ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಬಹುಭಾಷೆ ಇರಲಿ, ತ್ರಿಭಾಷೆಯಲ್ಲ

ತಮಿಳುನಾಡು, ಪಶ್ಚಿಮಬಂಗಾಳ ಮತ್ತು ಕೇರಳ ಹೊರತುಪಡಿಸಿ ಉಳಿದ ಎಲ್ಲ ರಾಜ್ಯಗಳು ಈ ನೀತಿಗೆ ಸಹಮತ ವ್ಯಕ್ತಪಡಿ ಸಿವೆ. ಆದರೆ ಹಿಂದಿ ಭಾಷಿಕ ರಾಜ್ಯಗಳು ಹಿಂದಿ ಮತ್ತು ಇಂಗ್ಲಿಷ್ ಹೊರತು ಪಡಿಸಿ ದಕ್ಷಿಣದ ಯಾವುದೇ ಭಾಷೆ ಕಲಿಸಲು ತಮ್ಮ ಶೈಕ್ಷಣಿಕ ನೀತಿ ಯಲ್ಲಿ ಅವಕಾಶ ನೀಡಿಲ್ಲ ಎನ್ನುವುದು ಗಮನಾರ್ಹ

ಬಹುಭಾಷೆ ಇರಲಿ, ತ್ರಿಭಾಷೆಯಲ್ಲ

Profile Ashok Nayak Mar 14, 2025 6:11 AM

ದೇಶದಲ್ಲಿ ಮತ್ತೊಮ್ಮೆ ತ್ರಿಭಾಷಾ ಸೂತ್ರ ಚರ್ಚೆಯಲ್ಲಿದೆ. ಜನಸಂಖ್ಯೆ ಆಧಾರಿತ ಕ್ಷೇತ್ರ ಮರು ವಿಂಗಡನೆ ಪ್ರಸ್ತಾಪವೂ ಸೇರಿ ತಮಿಳುನಾಡಿನಲ್ಲಿ ತ್ರಿಭಾಷಾ ಸೂತ್ರಕ್ಕೆ ತೀವ್ರ ವಿರೋ ಧ ವ್ಯಕ್ತವಾಗಿದೆ. ಈ ನಡುವೆ 2020ರ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಪ್ರಸ್ತಾಪಿಸಿರುವ ತ್ರಿ ಭಾಷಾ ಸೂತ್ರವನ್ನು ತಮಿಳುನಾಡು, ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಜಾರಿಗೆ ತರು ವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. 1968ರ ಶಿಕ್ಷಣ ನೀತಿಯ ಭಾಗವಾಗಿ ತ್ರಿಭಾಷಾ ಸೂತ್ರ ಜಾರಿಗೆ ತರಲಾಯಿತು. 1986 ಮತ್ತು 2020ರ ಶಿಕ್ಷಣ ನೀತಿ ಯಲ್ಲೂ ಇದನ್ನು ಪ್ರಸ್ತಾಪಿಸಲಾಗಿದೆ.

ತಮಿಳುನಾಡು, ಪಶ್ಚಿಮಬಂಗಾಳ ಮತ್ತು ಕೇರಳ ಹೊರತುಪಡಿಸಿ ಉಳಿದ ಎಲ್ಲ ರಾಜ್ಯಗಳು ಈ ನೀತಿಗೆ ಸಹಮತ ವ್ಯಕ್ತಪಡಿ ಸಿವೆ. ಆದರೆ ಹಿಂದಿ ಭಾಷಿಕ ರಾಜ್ಯಗಳು ಹಿಂದಿ ಮತ್ತು ಇಂಗ್ಲಿಷ್ ಹೊರತು ಪಡಿಸಿ ದಕ್ಷಿಣದ ಯಾವುದೇ ಭಾಷೆ ಕಲಿಸಲು ತಮ್ಮ ಶೈಕ್ಷಣಿಕ ನೀತಿ ಯಲ್ಲಿ ಅವಕಾಶ ನೀಡಿಲ್ಲ ಎನ್ನುವುದು ಗಮನಾರ್ಹ.

