ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Bhagya Lakshmi Serial: ಭಾಗ್ಯ ಲಕ್ಷ್ಮೀ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್: ಭಾಗ್ಯ ಬಣ್ಣ ಹಚ್ಚಿದ್ದು ಮಗಳ ಬರ್ತ್ ಡೇಗೆ

ರಾತ್ರಿ ಪಾರ್ಟಿ ಇದೆ ಅದಕ್ಕೆ ಜೋಕರ್ ವೇಷದಲ್ಲಿ ಬಂದು ಅಲ್ಲಿರುವವರನ್ನು ನಗಿಸಬೇಕು ಎಂಬ ಕೆಲಸ ಸಿಗುತ್ತದೆ. ಅದರಂತೆ ಭಾಗ್ಯಾ ಇತರರ ಜೊತೆ ಸೇರಿಕೊಂಡು ಜೋಕರ್ ವೇಷದಲ್ಲಿ ತಯಾರಾಗಿ ಬರ್ತ್ ಡೇ ಸೆಲೆಬ್ರೇಷನ್ ಒಬ್ಬರದ್ದು ಇದೆ ಎಂದು ಸಭೆಯ ಮಧ್ಯೆ ಕೇಕ್ ಹಿಡಿದುಕೊಂಡು ಬರುತ್ತಾಳೆ.

ಬಿಗ್ ಟ್ವಿಸ್ಟ್: ಭಾಗ್ಯ ಬಣ್ಣ ಹಚ್ಚಿದ್ದು ಮಗಳ ಬರ್ತ್ ಡೇಗೆ

Bhagya Lakshmi serial

Profile Vinay Bhat Feb 15, 2025 12:14 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಊಹಿಸಲಾಗದಂತಹ ಟ್ವಿಸ್ಟ್ ಬಂದಿದೆ. ಇದನ್ನು ಕಂಡು ಹೆಂಗಳೆಯರು ಕಣ್ಣೀರು ಇಡೋದು ಪಕ್ಕ. ಸದ್ಯ ಧಾರಾವಾಹಿ ಮಹತ್ವದ ಘಟ್ಟಕ್ಕೆ ಬಂದು ನಿಂತಿದ್ದು, ಕೆಲಸ ಕಳೆದುಕೊಂಡಿರುವ ಭಾಗ್ಯಾ ಹೊಸ ಕೆಲಸಕ್ಕಾಗಿ ಅಲೆದಾಡುತ್ತಿದ್ದಾಳೆ. ಆದರೆ, ಎಲ್ಲೂ ಕೆಲಸ ಸಿಗುತ್ತಿಲ್ಲ. ಇದಕ್ಕಾಗಿ ದೊಡ್ಡ ಹೆಜ್ಜೆ ಇಟ್ಟಿದ್ದಾಳೆ ಭಾಗ್ಯಾ. ಜೋಕರ್ ವೇಷ ತೊಟ್ಟು ಜನರನ್ನು ನಗಿಸುವ ಕೆಲಸಕ್ಕೆ ಭಾಗ್ಯಾ ಸೇರಿಕೊಂಡಿದ್ದಾಳೆ. ಆದ್ರೆ, ಈ ವಿಚಾರ ಯಾರಿಗೂ ಗೊತ್ತಿಲ್ಲ. ಈ ವೇಷ ತೊಟ್ಟಾಗ ಭಾಗ್ಯಾಗೆ ದೊಡ್ಡ ಆಘಾತ ಉಂಟಾಗಿದೆ.

ಸದ್ಯ ಧಾರಾವಾಹಿಯಲ್ಲಿ ಭಾಗ್ಯಾ ಮಗಳು ತನ್ವಿ ಬರ್ತ್ ಡೇ ಸೆಲೆಬ್ರೇಷನ್ ನಡೆಯುತ್ತಿದೆ. ಆದರೆ, ಮಗಳ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಬೇಕು ಎಂದು ಭಾಗ್ಯಾ ಎಲ್ಲಿಲ್ಲದ ಕಷ್ಟ ಪಡುತ್ತಿದ್ದಾಳೆ. ಕೂಡಿಟ್ಟ ಹಣವನ್ನೆಲ್ಲ ಒಟ್ಟುಗೂಡಿಸುತ್ತಿದ್ದಾಳೆ. ಇದರ ಮಧ್ಯೆ ತಾಂಡವ್ ಸರ್​ಪ್ರೈನ್ ನೀಡುವ ಮೂಲಕ ತನ್ವಿಗೆ ಮತ್ತಷ್ಟು ಹತ್ತಿರವಾಗುವ ಪ್ಲ್ಯಾನ್ ಮಾಡಿದ್ದಾನೆ. ಮಗಳ ಬರ್ತ್ ಡೇಯನ್ನು ಕಾಲೇಜಿನಲ್ಲೇ ಸೆಲೆಬ್ರೆಟ್ ಮಾಡಲಾಗಿದೆ ಜೊತೆಗೆ ಫ್ರೆಂಡ್ಸ್ ಅನ್ನೆಲ್ಲ ಕರ್ಕೊಂಡು ಬಾ ಪಾರ್ಟಿ ಇದೆ ಎಲ್ಲರಿಗೂ ಎಂದು ಹೇಳಿದ್ದಾನೆ.

