ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಹ್ಯಾರಿ ಬ್ರೂಕ್‌ ಸ್ಥಾನ ತುಂಬಬಲ್ಲಿ ಟಾಪ್‌ 5 ಆಟಗಾರರು!

Who will Replace Harry Brook in DC: ಇಂಗ್ಲೆಂಡ್‌ನ ಯುವ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಕೊನೆಯ ಹಂತದಲ್ಲಿ ಅವರು ಈ ಅಚ್ಚರಿ ನಿರ್ಧಾರ ತೆಗೆದುಕೊಂಡಿದ್ದರಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಆಘಾತವಾಗಿದೆ. ಇದೀಗ ಹ್ಯಾರಿ ಬ್ರೂಕ್‌ ಸ್ಥಾನವನ್ನು ತುಂಬಬಲ್ಲ ಐವರು ಬ್ಯಾಟ್ಸ್‌ಮನ್‌ಗಳನ್ನು ಇಲ್ಲಿ ವಿವರಿಸಲಾಗಿದೆ.

IPL 2025: ಹ್ಯಾರಿ ಬ್ರೂಕ್‌ ಸ್ಥಾನ ತುಂಬಬಲ್ಲ ಟಾಪ್‌ 5 ಆಟಗಾರರು!

2025ರ ಐಪಿಎಲ್‌ ವಿಥ್‌ಡ್ರಾ ಮಾಡಿಕೊಂಡ ಹ್ಯಾರಿ ಬ್ರೂಕ್‌.

Profile Ramesh Kote Mar 11, 2025 7:44 PM

ನವದೆಹಲಿ: ಕಳೆದ ವರ್ಷ ನಡೆದಿದ್ದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಮೆಗಾ ಹರಾಜಿನಲ್ಲಿ 26ರ ವಯಸ್ಸಿನ ಹ್ಯಾರಿ ಬ್ರೂಕ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ 6.25 ಕೋಟಿ ರೂ ಗಳಿಗೆ ಖರೀದಿಸಿತ್ತು. ಆ ಮೂಲಕ ಡೆಲ್ಲಿ ತಂಡದ ಮಧ್ಯಮ ಕ್ರಮಾಂಕವನ್ನು ಬಲಿಷ್ಠಗೊಳಿಸಲಾಗಿತ್ತು. ಆದರೆ, ಐಪಿಎಲ್‌ ಆರಂಭಕ್ಕೂ ಎರಡು ವಾರಗಳ ಮುನ್ನ ಹದಿನೆಂಟನೇ ಆವೃತ್ತಿಯಿಂದ ಹೊರ ನಡೆದಿದ್ದಾರೆ. ಆ ಮೂಲಕ ನಾಯಕನ ಹುಡುಕಾಟದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಟೂರ್ನಿಯ ಆರಂಭಕ್ಕೂ ಮುನ್ನ ಭಾರಿ ಹಿನ್ನಡೆಯಾಗಿದೆ.

ಮಾರ್ಚ್‌ 22 ರಂದು 2025ರ ಐಪಿಎಲ್‌ ಟೂರ್ನಿ ಆರಂಭವಾಗಲಿದೆ. ಇದರ ನಡುವೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ತನ್ನ ನಾಯಕನನ್ನು ನೇಮಿಸುವ ಪ್ರಯತ್ನದಲ್ಲಿದೆ. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಹ್ಯಾರಿ ಬ್ರೂಕ್‌ ಅವರ ಸ್ಥಾನವನ್ನು ತುಂಬಲು ಐವರು ವಿದೇಶಿ ಆಟಗಾರರ ಎದುರು ನೋಡುತ್ತಿದ್ದಾರೆ. ಈ ಐವರು ಆಟಗಾರರ ಬಗ್ಗೆ ಇಲ್ಲಿ ವಿವರಿಸಲಾಗಿದೆ.

IPL 2025: ಡೆಲ್ಲಿ ಕ್ಯಾಪಿಟಲ್ಸ್‌ ನಾಯಕತ್ವವನ್ನು ನಿರಾಕರಿಸಿದ ಕೆಎಲ್‌ ರಾಹುಲ್‌!

‌1. ಡ್ಯಾರಿಲ್‌ ಮಿಚೆಲ್‌

ನ್ಯೂಜಿಲೆಂಡ್‌ನ ಅನುಭವಿ ಆಲ್‌ರೌಂಡರ್ ಡ್ಯಾರಿಲ್ ಮಿಚೆಲ್ ಡೆಲ್ಲಿ ಕ್ಯಾಪಿಟಲ್ಸ್‌ಗೆ ಉತ್ತಮ ಆಯ್ಕೆಯಾಗಬಹುದು. ಮಿಚೆಲ್ ಮಧ್ಯಮ ಕ್ರಮಾಂಕದಲ್ಲಿ ಎಲ್ಲಿ ಬೇಕಾದರೂ ಬ್ಯಾಟ್‌ ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ. ಅವರಿಗೆ ಐಪಿಎಲ್‌ ಟೂರ್ನಿಯಲ್ಲಿಯೂ ಅನುಭವವಿದೆ. ಕಳೆದ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವಾಗ ಅವರು 14 ಇನಿಂಗ್ಸ್‌ಗಳಿಂದ 318 ರನ್ ಗಳಿಸಿದ್ದರು. ಕಳೆದ ವರ್ಷ ಮಿಚೆಲ್ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡಿದ 9 ಇನಿಂಗ್ಸ್‌ಗಳಿಂದ 274 ರನ್ ಗಳಿಸಿದ್ದರು. ಅಗತ್ಯವಿದ್ದರೆ ಕಿವೀಸ್ ಆಟಗಾರ ಬೌಲ್‌ ಕೂಡ ಮಾಡಬಹುದು.

