News: ಸರ್ವೆ ಕಾರ್ಯದ ವೇಳೆ ಸ್ಥಳೀಯರ ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ
ಜಮೀನಿನಲ್ಲಿ ಕೋಳಾಲಮ್ಮ ಕೆರೆಯಿಂದ ಹಾದು ಹೋಗಿರುವ ಸರ್ಕಾರಿ ನಾಲಾ ಅಥವಾ ಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಬಡಾವಣೆಗಳು ಮಾಡು ತ್ತಿದ್ದಾರೆ. ಕೂಡಲೇ ಕಾನೂ ನು ರೀತಿಯಲ್ಲಿ ಬಡಾವಣೆಗಳು ಮಾಡದೇ ಇದ್ದರೆ ಕಾನೂನು ಹೋರಾಟ ಮಾಡುವು ದಾಗಿ ಹೇಳಿದರು


ಚಿಂತಾಮಣಿ: ತಾಲ್ಲೂಕಿನ ಕೈವಾರ ಹೋಬಳಿ ಬನಹಳ್ಳಿ ಗ್ರಾಮದ ಗೌಡನ ಕೆರೆಯ ರಾಜ ಕಾಲುವೆ ಹಾಗೂ ತೂಬಿನಿಂದ ನೀರು ಕಾಲುವೆ ಹಾಗೂ ಬಿ ಖರಾಬು ಜಮೀನುಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಬಡಾವಣೆಗಳನ್ನು ಮಾಡಿದ್ದಾರೆ ಎಂದು ಬನಹಳ್ಳಿ ಗ್ರಾಮದ ಶ್ರೀ ಕೋಳಾಲಮ್ಮ ಕೆರೆ ಅಭಿವೃದ್ಧಿ ಸಂಘದ ರವೀಂದ್ರ ಬಿನ್ ಲೇಟ್ ಮುನಿಯಪ್ಪ ಎಂಬುವರು ತಾಲೂಕು ದಂಡಾಧಿಕಾರಿಗಳಿಗೆ ಸರ್ವೆ ಕಾರ್ಯ ನಡೆಸಲು ಅರ್ಜಿ ಸಲ್ಲಿಸಿ ದ್ದರು. ಕಂದಾಯ ಇಲಾಖೆಯ ಅಧಿಕಾರಿಗಳಾದ ವಿನೋದ್, ಭೂಮಾಪನ ಇಲಾಖೆಯ ಸರ್ವೆ ಯರ್ ಅಂಜಿನಪ್ಪ,ಸ್ಥಳೀಯ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕರಿಬಸಪ್ಪ ಹಾಗೂ ಸಿಬ್ಬಂದಿ ಸರ್ವೆ ಕಾರ್ಯ ನಡೆಸಲು ಪೊಲೀಸ್ ಸೂಕ್ತ ಬಂದೋಬಸ್ತ್ ನಲ್ಲಿ ಫೀಲ್ಡಿಗೆ ಇಳಿದರು.
ಇದನ್ನೂ ಓದಿ: Chikkaballapur Accident: ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸಜೀವ ದಹನ, ಮೂವರಿಗೆ ಗಂಭೀರ ಗಾಯ
ಸರ್ವೆ ಕಾರ್ಯದ ವೇಳೆ ಅಧಿಕಾರಿಗಳ ಹಾಗೂ ಸ್ಥಳೀಯರ ನಡುವೆ ಕೆಲಕಾಲ ಗೊಂದಲ ಉಂಟಾಗಿ ಮಾತಿನ ಚಕಮಿಕಿ ನಡೆಯಿತು. ಪೋಲಿಸರ ಸೂಕ್ತ ಬಂದೋಬಸ್ತ್ ನಲ್ಲಿ ಸರ್ವೆ ಕಾರ್ಯ ಮುಕ್ತಾಯಗೊಂಡಿತು.
ಈ ವೇಳೆ ರವೀಂದ್ರ ರವರು ಮಾತನಾಡಿ, ತಾಲೂಕಿನ ಕೈವಾರ ಹೋಬಳಿಯ ಬನಹಳ್ಳಿ ಗ್ರಾಮದ ಸರ್ವೆ ನಂ:12/1 ರಲ್ಲಿ.08:00 ಗುಂಟೆ ಬಿ ಖರಾಬನ್ನು ಹಾಗೂ ಹಾದು ಹೋಗಿರುವ ಕಾಲುವೆಯನ್ನು ಗುರುತಿಸಿಕೊಡಲು ಗ್ರಾಮದವರು ತಾಲೂಕು ದಂಡಾಧಿಕಾರಿಗಳಿಗೆ ಲಿಖಿತ ಮೂಲಕ ಮನವಿಯನ್ನು ಸಲ್ಲಿಸಿದ್ದು.ಸರ್ವೆ ಅಧಿಕಾರಿಗಳು ಸರ್ವೆ ನಡೆಸಿದ್ದಾರೆ ಎಂದು ಹೇಳಿದ ಅವರು ಜಮೀನಿನಲ್ಲಿ ಕೋಳಾಲಮ್ಮ ಕೆರೆಯಿಂದ ಹಾದು ಹೋಗಿರುವ ಸರ್ಕಾರಿ ನಾಲಾ ಅಥವಾ ಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಬಡಾವಣೆಗಳು ಮಾಡು ತ್ತಿದ್ದಾರೆ. ಕೂಡಲೇ ಕಾನೂನು ರೀತಿಯಲ್ಲಿ ಬಡಾವಣೆಗಳು ಮಾಡದೇ ಇದ್ದರೆ ಕಾನೂನು ಹೋರಾಟ ಮಾಡುವುದಾಗಿ ಹೇಳಿದರು.
ಈ ವೇಳೆ ಗ್ರಾಮಸ್ಥರಾದ ಬಿ ಎಂ ಶ್ರೀಧರ್.ಕೃಷ್ಣಪ್ಪ,ನಾರಾಯಣಸ್ವಾಮಿ, ಮುನಿಯಪ್ಪ, ರವಿ, ಮಂಜುನಾಥ್, ಹರೀಶ್, ಅಮರ ನಾರಾಯಣ್ ಸೇರಿದಂತೆ ಸ್ಥಳೀಯರು ಇದ್ದರು.