ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

RCB vs GT: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ಸೇಡು ತೀರಿಸಿಕೊಂಡ ಗುಜರಾತ್‌ ಟೈಟನ್ಸ್!

RCB vs GT Match Highlights: ಬೌಲಿಂಗ್‌ ಹಗೂ ಬ್ಯಾಟಿಂಗ್‌ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನವನ್ನು ತೋರಿದ ಗುಜರಾತ್‌ ಟೈಟನ್ಸ್‌ ತಂಡ, 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ 4 ವಿಕೆಟ್‌ ಗೆಲುವು ಪಡೆಯಿತು. ಆ ಮೂಲಕ ಆರ್‌ಸಿಬಿ ಎದುರು ಬೆಂಗಳೂರಿನಲ್ಲಿನ ಸೋಲಿನ ಸೇಡನ್ನು ಜಿಟಿ ತೀರಿಸಿಕೊಂಡಿತು.

‌IPL 2026: ಆರ್‌ಸಿಬಿ ವಿರುದ್ಧ ಸೇಡು ತೀರಿಸಿಕೊಂಡ ಗುಜರಾತ್‌ ಟೈಟನ್ಸ್!

ಗುಜರಾತ್‌ ಟೈಟನ್ಸ್‌ಗೆ ಮಣಿಸಿ ಆರ್‌ಸಿಬಿ. -

Profile
Ramesh Kote Apr 30, 2026 11:52 PM

ಅಹಮದಾಬಾದ್‌: ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನವನ್ನು ತೋರಿದ ಗುಜರಾತ್‌ ಟೈಟನ್ಸ್‌ ತಂಡ, 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ 4 ವಿಕೆಟ್‌ಗಳ ಗೆಲುವು ಪಡೆಯಿತು. ಆ ಮೂಲಕ ಆರ್‌ಸಿಬಿ ವಿರುದ್ಧ ಬೆಂಗಳೂರಿನಲ್ಲಿನ ಸೋಲಿನ ಸೇಡನ್ನು ಜಿಟಿ ತೀರಿಸಿಕೊಂಡಿತು. ಈ ಪಂದ್ಯದ ಸೋಲಿನ ಹೊರತಾಗಿಯೂ ಆರ್‌ಸಿಬಿ ಪಾಯಿಂಟ್ಸ್‌ ಟೇಬಲ್‌ನಲ್ಲಿ ಎರಡನೇ ಸ್ಥಾನದಲ್ಲಿಯೇ ಉಳಿದಿದೆ. ಇನ್ನು ಈ ಗೆಲುವಿನ ಹೊರತಾಗಿಯೂ ಶುಭಮನ್‌ ಗಿಲ್‌ ನಾಯಕತ್ವದ ಗುಜರಾತ್‌ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿ ಉಳಿಯಿತು.

ಗುರುವಾರ ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಆರ್‌ಸಿಬಿ ನೀಡಿದ್ದ 156 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಗುಜರಾತ್‌ ಟೈಟನ್ಸ್‌ ತಂಡದ ಪರ ಆರಂಭದಲ್ಲಿ ಶುಭಮನ್‌ ಗಿಲ್‌ ಹಾಗೂ ಜೋಸ್‌ ಬಟ್ಲರ್‌ ಅಬ್ಬರಿಸಿದರು. ಸಾಯಿ ಸುದರ್ಶನ್‌ ಬೇಗ ವಿಕೆಟ್‌ ಒಪ್ಪಿಸಿದರೂ ಗಿಲ್‌ 18 ಎಸೆತಗಳಲ್ಲಿ43 ರನ್‌ ಸಿಡಿಸಿದರೆ, ಜೋಸ್‌ ಬಟ್ಲರ್‌ 19 ಎಸೆತಗಳಲ್ಲಿ 39 ರನ್‌ ಸಿಡಿಸಿದರು. ಆ ಮೂಲಕ ಜಿಟಿ ಮೊತ್ತವನ್ನು 100ರ ಸನಿಹ ತಂದಿದ್ದರು. ಆದರೆ, ಭುವನೇಶ್ವರ್‌ ಕುಮಾರ್‌ ಈ ಇಬ್ಬರನ್ನೂ ಔಟ್‌ ಮಾಡುವ ಮೂಲಕ ಆರ್‌ಸಿಬಿಗೆ ಕಮ್‌ಬ್ಯಾಕ್‌ ತಂದುಕೊಟ್ಟರು.

