ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rakhi Sawant: ಪಾಕಿಸ್ತಾನಿ ನಟನ ಜತೆ ಮೂರನೇ ಮದುವೆಗೆ ಸಜ್ಜಾದ ನಟಿ‌ ರಾಖಿ ಸಾವಂತ್‌!

ನಟಿ ರಾಖಿ ಸಾವಂತ್ (Rakhi Sawant) ಸದ್ಯ ಮೂರನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ರಾಖಿ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದು ನಟಿ ತಾನು ಪಾಕಿಸ್ತಾನದಲ್ಲಿ ಮದುವೆಯಾಗಲು ಬಯಸುತ್ತೇನೆ ಎಂದು ಹೇಳಿಕೊಂಡಿದ್ದಾರೆ. "ನನಗೆ ಪಾಕಿಸ್ತಾನದಿಂದ ಹಲವು ಮದುವೆ ಪ್ರಸ್ತಾವನೆಗಳು ಬರುತ್ತಿವೆ. ಹೀಗಾಗಿ ನಾನು ಖಂಡಿತವಾಗಿಯೂ ಪಾಕಿಸ್ತಾನದಲ್ಲಿ ಮದುವೆಯಾಗಲು ಯೋಚಿಸಿದ್ದೇನೆ. ನಾನು ಪಾಕಿಸ್ತಾನಿ ಜನರನ್ನು ಇಷ್ಟಪಡುತ್ತೇನೆ ಮತ್ತು ಅಲ್ಲಿ ನನಗೆ ಅನೇಕ ಅಭಿಮಾನಿಗಳಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಮೂರನೇ ಮದ್ವೆಗೆ ರಾಖಿ ರೆಡಿ; ಕಾಂಟ್ರವರ್ಶಿಯಲ್‌ ಕ್ವೀನ್‌ ಮನಗೆದ್ದ ಪಾಕ್‌ ನಟ!

Rakhi Sawant

Profile Pushpa Kumari Jan 29, 2025 12:38 PM

ಮುಂಬೈ: ನಟಿ ರಾಖಿ ಸಾವಂತ್ (Rakhi Sawant) ಸದ್ಯ ಮೂರನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಪಾಕಿಸ್ತಾನ ಮೂಲದ ನಟ ಕಂ ಮಾಡೆಲ್‌ ಆಗಿರುವ ದೋದಿ ಖಾನ್ ಅವರನ್ನು ರಾಖಿ ಸಾವಂತ್ ಮದುವೆಯಾಗಲಿದ್ದು, ಇತ್ತೀಚೆಗೆ ನಟಿ‌ ಮದುವೆ ಪ್ರಸ್ತಾಪಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಪಾಕಿಸ್ತಾನದಿಂದ‌ ಹಲವು ಮದುವೆಯ ಪ್ರಸ್ತಾಪಗಳು ಬರುತ್ತಿವೆ ಎಂದು ನಟಿ ಹೇಳಿಕೊಂಡಿದ್ದಾರೆ. ರಾಖಿ ಸಾವಂತ್ ಇದುವರೆಗೆ ಎರಡು ಬಾರಿ ಮದುವೆಯಾಗಿದ್ದಾರೆ ಆದರೆ ಅವರ ಎರಡೂ ಮದುವೆಗಳು ಮುರಿದು ಬಿದ್ದಿದ್ದವು. ರಾಖಿಯ ಮೊದಲ ಮದುವೆ ರಿತೇಶ್ ಸಿಂಗ್ ಜೊತೆ ಆಗಿದ್ದು ಈ ಮದುವೆ ಹೆಚ್ಚು ಕಾಲ ಉಳಿಯಲಿಲ್ಲ. ಇದಾದ ನಂತರ, ನಟಿ ಆದಿಲ್ ಖಾನ್ ದುರಾನಿ ಅವರನ್ನು ಎರಡನೇ ಬಾರಿಗೆ ವಿವಾಹವಾಗಿದ್ದರು. ಅದೂ ಹೆಚ್ಚು ದಿನ ವರ್ಕ್‌ಔಟ್‌ ಆಗಲಿಲ್ಲ.

