Arodhya Rama Mandir: ಅಯೋಧ್ಯೆ ರಾಮಮಂದಿರ ಈಗ ಉತ್ತರ ಪ್ರದೇಶದ ನಂ 1 ಪ್ರವಾಸಿ ತಾಣ!
Arodhya Rama Mandir : ಅಯೋಧ್ಯೆಯು ಇಂದು ಉತ್ತರ ಪ್ರದೇಶದ ಪ್ರಮುಖ ಕೇಂದ್ರಬಿಂದು ಆಗಿದ್ದು ಧಾರ್ಮಿಕ ಪುಣ್ಯ ಕ್ಷೇತ್ರವಾಗಿದೆ. ರಾಮಲಲ್ಲಾ ಜನ್ಮಭೂಮಿಯಲ್ಲೇ ನಿರ್ಮಿಸಿರುವ ಭವ್ಯ ಮಂದಿರವನ್ನು ಲಕ್ಷಾಂತರ ಜನ ಕಣ್ತುಂಬಿಕೊಳ್ಳುತ್ತಿದ್ದಾರೆ. ಈಗ ಪ್ರವಾಸಿಗರು ಧಾರ್ಮಿಕ ಕ್ಷೇತ್ರ ಅಂತ ಬಂದಾಗ ಅಯೋಧ್ಯೆಗೆ ಆಗಮಿಸಲು ಮನ್ನಣೆ ನೀಡುತ್ತಾರೆ.
Pushpa Kumari
December 21, 2024
ಲಖನೌ: ಉತ್ತರಪ್ರದೇಶದಲ್ಲಿ ಶ್ರೀ ರಾಮ ಮಂದಿರ(Arodhya Rama Mandir) ನಿರ್ಮಾಣ ಬಳಿಕ (UP Tourism) ಬರುವವರ ಪ್ರವಾಸಿಗರ ಸಂಖ್ಯೆ ಅಪಾರವಾಗಿ ಹೆಚ್ಚಳವಾಗಿದೆ. ಆದರಲ್ಲೂ ಧಾರ್ಮಿಕ ಯಾತ್ರಾ ಕ್ಷೇತ್ರಗಳ ಭೇಟಿಗೆ ಹೆಚ್ಚು ಜನ ಆಕರ್ಷಿತರಾಗುತ್ತಿದ್ದಾರೆ. ಇದೀಗ ವಿಶ್ವವಿಖ್ಯಾತ ತಾಜ್‌ಮಹಲ್ ಅನ್ನು ಹಿಂದಿಕ್ಕಿ ಅಯೋಧ್ಯೆ ಶ್ರೀ ರಾಮ ಮಂದಿರವು ನಂಬರ್ 1 ಪ್ರವಾಸಿ ತಾಣವಾಗಿ ಹೊರಹೊಮ್ಮಿದೆ.
ಅಯೋಧ್ಯೆಯು ಇಂದು ಉತ್ತರ ಪ್ರದೇಶದ ಪ್ರಮುಖ ಕೇಂದ್ರಬಿಂದು ಆಗಿದ್ದು ಧಾರ್ಮಿಕ ಪುಣ್ಯ ಕ್ಷೇತ್ರವಾಗಿದೆ. ರಾಮಲಲ್ಲಾ ಜನ್ಮಭೂಮಿಯಲ್ಲೇ ನಿರ್ಮಿಸಿರುವ ಭವ್ಯ ಮಂದಿರವನ್ನು ಲಕ್ಷಾಂತರ ಜನ ಕಣ್ತುಂಬಿಕೊಳ್ಳುತ್ತಿದ್ದಾರೆ. ಈಗ ಪ್ರವಾಸಿಗರು ಧಾರ್ಮಿಕ ಕ್ಷೇತ್ರ ಅಂತ ಬಂದಾಗ ಅಯೋಧ್ಯೆಗೆ ಆಗಮಿಸಲು ಮನ್ನಣೆ ನೀಡುತ್ತಾರೆ.
