ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಕಲಬೆರಕೆ ಆಹಾರಕ್ಕೆ ಬೇಕಿದೆ ಕಡಿವಾಣ

ಹೋಟೆಲ್, ಬೀದಿಬದಿಯ ತಿಂಡಿ ಅಂಗಡಿಗಳಲ್ಲಿ ಗ್ರಾಹಕರನ್ನು ಸೆಳೆಯಲು, ಕಲಬೆರಕೆ ನಡೆ ಯುತ್ತದೆ. ಅದು ಆರೋಗ್ಯಕ್ಕೆ ಮಾರಕ ಎಂಬುದನ್ನರಿತು ಎಚ್ಚೆತ್ತುಕೊಂಡ ಸರಕಾರ‌ಗಳು, ಕೆಲವು ನಿಷೇಧಿತ ಪದಾರ್ಥ ಬಳಸದಂತೆ ತಡೆಯಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ಜಾರಿಗೆ ಆದೇಶ ನೀಡಲಾಗಿದೆ

ಕಲಬೆರಕೆ ಆಹಾರಕ್ಕೆ ಬೇಕಿದೆ ಕಡಿವಾಣ

Profile Ashok Nayak Mar 6, 2025 5:00 AM

ಇಡ್ಲಿ, ಹಸಿರು ಬಟಾಣಿ, ಕಲ್ಲಂಗಡಿ ಬಳಿಕ ಇದೀಗ ಬೆಲ್ಲ ಹಾಗೂ ಟೊಮೆಟೋ ಸಾಸ್ ಕೂಡ ಸೇವನೆಗೆ ಅಸುರಕ್ಷಿತ ಎಂಬ ವರದಿ ಬಹಿರಂಗಗೊಂಡಿದೆ. ಇದು ಕಲಬೆರಕೆ ಮಾಫಿಯಾ ವಿಸ್ತರಣೆಯ ಕನ್ನಡಿಯಾಗಿದೆ. ಆಹಾರದಲ್ಲಿ ಕಲಬೆರಕೆ ಎಂಬುದು ಇತ್ತೀಚೆಗೆ ಸಾರ್ವತ್ರಿಕ ವಾಗಿದೆ. ಬಾಳೆ, ಮಾವು, ದ್ರಾಕ್ಷಿ, ಸೇಬು ಸೇರಿದಂತೆ ನಿತ್ಯವೂ ಜನರು ಬಳಸುವ ಹಣ್ಣುಗಳು ಬೇಗನೇ ಮಾಗಲಿ ಎಂದು ಕ್ಯಾಲ್ಸಿಯಂ ಕಾರ್ಬೈಡ್ ರಾಸಾಯನಿಕವನ್ನು ಬಳಸುವುದು ಎಲ್ಲರಿಗೂ ಗೊತ್ತಿರುವ ವಿಷಯ. ಇದರ ತಡೆಗೆ ಕ್ರಮ ಆಗದಿರುವುದು ಆರೋಗ್ಯಕ್ಕೆ ಮಾರಕ ವಾದ ದುಷ್ಕೃತ್ಯ ಅವ್ಯಾಹತವಾಗಿ ನಡೆಯಲು ಕಾರಣವಾಗಿದೆ.

ಇದನ್ನೂ ಓದಿ: Vishwavani Editorial: ಇನ್ನೂ ತೀರಿಲ್ಲವೇ ರಕ್ತದಾಹ?

