Chikkaballapur Accident: ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸಜೀವ ದಹನ, ಮೂವರಿಗೆ ಗಂಭೀರ ಗಾಯ
ಬೆಂಗಳೂರು ಕಡೆಯಿಂದ ಖಾಸಗಿ ಭಾರತಿ ಬಸ್ ತಿರುಪತಿ ಕಡೆ ಹೋಗುತ್ತಿದ್ದು ಜೋಗ್ಯನಹಳ್ಳಿ ಹಾಗೂ ನಂದಿಗಾನಹಳ್ಳಿ ಮಧ್ಯದ ಹೈವೇ ರಸ್ತೆಯಲ್ಲಿ ಮುಖಮುಖಿ ಡಿಕ್ಕಿಯಾಗಿ ಖಾಸಗಿ ಬಸ್ ಪಲ್ಟಿ ಹೊಡೆದು ಕಾರು ಹೊತ್ತಿ ಉರಿದ ಪರಿಣಾಮ ಇಬ್ಬರು ಸಜೀವ ದಹನರಾಗಿದ್ದಾರೆ.

ಚಿಂತಾಮಣಿ: ಖಾಸಗಿ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸಜೀವ ದಹನ ಮೂವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಕೆಂಚರ‍್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಡಪ ಹೈವೇ ರಸ್ತೆಯ ಜೋಗ್ಯನಹಳ್ಳಿ ಹಾಗೂ ನಂದಿಗಾನಹಳ್ಳಿ ಮಧ್ಯದಲ್ಲಿ ಘಟನೆ ನಡೆದಿದೆ. ಘಟನೆ ಯಲ್ಲಿ ಮೃತಪಟ್ಟ ವ್ಯಕ್ತಿಗಳನ್ನು ಹಾಲಿ ವಾಸ ಬೆಂಗಳೂರು ಹಾಗೂ ಆಂಧ್ರಪ್ರದೇಶ ಕಡಪ ಮೂಲದ ಧನಂಜಯರೆಡ್ಡಿ(೩೧ ರ‍್ಷ)ಕಳಾವತಿ(೫೦ರ‍್ಷ) ಎಂದು ಗುರುತಿಸಲಾಗಿದೆ.
ಕಡಪ ಮೂಲದವರಾದ ಶೋಭಾ(೨೯ ರ‍್ಷ)ಮಹಾಲಕ್ಷ್ಮಿ(೬೦)ಮನ್ವಿತ್ (೩)ಸೇರಿದಂತೆ ಮೃತಪಟ್ಟ ಇಬ್ಬರು ವ್ಯಕ್ತಿಗಳು ಒಂದೇ ಕುಟುಂಬದವರಾಗಿದ್ದು ಕಾರಿನಲ್ಲಿ ಬೆಂಗಳೂರು ಕಡೆ ಹೋಗುತ್ತಿದ್ದರು.
ಇದನ್ನೂ ಓದಿ: Crime News: ಕೃಷಿ ಹೊಂಡದಲ್ಲಿ ಕರೆಂಟ್ ಶಾಕ್ ಹೊಡೆದು ಮೂವರು ಸಾವು
ಬೆಂಗಳೂರು ಕಡೆಯಿಂದ ಖಾಸಗಿ ಭಾರತಿ ಬಸ್ ತಿರುಪತಿ ಕಡೆ ಹೋಗುತ್ತಿದ್ದು ಜೋಗ್ಯನಹಳ್ಳಿ ಹಾಗೂ ನಂದಿಗಾನಹಳ್ಳಿ ಮಧ್ಯದ ಹೈವೇ ರಸ್ತೆಯಲ್ಲಿ ಮುಖಮುಖಿ ಡಿಕ್ಕಿಯಾಗಿ ಖಾಸಗಿ ಬಸ್ ಪಲ್ಟಿ ಹೊಡೆದು ಕಾರು ಹೊತ್ತಿ ಉರಿದ ಪರಿಣಾಮ ಇಬ್ಬರು ಸಜೀವ ದಹನರಾಗಿದ್ದಾರೆ.
ಘಟನೆಯ ವಿಷಯ ತಿಳಿದ ತಕ್ಷಣ ಜಿಲ್ಲಾ ರಕ್ಷಣಾಧಿಕಾರಿಗಳಾದ ಕುಶಾಲ್ ಚೌಕ್ಸೆ, ಅಡಿಷನಲ್ ಎಸ್ಪಿ ರಜಾ ಇಮಾಮ್ ಖಾಸಿಂ,ಡಿವೈಎಸ್ಪಿ ಮುರಳಿಧರ್, ಸರ್ಕಲ್ ಇನ್ಸ್ಪೆಕ್ಟರ್ ವೆಂಕಟರವಣಪ್ಪ, ಶಿವ ರಾಜಾ, ಸಬ್ ಇನ್ಸ್ಪೆಕ್ಟರ್ ಮಮತಾ ಹಾಗೂ ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.