Australian Open: ಸ್ವಿಯಾಟೆಕ್, ಕೀಸ್ ಸೆಮಿಫೈನಲ್ ಪ್ರವೇಶ
Australian Open: ಬುಧವಾರ ನಡೆದ 2 ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ವಿಯಾಟೆಕ್ ಮತ್ತು ಮ್ಯಾಡಿಸನ್ ಗೆಲುವು ಸಾಧಿಸಿ ಸೆಮಿ ಫೈನಲ್ ಪ್ರವೇಶಿಸಿದರು.
ಮೆಲ್ಬರ್ನ್: ವಿಶ್ವದ 2ನೇ ಶ್ರೇಯಾಂಕದ ಐಗಾ ಸ್ವಿಯಾಟೆಕ್ ಮತ್ತು ಅಮೆರಿಕದ 19ನೇ ಶ್ರೇಯಾಂಕಿತೆ ಮ್ಯಾಡಿಸನ್ ಕೀಸ್ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಉಭಯ ಆಟಗಾರ್ತಿಯರೇ ನಾಳೆ(ಗುರುವಾರ) ನಡೆಯುವ ಸೆಮಿ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದಾರೆ.
ಬುಧವಾರ ನಡೆದ 2 ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ವಿಯಾಟೆಕ್ ಮತ್ತು ಮ್ಯಾಡಿಸನ್ ಗೆಲುವು ಸಾಧಿಸಿ ಸೆಮಿ ಪ್ರವೇಶಿಸಿದರು. ಬೆಳಗ್ಗೆ ನಡೆದ ಮೊದಲ ಕ್ವಾರ್ಟರ್ ಪಂದ್ಯದಲ್ಲಿ ಸ್ವಿಯಾಟೆಕ್ 8ನೇ ಶ್ರೇಯಾಂಕದ ಎಮ್ಮಾ ನವರೊ ವಿರುದ್ಧ 6-1, 6-2 ನೇರ ಸೆಟ್‌ಗಳಿಂದ ಸುಲಭ ಜಯ ಸಾಧಿಸಿದರು.
The Madison Forehand reliability counter has been high today 👌@wwos • @espn • @eurosport • @wowowtennis • #AusOpen • #AO2025 pic.twitter.com/rtgFNmDpad
— #AusOpen (@AustralianOpen) January 22, 2025
ದಿನದ ಮತ್ತೊಂದು ಪಂದ್ಯದಲ್ಲಿ ಮ್ಯಾಡಿಸನ್ ಕೀಸ್ 3-6, 6-3, 6-4 ಅಂತರದಿಂದ ಎಲಿನಾ ಸ್ವಿಟೋಲಿನಾ ಅವರನ್ನು ಹಿಮ್ಮೆಟ್ಟಿಸಿದರು. ಮೂರು ಸೆಟ್‌ಗಳ ಈ ತೀವ್ರ ಪೈಪೋಟಿಯಲ್ಲಿ ಆರಂಭಿಕ ಸೆಟ್‌ನಲ್ಲಿ ಕೀಸ್ ಸೋತರೂ ಆ ಬಳಿಕದ ಎರಡು ಸೆಟ್‌ಗಳಲ್ಲಿ ಬಲಿಷ್ಠ ಹೊಡೆತಗಳ ಮೂಲಕ ಕಮ್‌ಬ್ಯಾಕ್ ಮಾಡಿ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ಮೊದಲ ಸೆಟ್‌ನಲ್ಲಿ ಸ್ವಿಟೋಲಿನಾ ಗೆದ್ದು ಮುನ್ನಡೆ ಸಾಧಿಸಿರೂ ಆ ಬಳಿಕದ ಸೆಟ್‌ನಲ್ಲಿ ಲಯ ಕಳೆದುಕೊಂಡರು.
ಇದನ್ನೂ ಓದಿ Australian Open: ಬೋಪಣ್ಣ ಜೋಡಿಗೆ ಸೋಲು; ಸೆಮಿಗೆ ಲಗ್ಗೆಯಿಟ್ಟ ಸಬಲೆಂಕಾ, ಜ್ವರೇವ್
ಮಂಗಳವಾರ ನಡೆದಿದ್ದ ಮಹಿಳಾ ಸಿಂಗಲ್ಸ್‌ನ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 11ನೇ ಶ್ರೇಯಾಂಕದ ಪೌಲಾ ಬಡೋಸಾ ಮತ್ತು ಅಗ್ರ ಶ್ರೇಯಾಂಕದ ಅರಿನಾ ಸಬಲೆಂಕಾ ಗೆದ್ದು ಸೆಮಿಗೆ ಲಗ್ಗೆಯಿಟ್ಟಿದ್ದರು. ಪೌಲಾ ಬಡೋಸಾ ಅಮೆರಿಕದ ಸ್ಟಾರ್ ಆಟಗಾರ್ತಿ ಕೊಕೊ ಗಾಫ್ ಅವರನ್ನು 7-5,6-4 ನೇರ ಸೆಟ್‌ಗಳಿಂದ ಮಣಿಸಿದರೆ, ಸಬಲೆಂಕಾ ಅವರು ಅನಿಸಿಮೋವಾ ಪಾವ್ಲ್ಯುಚೆಂಕೋವಾ ವಿರುದ್ಧ ಮೂರು ಸೆಟ್‌ಗಳ ಹೋರಾಟದಲ್ಲಿ 6-2, 2-6, 6-3 ಅಂತರದಿಂದ ಗೆಲುವು ಸಾಧಿಸಿದ್ದರು.