ತನ್ವಿ ಹುಟ್ಟುಹಬ್ಬದ ಖುಷಿ ಇದ್ದರೂ, ಇತರ ಫ್ರೆಂಡ್ಸ್‌ಗಳ ರೀತಿಯಲ್ಲಿ ಗ್ರಾಂಡ್ ಆಗಿ ಆಚರಿಸಲು ಸಾಧ್ಯವಾಗುತ್ತಿಲ್ಲವಲ್ಲ ಎಂದು ಬೇಸರದಲ್ಲಿರುತ್ತಾಳೆ. ಆಗ ತನ್ವಿ ಫ್ರೆಂಡ್ ಬಂದು ಏನೇ ತನ್ವಿ, ನಿನ್ನ ಬರ್ತ್‌ಡೇ ಎಂದು ಕಾಲೇಜಿಗೆಲ್ಲಾ ಸ್ವೀಟ್ ಹಂಚುತ್ತಿದ್ದಾರೆ, ಏನೇ ಇದು ಎಂದು ಕೇಳುತ್ತಾಳೆ. ಅದನ್ನು ಕೇಳಿ ತನ್ವಿಗೆ ಶಾಕ್ ಆಗುತ್ತದೆ. ಆಗ ತಾಂಡವ್ ಕಾರಿನಲ್ಲಿ ಬರುವುದು ತನ್ವಿಗೆ ಕಾಣಿಸುತ್ತದೆ, ತಾಂಡವ್ ಹ್ಯಾಪಿ ಬರ್ತ್‌ಡೇ ತನ್ವಿ ಎಂದು ಬರೆದಿರುವ ಬಲೂನ್‌ಗಳನ್ನು ಗಾಳಿಯಲ್ಲಿ ಹಾರಿಬಿಡುತ್ತಾನೆ.

ಅಷ್ಟೇ ಅಲ್ಲ ತಾಂಡವ್ ಮಗಳನ್ನು ತನ್ನತ್ತ ಸೆಳೆಯಲು ದೊಡ್ಡ ಪ್ಲ್ಯಾನ್ ಅನ್ನೇ ಮಾಡಿರುತ್ತಾನೆ. ಕಾರಿನ ತುಂಬಾ ಬಲೂನ್ ಮತ್ತು ಹೂವುಗಳು, ಮಧ್ಯದಲ್ಲಿ ಕೇಕ್ ಇರಿಸಲಾಗಿರುತ್ತದೆ. ಕಾಲೇಜಿನ ಮೈದಾನದ ಮಧ್ಯದಲ್ಲಿ ಕಾರಿನಲ್ಲೇ ಬರ್ತ್‌ಡೇ ಆಚರಿಸಲಾಗುತ್ತದೆ. ಇದರ ಜೊತೆಗೆ ತಾಂಡವ್ ಮತ್ತೊಂದು ಸರ್​ಪ್ರೈಸ್ ಇದೆ ಎಂದು ಹೇಳುತ್ತಾನೆ. ಈ ಸರ್​ಪ್ರೈಸ್ ನಿನಗೆ ಮಾತ್ರವಲ್ಲ.. ನಿನ್ನ ಫ್ರೆಂಡ್ಸ್​ಗೂ ಇದೆ ಎಂದು ಹೇಳುತ್ತಾನೆ. ಬಳಿಕ ನನ್ನ ಪಪ್ಪಾ ನನ್ನ ಬರ್ತ್​ಡೇ ಸಲುವಾಗಿ ಪಾರ್ಟಿ ಇಟ್ಟಿದ್ದಾನೆ.. ನೀವೆಲ್ಲರೂ ಬರಬೇಕು ಎಂದು ತನ್ವಿ ತನ್ನ ಫ್ರೆಂಡ್ಸ್​ಗೆ ಹೇಳುತ್ತಾಳೆ.



