ಅಮೆಜಾನ್ ಇಂಡಿಯಾದಿಂದ ರೂ.2000 ಕೋಟಿ ಹೂಡಿಕೆ ಮಾಡುವ ಮೂಲಕ ತನ್ನ ಭಾರತದಾದ್ಯಂತ ಕಾರ್ಯಾಚರಣೆಗಳ ಜಾಲ ವಿಸ್ತರಣೆ
ಭಾರತದಲ್ಲಿ ಅತ್ಯಂತ ಸುರಕ್ಷಿತ, ವೇಗದ ಮತ್ತು ಅತ್ಯಂತ ವಿಶ್ವಾಸಾರ್ಹ ಕಾರ್ಯಾಚರಣೆಯ ಜಾಲವನ್ನು ನಿರ್ಮಿಸುವ ಮತ್ತು ಕಾರ್ಯ ನಿರ್ವಹಿಸುವ ತನ್ನ ಬದ್ಧತೆಯ ಭಾಗವಾಗಿ ಅಮೆಜಾನ್ ರೂ.2000 ಕೋಟಿ(233 ಯು.ಎಸ್.ಡಾಲರ್)ಗಳನ್ನು 2025ರಲ್ಲಿ ಹೂಡಿಕೆ ಮಾಡಲಿದೆ. ಈ ಹೂಡಿಕೆ ಯನ್ನು ಕಾರ್ಯಾಚರಣೆಯ ಮೂಲಸೌಕರ್ಯ ವಿಸ್ತರಣೆ ಮತ್ತು ಸುಧಾರಣೆ, ಅಸೋಸಿಯೇಟ್ ಸುರಕ್ಷತೆ ಸುಧಾರಣೆ ಮತ್ತು ಸ್ವಾಸ್ಥ್ಯದ ಕಾರ್ಯಕ್ರಮಗಳಿಗೆ ಬಳಸಲಾಗುತ್ತದೆ


ಜಾಲ ವಿಸ್ತರಣೆ ಮತ್ತು ಉನ್ನತೀಕರಣದಲ್ಲಿ ಹೂಡಿಕೆಗಳು ಗ್ರಾಹಕರಿಗೆ ವೇಗ ಮತ್ತು ಹೆಚ್ಚು ವಿಶ್ವಾಸಾರ್ಹತೆ, ಉದ್ಯೋಗಿ ಮತ್ತುಅಸೋಸಿಯೇಟ್ ಸ್ವಾಸ್ಥ್ಯ ಸುಧಾರಣೆ ಮತ್ತು ತಂತ್ರಜ್ಞಾನ ಹಾಗೂ ಆವಿಷ್ಕಾರದ ವಿಸ್ತರಣೆ
ಭಾರತದಲ್ಲಿ ಅತ್ಯಂತ ಸುರಕ್ಷಿತ, ವೇಗದ ಮತ್ತು ಅತ್ಯಂತ ವಿಶ್ವಾಸಾರ್ಹ ಕಾರ್ಯಾಚರಣೆಯ ಜಾಲವನ್ನು ನಿರ್ಮಿಸುವ ಮತ್ತು ಕಾರ್ಯ ನಿರ್ವಹಿಸುವ ತನ್ನ ಬದ್ಧತೆಯ ಭಾಗವಾಗಿ ಅಮೆಜಾನ್ ರೂ.2000 ಕೋಟಿ(233 ಯು.ಎಸ್.ಡಾಲರ್)ಗಳನ್ನು 2025ರಲ್ಲಿ ಹೂಡಿಕೆ ಮಾಡಲಿದೆ. ಈ ಹೂಡಿಕೆ ಯನ್ನು ಕಾರ್ಯಾಚರಣೆಯ ಮೂಲಸೌಕರ್ಯ ವಿಸ್ತರಣೆ ಮತ್ತು ಸುಧಾರಣೆ, ಅಸೋಸಿಯೇಟ್ ಸುರಕ್ಷತೆ ಸುಧಾರಣೆ ಮತ್ತು ಸ್ವಾಸ್ಥ್ಯದ ಕಾರ್ಯಕ್ರಮಗಳಿಗೆ ಬಳಸಲಾಗುತ್ತದೆ ಹಾಗೂ ತನ್ನ ಫುಲ್ ಫಿಲ್ ಮೆಂಟ್ ಜಾಲಕ್ಕೆ ಹೊಸ ಸಾಧನಗಳು ಮತ್ತು ತಂತ್ರಜ್ಞಾನ ಅಭಿವೃದ್ಧಿಪಡಿಸಲು ಬಳಸಲಾಗುತ್ತದೆ. ಈ ಹೊಸ ಹೂಡಿಕೆಯು ಅಮೆಜಾನ್ ಹೂಡಿಕೆಗಳ ಮೇಲೆ ನಿರ್ಮಿಸಲಾಗುತ್ತಿದ್ದು ಇದು ಕಂಪನಿಗೆ ಭಾರತದಾದ್ಯಂತ ಎಲ್ಲ ಸರ್ವೀಸಬಲ್ ಪಿನ್-ಕೋಡ್ ಗಳಿಗೆ ಪೂರೈಕೆ ಮಾಡುವ ಕಾರ್ಯ ನಿರ್ವಹಣೆಯ ಜಾಲ ಸೃಷ್ಟಿಸಲು ನೆರವಾಗುತ್ತದೆ.
