Chikkaballapur News: ಜಂಗಮಕೋಟೆ ಹೋಬಳಿ ಕೈಗಾರಿಕಾ ಪ್ರಸ್ತಾಪ ಕೈಬಿಟ್ಟು ಅಧಿಸೂಚನೆ ರದ್ಧುಪಡಿಸಿ: ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹ
ಜಂಗಮ ಕೋಟೆ ಹೋಬಳಿಯಲ್ಲಿಯ ಭೂಮಿ ನೂರಕ್ಕೆ ನೂರರಷ್ಟು ಕೃಷಿ ಯೋಗ್ಯ ಭೂಮಿ ಯಾಗಿದ್ದು ಇಲ್ಲಿನ ರೈತರು ಚಿನ್ನದಂತಹ ಬೆಳೆಯನ್ನು ಬೆಳೆಯುತ್ತಿದ್ದಾರೆ. ಇಂತಹ ಫಲವತ್ತಾದ ಭೂಮಿಯನ್ನು ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು ಕೈಗಾರಿಕೆ ಸ್ಥಾಪನೆ ಹೆಸರಿನಲ್ಲಿ ವಶಪಡಿಸಿಕೊಳ್ಳಲು ಮುಂದಾಗಿರುವುದು ಸರ್ವಥಾ ಸರಿಯಲ್ಲ

ಸರಕಾರ ಹೊರಡಿಸಿರುವ ತಾತ್ಕಾಲಿಕ ಅಧಿಸೂಚನೆ ಯನ್ನು ವಾಪಸ್ಸು ಪಡೆದು ಕೃಷಿಭೂಮಿಯಲ್ಲಿ ಕೈಗಾರಿಕೆ ಮಾಡುವ ದಾರ್ಷ್ಟ್ಯವನ್ನು ಬಿಡಬೇಕು ಎಂದು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸರಕಾರವನ್ನು ಒತ್ತಾಯಿಸಿದರು.

ಚಿಕ್ಕಬಳ್ಳಾಪುರ; ಜಂಗಮಕೋಟೆ ಹೋಬಳಿಯ 13 ಗ್ರಾಮಗಳ ೨೮೨೩ ಎಕರೆ ಭೂಮಿಯನ್ನು ಕೈಗಾರಿಕಾಭಿವೃದ್ಧಿಗೆ ವಶಪಡಿಸಿಕೊಳ್ಳಲು ಸರಕಾರ ಹೊರಡಿಸಿರುವ ತಾತ್ಕಾಲಿಕ ಅಧಿಸೂಚನೆ ಯನ್ನು ವಾಪಸ್ಸು ಪಡೆದು ಕೃಷಿಭೂಮಿಯಲ್ಲಿ ಕೈಗಾರಿಕೆ ಮಾಡುವ ದಾರ್ಷ್ಟ್ಯವನ್ನು ಬಿಡಬೇಕು ಎಂದು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸರಕಾರವನ್ನು ಒತ್ತಾಯಿಸಿದರು.
ನಗರ ಹೊರವಲಯ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಂಗಮಕೋಟೆ ಹೋಬಳಿಯ ಕೃಷಿ ಭೂಮಿಯಲ್ಲಿ ಕೈಗಾರಿಕೆ ಸ್ಥಾಪನೆ ಮಾಡಬಾರದು ಎಂದು ಒತ್ತಾಯಿಸಿ ಅಹೋರಾತ್ರಿ ನಡೆಸುತ್ತಿರುವ ಹೋರಾಟವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಶಿಡ್ಲಘಟ್ಟ ತಾಲೂಕು ಜಂಗಮಕೋಟೆ ಹೋಬಳಿಯ ಕೊಲಿಮೆಹೊಸೂರು, ಸಂಜೀವಪುರ, ಅರಿಕೆರೆ, ತಾದೂರು, ತೊಟ್ಲಗಾನಹಳ್ಳಿ, ಯಣ್ಣಂಗೂರು, ಹೊಸಪೇಟೆ, ಚೊಕ್ಕೊಂಡಹಳ್ಳಿ, ಎದ್ದಲು ತಿಪ್ಪೇನ ಹಳ್ಳಿ, ದೇವಗಾನಹಳ್ಳಿ, ಗೊಲ್ಲಹಳ್ಳಿ, ನಡಿಪಿನಾಯಕನಹಳ್ಳಿ ಗ್ರಾಮಗಳ 2833 ಎಕರೆ ಭೂಮಿಯ ಅಧಿಸೂಚನೆಯನ್ನು ಕೂಡಲೇ ರದ್ಧು ಮಾಡಿ ರೈತರ ಹಿತ ಕಾಪಾಡಬೇಕು. ರೈತರನ್ನು ಎದುರು ಹಾಕಿಕೊಂಡು ಯಾವ ಸರಕಾರವೂ ಉಳಿದಿಲ್ಲ. ಹೀಗೆ ಮೊಂಡಾಟ ಆಡಿದರೆ ನಿಮ್ಮ ಸರಕಾರವೂ ಉಳಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಜಂಗಮ ಕೋಟೆ ಹೋಬಳಿಯಲ್ಲಿಯ ಭೂಮಿ ನೂರಕ್ಕೆ ನೂರರಷ್ಟು ಕೃಷಿ ಯೋಗ್ಯ ಭೂಮಿ ಯಾಗಿದ್ದು ಇಲ್ಲಿನ ರೈತರು ಚಿನ್ನದಂತಹ ಬೆಳೆಯನ್ನು ಬೆಳೆಯುತ್ತಿದ್ದಾರೆ. ಇಂತಹ ಫಲವತ್ತಾದ ಭೂಮಿಯನ್ನು ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು ಕೈಗಾರಿಕೆ ಸ್ಥಾಪನೆ ಹೆಸರಿನಲ್ಲಿ ವಶಪಡಿಸಿಕೊಳ್ಳಲು ಮುಂದಾಗಿರುವುದು ಸರ್ವಥಾ ಸರಿಯಲ್ಲ
Chikkaballapur News: ಕೇಂದ್ರ ರೇಷ್ಮೆ ಮಂಡಳಿಯ ಸದಸ್ಯರಾಗಿ ನೇಮಕವಾದ ಮಳ್ಳೂರು ಶಿವಣ್ಣನವರಿಗೆ ಸನ್ಮಾನ
ಜಂಗಮ ಕೋಟೆ ಹೋಬಳಿಯಲ್ಲಿಯ ಭೂಮಿ ನೂರಕ್ಕೆ ನೂರರಷ್ಟು ಕೃಷಿ ಯೋಗ್ಯ ಭೂಮಿ ಯಾಗಿದ್ದು ಇಲ್ಲಿನ ರೈತರು ಚಿನ್ನದಂತಹ ಬೆಳೆಯನ್ನು ಬೆಳೆಯುತ್ತಿದ್ದಾರೆ. ಇಂತಹ ಫಲವತ್ತಾದ ಭೂಮಿಯನ್ನು ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು ಕೈಗಾರಿಕೆ ಸ್ಥಾಪನೆ ಹೆಸರಿನಲ್ಲಿ ವಶಪಡಿಸಿಕೊಳ್ಳಲು ಮುಂದಾಗಿರುವುದು ಸರ್ವಥಾ ಸರಿಯಲ್ಲ. ಈ ಸಂಬಂಧ ಹೊರಡಿಸಿರುವ ತಾತ್ಕಾಲಿಕ ಅಧಿಸೂಚನೆ ರದ್ಧು ಮಾಡಬೇಕು.
ಇಲ್ಲವಾದಲ್ಲಿ ಉಗ್ರವಾದ ಹೋರಾಟವನ್ನು ಎದುರಿಸಬೇಕು ಎಂಬುದನ್ನು ಮನವರಿಕೆ ಮಾಡಿ ಕೊಡಲು ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಾವಿರಾರು ರೈತರ ಸಮ್ಮುಖದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದೇವೆ ಎಂದರು.
ಹೋರಾಟದಲ್ಲಿ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಭೈರೇಗೌಡ, ಆಲ್ ಇಂಡಿಯಾ ಬಹುಜನ ಪಾರ್ಟಿಯ ಗೋಪಿನಾಥ್, ಆರ್‌ಪಿಐನ ಮೋಹನ್‌ರಾಜ್, ಆಲ್ ಇಂಡಿಯಾ ಬಹುಜನ ಪಾರ್ಟಿಯ ಮಾರಸಂದ್ರ ಮುನಿಯಪ್ಪ, ಆರ್.ಪಿ.ಐ ರಾಷ್ಟ್ರೀಯ ಅಧ್ಯಕ್ಷ ಎನ್.ಮೂರ್ತಿ, ರೈತರ ಸಂಘದ ಜಿಲ್ಲಾಧ್ಯಕ್ಷ ರಾಮನಾಥ್, ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ, ಜಿ.ಮುನಿರಾಜು, ವೆಂಕಟೇಶ್, ತಾಲೂಕು ಅಧ್ಯಕ್ಷ ಗೋಪಾಲ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.