Ayodhya: ಅಯೋಧ್ಯೆಯ ರಾಮಲಲ್ಲಾನಿಗೆ ಒಂದು ವರ್ಷದ ಸಂಭ್ರಮ;ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿತ್ತು ಭಾರತ!
ಒಂದು ವರ್ಷದ ಹಿಂದೆ ಭಾರತ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿತ್ತು. ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ವಿಗ್ರಹ ಪ್ರತಿಷ್ಠಾಪನೆಯಾಗಿತ್ತು. 2024 ರ ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ, ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ವಿಶ್ವಾದ್ಯಂತ ಹಲವು ದೇಶಗಳಿಂದ ಆಗಮಿಸಿದ್ದ ಗಣ್ಯರ ಸಮ್ಮುಖದಲ್ಲಿ ರಾಮಲಲ್ಲಾನ ನೇತ್ರೋಲನ ನೆರವೇರಿಸಲಾಗಿತ್ತು. ಕೋಟ್ಯಂತರ ರಾಮ ಭಕ್ತರು ಭಕ್ತಿಯ ಪರಾಕಾಷ್ಠೆಯನ್ನು ಮೆರೆದಿದ್ದರು. ರಾಮಲಲ್ಲಾನನ್ನು ಕಣ್ತುಂಬಿಕೊಂಡು ಭಾವಪರವಶರಾಗಿದ್ದರು.
ಲಖನೌ: ಸರಿಯಾಗಿ ಒಂದು ವರ್ಷದ ಹಿಂದೆ ಭಾರತ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿತ್ತು. ಸುದೀರ್ಘ ಹೋರಾಟದ ಪ್ರತಿಫಲವಾಗಿ ಮರ್ಯದಾ ಪುರುಷೋತ್ತಮ ಶ್ರೀರಾಮನ ಜನಸ್ಥಳವಾದ ಅಯೋಧ್ಯೆಯಲ್ಲಿ(Ayodhya) ರಾಮಲಲ್ಲಾ(Ramlalla) ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯಾಗಿತ್ತು.2024 ರ ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ(Narendra Modi), ಸಿಎಂ ಯೋಗಿ ಆದಿತ್ಯನಾಥ್(Yogi Adithyanath) ಸೇರಿದಂತೆ ವಿಶ್ವಾದ್ಯಂತ ಹಲವು ದೇಶಗಳಿಂದ ಆಗಮಿಸಿದ್ದ ಗಣ್ಯರ ಸಮ್ಮುಖದಲ್ಲಿ ಹಿಂದೂಗಳ ಆರಾಧ್ಯ ದೈವ ರಾಮನ ನೇತ್ರೋಲನ ನೆರವೇರಿಸಲಾಗಿತ್ತು. ಕೋಟ್ಯಂತರ ರಾಮ ಭಕ್ತರು ಭಕ್ತಿಯ ಪರಾಕಾಷ್ಠೆಯನ್ನು ಮೆರೆದಿದ್ದರು. ರಾಮಲಲ್ಲಾನನ್ನು ಕಣ್ತುಂಬಿಕೊಂಡು ಭಾವಪರವಶರಾಗಿದ್ದರು.
ಆದರೆ ಈ ವರ್ಷ ಜನವರಿ 11 ರಂದೇ ರಾಮಮಂದಿರ ಉದ್ಘಾಟನೆಯ ಪ್ರಥಮ ವಾರ್ಷಿಕೋತ್ಸವ ನೆರವೇರಿಸಲಾಯಿತು. ಅದಕ್ಕೆ ಕಾರಣವೂ ಇತ್ತು. ಹಿಂದೂ ಚಾಂದ್ರಮಾನ ಪಂಚಾಗದ ಆಧಾರದ ಮೇಲೆ ಕಳೆದ ವರ್ಷ ಕೂರ್ಮ ದ್ವಾದಶಿಯಂದು ಅಯೋಧ್ಯಾ ರಾಮಮಂದಿರವನ್ನು ಉದ್ಘಾಟಿಸಲಾಗಿತ್ತು. ಈ ವರ್ಷ ಜನವರಿ 11 ರಂದು ಅದೇ ತಿಥಿಯಂದು ವಾರ್ಷಿಕೋತ್ಸವ ಆಚರಿಸಲಾಯಿತು.