RCB vs GT: ರಜತ್‌ ಪಾಟಿದಾರ್‌ರ ವಿವಾದಾತ್ಮಕ ಕ್ಯಾಚ್‌, ಅಂಪೈರ್‌ ವಿರುದ್ಧ ವಿರಾಟ್ ಕೊಹ್ಲಿ ಕಿಡಿ!

ನಂತರ ರೊಮ್ಯಾರಿಯೊ ಶೆಫರ್ಡ್‌ ಅವರು ಶಾರುಖ್‌ ಖಾನ್‌ ಹಾಗೂ ವಾಷಿಂಗ್ಟನ್‌ ಸುಂದರ್‌ ಅವರನ್ನು ಔಟ್‌ ಮಾಡಿ ಎದುರಾಳಿ ತಂಡದ ಮೇಲೆ ಒತ್ತಡ ಹಾಕಿದರು. ಆದರೆ, ರಾಹುಲ್‌ ತೇವಾಟಿಯಾ 27* ರನ್‌ ಗಳಿಸುವ ಮೂಲಕ 15.5 ಓವರ್‌ಗಳಿಗೆ 6 ವಿಕೆಟ್‌ ನಷ್ಟಕ್ಕೆ 158 ರನ್‌ ಗಳಿಸಿ ಗುಜರಾತ್‌ ಟೈಟನ್ಸ್‌ ತಂಡವನ್ನು ಗೆಲ್ಲಿಸಿದರು. ಜೇಸನ್‌ ಹೋಲ್ಡರ್‌ 12 ರನ್‌ ಹಾಗೂ ರಶೀದ್‌ ಖಾನ್‌ ಕೊನೆಯಲ್ಲಿ 7 ರನ್‌ ಗಳಿಸಿದರು. ಆರ್‌ಸಿಬಿ ಪರ ಭುವನೇಶ್ವರ್‌ ಕುಮಾರ್‌ ಮೂರು ವಿಕೆಟ್‌ ಹಾಗೂ ರೊಮ್ಯಾರಿಯೊ ಶೆಫರ್ಡ್‌ ಎರಡು ವಿಕೆಟ್‌ ಕಿತ್ತರು.



155 ರನ್‌ಗಳಿ ಆರ್‌ಸಿಬಿ ಆಲ್‌ಔಟ್‌

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದಿಂದ ನಿರೀಕ್ಷಿತ ಬ್ಯಾಟಿಂಗ್‌ ಪ್ರದರ್ಶನ ಮೂಡಿ ಬರಲಿಲ್ಲ. ಅರ್ಷದ್‌ ಖಾನ್‌ ಹಾಗೂ ರಶೀದ್‌ ಖಾನ್‌ ಅವರ ಪರಿಣಾಮಕಾರಿ ಬೌಲಿಂಗ್‌ಗೆ ನಲುಗಿದ ಆರ್‌ಸಿಬಿ 19.2 ಓವರ್‌ಗಳಿಗೆ 155 ರನ್‌ಗಳಿಗೆ ಆಲ್‌ಔಟ್‌ ಆಯಿತು.