ಇನ್ನು ಆಹಾರ ಧಾನ್ಯಗಳಾದ ಅಕ್ಕಿ, ಬೇಳೆ, ಬೆಲ್ಲ, ರವೆ, ಅಡುಗೆ ಎಣ್ಣೆ, ಹಾಲು, ತುಪ್ಪ, ಮೊಸರು, ಮೊಟ್ಟೆ, ಮಾಂಸ, ಮೀನು, ಅಡಕೆ, ಮಸಾಲೆ ಮತ್ತಿತರ ಪದಾರ್ಥಗಳೂ ಪರಿ ಶುದ್ಧವಾಗಿಲ್ಲ. ರುಚಿ ಹೆಚ್ಚಳಕ್ಕೆ ಪೂರಕವಾದ, ವಿಷಕಾರಿ ಅಂಶಗಳಿರುವ, ನಿಷೇಧಿತ ಪದಾ ರ್ಥಗಳನ್ನು ಬೆರೆಸಿ ಮಾರಾಟ ಮಾಡುವುದು ಒಂದೆಡೆಯಾದರೆ, ಲಾಭಕೋರತನ ವನ್ನೇ ಗುರಿಯಾಗಿಸಿಕೊಂಡು ಶುದ್ಧವಾದ ಆಹಾರದ ಹದ ಕೆಡಿಸುತ್ತಿರುವ ಬಹುದೊಡ್ಡ ಮಾಫಿ ಯಾ ಸಕ್ರಿಯವಾಗಿದೆ.

ಹೋಟೆಲ್, ಬೀದಿಬದಿಯ ತಿಂಡಿ ಅಂಗಡಿಗಳಲ್ಲಿ ಗ್ರಾಹಕರನ್ನು ಸೆಳೆಯಲು, ಕಲಬೆರಕೆ ನಡೆಯುತ್ತದೆ. ಅದು ಆರೋಗ್ಯಕ್ಕೆ ಮಾರಕ ಎಂಬುದನ್ನರಿತು ಎಚ್ಚೆತ್ತುಕೊಂಡ ಸರಕಾರ‌ ಗಳು, ಕೆಲವು ನಿಷೇಧಿತ ಪದಾರ್ಥ ಬಳಸದಂತೆ ತಡೆಯಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ಜಾರಿಗೆ ಆದೇಶ ನೀಡಲಾಗಿದೆ.

ಆದರೆ ಹೋಟೆಲ್‌ಗಳ ಮೇಲೆ ಅಧಿಕಾರಿಗಳು ನಿಗಾ ಇರಿಸಿ, ಕಾನೂನು ಕ್ರಮ ಕೈಗೊಂಡ ಉದಾಹರಣೆಗಳು ಬೆರಳಣಿಕೆಯಷ್ಟೇ ಇವೆ. ಇನ್ನು, ಪಡಿತರ ವ್ಯವಸ್ಥೆ ಅಡಿ ಫಲಾನುಭವಿ ಗಳಿಗೆ ಉಚಿತವಾಗಿ ಸಿಗುವ ಅಕ್ಕಿಯನ್ನು ಖರೀದಿಸಿ ಮರು ಮಾರಾಟ ಮಾಡುವ ದೊಡ್ಡ ಜಾಲವೇ ಸಕ್ರಿಯವಾಗಿದೆ.

10 ರಿಂದ 15 ರು.ಗೆ ಒಂದು ಕೆ.ಜಿ. ಅಕ್ಕಿ ಖರೀದಿಸಿ, ಪಾಲಿಶ್ ಮಾಡಿ ಅದನ್ನು ಪ್ಯಾಕ್ ಮಾಡಿ, ಸಾಗಿಸುವ ಜಾಲ ಬಹುತೇಕ ಎಲ್ಲ ನಗರಗಳಲ್ಲಿದೆ. ಇದೆಲ್ಲವೂ ಆಡಳಿತ ವ್ಯವಸ್ಥೆಗೆ ಗೊತ್ತಿ ರುವ ವಿಷಯವೇ. ಆದರೆ ಕ್ರಮ ಕೈಗೊಳ್ಳುವಲ್ಲಿ ನಿಷ್ಕ್ರಿಯವಾಗಿರುವುದರಿಂದ ಜನ ಸಾಮಾ ನ್ಯರು ಕಲಬೆರಕೆಯ ದುಷ್ಪರಿಣಾಮಕ್ಕೆ ಬಲಿಯಾಗಬೇಕಿದೆ.