“ಭಾರತದಲ್ಲಿ ಒಂದು ದಶಕಕ್ಕೂ ಮೇಲ್ಪಟ್ಟು ನಾವು ಅತ್ಯುತ್ತಮ ಲಾಜಿಸ್ಟಿಕ್ಸ್ ಮೂಲಸೌಕರ್ಯ ನಿರ್ಮಿಸಲು ಆದ್ಯತೆ ನೀಡಿದ್ದು ಸುರಕ್ಷತೆ, ವೇಗ, ವ್ಯಾಪ್ತಿ ಮತ್ತು ವಿಶ್ವಾಸಾರ್ಹತೆಯನ್ನು ನಮ್ಮ ಗ್ರಾಹಕರಿಗೆ ದೇಶಾದ್ಯಂತ ಪೂರೈಸಲು ವಿನ್ಯಾಸಗೊಳಿಸಿದ್ದೇವೆ. ಈ ಹೊಚ್ಚಹೊಸ ಹೂಡಿಕೆಗಳು ಸತತವಾಗಿ ನಮ್ಮ ಫುಲ್ ಫಿಲ್ ಮೆಂಟ್, ಸಾರ್ಟೇಷನ್ ಮತ್ತು ಡೆಲಿವರಿ ಜಾಲದಲ್ಲಿ ನಮ್ಮ ಕಾರ್ಯಾಚರಣೆಗಳನ್ನು ವಿಸ್ತರಿಸಲು ಮತ್ತು ಅಪ್ ಗ್ರೇಡ್ ಮಾಡಲು ನಮ್ಮ ಬದ್ಧತೆಯನ್ನು ಬಿಂಬಿಸುತ್ತವೆ.
ಇದನ್ನೂ ಓದಿ:Vishweshwar Bhat Column: ವಿಮಾನಗಳಲ್ಲಿ ಬ್ರೇಕ್ ವ್ಯವಸ್ಥೆ
ನಮ್ಮ ಮೂಲಸೌಕರ್ಯದ ಸಾಮರ್ಥ್ಯಗಳನ್ನು ಸದೃಢಗೊಳಿಸುವ, ಪ್ರೊಸೆಸಿಂಗ್ ಸಾಮರ್ಥ್ಯ ಹೆಚ್ಚಿಸುವ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಅನುಷ್ಠಾನಗೊಳಿಸುವ ಮೂಲಕ ನಾವು ಅಮೆಜಾನ್ ಗೆ ಇಡೀ ಭಾರತದಾದ್ಯಂತ ಗ್ರಾಹಕರಿಗೆ ಉತ್ತಮ ರೀತಿಯಲ್ಲಿ ಸೇವೆ ಒದಗಿಸಲು ಹಾಗೂ ಅದರ ಕೇಂದ್ರದಲ್ಲಿರುವ ನಮ್ಮ ಉದ್ಯೋಗಿಗಳು, ಅಸೋಸಿಯೇಟ್ ಗಳು ಹಾಗೂ ಪಾಲುದಾರರಿಗೆ ಉತ್ತಮ ರೀತಿಯಲ್ಲಿ ಸೇವೆ ಒದಗಿಸಲು ಅಮೆಜಾನ್ ಅನ್ನು ಸಜ್ಜುಗೊಳಿಸುತ್ತಿದ್ದೇವೆ” ಎಂದು ಅಮೆಜಾನ್ ಇಂಡಿಯಾ ಮತ್ತು ಆಸ್ಟ್ರೇಲಿಯಾದ ಆಪರೇಷನ್ಸ್ ವಿ.ಪಿ. ಅಭಿನವ್ ಸಿಂಗ್ ಹೇಳಿದರು.