ತಾಜ್ ಮಹಲ್‌ಗಿಂತಲೂ ಹೆಚ್ಚು ಆಕರ್ಷಣೆ: ಉತ್ತರಪ್ರದೇಶ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತಿದೆ. ಅಯೋಧ್ಯೆಯ ಶ್ರೀ ರಾಮ ನಿರ್ಮಾಣದ ನಂತರ ಪ್ರವಾಸಿಗರು ಇಲ್ಲಿ ಹೆಚ್ಚಾಗಿ ಭೇಟಿ ಕೊಡುತ್ತಿ ದ್ದಾರೆ. ಜನವರಿ ಮತ್ತು ಸೆಪ್ಟೆಂಬರ್ 2024 ರ ನಡುವೆ ಸುಮಾರು 47.61 ಕೋಟಿ ಪ್ರವಾಸಿಗರು ಇಲ್ಲಿ ಆಗಮಿಸಿದ್ದಾರೆ ಎಂದು ರಾಜ್ಯ ಪ್ರವಾಸೋದ್ಯಮ ಇಲಾಖೆ ಮಾಹಿತಿ ನೀಡಿದೆ. ಈ ಮೊದಲು ಯುಪಿಯಲ್ಲಿ ಪ್ರವಾಸಿ ತಾಣಕ್ಕೆ ತಾಜ್ ಮಹಲ್ ಮೊದಲ ಆದ್ಯತೆಯಾಗಿತ್ತು. ಈಗ ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಹೆಚ್ಚಿನ ಪ್ರವಾಸಿಗರು ಭೇಟಿ ನೀಡಿದ್ದು, ಇದು ಆಗ್ರಾ ದಲ್ಲಿರುವ ತಾಜ್‌ಮಹಲ್‌ಗಿಂತ ಹೆಚ್ಚು ಆಕರ್ಷಣೆ ಕೇಂದ್ರ ಇದಾಗಿದೆ. ದಾಖಲೆಯೊಂದಿಗೆ ಅಯೋಧ್ಯೆಯು ತಾಜ್ ಮಹಲ್ ಅನ್ನು ಹಿಂದಿಕ್ಕಿದೆ.
ಪ್ರವಾಸೋದ್ಯಮ ಇಲಾಖೆ ಮಾಹಿತಿಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆ ಮಾಹಿತಿ ಪ್ರಕಾರ ಅಯೋಧ್ಯೆಗೆ 13.55 ಕೋಟಿ ದೇಶೀಯ ಪ್ರವಾಸಿಗರು ಮತ್ತು 3,153 ವಿದೇಶಿ ಪ್ರವಾಸಿಗರು ಆಗಮಿಸಿದ್ದಾರೆ. ಆಗ್ರಾ ಕ್ಕೆ 9.24 ಲಕ್ಷ ವಿದೇಶಿ ಪ್ರವಾಸಿಗರು ಮತ್ತು 11.59 ಕೋಟಿ ದೇಶೀಯ ಪ್ರವಾಸಿಗರನ್ನು ಒಳಗೊಂಡಿರುವ 12.51 ಕೋಟಿ ಪ್ರವಾಸಿಗರನ್ನು ಬರಮಾಡಿಕೊಂಡಿದೆ.ಈ ಬಗ್ಗೆ ಪ್ರವಾಸೋದ್ಯಮ ಸಚಿವ ಜೈವೀರ್ ಸಿಂಗ್ ಖುಷಿ ಹಂಚಿಕೊಂಡಿದ್ದಾರೆ. ಉತ್ತರ ಪ್ರದೇಶ ಕಳೆದ ವರ್ಷ 48 ಕೋಟಿ ಪ್ರವಾಸಿಗರನ್ನು ಆಕರ್ಷಿಸಿತ್ತು . ಆದರೆ ಈ ವರ್ಷ ಕೇವಲ ಒಂಬತ್ತು ತಿಂಗಳಲ್ಲಿಯೇ ಇಷ್ಟು ಪ್ರಮಾಣದ ಪ್ರವಾಸಿಗರು ಇಲ್ಲಿಗೆ ಭೇಟಿ ಕೊಟ್ಟಿದ್ದು ಪ್ರವಾಸೋದ್ಯಮ ಪ್ರಗತಿ ಎಂದಿದ್ದಾರೆ. ಅಯೋಧ್ಯೆಯು ಭಾರತದಲ್ಲಿ ಆಧ್ಯಾತ್ಮಿಕ ಪ್ರವಾಸೋದ್ಯಮದ ಕೇಂದ್ರಬಿಂದುವಾಗಿದೆ ಹಾಗಾಗಿ ಇಲ್ಲಿಗೆ ಜನರ ಆಗಮನ ಹೆಚ್ಚುತ್ತಿದೆ ಎಂದು ಲಖನೌ ಮೂಲದ ಹಿರಿಯ ಟ್ರಾವೆಲ್ ಪ್ಲಾನರ್ ಮೋಹನ್ ಶರ್ಮಾ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:ಉತ್ತರ ಪ್ರದೇಶದಲ್ಲಿ ಅಭಿವೃದ್ಧಿಯ ಮೊದಲ ಹೆಜ್ಜೆಯೇ ಕಾನೂನು ಸ್ಥಾಪನೆ