2. ಡೆವಾಲ್ಡ್‌ ಬ್ರೆವಿಸ್‌

ಬೇಬಿ ಎಬಿ ಎಂದೇ ಜನಪ್ರಿಯರಾಗಿರುವ ಡೆವಾಲ್ಡ್ ಬ್ರೆವಿಸ್, ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಹ್ಯಾರಿ ಬ್ರೂಕ್ ಅವರ ಸ್ಥಾನವನ್ನು ತುಂಬಬಹುದು. ಬ್ರೆವಿಸ್ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದಾರೆ. ಅವರು ಒಬ್ಬ ಶಕ್ತಿಶಾಲಿ ಹೊಡೆತಗಾರ. ಅವರು 2024-2025ರ ದಕ್ಷಿಣ ಆಫ್ರಿಕಾದಲ್ಲಿ ಅದ್ಭುತ ಲಯದಲ್ಲಿದ್ದರು. ಅವರು 10 ಇನಿಂಗ್ಸ್‌ಗಳಿಂದ 291 ರನ್‌ಗಳನ್ನು ಕಲೆ ಹಾಕಿದ್ದಾರೆ.

ICC Test Rankings: ಜೋ ರೂಟ್‌ರನ್ನು ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿದ ಹ್ಯಾರಿ ಬ್ರೂಕ್‌!

3. ಬೆನ್‌ ಡಕೆಟ್‌

2025ರ ಐಪಿಎಲ್ ಟೂರ್ನಿಯ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಹ್ಯಾರಿ ಬ್ರೂಕ್ ಅವರ ಸ್ಥಾನವನ್ನು ಬೆನ್ ಡಕೆಟ್ ಕೂಡ ತುಂಬಬಹುದು. ಡಕೆಟ್ ಪ್ರಸ್ತುತ ಮೂರು ಸ್ವರೂಪಗಳಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಇತ್ತೀಚೆಗೆ ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿಯೂ ಅವರು ಮಿಂಚಿನ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದರು. ಅವರು ಕೇವಲ 3 ಇನಿಂಗ್ಸ್‌ಗಳಿಂದ 227 ರನ್‌ಗಳನ್ನು ಕಲೆ ಹಾಕಿದ್ದರು. ಅವರು ಡೆಲ್ಲಿ ಕ್ಯಾಪಿಟಲ್ಸ್ ಪರ ಅಗ್ರ ಕ್ರಮಾಂಕದಲ್ಲಿ ಆಡಬಲ್ಲರು. ಬಎಡಗೈ ಬ್ಯಾಟ್ಸ್‌ಮನ್‌ 198 ಟಿ20 ಇನಿಂಗ್ಸ್‌ಗಳಿಂದ 140ರ ಸ್ಟ್ರೈಕ್ ರೇಟ್‌ನಲ್ಲಿ 5159 ರನ್ ಗಳಿಸಿದ್ದಾರೆ.

4. ಫಿನ್‌ ಆಲೆನ್‌

ನ್ಯೂಜಿಲೆಂಡ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಫಿನ್ ಆಲೆನ್ ಕೂಡ ಡೆಲ್ಲಿ ತಂಡಕ್ಕೆ ಉತ್ತಮ ಆಯ್ಕೆ ಎಂದು ಸಾಬೀತುಪಡಿಸಬಹುದು. ಈ 25ರ ವಯಸ್ಸಿನ ಆಟಗಾರ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಅವರು ಕಿವೀಸ್ ತಂಡದ ಪರ ಆಡಿರುವ 47 ಟಿ20ಐ ಪಂದ್ಯಗಳಲ್ಲಿ ಎರಡು ಶತಕಗಳು ಮತ್ತು 4 ಅರ್ಧಶತಕಗಳ ಸಹಾಯದಿಂದ 1141 ರನ್ ಗಳಿಸಿದ್ದಾರೆ.

IPL 2025: ʻನನ್ನನ್ನು ಯಾರೂ ಗುರುತಿಸಲಿಲ್ಲʼ-ಕೆಕೆಆರ್‌ ವಿರುದ್ಧ ಶ್ರೇಯಸ್‌ ಅಯ್ಯರ್‌ ಗಂಭೀರ ಆರೋಪ!

5. ಕೈಲ್‌ ಮೇಯರ್ಸ್‌

ಡೆಲ್ಲಿ ಕ್ಯಾಪಿಟಲ್ಸ್ ತಂಡ, ಹ್ಯಾರಿ ಬ್ರೂಕ್ ಬದಲಿಗೆ ವೆಸ್ಟ್ ಇಂಡೀಸ್‌ನ ಕೈಲ್ ಮೇಯರ್ಸ್ ಅವರನ್ನು ಸಹ ಸಹಿ ಮಾಡಿಸಬಹುದು. ಮೇಯರ್ಸ್ ಐಪಿಎಲ್ ಅನುಭವ ಹೊಂದಿದ್ದು, ಅಗ್ರ ಕ್ರಮಾಂಕದ ಅದ್ಭುತ ಆಟಗಾರ. ಅಗತ್ಯವಿದ್ದರೆ ಅವರು ಬೌಲಿಂಗ್‌ನಲ್ಲಿಯೂ ತಂಡಕ್ಕೆ ನೆರವು ನೀಡಬಲ್ಲರು. ಮೇಯರ್ಸ್ ವೆಸ್ಟ್ ಇಂಡೀಸ್ ಪರ 38 ಟಿ20 ಪಂದ್ಯಗಳಲ್ಲಿ 762 ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿ 13 ಪಂದ್ಯಗಳಿಂದ 379 ರನ್ ಗಳಿಸಿದ್ದಾರೆ.