ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actor Prabhas: ಸಿಂಗಲ್ ಲೈಫ್‌ಗೆ ಪ್ರಭಾಸ್‌ ಗುಡ್‌ಬೈ? 'ಬಾಹುಬಲಿ`ಯ ಮದ್ವೆ ಬಗ್ಗೆ ಸಿಕ್ತು ಬಿಗ್‌ ಅಪ್ಡೇಟ್‌

Actor Prabhas: ಕಳೆದ ವರ್ಷ ಕೂಡ  ಪ್ರಭಾಸ್ ಅವರ ಮದುವೆಯ ವದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಅನುಷ್ಕಾ ಶೆಟ್ಟಿ, ಕೃತಿ ಸನೂನ್ ಸೇರಿದಂತೆ ಕೆಲ ನಟಿಯರ  ಹೆಸರು ಕೇಳಿಬಂದಿತ್ತು.ಇದೀಗ  ಪ್ರಭಾಸ್ ಮದುವೆ ಬಗ್ಗೆ  ಅವರ ಸ್ನೇಹಿತ ರಾಮ್‌ಚರಣ್ ಮಾತನಾಡಿದ್ದಾರೆ. ತೆಲುಗಿನ ಶೋ ಅನ್‌ಸ್ಟಾಪಬಲ್ ವಿತ್ ಎನ್‌ಬಿಕೆ ಸೀಸನ್ ನಲ್ಲಿ ರಾಮ್ ಚರಣ್  ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಬಾಲಕೃಷ್ಣ ಅವರು ಪ್ರಭಾಸ್ ಮದುವೆಯ ಕುರಿತು ಪ್ರಶ್ನೆ ಮಾಡಿದ್ದಾರೆ.

Actor Prabhas: ಸಿಂಗಲ್ ಲೈಫ್‌ಗೆ ಪ್ರಭಾಸ್‌ ಗುಡ್‌ಬೈ? 'ಬಾಹುಬಲಿ`ಯ ಮದ್ವೆ ಬಗ್ಗೆ ಸಿಕ್ತು ಬಿಗ್‌ ಅಪ್ಡೇಟ್‌