ಸತತ 5 ಬೌಂಡರಿ ಗಳಿಸಿ ಔಟಾದ ಕೊಹ್ಲಿ

ಫಿಲ್‌ ಸಾಲ್ಟ್‌ ಅನುಪಸ್ಥಿತಿಯಲ್ಲಿ ಈ ಪಂದ್ಯದಲ್ಲಿಯೂ ವಿರಾಟ್‌ ಕೊಹ್ಲಿ ಜೊತೆ ಇನಿಂಗ್ಸ್‌ ಆರಂಭಿಸಿದ ಜೇಕಬ್‌ ಬೆಥೆಲ್‌ ಕೇವಲ ಐದು ರನ್‌ ಗಳಿಸಿ ಮೊಹಮ್ಮದ್‌ ಸಿರಾಜ್‌ಗೆ ವಿಕೆಟ್‌ ಒಪ್ಪಿಸಿದರು. ಆ ಮೂಲಕ ಆರಂಭಿಕ ವಿಕೆಟ್‌ಗೆ 34 ರನ್‌ ಗಳಿಸಿ ಉತ್ತಮ ಆರಂಭ ಪಡೆದಿದ್ದರೂ ಬೆಥಲ್‌ ಹಾಗೂ ಕೊಹ್ಲಿ ಜೋಡಿ ದೀರ್ಘಾವಧಿ ಕ್ರೀಸ್‌ನಲ್ಲಿ ಉಳಿಯಲಿಲ್ಲ. ಕಗಿಸೊ ರಬಾಡ ಅವರ ಮೊದಲನೇ ಓವರ್‌ನಲ್ಲಿ ಸತತ ಐದು ಬೌಂಡರಿಗಳೊಂದಿಗೆ 28 ರನ್‌ ಗಳಿಸಿ ಉತ್ತಮ ಆರಂಭ ಪಡೆದಿದ್ದ ಕೊಹ್ಲಿ ಅಂತಿಮವಾಗಿ ರಬಾಡಗೆ ವಿಕೆಟ್‌ ಒಪ್ಪಿಸಿದರು.



ಆರ್‌ಸಿಬಿಗೆ ಅಸರೆಯಾದ ದೇವದತ್‌ ಪಡಿಕ್ಕಲ್‌

ಆ ಮೂಲಕ 35 ರನ್‌ಗೆ ಎರಡು ವಿಕೆಟ್‌ ಕಳೆದುಕೊಂಡಿದ್ದ ಆರ್‌ಸಿಬಿಗೆ ಮೂರನೇ ವಿಕೆಟ್‌ಗೆ ರಜತ್‌ ಪಾಟಿದಾರ್‌ ಹಾಗೂ ದೇವದತ್‌ ಪಡಿಕ್ಕಲ್‌ 44 ರನ್‌ಗಳ ಜೊತೆಯಾಟವನ್ನು ಆಡಿ ಅಲ್ಪ ಚೇತರಿಕೆ ನೀಡಿದ್ದರು. 19 ರನ್‌ ಗಳಿಸಿ ಜವಾಬ್ದಾರಿಯುತ ಬ್ಯಾಟ್‌ ಮಾಡುತ್ತಿದ್ದ ರಜತ್‌ ಪಾಟಿದಾರ್‌, ಅರ್ಷದ್‌ ಖಾನ್‌ ಬೌಲಿಂಗ್‌ನಲ್ಲಿ ಜೇಸನ್‌ ಹೋಲ್ಡರ್‌ ಅವರ ವಿವಾದಾತ್ಮಕ ಕ್ಯಾಚ್‌ಗೆ ಔಟ್‌ ಆದರು. ಇದಾದ ಬಳಿಕ ಜಿತೇಶ್‌ ಶರ್ಮಾ, ಟಿಮ್‌ ಡೇವಿಡ್‌ ಹಾಗೂ ಕೃಣಾಲ್‌ ಪಾಂಡ್ಯ ಒಂದಂಕಿಗೆ ವಿಕೆಟ್‌ ಒಪ್ಪಿಸಿದರು. ಆದರೆ, ದೇವದತ್‌ ಪಡಿಕ್ಕಲ್‌ ಕೆಲ ಕಾಲ ಬ್ಯಾಟ್‌ ಮಾಡಿ 24 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ 4 ಬೌಂಡರಿಗಳೊಂದಿಗೆ 40 ರನ್‌ ಗಳಿಸಿ ಆರ್‌ಸಿಬಿಗೆ ಭರವಸೆ ಮೂಡಿಸಿದ್ದರೂ ಅವರನ್ನು ರಶೀದ್‌ ಕ್ಲೀನ್‌ ಬೌಲ್ಡ್‌ ಮಾಡಿದರು.