ಇದನ್ನೂ ಓದಿ: Vishwavani Editorial: ಕಲಬೆರಕೆ ಆಹಾರಕ್ಕೆ ಬೇಕಿದೆ ಕಡಿವಾಣ

ನಮ್ಮ ದೇಶದ ಒಕ್ಕೂಟ ವ್ಯವಸ್ಥೆ ಯಡಿ ಎಲ್ಲ ರಾಜ್ಯಗಳಿಗೂ ಸಮಾನ ಹಕ್ಕು ಬಾಧ್ಯತೆ ಗಳಿದ್ದರೂ ಭಾಷೆಯ ವಿಷಯದಲ್ಲಿ ಹಿಂದಿ ರಾಜ್ಯಗಳಿಗೆ ಹೆಚ್ಚಿನ ಸವಲತ್ತು ಮತ್ತು ರಿಯಾಯಿತಿಗಳಿವೆ. ಸಂವಿಧಾನದ 17ನೆಯ ಭಾಗದ 343ನೇ ವಿಧಿಯ ಸೆಕ್ಷನ್ ಒಂದರಲ್ಲಿ, ‘ಹಿಂದಿಯು ಕೇಂದ್ರ ಸರಕಾರದ ಆಡಳಿತ ಭಾಷೆಯಾಗಿ ರತಕ್ಕದ್ದು. ಸಂವಿಧಾನವು ಜಾರಿಗೆ ಬಂದ ದಿನದಿಂದ 15 ವರ್ಷಗಳವರೆಗೆ ಈ ಮೊದಲು ಇದ್ದಂತೆ ಇಂಗ್ಲಿಷ್ ಭಾಷೆಯೂ ಆಡಳಿತ ಭಾಷೆಯಾಗಿ ಮುಂದುವರಿಯಬೇಕು’ ಎಂದು ಹೇಳಲಾಗಿದೆ.

ದೇಶದಲ್ಲಿ ಹಿಂದಿ ಪ್ರಚಾರಕ್ಕೆ ಆಡಳಿತ ಭಾಷಾ ಆಯೋಗ ಮತ್ತು 30 ಸದಸ್ಯರ ಸಂಸತ್ತಿನ ಜಂಟಿ ಸದನ ಸಮಿತಿ ಇದೆ. ಈ ಕಾರಣಕ್ಕಾಗಿಯೇ ತ್ರಿಭಾಷಾ ನೀತಿಗೆ ಕಳೆದ ಆರೇಳು ದಶಕ ಗಳಿಂದ ವಿರೋಧ ವ್ಯಕ್ತವಾಗಿದೆ. ಈ ವಿಚಾರದಲ್ಲಿ ಕುವೆಂಪು ಅವರು ಹೇಳಿರುವ ಮಾತು ಮನನೀಯ. “

ನಮಗೆ ಬೇಕಾದುದು ತ್ರಿಭಾಷಾ ಸೂತ್ರವಲ್ಲ ದ್ವಿಭಾಷಾ ಸೂತ್ರ. ಒಂದು ವೇಳೆ ಮೂರು ಭಾಷೆಗಳನ್ನೂ ಕಲಿಯ ಬೇಕು ಎಂದು ಹಠ ಹಿಡಿದರೂ ಬಹುಭಾಷೆಗಳಲ್ಲಿ ಮೂರು ಭಾಷೆಗಳನ್ನು ಆರಿಸಿಕೊಳ್ಳುವ ಸ್ವಾತಂತ್ರ ವಿದ್ಯಾರ್ಥಿಗಿರಬೇಕು. ಬಹುಭಾಷೆಗಳಲ್ಲಿ ‘ತ್ರಿ ಭಾಷೆ’ ಆಗಬೇಕೇ ಹೊರತೂ ಬರಿಯ ‘ತ್ರಿಭಾಷೆ’ ಯಾಗಬಾರದು. ’ತ್ರಿಭಾಷೆ’ ಯಾದರೆ ಇಂಗ್ಲಿಷ್ ಮತ್ತು ಹಿಂದಿ ಬಲಾತ್ಕಾರದ ಭಾಷೆಗಳಾಗುತ್ತವೆ.

ಕನ್ನಡ, ತೆಲುಗು, ತಮಿಳು ಮಲೆಯಾಳ ಭಾಷೆಗಳು ತಮ್ಮ ರಾಜ್ಯಗಳಲ್ಲಿಯೇ ಐಚ್ಛಿಕ ಭಾಷೆಗಳಾಗಿ ತೃತೀಯ ಸ್ಥಾನಕ್ಕಿಳಿದು ಹಿಂದಿಯನ್ನು ಓಲೈಸುವ ಅಡಿಯಾಳುಗಳುತ್ತವೆ. ಕುವೆಂಪು ಅವರ ಮಾತು ಇಂದು ನಿಜವಾಗಿದೆ.