Profile Pushpa Kumari Jan 13, 2025 2:13 PM
ನವದೆಹಲಿ: ಹಲವು ವರ್ಷದಿಂದ ಪ್ರಭಾಸ್(Actor Prabhas) ಅಭಿಮಾನಿಗಳು ನಟನ  ಮದುವೆ ಅಪ್‌ಡೇಟ್‌ಗಾಗಿ ಕಾಯುತ್ತಿದ್ದಾರೆ. ಪ್ರಭಾಸ್‌ ಇನ್ನೂ ಯಾಕೆ ಸಿಂಗಲ್ ಆಗಿದ್ದಾರೆ ಎನ್ನುವ ಪ್ರಶ್ನೆ ಕೂಡ  ಅಭಿಮಾನಿಗಳಿಗೆ ಇತ್ತು. ಇದೀಗ ಟಾಲಿವುಡ್‌ ಸೂಪರ್‌ ಸ್ಟಾರ್‌ ಪ್ರಭಾಸ್‌ ಮದುವೆ ಸುದ್ದಿ ಮತ್ತೆ ವೈರಲ್‌ ಆಗುತ್ತಿದ್ದು  ಪ್ರಭಾಸ್ ಶೀಘ್ರದಲ್ಲೆ ಮದುವೆಯಾಗಲಿದ್ದಾರೆ ಎನ್ನಲಾಗಿದೆ.
ಕಳೆದ ವರ್ಷ ಕೂಡ  ಪ್ರಭಾಸ್ ಅವರ ಮದುವೆಯ ವದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಅನುಷ್ಕಾ ಶೆಟ್ಟಿ, ಕೃತಿ ಸನೂನ್ ಸೇರಿದಂತೆ ಕೆಲ ನಟಿಯರ  ಹೆಸರು ಕೇಳಿಬಂದಿತ್ತು.ಇದೀಗ  ಪ್ರಭಾಸ್ ಮದುವೆ ಬಗ್ಗೆ  ಅವರ ಸ್ನೇಹಿತ ರಾಮ್‌ಚರಣ್ ಮಾತನಾಡಿದ್ದಾರೆ. ತೆಲುಗಿನ ಶೋ ಅನ್‌ಸ್ಟಾಪಬಲ್ ವಿತ್ ಎನ್‌ಬಿಕೆ ಸೀಸನ್‌ನಲ್ಲಿ ರಾಮ್‌ಚರಣ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಬಾಲಕೃಷ್ಣ ಅವರು ಪ್ರಭಾಸ್ ಮದುವೆಯ ಕುರಿತು ಪ್ರಶ್ನೆ ಮಾಡಿದ್ದಾರೆ. ಆ ಸಂದರ್ಭದಲ್ಲಿ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ, ಆಂಧ್ರಪ್ರದೇಶದ ಗಣಪವರಂನ ಹುಡುಗಿಯನ್ನು ಪ್ರಭಾಸ್ ಮದುವೆಯಾಗಲಿದ್ದಾರೆ ಎಂದು ಹೇಳಿದ್ದರು. ಹಾಗಾಗಿ ಶೀಘ್ರದಲ್ಲೇ ಪ್ರಭಾಸ್​ ಮದುವೆ ಆಗುವುದು ಖಚಿತ ಎಂದು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ಚರ್ಚೆ ಯಾಗುತ್ತಿದೆ.
Prabhas💒👰🏻— Manobala Vijayabalan (@ManobalaV) January 10, 2025
ಈ ನಡುವೆ ಮನೋಬಾಲಾ ವಿಜಯಬಾಲನ್ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಪ್ರಭಾಸ್ ಮದುವೆಯ ಕುರಿತು ಪೋಸ್ಟ್ ಮಾಡಿದ್ದು ಪ್ರಭಾಸ್  ಅಭಿಮಾನಿಗಳು ಮತ್ತಷ್ಟು  ಉತ್ಸುಕರಾಗಿದ್ದಾರೆ. ಮನೋಬಾಲಾ ವಿಜಯಬಾಲನ್ ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ಪ್ರಭಾಸ್"  ಮದುವೆ  ಎಂದು   ವಧುವಿನ ಎಮೋಜಿಯನ್ನು ಬರೆದು ಪೋಸ್ಟ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ  ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ನಟ ಪ್ರಭಾಸ್ ಮದುವೆಯಾಗುವುದು ಪಕ್ಕಾ ಎನ್ನಲಾಗ್ತಾ ಇದೆ. ಈ ನಡುವೆ  ನಟಿ ಅನುಷ್ಕಾ ಶೆಟ್ಟಿಯೊಂದಿಗೆ ಪ್ರಭಾಸ್ ಹೆಸರನ್ನು ಲಿಂಕ್ ಮಾಡಿದ್ದಾರೆ.
ಸದ್ಯ ರಾಮ್‌ಚರಣ್ ನಟನೆಯ 'ಗೇಮ್‌ ಚೇಂಜರ್' ಸಿನಿಮಾ ಬಿಡುಗಡೆಯಾಗಿದ್ದು‌ ಈ ಚಿತ್ರದ ಪ್ರಚಾರದ ಭಾಗವಾಗಿಯೇ 'ಅನ್‌ಸ್ಟಾಪಬಲ್' ಶೋನಲ್ಲಿ ಮೆಗಾ ಪವರ್ ಸ್ಟಾರ್ ಭಾಗಿ ಆಗಿದ್ದರು.ಇದೀಗ ಪ್ರಭಾಸ್ ಮದುವೆ ಬಗ್ಗೆ ರಾಮ್ ಚರಣ್ ಸುಳಿವು ನೀಡಿದ ಬೆನ್ನಲ್ಲೇ ಮದುವೆ ಚರ್ಚೆಯ ಮಾತುಕತೆ ಜೋರಾಗಿದೆ.
ಇದನ್ನು ಓದಿ:Viral Video: ಈ ಬಸ್‌ ಚಾಲಕನ ಶ್ವಾನ ಪ್ರೀತಿಯನ್ನೊಮ್ಮೆ ನೋಡಿ; ಹೃದಯಸ್ಪರ್ಶಿ ವಿಡಿಯೊ ಭಾರೀ ವೈರಲ್‌