Ayodhya Ram Mandir Celebrating One Year Of Pran Pratistha Ceremony.
— Hind Ki Sena 🚩 (@HindKiSena01) January 22, 2025
Jai Shree Ram 🙏🚩#RamMandirAnniversary pic.twitter.com/9H7R3kQW0F
ರಾಮಲಲ್ಲಾ ದರ್ಶನಕ್ಕೆ ಈಗಾಗಲೇ ಭಾರತಾದ್ಯಂತ ಭಕ್ತರು ಬರುತ್ತಿದ್ದಾರೆ. ಇಡೀ ಅಯೋಧ್ಯೆಯು ಈಗ ಪ್ರಮುಖ ತೀರ್ಥಕ್ಷೇತ್ರವಾಗಿ ಮಾರ್ಪಟ್ಟಿದೆ. ಆದರೆ ಮಂದಿರ ನಿರ್ಮಾಣ ಇನ್ನೂ ಪೂರ್ಣಗೊಂಡಿಲ್ಲ. ಈ ವರ್ಷ ಮಂದಿರ ನಿರ್ಮಾಣ ಕಾರ್ಯ ಮುಗಿಯುವ ನಿರೀಕ್ಷೆಯಿದೆ.
500 ವರ್ಷಗಳ ಕಾಯುವಿಕೆಗೆ ಸಿಕ್ಕ ಜಯ!
ಸರಿಯಾಗಿ ಒಂದು ಒಂದು ವರ್ಷದ ಹಿಂದೆ ರಾಮನ ಜನ್ಮಭೂಮಿಯಾದ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಯಿತು. ಬಾಲರಾಮನ ಪ್ರಾಣ
ಪ್ರತಿಷ್ಠಾಪನೆಯಾದ ದಿನ ಕೋಟ್ಯಂತರ ಹಿಂದೂಗಳು ಸಂಭ್ರಮಪಟ್ಟರು. ತಮ್ಮ ಆರಾಧ್ಯ ದೈವವನ್ನು ಕಂಡು ಕಣ್ತುಂಬಿಕೊಂಡರು. ರಾಮ ಮಂದಿರ ಸ್ಥಾಪನೆಯ ಹಿಂದೆ 500 ವರ್ಷಗಳ ಸುದೀರ್ಘ ಹೋರಾಟವಿದೆ ಎಂಬುದು ಹಲವರಿಗೆ ಗೊತ್ತಿದೆ. ರಾಮ ಜನ್ಮಭೂಮಿಯಲ್ಲಿಯೇ ರಾಮಮಂದಿರ ಉದ್ಘಾಟನೆ ಆಗಬೇಕೆಂದು ಲಕ್ಷಾಂತರ ಕರ ಸೇವಕರು ಹೋರಾಟ ನಡೆಸಿದ್ದರು. ಅವರೆಲ್ಲರ ಹೋರಾಟ, ಪ್ರಾಣ ತ್ಯಾಗ ಅಷ್ಟೇ ಅಲ್ಲದೆ ಕಾನೂನು ಹೋರಾಟದ ಬಳಿಕ ರಾಮಮಂದಿರದ ಕನಸು ಸಾಕಾರಗೊಂಡಿದೆ. ಕಳೆದ ವರ್ಷ ರಾಮಮಂದಿರ ನಿರ್ಮಾಣದ ಕನಸು ನನಸಾಯಿತು. ಮುಂದಿನ ದಿನಗಳಲ್ಲಿ ರಾಮರಾಜ್ಯದ ಕನಸು ಕೂಡ ನನಸಾಗಲಿದ ಎಂಬುದು ದೇಶದ ಜನರ ಆಶಯವಾಗಿದೆ.
ಈ ಸುದ್ದಿಯನ್ನೂ ಓದಿ:Arodhya Rama Mandir: ಅಯೋಧ್ಯೆ ರಾಮಮಂದಿರ ಈಗ ಉತ್ತರ ಪ್ರದೇಶದ ನಂ 1 ಪ್ರವಾಸಿ ತಾಣ!