Viral News: ಇವನ ಹೆಸರೇ ಛಬ್ಬೀಸ್ ಜನವರಿ....ಹೆಸರಿನಿಂದಲೇ ಈತ ಫುಲ್ ಫೇಮಸ್!
ಮಧ್ಯಪ್ರದೇಶದ ಮಂದಸೌರ್‌ನಲ್ಲಿ ಬಹಳ ವರ್ಷಗಳ ಹಿಂದೆ ಜನವರಿ 26 ರಂದು ಅಂದರೆ ಭಾರತದ ಗಣರಾಜ್ಯೋತ್ಸವದಂದು ಹುಟ್ಟಿದ ಮಗುವಿಗೆ ಆತನ ತಂದೆ "ಛಬ್ಬಿಸ್ ಜನವರಿ" ಎಂದು ಹೆಸರಿಟ್ಟಿದ್ದರಂತೆ. ಈಗ, ಆ ಮಗು ಬೆಳೆದು ದೊಡ್ಡವನಾಗಿ 59 ವರ್ಷದ ವ್ಯಕ್ತಿಯಾಗಿದ್ದಾನೆ. ಆದರೆ ಈ ವರ್ಷದ ಗಣರಾಜ್ಯೋತ್ಸವದಂದು ಈ ವ್ಯಕ್ತಿ ಹೆಸರಿಗಾಗಿ ವೈರಲ್(Viral News) ಆಗಿದ್ದಾರೆ.

Chabbis January Talor name

ಭೋಪಾಲ್: ಜನವರಿ 26 ಬಂತಂದ್ರೆ ಸಾಕು ಈ ಊರಲ್ಲಿ ಈತ ಬಗ್ಗೆಯೇ ಚರ್ಚೆ. ಹೆಸರಲ್ಲೇನಿದೆ ಅಂತ ಕೇಳೋರು ಈತನ ಹೆಸರು ಕೇಳಿದ್ರೆ ಒಮ್ಮೆ ಅಚ್ಚರಿ ಪಡುವುದಂತೂ ಗ್ಯಾರಂಟಿ. ಇನ್ನು ಅಚ್ಚರಿ ಪಡುವವರಿಗಿಂತ ನಕ್ಕು ಕಿಚಾಯಿಸುವವರೇ ಹೆಚ್ಚು. ಹಾಗಿದ್ರೆ ಅಂತಹದ್ದೇನಿದೆ ಹೆಸರಲ್ಲಿ ಅಂತೀರಾ? ಈ ಸುದ್ದಿಯನ್ನೊಮ್ಮೆ ಓದಿ. ಮಧ್ಯಪ್ರದೇಶದ ಮಂದಸೌರ್‌ನಲ್ಲಿ ವ್ಯಕ್ತಿಯೋರ್ವ 59 ವರ್ಷದ ಹಿಂದೆ ಜನವರಿ 26 ರಂದು ಜನಿಸಿದ ತನ್ನ ಮಗನಿಗೆ ವಿಚಿತ್ರ ಹೆಸರನ್ನು ಇಟ್ಟಿದ್ದಾನೆ. ಆ ಮಗು ಗಣರಾಜ್ಯೋತ್ಸವದಂದು ಹುಟ್ಟಿದ್ದರಿಂದ "ಛಬ್ಬಿಸ್ ಜನವರಿ" ಎಂದು ಹೆಸರಿಟ್ಟಿದ್ದ. ತಂದೆ ಇಟ್ಟ ಆ ಹೆಸರೇ ಈ ವ್ಯಕ್ತಿಗೆ ಮುಳುವಾಗಿದೆ.
