#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Bhagya Lakshmi Serial: ಎಲ್ಲೂ ಕೆಲಸ ಸಿಗದೆ ಜೋಕರ್ ವೇಷ ತೊಟ್ಟಳು ಭಾಗ್ಯಾ, ರೋಚಕ ಘಟ್ಟದತ್ತ ಭಾಗ್ಯಲಕ್ಷ್ಮೀ ಧಾರಾವಾಹಿ

ಕೆಲವು ಕಡೆ ಕೆಲಸ ಇದೆಯಾ ಎಂದು ಭಾಗ್ಯಾ ಕೇಳಿಕೊಂಡು ಹೋಗುತ್ತಾಳೆ.. ಆದ್ರೆ ಅವರೆಲ್ಲ ಇಲ್ಲಿ ಕೆಲಸ ಕೋಡೋಕೆ ಸಾಧ್ಯ ಇಲ್ಲ ಎಂದೇ ಹೇಳುತ್ತಾರೆ. ಕೊನೆಗೆ ಬೇಜಾರಿನಲ್ಲಿ ಭಾಗ್ಯಾ ನಡೆದುಕೊಂಡು ಹೋಗುವಾಗ ಜೋಕರ್ ವೇಷ ತೊಟ್ಟಿರುವ ಕೆಲವರು ಅಂಗಡಿಯ ಮುಂದೆ ನೃತ್ಯ ಮಾಡುತ್ತಿರುವುದನ್ನು ನೋಡುತ್ತಾಳೆ.

ಎಲ್ಲೂ ಕೆಲಸ ಸಿಗದೆ ಜೋಕರ್ ವೇಷ ತೊಟ್ಟಳು ಭಾಗ್ಯಾ

Bhagya Lakshmi serial

Profile Vinay Bhat Feb 13, 2025 12:21 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ( Bhagya Lakshmi Serial ) ಹೊಸ ದಿಕ್ಕಿನತ್ತ ಸಾಗುತ್ತಿದೆ. ಸದ್ಯ ಧಾರಾವಾಹಿ ಮಹತ್ವದ ಘಟ್ಟಕ್ಕೆ ಬಂದು ನಿಂತಿದ್ದು, ಕೆಲಸ ಕಳೆದುಕೊಂಡಿರುವ ಭಾಗ್ಯಾ ಹೊಸ ಕೆಲಸಕ್ಕಾಗಿ ಅಲೆದಾಡುತ್ತಿದ್ದಾಳೆ. ಆದರೆ, ಎಲ್ಲೂ ಕೆಲಸ ಸಿಗುತ್ತಿಲ್ಲ. ಇದಕ್ಕಾಗಿ ದೊಡ್ಡ ಹೆಜ್ಜೆ ಇಟ್ಟಿದ್ದಾಳೆ ಭಾಗ್ಯಾ. ಜೋಕರ್ ವೇಷ ತೊಟ್ಟು ಜನರನ್ನು ನಗಿಸುವ ಕೆಲಸಕ್ಕೆ ಭಾಗ್ಯಾ ಸೇರಿಕೊಂಡಂತೆ ಕಾಣುತ್ತಿದೆ. ಆದ್ರೆ, ಈ ವಿಚಾರ ಮನೆಯವರಿಗೆ ಗೊತ್ತಿಲ್ಲ.

ಭಾಗ್ಯಾಳ ಅತ್ತೆ-ಮಾವ ಕನ್ನಿಕಾಳ ಆಫೀಸ್​ಗೆ ಬಂದು ನ್ಯಾಯದ ಬಗ್ಗೆ ಮಾತನಾಡಿದಾಗ ಧರ್ಮರಾಜ್ ಮತ್ತು ಕುಸುಮಾಗೆ ಕನ್ನಿಕಾ ಅವಮಾನ ಮಾಡುತ್ತಾಳೆ. ತನ್ನ ಆಫೀಸ್ ಸಿಬ್ಬಂದಿಗಳನ್ನೆಲ್ಲ ಕರೆದು, ಅವರ ಮುಂದೆಯೇ ಇಬ್ಬರನ್ನೂ ಅವಮಾನ ಮಾಡುತ್ತಾಳೆ. ಆಗ ಭಾಗ್ಯಾ ಕೂಡ ಅಲ್ಲಿಗೆ ಬರುತ್ತಾಳೆ. ಭಾಗ್ಯಾಳ ಮರಿಯಾದೆ ಕೂಡ ಹರಾಜು ಮಾಡಲು ಹೊರಾಟಗ ಭಾಗ್ಯಾ ಕನ್ನಿಕಾಳ ಬಾಯಿ ಮುಚ್ಚಿಸಿ ಕೆನ್ನೆಗೆ ಬಾರಿಸುತ್ತಾಳೆ. ಜೊತೆಗೆ ಕನ್ನಿಕಾಗೆ ಸವಾಲು ಕೂಡ ಹಾಕುತ್ತಾಳೆ.