ಇದೀಗ ರಾಖಿ ತಮ್ಮ ಮೂರನೇ ಮದುವೆಯ ಬಗ್ಗೆ ಮಾತನಾಡಿದ್ದು ತಾನು ಪಾಕಿಸ್ತಾನದಲ್ಲಿ ಮದುವೆಯಾಗಲು ಬಯಸುತ್ತೇನೆ ಎಂದು ಹೇಳಿಕೊಂಡಿದ್ದಾರೆ. "ನನಗೆ ಪಾಕಿಸ್ತಾನದಿಂದ ಹಲವು ಮದುವೆ ಪ್ರಸ್ತಾವನೆಗಳು ಬರುತ್ತಿವೆ. ಹೀಗಾಗಿ ನಾನು ಖಂಡಿತವಾಗಿಯೂ ಪಾಕಿಸ್ತಾನದಲ್ಲಿ ಮದುವೆಯಾಗಲು ಯೋಚಿಸಿದ್ದೇನೆ. ನಾನು ಪಾಕಿಸ್ತಾನಿ ಜನರನ್ನು ಇಷ್ಟಪಡುತ್ತೇನೆ ಮತ್ತು ಅಲ್ಲಿ ನನಗೆ ಅನೇಕ ಅಭಿಮಾನಿಗಳಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ತಾನು ಮದುವೆಯಾಗುವ ಹುಡುಗನ ಬಗ್ಗೆ ಮಾತನಾಡಿ ಆತ ನಟ ಮತ್ತು ಪೊಲೀಸ್ ಅಧಿಕಾರಿ. ಮದುವೆ ಪಾಕಿಸ್ತಾನದಲ್ಲಿ ನಡೆಯಲಿದ್ದು ಆರತಕ್ಷತೆ ಭಾರತದಲ್ಲಿ ಇರುತ್ತದೆ ಮತ್ತು ನಮ್ಮ ಹನಿಮೂನ್‌ಗಾಗಿ ನಾವು ಸ್ವಿಟ್ಜ ರ್ಲೆಂಡ್ ಅಥವಾ ನೆದರ್‌ಲ್ಯಾಂಡ್‌ಗೆ ಹೋಗಲಿದ್ದೇವೆ. ಆದರೆ ನಾವು ದುಬೈನಲ್ಲಿ ನೆಲೆಸುತ್ತೇವೆ ಎಂದು ನಟಿ ಹೇಳಿದ್ದಾರೆ

ಇದನ್ನು ಓದಿ; Viral News: ಇವನ ಹೆಸರೇ ಛಬ್ಬೀಸ್‌ ಜನವರಿ....ಹೆಸರಿನಿಂದಲೇ ಈತ ಫುಲ್‌ ಫೇಮಸ್‌!

ರಾಖಿ ಸಾವಂತ್ ಮದುವೆಯಾಗುವ ಹುಡುಗನ ಹೆಸರು ದೋದಿ ಖಾನ್. ಇವರು ವೃತ್ತಿಯಲ್ಲಿ ಪೊಲೀಸ್ ಅಧಿಕಾರಿ‌ಯಾಗಿದ್ದು ಪಾಕಿಸ್ತಾನದ ಪ್ರಖ್ಯಾತ ನಟ ಕೂಡ ಆಗಿದ್ದಾರೆ. ಪಾಕಿಸ್ತಾನದ ದುರ್ಜ್‌, ‌ಘಬ್ರಾನಾ ನಹೀ ಹೈ ಆಖಾರ ಚೌಧರಿ ಹೀಗೆ ‌ಅನೇಕ ಚಲನ ಚಿತ್ರಗಳಲ್ಲಿ ದೋದಿ ಖಾನ್ ಅಭಿನಯಿಸಿದ್ದಾರೆ.