ಮೂಲಸೌಕರ್ಯ ವಿಸ್ತರಣೆ ಮತ್ತು ಉನ್ನತೀಕರಣ
ಅಮೆಜಾನ್ ಈ ಹೂಡಿಕೆಗಳನ್ನು ಹೊಸ ತಾಣಗಳನ್ನು ಪ್ರಾರಂಭಿಸಲು ಮತ್ತು ತನ್ನ ಫುಲ್ ಫಿಲ್ ಮೆಂಟ್, ಸಾರ್ಟೇಷನ್ ಮತ್ತು ಡೆಲಿವರಿ ಜಾಲದ ಉನ್ನತೀಕರಣಕ್ಕೆ ಬಳಸಲು ಯೋಜಿಸಿದೆ. ಈ ಹೂಡಿಕೆಯು ಪ್ರೊಸೆಸಿಂಗ್ ಸಾಮರ್ಥ್ಯ ಹೆಚ್ಚಿಸಲಿದೆ, ಫುಲ್ ಫಿಲ್ ಮೆಂಟ್ ವೇಗ ಹೆಚ್ಚಿಸಲಿದೆ ಮತ್ತು ಕಂಪನಿಯ ಕಾರ್ಯಾಚರಣೆಯ ಜಾಲದಲ್ಲಿ ದಕ್ಷತೆ ಹೆಚ್ಚಿಸಲಿದ್ದು ಅದು ಅಮೆಜಾನ್ ಗೆ ಭಾರತದಾ ದ್ಯಂತ ಗ್ರಾಹಕರಿಗೆ ವೇಗ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿ ಸೇವೆ ಒದಗಿಸಲು ನೆರವಾಗುತ್ತದೆ. ಅಮೆಜಾನ್ ನ ಕಾರ್ಯಾಚರಣೆಗಳ ಜಾಲ ನಿರ್ಮಾಣದಲ್ಲಿನ ಪ್ರಸ್ತುತದ ಹಾಗೂ ಹೊಸ ಕಟ್ಟಡ ಗಳನ್ನು ಅತ್ಯಾಧುನಿಕ ತಂತ್ರಜ್ಞಾನ ಮತ್ತು ದಕ್ಷತೆಯ ಕಟ್ಟಡ ವ್ಯವಸ್ಥೆಗಳೊಂದಿಗೆ ನಿರ್ಮಿಸ ಲಾಗಿದ್ದು ಅದು ವಿದ್ಯುಚ್ಛಕ್ತಿಯ ಬಳಕೆಯನ್ನು ಕನಿಷ್ಠಗೊಳಿಸುತ್ತದೆ. ಕಂಪನಿಯು ಸತತವಾಗಿ ಕೂಲಿಂಗ್ ಸಿಸ್ಟಂಗಳ ಸುಧಾರಣೆಗಳಿಗೆ ಆದ್ಯತೆ ನೀಡುತ್ತಿದೆ, ಸುರಕ್ಷತೆಯ ಉಪಕ್ರಮಗಳು ಮತ್ತು ವಿಶ್ರಾಂತಿಯ ಪ್ರದೇಶಗಳು ಸ್ವಾಸ್ಥ್ಯ ಮತ್ತು ಸುರಕ್ಷತೆ ನೀಡುವ ಮೂಲಕ ಎಲ್ಲರನ್ನೂ ಒಳಗೊಳ್ಳುವ ಕೆಲಸದ ಪರಿಸರ ನೀಡುತ್ತದೆ. ಈ ಕಾರ್ಯತಂತ್ರೀಯ ಹೂಡಿಕೆಗಳು ಭಾರತದಲ್ಲಿ ತನ್ನ ಕಾರ್ಯಾಚರಣೆಯ ಹೆಜ್ಜೆ ಗುರುತನ್ನು ಸದೃಢಗೊಳಿಸುವ ಮಾರಾಟಗಾರರಿಗೆ ಗ್ರಾಹಕರ ಅನುಕೂಲ ಹೆಚ್ಚಿಸಲು ಮತ್ತು ಸ್ಥಳೀಯ ಅರ್ಥವ್ಯವಸ್ಥೆಗಳಲ್ಲಿ ಪ್ರಗತಿಯನ್ನು ಮುನ್ನಡೆಸಲು ಅಮೆಜಾನ್ ನ ಮುಂದುವರಿದ ಆದ್ಯತೆಯನ್ನು ತೋರುತ್ತಿದೆ.