ಅತ್ತ ಭಾಗ್ಯಾ ಕೆಲಸಕ್ಕೆ ಅಲೆದು ಅಲೆದು ಎಲ್ಲೂ ಕೆಲಸ ಸಿಗುತ್ತಿಲ್ಲ. ಕೆಲವು ಕಡೆ ಕೆಲಸ ಇದೆಯಾ ಎಂದು ಭಾಗ್ಯಾ ಕೇಳಿಕೊಂಡು ಹೋಗುತ್ತಾಳೆ.. ಆದ್ರೆ ಅವರೆಲ್ಲ ಇಲ್ಲಿ ಕೆಲಸ ಕೋಡೋಕೆ ಸಾಧ್ಯ ಇಲ್ಲ ಎಂದೇ ಹೇಳುತ್ತಾರೆ. ಕೊನೆಗೆ ಬೇಜಾರಿನಲ್ಲಿ ಭಾಗ್ಯಾ ನಡೆದುಕೊಂಡು ಹೋಗುವಾಗ ಜೋಕರ್ ವೇಷ ತೊಟ್ಟಿರುವ ಕೆಲವರು ರೆಸಾರ್ಟ್ ಒಂದರ ಮುಂದೆ ನೃತ್ಯ ಮಾಡುತ್ತಿರುವುದನ್ನು ನೋಡುತ್ತಾಳೆ. ಬಳಿಕ ಅಲ್ಲೇ ಜೋಕರ್ ವೇಷ ತೊಟ್ಟು ರೆಸಾರ್ಟ್ ಮುಂದೆ ನೃತ್ಯ ಮಾಡಲು ಮುಂದಾಗುತ್ತಾಳೆ. ಜೀವನ ನಡೆಸೋಕೆ ಹೊಸ ವೇಷ ತೊಡ್ಕೊಳ್ತಾ ಇದ್ದೇನೆ ಎಂದು ಹೇಳಿ ಜೋಕರ್ ವೇಷದ ಬಣ್ಣ ಬಳಿಯುತ್ತಾಳೆ.

ರಾತ್ರಿ ಪಾರ್ಟಿ ಇದೆ ಅದಕ್ಕೆ ಜೋಕರ್ ವೇಷದಲ್ಲಿ ಬಂದು ಅಲ್ಲಿರುವವರನ್ನು ನಗಿಸಬೇಕು ಎಂಬ ಕೆಲಸ ಸಿಗುತ್ತದೆ. ಅದರಂತೆ ಭಾಗ್ಯಾ ಇತರರ ಜೊತೆ ಸೇರಿಕೊಂಡು ಜೋಕರ್ ವೇಷದಲ್ಲಿ ತಯಾರಾಗಿ ಬರ್ತ್ ಡೇ ಸೆಲೆಬ್ರೇಷನ್ ಒಬ್ಬರದ್ದು ಇದೆ ಎಂದು ಸಭೆಯ ಮಧ್ಯೆ ಕೇಕ್ ಹಿಡಿದುಕೊಂಡು ಬರುತ್ತಾಳೆ. ಆದರೆ, ಅಲ್ಲಿ ಭಾಗ್ಯಾಗೆ ದೊಡ್ಡ ಆಘಾತ ಕಾದಿರುತ್ತದೆ. ಭಾಗ್ಯಾ ಜೋಕರ್ ವೇಷ ತೊಟ್ಟು ಕೇಕ್ ಕೊಡಲು ಬಂದಿದ್ದು ಬೇರೆ ಯಾರದ್ದೋ ಬರ್ತ್ ಡೇಗೆ ಅಲ್ಲ.. ತನ್ನ ಸ್ವಂತ ಮಗಳ ಹುಟ್ಟುಹಬ್ಬಕ್ಕೆ. ಇದನ್ನು ನೋಡಿ ಶಾಕ್ ಆಗಿ- ಕಣ್ಣೀರಲ್ಲೇ ಕೇಕ್ ಅನ್ನು ಮಗಳ ಮುಂದೆ ಇಡುತ್ತಾಳೆ. ಅತ್ತ ತಾಂಡವ್-ಶ್ರೇಷ್ಠಾ ಅದ್ಧೂರಿಯಾಗಿ ತನ್ವಿಯ ಬರ್ತ್ ಡೇ ಸೆಲೆಬ್ರೆಟ್ ಮಾಡ್ತಾರೆ.



ಸದ್ಯ ಭಾಗ್ಯಾ ಜೋಕರ್ ವೇಷ ತೊಟ್ಟ ವಿಚಾರ ತನ್ವಿ, ಶ್ರೇಷ್ಠಾ ಅಥವಾ ತಾಂಡವ್​ಗೆ ಗೊತ್ತಾಗುತ್ತ?, ಮಗಳಿಗೆ ಭಾಗ್ಯಾ ಏನು ಸರ್​ಪ್ರೈಸ್ ಗಿಫ್ಟ್ ಕೊಡುತ್ತಾಳೆ, ಈ ಕೆಲಸದ ಬಳಿಕ ಭಾಗ್ಯಾಂ ಮುಂದಿನ ನಡೆ ಏನು ಎಂಬುದು ನಾಳೆಯ ಎಪಿಸೋಡ್​ನಲ್ಲಿ ನೋಡಬೇಕಿದೆ.

Maja Talkies: ಮಜಾ ಟಾಕೀಸ್​ನಲ್ಲಿ ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಷನ್: ಅತಿಥಿಗಳು ಯಾರು ನೋಡಿ