AUS vs SL: 10 ಸಾವಿರ ಟೆಸ್ಟ್ ರನ್ ಪೂರೈಸಿ ವಿಶೇಷ ದಾಖಲೆ ಬರೆದ ಸ್ಟೀವನ್ ಸ್ಮಿತ್!
Steve Smith completes 10,000 Test runs: ಆಸ್ಟ್ರೇಲಿಯಾ ತಂಡದ ಹಿರಿಯ ಬ್ಯಾಟ್ಸ್‌ಮನ್ ಸ್ಟೀವನ್ ಸ್ಮಿತ್ ಅವರು ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ 10 ಸಾವಿರ ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ವೇಗವಾಗಿ ಈ ಸಾಧನೆ ಮಾಡಿದ ಆಸ್ಟ್ರೇಲಿಯಾದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.
ಗಾಲೆ (ಶ್ರೀಲಂಕಾ): ಶ್ರೀಲಂಕಾ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯದ ಮೊದಲನೇ ದಿನ ಆಸ್ಟ್ರೇಲಿಯಾ ತಂಡದ ಹಂಗಾಮಿ ನಾಯಕ ಹಾಗೂ ಹಿರಿಯ ಬ್ಯಾಟ್ಸ್‌ಮನ್ ಸ್ಟೀವನ್ ಸ್ಮಿತ್ 10 ಟೆಸ್ಟ್ ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ 10 ಸಾವಿರ ರನ್‌ಗಳನ್ನು ಪೂರ್ಣಗೊಳಿಸಿದ ಆಸ್ಟ್ರೇಲಿಯಾದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.
ಇಲ್ಲಿನ ಗಾಲೆ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡದ ಉಸ್ಮಾನ್ ಖವಾಜ ಹಾಗೂ ಟ್ರಾವಿಸ್ ಹೆಡ್ ಇನಿಂಗ್ಸ್ ಆರಂಭಿಸಿದರು. 40 ಎಸೆತಗಳಲ್ಲಿ ಸ್ಪೋಟಕ 57 ರನ್‌ಗಳನ್ನು ಸಿಡಿಸಿ ಟ್ರಾವಿಸ್ ಹೆಡ್ ವಿಕೆಟ್ ಒಪ್ಪಿಸಿದರು. ನಂತರ ಮೂರನೇ ಕ್ರಮಾಂಕದಲ್ಲಿ ಬಂದಿದ್ದ ಮಾರ್ನಸ್ ಲಾಬುಶೇನ್ ಅವರು 20 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು.
IND vs ENG: ವರುಣ್ ಚಕ್ರವರ್ತಿ ಬೌಲಿಂಗ್ ವ್ಯರ್ಥ, ಇಂಗ್ಲೆಂಡ್‌ಗೆ ಮಣಿದ ಭಾರತ!
ಮಾರ್ನಸ್ ಲಾಬುಶೇನ್ ವಿಕೆಟ್ ಒಪ್ಪಿಸಿದ ಬಳಿಕ ಕ್ರೀಸ್‌ಗೆ ಸ್ಟೀವನ್ ಸ್ಮಿತ್ ಅವರು ಒಂದು ರನ್ ಗಳಿಸುತ್ತಿದ್ದಂತೆ ಬಳಿಕ ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದಲ್ಲಿ 10 ಸಾವಿರ ರನ್‌ಗಳನ್ನು ಪೂರ್ಣಗೊಳಿಸಿದರು. ಆ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 10 ಸಾವಿರ ರನ್‌ಗಳನ್ನು ಪೂರ್ಣಗೊಳಿಸಿದ ಸಚಿನ್ ತೆಂಡೂಲ್ಕರ್, ರಿಕಿ ಪಾಟಿಂಗ್, ಬ್ರಿಯಾನ್ ಲಾರ ಒಳಗೊಂಡ ದಿಗ್ಗಜರ ಪಟ್ಟಿಗೆ ಇದೀಗ ಸ್ಟೀವನ್ ಸ್ಮಿತ್ ಸೇರ್ಪಡೆಯಾಗಿದ್ದಾರೆ.