ಆರೋಗ್ಯ ಮತ್ತು ಹಣಕಾಸು ಸ್ವಾಸ್ಥ್ಯ
ಅಮೆಜಾನ್ ಕಾರ್ಯಾಚರಣೆಗಳ ಜಾಲದಾದ್ಯಂತ ತನ್ನ ಉದ್ಯೋಗಿಗಳು ಮತ್ತು ಅಸೋಸಿಯೇಟ್ ಗಳ ಆರೋಗ್ಯ ಮತ್ತು ಹಣಕಾಸು ಸ್ವಾಸ್ಥ್ಯ ಸುಧಾರಣೆಗೆ ಹೂಡಿಕೆ ಮತ್ತು ಉಪಕ್ರಮಗಳ ವಿಸ್ತರಣೆ ಮುಂದುವರಿಸಲಿದೆ. ಇದರಲ್ಲಿ `ಆಶ್ರಯ್’ನಂತಹ ವಿಸ್ತರಣೆಯ ಉಪಕ್ರಮಗಳು ಡೆಲಿವರಿ ಅಸೋ ಸಿಯೇಟ್ ಗಳಿಗೆ ರೆಸ್ಟ್ ಪಾಯಿಂಟ್ ಗಳನ್ನು ನೀಡುತ್ತಿದ್ದು, ಅಮೆಜಾನ್ ಗೆ ಡೆಲಿವರಿ ಮಾಡದೇ ಇದ್ದವರಿಗೆ ಕೂಡಾ ಸೀಟು, ನೀರು, ಚಾರ್ಜಿಂಗ್ ಸ್ಟೇಷನ್ ಗಳು ಮತ್ತು ವಾಷ್ ರೂಂ ಸೌಲಭ್ಯಗಳು, `ಸಮೃದ್ಧಿ’ ಎಂಬ ಅಸೋಸಿಯೇಟ್ ಗಳು ಮತ್ತು ಚಾಲಕರಿಗೆ ಹಣಕಾಸು ಶಿಕ್ಷಣ ಮತ್ತು ವೈಯಕ್ತಿಕ ಹಣಕಾಸು ಕೇಂದ್ರಿತ ಹಣಕಾಸು ಸ್ವಾಸ್ಥ್ಯದ ಕಾರ್ಯಕ್ರಮ; `ಪ್ರತಿಧಿ’ ಎಂಬ ಅಸೋಸಿಯೇಟ್ ಗಳ ಮಕ್ಕಳಿಗೆ ಶಿಷ್ಯವೇತನದೊಂದಿಗೆ ಬೆಂಬಲಿಸುವ ಕಾರ್ಯಕ್ರಮ; ಮತ್ತು `ಸುಶ್ರುತ’ ಎಂಬ ಟ್ರಕ್ ಚಾಲಕರ ಆರೋಗ್ಯಸೇವಾ ಅಗತ್ಯಗಳನ್ನು ಪೂರೈಸುವ ಕಾರ್ಯಕ್ರಮ ಹೊಂದಿದೆ. ಹೆಚ್ಚುವರಿ ಯಾಗಿ ಅಮೆಜಾನ್ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ಹಾಗೂ ವಿಮೆಯ ರಕ್ಷಣೆಯನ್ನು ನಮ್ಮ ಕಟ್ಟಡ ಗಳಲ್ಲಿ ಕೆಲಸ ಮಾಡುವ ಅಸೋಸಿಯೇಟ್ ಗಳಿಗೆ ಹಾಗೂ ನಮ್ಮ ಗ್ರಾಹಕರಿಗೆ ಡೆಲಿವರಿ ಮಾಡುವವರಿಗೆ ನೀಡುತ್ತದೆ. ಇತ್ತೀಚೆಗೆ ಅಮೆಜಾನ್ 2025ರ ಅಂತ್ಯಕ್ಕೆ 80,000ಕ್ಕೂ ಹೆಚ್ಚು ಡೆಲಿವರಿ ಅಸೋಸಿಯೇಟ್ ಗಳಿಗೆ ಉಚಿತ ಆರೋಗ್ಯ ಪರೀಕ್ಷೆಗಳ ದೇಶವ್ಯಾಪಿ ಉಪಕ್ರಮಗಳನ್ನು ಪ್ರಾರಂಭಿಸಿದೆ.