IPL 206: ವಿರಾಟ್‌ ಕೊಹ್ಲಿ ಅಲ್ಲವೇ ಅಲ್ಲ! ಬೆಸ್ಟ್‌ ಫೀಲ್ಡರ್‌ ಹೆಸರಿಸಿದ ಜಾಂಟಿ ರೋಡ್ಸ್‌!

ವೆಂಕಟೇಶ ಅಯ್ಯರ್‌ ಇಂಪ್ಯಾಕ್ಟ್‌ ಪ್ಲೇಯರ್‌

ಎರಡು ಸಿಕ್ಸರ್‌ ಮೂಲಕ ಆರ್‌ಸಿಬಿಗೆ ಭರವಸೆ ಮೂಡಿಸಿದ್ದ ರೊಮ್ಯಾರಿಯೊ ಶೆಫರ್ಡ್‌(17 ರನ್‌), ರಶೀದ್‌ಗೆ ಔಟ್‌ ಆದರು. ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಆಡಿದ ವೆಂಕಟೇಶ್‌ ಅಯ್ಯರ್‌ (12) ಪರಿಣಾಮಕಾರಿಯಾಗಲಿಲ್ಲ. ಭುವನೇಶ್ವರ್‌ ಕುಮಾರ್‌ 15 ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರು. ಜಿಟಿ ಪರ ಅರ್ಷದ್‌ ಖಾನ್‌ 3 ವಿಕೆಟ್‌ ಹಾಗೂ ರಶೀದ್‌ ಖಾನ್‌ ಮತ್ತು ಜೇಸನ್‌ ಹೋಲ್ಡರ್‌ ತಲಾ ಎರಡು ವಿಕೆಟ್‌ ಕಿತ್ತರು.

ಸ್ಕೋರ ವಿವರ

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: 19.2 ಓವರ್‌ಗಳಿಗೆ 155-10 (ದೇವದತ್‌ ಪಡಿಕ್ಕಲ್‌ 40, ವಿರಾಟ್‌ ಕೊಹ್ಲಿ 28; ಅರ್ಷದ್‌ ಖಾನ್‌ 22 ಕ್ಕೆ 3, ರಶೀದ್‌ ಖಾನ್‌ 19 ಕ್ಕೆ 2, ಜೇಸನ್‌ ಹೋಲ್ಡರ್‌ 29ಕ್ಕೆ 2)

ಗುಜರಾತ್‌ ಟೈಟನ್ಸ್‌: 15.5 ಓವರ್‌ಗಳಿಗೆ 158-6 (ಶುಭಮನ್‌ ಗಿಲ್‌ 43 ರನ್‌, ಜೋಸ್‌ ಬಟ್ಲರ್‌ 39 ರನ್‌, ರಾಹುಲ್‌ ತೇವಾಟಿಯಾ 27* ರನ್‌; ಭುವನೇಶ್ವರ್‌ ಕುಮಾರ್‌ 28ಕ್ಕೆ 3, ರೊಮ್ಯಾರಿಯೊ ಶೆಫರ್ಡ್‌ 30 ಕ್ಕೆ 2)

ಪಂದ್ಯ ಶ್ರೇಷ್ಠ ಪ್ರಶಸ್ತಿ: ಜೇಸನ್‌ ಹೋಲ್ಡರ್‌