ಸಿಂಹ ಯಾವತ್ತೂ ನ್ಯಾಯದ ದಾರಿಯಲ್ಲೇ ಬದುಕತ್ತೆ.. ಈ ತರ ಬಂಡು ಬದುಕ ಬದುಕೋದು ನರಿ.. ಕೈಲಾಗದಿರೋದು ಮಾತ್ರ ಹಿರಿಯರ ಮೇಲೆ ದಾಳಿ ಮಾಡೋದು.. ನನ್ಗೆ ಎಲ್ಲೂ ಕೆಲಸ ಸಿಗದೇ ಇರೊ ತರ ಏನಾದ್ರು ಮಾಡಬಹುದು ಅಂತ ನೀನು ಅಂದುಕೊಂಡಿದ್ರೆ ಅದನ್ನ ತಲೆಯಿಂದ ತೆಗೆದುಹಾಕಿಬಿಡು. ನಾನು ಸೋತಿರಬಹುದು.. ಆದ್ರೆ ಸತ್ತಿಲ್ಲ.. ನನ್ನ ಜೀವ ಮುಗಿಸಬಹುದು, ನನ್ಗೆ ಎಲ್ಲೂ ಕೆಲಸ ಸಿಗದ ಹಾಗೆ ಮಾಡಬಹುದು ಅಂತ ನೀನು ಅಂದುಕೊಂಡಿದ್ರೆ ಅದನ್ನು ತಲೆಯಿಂದ ತೆಗೆದು ಹಾಕು.. ಯಾಕಂದ್ರೆ ಅದು ಯಾವತ್ತಿದ್ರೂ ಸಾಧ್ಯವಿಲ್ಲ ಇವತ್ತು ಬಿದ್ದಿರೋ ಭಾಗ್ಯಾ ನಾಳೆ ಎಲ್ಲರ ಮುಂದೆ ತಲೆ ಎತ್ತೋದನ್ನ ನೋಡಲು ತಯಾರಾಗಿರು ಎಂದು ಚಾಲೆಂಜ್ ಮಾಡಿ ಅತ್ತೆ-ಮಾವನನ್ನು ಅಲ್ಲಿಂದ ಕರೆದುಕೊಂಡು ಹೊರಟಿದ್ದಾಳೆ.

ಚಾಲೆಂಜ್ ಏನೋ ಮಾಡಿ ಭಾಗ್ಯಾ ಹೊರಟಳು ಆದ್ರೆ ಎಲ್ಲೂ ಕೆಲಸ ಸಿಗ್ತಾ ಇಲ್ಲ.. ಕೆಲವು ಕಡೆ ಕೆಲಸ ಇದೆಯಾ ಎಂದು ಭಾಗ್ಯಾ ಕೇಳಿಕೊಂಡು ಹೋಗುತ್ತಾಳೆ.. ಆದ್ರೆ ಅವರೆಲ್ಲ ಇಲ್ಲಿ ಕೆಲಸ ಕೋಡೋಕೆ ಸಾಧ್ಯ ಇಲ್ಲ ಎಂದೇ ಹೇಳುತ್ತಾರೆ. ಕೊನೆಗೆ ಬೇಜಾರಿನಲ್ಲಿ ಭಾಗ್ಯಾ ನಡೆದುಕೊಂಡು ಹೋಗುವಾಗ ಜೋಕರ್ ವೇಷ ತೊಟ್ಟಿರುವ ಕೆಲವರು ಅಂಗಡಿಯ ಮುಂದೆ ನೃತ್ಯ ಮಾಡುತ್ತಿರುವುದನ್ನು ನೋಡುತ್ತಾಳೆ. ಬಳಿಕ ಭಾಗ್ಯಾ ಕೂಡ ಅದೇ ಜೋಕರ್ ವೇಷ ಧರಿಸಿರುವುದು ಹೊಸ ಪ್ರೊಮೊದಲ್ಲಿದೆ.