ಹೊಸ ಸಾಧನಗಳು ಮತ್ತು ತಂತ್ರಜ್ಞಾನದ ಅಭಿವೃದ್ಧಿ
ಅಮೆಜಾನ್ ಡೆಲಿವರಿ ಅಸೋಸಿಯೇಟ್ ಗಳನ್ನು ಎಚ್ಚರಿಸಲು ಹೊಚ್ಚಹೊಸ ತಂತ್ರಜ್ಞಾನಗಳನ್ನು ಬಳಸುವ ಮೂಲಕ ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ಮತ್ತು ಅಸುರಕ್ಷಿತ ವೇಗಗಳ ವಿರುದ್ಧ ಎಚ್ಚರಿಸುತ್ತಿದೆ ಮತ್ತು ವಿಶ್ರಾಂತಿಯ ಬಿಡುವಿಗೆ ಉತ್ತೇಜಿಸುತ್ತಿದೆ. ಅಮೆಜಾನ್ ಮಾರ್ಗದ ಸಂಕೀರ್ಣತೆಯನ್ನು ಅಳೆಯುವ ಸಾಧನಗಳು ಮತ್ತು ಪೂರೈಕೆ ಮಾರ್ಗಗಳ ಸಮಾನ ವಿತರಣೆಯಲ್ಲಿ ಹೂಡಿಕೆ ಮಾಡುತ್ತಿದ್ದು ಪ್ರತಿ ಡೆಲಿವರಿಗೂ ತಕ್ಕಷ್ಟು ಸಮಯ ನೀಡುತ್ತದೆ. ಅಮೆಜಾನ್ ಡ್ರೈವರ್ ಆನ್ ಬೋರ್ಡಿಂಗ್ ಪ್ರಕ್ರಿಯೆಯನ್ನು ಸುಸೂತ್ರಗೊಳಿಸುತ್ತಿದೆ ಮತ್ತು ಉತ್ತಮ ಗಳಿಕೆಯ ಪಾರದರ್ಶಕತೆ ಮತ್ತು ಅನುಕೂಲದ ಮಾಹಿತಿ ನೀಡುವ ಡ್ರೈವರ್ ಆಪ್ ವಿಸ್ತರಿಸುತ್ತದೆ. ಅಮೆಜಾನ್ ಈ ಆಪ್ ಅನ್ನು ಸ್ವಯಂ-ಮಾರ್ಗದರ್ಶನ, ರಚನಾತ್ಮಕವಲ್ಲದ ವಿಳಾಸಗಳ ಹುಡುಕಾಟ ಸುಧಾರಣೆ ಮತ್ತು ಫೋಟೋ ಹಾಗೂ ವಿಡಿಯೋ ಆಧರಿತ ಪರಿಶೀಲನೆಯಿಂದ ಕಾಗ್ನಿಟಿವ್ ಲೋಡ್ ಕಡಿಮೆ ಮಾಡಲು ಆದ್ಯತೆ ನೀಡಿದೆ.