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿಯೇ 10000 ರನ್‌ಗಳನ್ನು ಪೂರ್ಣಗೊಳಿಸಿದ ವಿಶ್ವದ 15ನೇ ಬ್ಯಾಟ್ಸ್‌ಮನ್ ಹಾಗೂ ಆಸ್ಟ್ರೇಲಿಯಾದ ನಾಲ್ಕನೇ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ಸ್ಟೀವನ್ ಸ್ಮಿತ್ ಭಾಜನರಾಗಿದ್ದಾರೆ. ಅಲಾನ್ ಬಾರ್ಡರ್, ಸ್ಟೀವಾ ಹಾಗೂ ರಿಕಿ ಪಾಂಟಿಂಗ್ ಅವರು ಕೂಡ ಟೆಸ್ಟ್ ಕ್ರಿಕೆಟ್‌ನಲ್ಲಿ 10 ಸಾವಿರ ರನ್‌ಗಳನ್ನು ಪೂರ್ಣಗೊಳಿಸಿದ ಇನ್ನಿತರ ಆಸ್ಟ್ರೇಲಿಯನ್ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ.
An exclusive club welcomes another member 👏
— ICC (@ICC) January 29, 2025
Well played, Steve Smith 🏏
More ➡️ https://t.co/t44tcMDKZX pic.twitter.com/dJRoa6n0FL
ವೇಗವಾಗಿ 10 ಸಾವಿರ ರನ್ ಗಳಿಸಿದ ಮೂರನೇ ಬ್ಯಾಟ್ಸ್‌ಮನ್
ಸ್ಟೀವನ್ ಸ್ಮಿತ್ ಅವರು 115 ಟೆಸ್ಟ್ ಪಂದ್ಯಗಳ 115 ಇನಿಂಗ್ಸ್‌ಗಳಿಂದ 10 ಸಾವಿರ ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ವೇಗವಾಗಿ 10 ಸಾವಿರ ಟೆಸ್ಟ್ ರನ್‌ಗಳನ್ನು ಪೂರ್ಣಗೊಳಿಸಿದ ಮೂರನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಬ್ರಿಯಾನ್ ಲಾರಾ, ಸಚಿನ್ ತೆಂಡೂಲ್ಕರ್ ಹಾಗೂ ಕುಮಾರ ಸಂಗಕ್ಕಾರ ಅವರು 195 ಇನಿಂಗ್ಸ್‌ಗಳಲ್ಲಿ ಈ ಮೈಲುಗಲ್ಲು ತಲುಪಿದ್ದು ಜಂಟಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ.
ಲಾರ್ಡ್ಸ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಪಾಕಿಸ್ತಾನ ವಿರುದ್ಧ ಸ್ಟೀವನ್ ಸ್ಮಿತ್ ಅವರು ತಮ್ಮ ಪಯಣವನ್ನು ಆರಂಭಿಸಿದ್ದರು. ತಮ್ಮ ಪದಾರ್ಪಣೆ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಸ್ಟೀವನ್ ಸ್ಮಿತ್, ಕ್ರಮವಾಗಿ 1 ಮತ್ತು 12 ರನ್‌ಗಳನ್ನು ಗಳಿಸಿದ್ದರು. ನಂತರದ ವರ್ಷಗಳಲ್ಲಿ ಅವರು ಆಸ್ಟ್ರೇಲಿಯಾದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದ್ದಾರೆ. ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 34 ಶತಕಗಳನ್ನು ಸಿಡಿಸಿದ್ದಾರೆ. ಆಸ್ಟ್ರೇಲಿಯಾ ಪರ ಅತಿ ಹೆಚ್ಚು ಟೆಸ್ಟ್ ಶತಕಗಳನ್ನು ಸಿಡಿಸಿದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. 41 ಶತಕಗಳ ಮೂಲಕ ರಿಕಿ ಪಾಂಟಿಂಗ್ ಅಗ್ರ ಸ್ಥಾನದಲ್ಲಿದ್ದಾರೆ.