ಇದರ ಮಧ್ಯೆ ಭಾಗ್ಯಾ ಮಗಳ ಹುಟ್ಟುಹಬ್ಬಕ್ಕೆ ಪಾರ್ಟಿ ಮಾಡಲು ಹಣ ಜೋಡಿಸುತ್ತಿದ್ದಾಳೆ. ಕಾಲೇಜಿನಲ್ಲಿ ಸಹಪಾಠಿಯ ಬರ್ತ್‌ಡೇಗೆ ಮೈಸೂರ್ ಪಾಕ್ ನೀಡುವಾಗ ತನ್ವಿ ಎರಡು ಪೀಸ್ ತೆಗೆದುಕೊಂಡಿದ್ದಾಳೆ. ಅದನ್ನು ಗಮನಿಸಿದ ಅವಳ ಸಹಪಾಠಿಗಳು, ತನ್ವಿ ಯಾವುದೇ ಪಾರ್ಟಿ ಮಿಸ್ ಮಾಡುವುದಿಲ್ಲ, ಯಾರದೇ ಬರ್ತ್‌ಡೇ ಇದ್ದರೂ, ಎರಡೆರಡು ಕೇಕ್ ತೆಗೆದುಕೊಳ್ಳುತ್ತಾಳೆ. ಅವಳ ಬರ್ತ್‌ಡೇ ಪಾರ್ಟಿಗೆ ಯಾರನ್ನೂ ಕರೆಯುವುದಿಲ್ಲ, ಯಾರಿಗೂ ಸ್ವೀಟ್ ಕೂಡ ಕೊಡುವುದಿಲ್ಲ ಎಂದು ಗೇಲಿ ಮಾಡುತ್ತಾರೆ.

ಇದರಿಂದ ಬೇಸರಗೊಂಡ ತನ್ವಿ ಮನೆಗೆ ಬಂದು ನಡೆದ ಘಟನೆಯನ್ನು ಭಾಗ್ಯಾ ಬಳಿ ವಿವರಿಸುತ್ತಾಳೆ. ನಾಳೆ ನಿನ್ನ ಬರ್ತ್ ಡೇನ ಅದ್ಧೂರಿಯಾಗಿ ಸೆಲೆಬ್ರಿಟ್ ಮಾಡೋಣ ಒಕೆ ನಾ.. ನಿನ್ನ ಫ್ರೆಂಡ್ಸ್ ಎಲ್ಲರನ್ನೂ ಕರಿ ಎಂದು ಭಾಗ್ಯಾ ಹೇಳುತ್ತಾಳೆ. ಆದ್ರೆ ಭಾಗ್ಯಾಳ ಕೈಯಲ್ಲಿ ಹಣ ಇರುವುದಿಲ್ಲ. ಇರೊ ಬರೋ ದುಡ್ಡನ್ನೆಲ್ಲ ಹಾಸಿಗೆ ಮೇಲೆ ಹಾಕಿ ಲೆಕ್ಕ ಹಾಕುತ್ತಾ ಇರುತ್ತಾಳೆ. ಆಗ ಪೂಜಾ ಬಂದು ಏನು ಮಾಡ್ತಾ ಇದ್ದೀರಾ ಅಕ್ಕ ಎಂದು ಕೇಳುತ್ತಾಳೆ. ಬಂಗಾರಿ ಬರ್ತ್ ಡೇ ಪಾರ್ಟಿಗೆ ತುಂಬಾ ಐಟಮ್ ತರಬೇಕು ಅಲ್ವಾ ಅದಕ್ಕೆ ಹಣ ಎಣಿಸ್ತಾ ಇದ್ದೇನೆ.. ಅವಳು ಕೋರ್ಸ್​ಗೆ ಸೇರಬೇಕು ಎಂದಾಗ ಅದಕ್ಕೂ ಹಣ ಕಟ್ಟೋಕೆ ಆಗಿಲ್ಲ.. ಈಗ ಬರ್ತ್ ಡೇ ಸೆಲೆಬ್ರೆಟ್ ದಿನ ಆದ್ರೂ ಖುಷಿಯಾಗಿರಲಿ ಅಂತ ಇದೆಲ್ಲ ಮಾಡ್ತಾ ಇದ್ದೇನೆ ಎಂದು ಹೇಳುತ್ತಾಳೆ.



ಸದ್ಯ ಭಾಗ್ಯಾಗೆ ಒಂದರ ಹಿಂದೆ ಒಂದರಂತೆ ದೊಡ್ಡ ದೊಡ್ಡ ಕಷ್ಟಗಳು ಬರುತ್ತಿದೆ. ಕೈಯಲ್ಲಿ ಹಣವಿಲ್ಲ.. ಕೆಲಸ ಇಲ್ಲ.. ಮಕ್ಕಳ ಖುಷಿ.. ಮನೆಯ ಖರ್ಚು ಇದನ್ನೆಲ್ಲ ಹೇಗೆ ನಿಭಾಯಿಸುತ್ತಾಳೆ ಎಂಬುದು ನೋಡಬೇಕಿದೆ.

Hanumantha, BBK 11: ಶಾಸಕ ಪ್ರಭು ಚೌಹಾಣ್ ಜೊತೆ ಮಸ್ತ್ ಡ್ಯಾನ್ಸ್ ಮಾಡಿದ ಹನುಮಂತ: ವಿಡಿಯೋ ನೋಡಿ