ಛಬ್ಬೀಸ್ ಜನವರಿ ಎಂಬ ಈ ವ್ಯಕ್ತಿ ಅಸಾಮಾನ್ಯ ಹೆಸರು ನಿಜವೆಂದು ಸಾಬೀತುಪಡಿಸಲು ಸರ್ಕಾರ ನೀಡಿದ ಗುರುತಿನ ಚೀಟಿಯನ್ನು ಕೈಯಲ್ಲಿ ಇಟ್ಟುಕೊಂಡು ತಿರುಗಾಡುತ್ತಾನೆ ಎನ್ನಲಾಗಿದೆ. ಯಾಕೆಂದರೆ ಆತನ ಹೆಸರು ಕೇಳಿ ಎಲ್ಲರೂ ಅರೆಕ್ಷಣ ಶಾಕ್ ಆಗುವ ಹಿನ್ನೆಲೆ ಹೆಸರನ್ನು ಖಚಿತಪಡಿಸಿಕೊಳ್ಳಲು, ಈ ವ್ಯಕ್ತಿ ತನ್ನ ಗುರುತಿನ ಚೀಟಿಯನ್ನು ಯಾವಾಗಲೂ ತನ್ನ ಜೊತೆ ಇಟ್ಟುಕೊಂಡಿರುತ್ತಾನೆ ಎನ್ನಲಾಗಿದೆ. ಈ ಸುದ್ದಿ ಎಲ್ಲೆಡೆ ಈಗ ವೈರಲ್(Viral News) ಆಗಿದೆ. ಈತನ ಪೂರ್ತಿ ಹೆಸರು ಛಬ್ಬಿಸ್ ಜನವರಿ ಟೇಲರ್. ಟೇಲರ್ ಎಂದರೆ ಕುಟುಂಬದ ಉಪನಾಮ ಎನ್ನಲಾಗಿದೆ
ಗಣರಾಜ್ಯೋತ್ಸವವನ್ನು ನೆನಪಿಸುವ ಈ ವ್ಯಕ್ತಿ ವಿಶೇಷ ಹೆಸರಿನಿಂದ ಸಿಕ್ಕಾಪಟ್ಟೆ ವೈರಲ್ ಆಗಿದ್ದಾನೆ. ಕೆಲವು ಸುದ್ದಿ ಮಾಧ್ಯಮಗಳು ಆತನ ಮತದಾರರ ಚೀಟಿ ಫೋಟೋವನ್ನು ಹಂಚಿಕೊಂಡಿದ್ದು, ಆತನ ಹೆಸರು "ಛಬ್ಬಿಸ್ ಜನವರಿ ತಲೋರ್" ಎಂದು ಸ್ಪಷ್ಟಪಡಿಸಿದೆ. "ತಲೋರ್" ಕುಟುಂಬದ ಉಪನಾಮವಾಗಿದೆ ಎಂದು ವರದಿ ಮಾಡಿವೆ.
ಇನ್ನು ಈ ವಿಚಿತ್ರ ಹೆಸರಿನಿಂದ ಈತ ಎದುರುಸಿದ ಸಂಕಷ್ಟ ಒಂದಿಷ್ಟಲ್ಲ. ಮದುವೆಯ ಸಮಯದಲ್ಲಿ ಮತ್ತು ಬ್ಯಾಂಕ್ ಖಾತೆಯನ್ನು ತೆರೆಯುವಲ್ಲಿ ತೊಂದರೆ ಸೇರಿದಂತೆ ಕಾನೂನು ಮತ್ತು ವೈಯಕ್ತಿಕ ಕೆಲಸ ಕಾರ್ಯಗಳಲ್ಲಿ ಹಲವಾರು ಸವಾಲುಗಳನ್ನು ಎದುರಿಸುವಂತಾಗಿದೆ ಎಂದು ವರದಿಯಾಗಿದೆ.
ಈ ಸುದ್ದಿಯನ್ನೂ ಓದಿ:Narendra Modi: ದಾರಿಯಲ್ಲಿ ಬಿದ್ದಿದ್ದ ಕಸ ಹೆಕ್ಕಿದ ಪ್ರಧಾನಿ ಮೋದಿ; ವೈರಲ್ ವಿಡಿಯೊ ಇಲ್ಲಿದೆ
ಈ ಹೆಸರಿನಿಂದಾಗಿ ಕೆಲವರು ಆತನನ್ನು ಗೇಲಿ ಮಾಡುತ್ತಾರೆ ಎಂದು ಹೇಳಲಾಗಿದೆ. ಆದರೆ ಆತ ತಂದೆ ನೀಡಿದ ಹೆಸರಿನ ಬಗ್ಗೆ ಎಂದಿಗೂಬೇಸರ ವ್ಯಕ್ತಪಡಿಸಿಲ್ಲ. ಅದರಿಂದಾಗಿ ಹಲವಾರು ಸಮಸ್ಯೆಗಳನ್ನು ಎದುರಿಸಿದರೂ ತನ್ನ ತಂದೆ ಪ್ರೀತಿಯಿಂದ ನೀಡಿದ ಹೆಸರನ್ನು ಉಳಿಸಿಕೊಳ್ಳುವುದಾಗಿ ಹೇಳಿಕೊಂಡಿದ್ದಾನೆ.